Connect with us

    BIG BOSS

    BBK11: ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಇವರೇ ನೋಡಿ

    Published

    on

    ಕನ್ನಡದ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗಿದೆ. ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳ ಎಂಟ್ರಿಯಾಗಿದೆ.

    ಯಾರು ಈ ಶೋಭಾ ಶೆಟ್ಟಿ?

    ಕನ್ನಡದ ಬಿಗ್​ಬಾಸ್​ ಸೀಸನ್​ 11ಕ್ಕೆ ಶೋಭಾ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಕನ್ನಡ ಸೀರಿಯಲ್​ನಲ್ಲಿ ಮಿಂಚಿದ್ದ ಶೋಭಾ ಅವರು ತೆಲುಗಿನ ಸೀರಿಯಲ್​ನಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೇ ಬಿಗ್​​ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಆದರೆ ಈಗ ಕನ್ನಡದ ಬಿಗ್​ಬಾಸ್​ಗೆ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ಯಾರು ಈ ರಜತ್ ಬುಜ್ಜಿ?

    2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಅವರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಟ ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ರಜತ್ ಕೆಲವು ದಿನಗಳ ಹಿಂದೆ ದರ್ಶನ್-ರೇಣುಕಾಸ್ವಾಮಿ ಘಟನೆ ಬಗ್ಗೆ ಧ್ವನಿ ಎತ್ತಿದ್ದರು. ಅದಾದ ಮೇಲೆ ವರುಣ್- ವರ್ಷ ಕಾವೇರಿ ಕಾಂಟ್ರವರ್ಸಿಗೂ ರಿಯಾಕ್ಟ್ ಮಾಡಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್​ ನೀಡಿದ್ದಾರೆ.

    ಇನ್ನೂ ಈ ಇಬ್ಬರು ವೇದಿಕೆಗೆ ಬಂದ ಕೂಡಲೇ ಕಿಚ್ಚ ಸುದೀಪ್​, ಯಾರು ನಿಮಗೆ ಟಫ್​ ಅನಿಸುವ ಕಂಟೆಸ್ಟೆಂಟ್ ಅಂತ ಹೇಳಿದ್ದಾರೆ. ಅದಕ್ಕೆ ಶೋಭಾ ಶೆಟ್ಟಿ ಅವರು ಯಾರು ಇಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಮತ್ತೆ ರಜತ್​ ಬುಜ್ಜಿ ಅವರು ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅರ್ಧ ಪುಕ್ಲು, ಇನ್ನೂ ಅರ್ಧ ತಿಕ್ಲೂ, ಅವರಿಗೆ ಇವರು ಕಂಡ್ರೆ ಆಗೋದಿಲ್ಲ, ಇವರಿಗೆ ಅವರು ಕಂಡ್ರೆ ಆಗೋದಿಲ್ಲ, ಇವರು ಯಾರು ಉದ್ಧಾರ ಆಗೋದಿಲ್ಲ ಸರ್​ ಅಂತ ಕಿಚ್ಚ ಸುದೀಪ್​ ಮುಂದೇಯೇ ಹೇಳಿದ್ದಾರೆ. ಆಗ ಕಿಚ್ಚ ಇವರು ನಿಜವಾದ ಬಿಗ್​ಬಾಸ್​ ಕಂಟೆಸ್ಟೆಂಟ್​ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.

    BIG BOSS

    BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

    Published

    on

    ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್‌ ಇರಲಿಲ್ಲ. ಈ ವಾರ ಮನೆಯಲ್ಲಿ ಎಲಿಮಿನೇಷನ್‌ ನಡೆಯುವುದು ಪಕ್ಕಾ ಆಗಿದೆ. ಇದನ್ನು ಸ್ವತಃ ಕಿಚ್ಚ ಸುದೀಪ್‌ ಅವರೇ ಹೇಳಿದ್ದಾರೆ.

    ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಚೈತ್ರಾ ಕುಂದಾಪುರ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಏರು ಧ್ವನಿಯಲ್ಲೇ ಚೈತ್ರಾ ಅವರ ತಪ್ಪು ಮಾಡಿದ ವಿಚಾರಕ್ಕೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಭಾನುವಾರ ರಾತ್ರಿ (ನ.17ರಂದು) ಒಬ್ಬರು ದೊಡ್ಮನೆಯಿಂದ ಆಚೆ ಬರಲಿದ್ದಾರೆ. ಯಮುನಾ, ರಂಜಿತ್‌, ಜಗದೀಶ್‌, ಹಂಸಾ, ಮಾನಸ ಇದುವರೆಗೆ ಎಲಿಮಿನೇಟ್‌ ಆಗಿದ್ದಾರೆ. ಈಗ ಅನುಷಾ, ಭವ್ಯ, ಮಂಜು, ಧನರಾಜ್‌, ಧರ್ಮ, ಗೌತಮಿ, ಹನುಮಂತ, ಸುರೇಶ್‌, ಮೋಕ್ಷಿತಾ ಹಾಗೂ ಶಿಶಿರ್ ನಾಮಿನೇಟ್‌ ಆಗಿದ್ದಾರೆ. ಈ ಪೈಕಿ ಧನರಾಜ್‌, ಮೋಕ್ಷಿತಾ ಅವರು ನಿನ್ನೆಯ ಸಂಚಿಕೆಯಲ್ಲಿ ಸೇಫ್‌ ಆಗಿದ್ದಾರೆ.

    ಇನ್ನುಳಿದವರಲ್ಲಿ ಒಬ್ಬರು ದೊಡ್ಮನೆಯಿಂದ ಆಚೆ ಬರಲಿದ್ದಾರೆ. ಮಾಹಿತಿ ಪ್ರಕಾರ ಈ ವಾರ ಅನುಷಾ ರೈ ಅವರಿಗೆ ಅತೀ ಕಡಿಮೆ ಮತಗಳ ಬಂದಿದ್ದು, ಅವರು ಆಚೆ ಬರಲಿದ್ದಾರೆ ಎನ್ನಲಾಗುತ್ತಿದೆ.

    ಅನುಷಾ ಅವರು ತಮ್ಮ ನೇರ ನುಡಿಗಳಿಂದ ಬಿಗ್ ಬಾಸ್‌ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಟಾಸ್ಕ್‌ ವಿಚಾರದಲ್ಲಿ ಅವರು ಹಲವು ಬಾರಿ ಸಹ ಸ್ಪರ್ಧಿಗಳಿಂದ ಟಾರ್ಗೆಟ್‌ ಆಗಿದ್ದರು. ಧರ್ಮ ಅವರೊಂದಿಗೆ ಆಪ್ತ ಒಡನಾಟವನ್ನು ಹೊಂದಿದ್ದರು. ಈ ಬಗ್ಗೆ ಇಂದು ರಾತ್ರಿ (ನ.17ರಂದು) ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

    Continue Reading

    BIG BOSS

    ಪಾರು ಖ್ಯಾತಿಯ ಮೋಕ್ಷಿತಾಗೆ ತುಕಾಲಿ ಸಂತು ತರದ ಗಂಡ ಬೇಕಂತೆ..!

    Published

    on

    ಕಿರುತೆರೆ ಕಲಾವಿದ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು ಮೊದಲ ಕೆಲವು ವಾರಗಳಲ್ಲಿ ಸಖತ್‌ ಆಯಕ್ವೀವ್‌ ಆಗಿದ್ದ ಮಾನಸ ಸದ್ಯ ಶೋನಿಂದ ಹೊರಬಿದ್ದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಮಾನಸ, ಬಿಗ್ ಬಾಸ್‌ಗೆ ಹೋಗುವ ಮುನ್ನ ಸಿದ್ಧತೆ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

    ಈ ವೇಳೆ ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರಿಗೆ ತುಕಾಲಿ ಸಂತೋಷ್‌ ರೀತಿಯ ಗಂಡ ಬೇಕಂತೆ ಎನ್ನುವ ವಿಚಾರವನ್ನು ಮಾನಸ ಹೇಳಿದ್ದಾರೆ. ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾನಸ, ಬಿಗ್‌ ಬಾಸ್‌ ಶೋ ಆರಂಭಕ್ಕೆ ಎರಡು ದಿನ ಇರುವಾಗ ನನಗೆ ಕಾಲ್‌ ಬಂದಿದ್ದು. ಅದರ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಒಂದು ರಿಪೋರ್ಟ್‌ ಕೊಡಬೇಕು. ಹೀಗಾಗಿ ಅದನ್ನು ಸಿದ್ಧ ಮಾಡುವುದರಲ್ಲೇ ಒಂದು ದಿನ ಹೋಯ್ತು ಎಂದರು.

