Connect with us

    LATEST NEWS

    ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!

    Published

    on

    ವಿಲು ಗರಿ ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ, ಜ್ಯೋತಿಷ್ಯದ ದೃಷ್ಟಿಯಿಂದಲೂ ಪ್ರಾಮುಖ್ಯತೆಯನ್ನು ಹೊಂದಿದೆ. ಮನೆಯಲ್ಲಿನ ವಾಸ್ತು ದೋಷಗಳನ್ನು ಸಹ ನವಿಲು ಗರಿಗಳಿಂದ ನಿವಾರಿಸಬಹುದು. ಆದರೆ ಮುರಿದ ನವಿಲು ಗರಿಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು.

    ಧರ್ಮಗ್ರಂಥಗಳ ಪ್ರಕಾರ, ಪ್ರಕೃತಿಗೆ ಸಂಬಂಧಿಸಿದ ಕೆಲವು ಮಂಗಳಕರ ವಸ್ತುಗಳನ್ನು ದೇವರು ಮತ್ತು ದೇವತೆಗಳು ಸ್ವತಃ ಧರಿಸುತ್ತಾರೆ. ಈ ವಸ್ತುಗಳ ಸಾಮೀಪ್ಯವು ಮಾನವ ಜೀವನಕ್ಕೂ ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಅದರಲ್ಲೊಂದು ನವಿಲುಗರಿ.

    ನವಿಲು ಗರಿ ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾಗಿದೆ. ಆದ್ದರಿಂದ ಮನೆಯಲ್ಲಿ ನವಿಲು ಗರಿಗಳಿದ್ದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬಕ್ಕೆ ಸುಖ, ಸಮೃದ್ಧಿ, ಸಂಪತ್ತು ತುಂಬಿ ತುಳುಕುತ್ತವೆ ಎಂದು ವಾಸ್ತು ತಜ್ಞರು ಹಂತ ಹಂತವಾಗಿ ಹೇಳುತ್ತಾರೆ.

    1. ಮನೆಯಲ್ಲಿ ಪೂಜಾ ಕೋಣೆಯಲ್ಲಿ ಎರಡು ನವಿಲು ಗರಿಗಳನ್ನು ಒಟ್ಟಿಗೆ ಇಡುವುದರಿಂದ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇದಲ್ಲದೇ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿಂದಲೂ ಮುಕ್ತಿ ಪಡೆಯಬಹುದಾಗಿದೆ.
    2. ಮನೆಯ ಮುಖ್ಯ ದ್ವಾರವು ಪೂರ್ವ, ಉತ್ತರ ಅಥವಾ ಈಶಾನ್ಯದಂತಹ ಮಂಗಳಕರ ದಿಕ್ಕಿನಲ್ಲಿ ಇಲ್ಲದಿದ್ದರೆ ಅಥವಾ ಮುಖ್ಯ ದ್ವಾರದಲ್ಲಿ ಬೇರೆ ಯಾವುದೇ ರೀತಿಯ ವಾಸ್ತು ದೋಷವಿದ್ದರೆ, ಬಾಗಿಲಿನ ಚೌಕಟ್ಟಿನಲ್ಲಿ ಕುಳಿತ ಭಂಗಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಅದರ ಮೇಲೆ ಮೂರು ನವಿಲು ಗರಿಗಳನ್ನು ಇಡುವುದು ಉತ್ತಮ.
    3. ಹಣದ ಸಮಸ್ಯೆ ನಿವಾರಣೆಗೆ ಶುಕ್ಲ ಪಕ್ಷದ ಸಮಯದಲ್ಲಿ ಆಗ್ನೇಯ ಮೂಲೆಯಲ್ಲಿ ಕನಿಷ್ಠ 5 ಅಡಿ ಎತ್ತರದಲ್ಲಿ ಎರಡು ನವಿಲು ಗರಿಗಳನ್ನು ಇಟ್ಟರೆ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ.
    4. 11, 15 ಅಥವಾ ಅದಕ್ಕಿಂತ ಹೆಚ್ಚು ನವಿಲು ಗರಿಗಳನ್ನು ಮನೆಯ ಡ್ರಾಯಿಂಗ್ ರೂಮ್ ಅಥವಾ ಊಟದ ಕೋಣೆಯಲ್ಲಿ ಒಟ್ಟಿಗೆ ಇಡುವುದರಿಂದ ಕುಟುಂಬ ಸದಸ್ಯರ ನಡುವೆ ಪರಸ್ಪರ ಸಾಮರಸ್ಯವನ್ನು ಸುಧಾರಿಸುತ್ತದೆ ಮತ್ತು ವಾತ್ಸಲ್ಯವನ್ನು ಕಾಪಾಡಿಕೊಳ್ಳುತ್ತದೆ ಎಂದು ನಂಬಲಾಗಿದೆ.
    5. ಮನೆಯ ಸ್ವಚ್ಛ ಮತ್ತು ಉತ್ತಮ ಪರಿಸರವನ್ನು ಒದಗಿಸಲು ನವಿಲು ಗರಿ ಕೂಡ ಸಹಕಾರಿಯಾಗಿದೆ. ನವಿಲು ಗರಿಗಳನ್ನು ಇಟ್ಟ ಜಾಗದ ಸುತ್ತ ಯಾವುದೇ ಕೀಟಗಳು ಬರುವುದಿಲ್ಲ.

