ನವದೆಹಲಿ: ಶಾಲೆ ಆರಂಭವಾಗುವ ಮೊದಲೇ ಕೊರೋನಾದ 4ನೇ ಅಲೆಯ ಭೀತಿ ಕಾಡಿದೆ. ಒಮಿಕ್ರಾನ್ ಉಪತಳಿಯ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ದೇಶದ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ, ನಾಲ್ಕನೇ ಅಲೆಯನ್ನು ಕುಡ ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
ರಾಷ್ಟ್ರದಲ್ಲಿ ಕೊರೋನಾ 4ನೇ ಅಲೆ ಸಾಧ್ಯತೆ ಹಿನ್ನೆಲೆ ಇಂದು ಬೆಳಿಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಪ್ರಧಾನಿ, ‘ ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿದೆ.
6-12 ವರ್ಷದ ಮಕ್ಕಳಿಗೆ ಕೂಡ ಕೊರೋನಾ ಲಸಿಕೆ ನೀಡಲಾಗುತ್ತದೆ’ ಎಂದು ಹೇಳಿದರು.
ಅಷ್ಟೇ ಅಲ್ಲದೆ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡಿದ ಅವರು ‘ದೇಶದಲ್ಲಿರುವ ಅನೆಕ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ.
ಇಂಧನ ದರದ ಮೇಲೆ ಹೇರಲಾಗಿರುವ ತೆರಿಗೆಯನ್ನು ಕಡಿತಗೊಳಿಸಿ ಗ್ರಾಹಕರಿಗೆ ಅನುಕೂಲವಾಗುವಂತೆ ಸಹಕರಿಸಿ ಎಂದು ಕರೆ ನೀಡಿದರು.