    ಮತ್ತೆ ಅಗ್ರಿಮೆಂಟ್, ಪ್ರೋಟೋಕಾಲ್‌, ವಿಡಿಯೋ ಕಾಲ್ ಇವೆಲ್ಲಾ ಮಾತನಾಡುವಷ್ಟರಲ್ಲಿ ಎರಡನೇ ದಿನ ಕೂಡ ಹೋಯ್ತು. ಮೂರನೇ ದಿನಕ್ಕೆ ಬಿಗ್‌ ಬಾಸ್‌ ಮನೆಯಲ್ಲೇ ಇದ್ದೇನೆ. ಹೀಗಾಗಿ ಮನೆಯಲ್ಲಿದ್ದ ಬಟ್ಟೆಗಳನ್ನೇ ಹೋಗುವಾಗ ತುಂಬಿಕೊಂಡು ಹೋಗಿದ್ದೆ. ಮುಂದಿನ ವಾರದಿಂದ ಸಂತು ಬಟ್ಟೆ ಕಳುಹಿಸಲು ಶುರು ಮಾಡಿದರು. ಮೊದಲ ದಿನ ಹೋಗುವಾಗ ನನಗೆ ಅಂತಾ ನಾನು ಏನೂ ತೆಗೆದುಕೊಳ್ಳಲಿಲ್ಲ ಎಂದರು.

    ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು. ಸಂತು ಬಟ್ಟೆ ಚಪ್ಪಲಿ ಕಳುಹಿಸಿದಾಗ ನಾನೇ ಅಲ್ಲಿ ಬೈಯುತ್ತಿದೆ. ಬರುವ ಸಂಬಳವನ್ನೆಲ್ಲಾ ಇದಕ್ಕೆ ಖುರ್ಚು ಮಾಡುತ್ತಿದ್ದಾರೇನೋ, ಹೊರಗಡೆ ಹೋದ ಮೇಲೆ ಎಲ್ಲಾ ದುಡ್ಡು ಖಾಲಿ ಎನ್ನುತ್ತಾರೇನೋ ಎನ್ನುವ ಭಯ ಇತ್ತು. ಅಷ್ಟೊಂದು ಬಟ್ಟೆ ಕಳುಹಿಸಿದ್ದರು. ಇರುವ ಬಟ್ಟೆಗಳೇ ಸಾಕು ಅನಿಸುತ್ತಿತ್ತು. ಅದಕ್ಕೆ ಹೊರಗಡೆ ಬಂದ ಮೇಲೆ ಎಷ್ಟು ದುಡ್ಡು ಖರ್ಚು ಮಾಡಿದೆ ಅಂತಾ ಫಸ್ಟ್ ಕೇಳಿದೆ ಎಂದು ಹೇಳಿದರು.

    ಸಂತು ಬಟ್ಟೆ ಕಳುಹಿಸುತ್ತರುವುದನ್ನು ನೋಡಿ ಖುಷಿ ಕೂಡ ಆಗಿತ್ತು. ಬಟ್ಟೆ ಮಾತ್ರ ಅಲ್ಲ..ಸ್ಟಿಕರ್‌ಯಿಂದ ಹಿಡಿದು ಕ್ಲಿಪ್‌ ತನಕನೂ ಸಂತೂನೇ ಕಳುಹಿಸುತ್ತಿದ್ದರು. ಬೇರೆ ಯರೂ ಕಳುಹಿಸುವವರು ಇರಲಿಲ್ಲ ನನಗೆ. ಸಂತು ಈ ರೀತಿ ಕಳುಹಿಸುವುದನ್ನು ನೋಡಿ ಮೋಕ್ಷಿತಾ ಹಾಗೂ ಗೌತಮಿ ತುಂಬಾ ಆಶ್ಚರ್ಯ ಪಡುತ್ತಿದ್ದರು. ನನಗಿಂತ ಅವರಿಬ್ಬರೇ ಕ್ಯಾಮರಾ ಮುಂದೆ ಹೋಗಿ ಥ್ಯಾಂಕ್ಯೂ ಸಂತೋಷ್‌ ಅವರೇ ಎನ್ನುತ್ತಿದ್ದರು.