    LATEST NEWS

    ಶ್ರೀ ಎಂ.ಎಸ್.ಗುರುರಾಜ್‌ಗೆ ಪ್ರತಿಷ್ಟಿತ ‘ಶ್ರೇಷ್ಠ ಸಹಕಾರಿ’ ರಾಜ್ಯ ಪ್ರಶಸ್ತಿ !!

    Published

    on

    ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ತನ್ನ ವಿಶಿಷ್ಠ ಹಾಗೂ ವಿಶೇಷ ಸೇವಾ ಕಾರ್ಯಗಳು ಮತ್ತು ಶಿಸ್ತುಬದ್ಧ ಆಡಳಿತದಿಂದ ತನ್ನದೇ ಆದ ಛಾಪು ಮೂಡಿಸಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಂ.ಎಸ್.ಗುರುರಾಜ್ ರವರಿಗೆ ಇಂದು ಬೆಳಗಾವಿಯಲ್ಲಿ ಸಮಾಪನಗೊಂಡ 71ನೇ ಅಖಿಲ ಭಾರತ ಸಹಕಾರ ಸಪ್ತಾಹ – 2024 ದಲ್ಲಿ “ಶ್ರೇಷ್ಠ ಸಹಕಾರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,ಬೆಂಗಳೂರು ಮತ್ತು ಅನೇಕೆ ಸಂಸ್ಥೆಗಳು ಜಂಟಿಯಾಗಿ ಬೆಳಗಾವಿಯ KLE ಸಂಸ್ಥೆಯ ಜೆ.ಎನ್.ಎಂ.ಸಿ.ಆವರಣದಲ್ಲಿನ ಡಾ.ಬಿ.ಎಸ್.ಜೆರ್ಗಿ ಸಭಾಂಗಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,ಇದರ ಎಂಟು ಜಿಲ್ಲೆಗಳನೊಳಗೊಂಡ ಮೈಸೂರು ಪ್ರಾಂತದ ಒಬ್ಬರಿಗೆ ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಸೊಸೈಟಿಯ ಸರ್ವತೋಮುಖ ಏಳಿಗೆ ಹಾಗೂ ಗಳಿಸಿದ ಲಾಭಾಂಶದಲ್ಲಿ ಒಂದು ಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ಮುಖ್ಯವಾಗಿ ಆರೋಗ್ಯ,ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿ ವಿನಿಯೋಗಿಸುವ ಮೂಲಕ ಅತ್ಯುತ್ತಮ ಕೆಲಸವನ್ನು ಶ್ರೀಶಾ ಸೊಸೈಟಿಯು ಮಾಡುವಲ್ಲಿ ಅಧ್ಯಕ್ಷರ ಚಿಂತನೆ,ಯೋಚನೆ ಮತ್ತು ಯೋಜನೆಗಳ ಯಶಸ್ವೀ ಅನುಷ್ಠಾನ ಮಾಡುವಲ್ಲಿ ಪಾತ್ರ ತುಂಬಾ ಹಿರಿದು.

    ಕರ್ನಾಟಕ ರಾಜ್ಯ ಸರಕಾರದ ಸಹಕಾರಿ ಸಚಿವರಾದ ಶ್ರೀ ರಾಜಣ್ಣ,ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷಣ್ ಸವದಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,ಇದರ ಅಧ್ಯಕ್ಷರಾದ ಶ್ರೀ ಜಿ.ನಂಜನ ಗೌಡ, ಕರ್ಣಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಶ್ರೀ ಜಗದೀಶ ಎಂ.ಕವಟಗಿಮಠ,ರಾಜ್ಯಸಭಾ ಸದಸ್ಯ ಶ್ರೀ ಈರಣ್ಣ ಕಡಾಡಿ ಹಾಗೂ ವೇದಿಕೆಯಲ್ಲಿದ್ದ ಇನ್ನಿತರ ಗಣ್ಯರು ಶ್ರೀ ಗುರುರಾಜ್ ರವರಿಗೆ ಶಾಲು ಹೊದಿಸಿ,ಸ್ಮರಣಿಕೆ ಹಾಗೂ ಸನ್ಮಾನ ಪತ್ರವನ್ನಿತ್ತು ಗೌರವಿಸಿದರು.

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಬೆಂಗಳೂರು,ಇದರ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶರಣ ಗೌಡ ಪಾಟೀಲ್ ಹಾಗೂ ಮೈಸೂರು ಪ್ರಾಂತದ ವ್ಯವಸ್ಥಾಪಕ ಶ್ರೀ ಗುರುಪ್ರಸಾದ್ ಬಂಗೇರ ಉಪಸ್ಥಿತರಿದ್ದರು.