    ಮೋಕ್ಷಿತಾ ಅಕ್ಕ ಯಾವಾಗಲೂ ಹೇಳುತ್ತಿದ್ದರು, ಸಿಗೋದು ಸಿಗುತ್ತಾರೆ ಸಂತು ತರ ಗಂಡ ಸಿಕ್ಕಿದರೆ ಸಾಕು ಅಂತಾ ಎಷ್ಟೋ ಸಲ ಹೇಳಿದ್ದಾರೆ. ಹೊರಗಡೆ ಇದ್ದಾಗ ಸಂತು ಅಷ್ಟೊಂದು ಕೊಡಿಸುತ್ತಿರಲಿಲ್ಲ. ಆದರೆ ಒಳಗಡೆ ಹೋದ ಮೇಲೆ ಬಹುಶಃ ಇನ್ನೊಂದಿಷ್ಟು ದಿನ ಇದ್ದು ಬರಲಿ ಅಂತಾ ಖುಷಿಯಿಂದ ಕಳುಹಿಸುತ್ತರೆನೋ…ಅದೇನೆ ಇರಲಿ ತುಂಬಾ ಚೆನ್ನಾಗಿ ಬಟ್ಟೆಗಳನ್ನು ಕಳುಹಿಸುತ್ತಿದ್ದರು ಎಂದು ಮಾನಸ ತಮ್ಮ ಪತಿ ತುಕಾಲಿ ಸಂತು ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

    Continue Reading

    BIG BOSS

    ‘ಹೂಸು’ ಬಿಡೋದು ತಪ್ಪಾ ?? ಬಿಗ್‌ಬಾಸ್ ಮನೆಯಲ್ಲಿ ಹನುಮಂತನ ಆಕ್ರೋಶ

    Published

    on

    BBK 11: ಬಿಗ್‌ಬಾಸ್‌ ಮನೆಯಲ್ಲಿ ಆರನೇ ವಾರ ಯಾವುದೇ ಎಲಿಮಿನೇಷನ್‌ ಆಗಿಲ್ಲ. ಆದರೆ ಮುಂದಿನ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಅಥವಾ ಡಬಲ್‌ ಎಲಿಮಿನೇಷನ್‌ ಇದ್ದರೂ ಅಚ್ಚರಿಪಡಬೇಕಿಲ್ಲ.

    ಎಲಿಮಿನೇಷನ್‌ ಹಂತದಿಂದ ಕೊನೆ ಕ್ಷಣದಲ್ಲಿ ಪಾರಾಗಿ ಬಂದ ಭವ್ಯ ಗೌಡ ಅವರಿಗೆ ಬಿಗ್‌ ಬಾಸ್‌ ಎಚ್ಚರಿಕೆ ಜತೆಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಿದ್ದಾರೆ. ಅದನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

    ಆಟದ ರೋಚಕತೆಯನ್ನು ಬದಲಾಯಿಸಲು ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಜೋಡಿಗಳಾಗಿ ವಿಂಗಡಿಸಿದ್ದು ಹನುಮಂತು – ಗೌತಮಿ, ಧರ್ಮ – ಐಶ್ವರ್ಯಾ, ಚೈತ್ರಾ – ಶಿಶಿರ್‌, ಮಂಜು – ಭವ್ಯ, ಅನುಷಾ – ಸುರೇಶ್‌, ಮೋಕ್ಷಿತ – ಧನರಾಜ್ ಅವರನ್ನು ಜೋಡಿಗಳಾಗಿ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

    ಈ ವೇಳೆ ಬಿಗ್‌ ಬಾಸ್‌ ಈ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳದ ಸದಸ್ಯ ಯಾರೆಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಬಹುತೇಕರು ಹನುಮಂತು ಎಂದು ಹೇಳಿದ್ದಾರೆ.‌

    ‘ನನ್ನ ಹೆಸರು ಬರೆದು ಬಿಡೋದ, ನಾನೇನು ಕೇಳಲ್ಲ ಅಂಥ. ಈ ಮನೆಯಲ್ಲಿ ಹೂಸು ಬಿಡೋದು ತಪ್ಪಾ’ ಎಂದು ಹನುಮಂತು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

    ಸೋಮವಾರ ರಾತ್ರಿ (ನ.11ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

    Continue Reading

    LATEST NEWS

    Trending