    Continue Reading

    LATEST NEWS

    ಮುಖ್ಯಮಂತ್ರಿಯೊಡನೆ ಲವ್; ಮದುವೆಯಾಗದೆ ತಾಯಿಯಾದ ಆ ನಟಿ ಯಾರು ಗೊತ್ತಾ ?

    Published

    on

    ಜಯಲಲಿತಾ. ಪ್ರಸ್ತುತ ಯುವ ಜನಾಂಗಕ್ಕೆ ಹೆಸರು ಹೆಚ್ಚು ತಿಳಿದಿಲ್ಲ ಆದರೆ, ಜಯಲಲಿತಾ ನಾಲ್ಕೈದು ದಶಕಗಳ ಹಿಂದೆ ಪೂರ್ತಿ ಸಂಚಲನ ಮೂಡಿಸಿದ್ದ ನಟಿ.  ಸ್ಟಾರ್ ಹೀರೋಗಳು ಈಕೆಯೊಂದಿಗೆ ಸಿನಿಮಾಗಳನ್ನು ಮಾಡಲು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಒಂದು ಕಾಲದಲ್ಲಿ ಇಡೀ ಇಂಡಸ್ಟ್ರೀಯನ್ನೇ ಆಳಿದ್ದು ಜಯಲಲಿತಾ ಎಂದರೂ ತಪ್ಪಾಗಲಾರದು.


    ಜಯಲಲಿತಾ ಸಿನಿಮಾ ಬಂತೆಂದರೆ ಜನ ಗಾಡಿ ಕಟ್ಟಿಕೊಂಡು ನೋಡಲು ಹೋಗುತ್ತಿದ್ದರು. 1965 ರಲ್ಲಿ ‘ಮನುಷ್ಯಲು ಮಮತಾಲು’ ಚಿತ್ರದ ಮೂಲಕ ಜಯಲಲಿತಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಾಯಕ ಮತ್ತು ಸಾವಿತ್ರಿ ಮುಖ್ಯ ನಾಯಕಿ. ಜಯಲಲಿತಾ ಎರಡನೇ ನಾಯಕಿಯಾಗಿ ಇಂದಿರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಇನ್ನಿಲ್ಲದ ಜನಪ್ರಿಯತೆ ಗಳಿಸಿದ ನಟಿ ನಂತರ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಟಿಸಿದರು.

    ಸಿನಿಮಾದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಮಿಂಚಿದ್ದ ಜಯಲಲಿತಾ ಅವರ ಹೆಸರು ನೆನಪಾದಾಗ ಎಲ್ಲರಿಗೂ ನೆನಪಾಗುವುದು ಎಂಜಿಆರ್. ಎಂಜಿಆರ್ ಜಯಲಲಿತಾ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರು. ಜಯಲಲಿತಾ ರಾಜಕೀಯ ಪ್ರವೇಶಕ್ಕೆ ಎಂಜಿಆರ್ ಮುಖ್ಯ ಕಾರಣ. ಅವರ ಕರೆಯ ಮೇರೆಗೆ ಜಯಲಲಿತಾ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದರು.

    ಬಳಿಕ ಈ ಮೊದಲೇ ಮದುವೆಯಾಗಿದ್ದ ಎಂಜಿಆರ್ ಮೇಲಿನ ಪ್ರೀತಿಯನ್ನು ಜಯಲಲಿತಾ ಬಹಿರಂಗಪಡಿಸಿದರು. ಆದರೆ, ಎಂಜಿಆರ್ ಜಯಲಲಿತಾ ಅವರಿಗೆ ಪತ್ನಿ ಸ್ಥಾನಮಾನ ನೀಡಲಿಲ್ಲ. ಆ ನಂತರ ಜಯಲಲಿತಾ ಅವರು ತಮ್ಮ ಕುಟುಂಬದ ಸ್ನೇಹಿತನ ಮಗ ಅರುಣ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಜಯಲಲಿತಾ ಮದುವೆಯಾಗಿರಲಿಲ್ಲ.

    ಜಯಲಲಿತಾ ತಮ್ಮ ಸೋದರಳಿಯ ಸುಧಾಕರನ್ ಅವರನ್ನು ದತ್ತು ತೆಗೆದುಕೊಂಡು ಅವರ ಸಾಕು ತಾಯಿಯಾದರು. ನಟಿಗೆ 5000 ಕೋಟಿಗೂ ಹೆಚ್ಚು ಇದೆ ಎನ್ನಲಾಗಿದೆ. ಅಧಿಕಾರಿಗಳು ನಡೆಸಿದ ಶೋಧದಲ್ಲಿ ಜಯಲಲಿತಾ ಅವರ ಬಳಿ 10,500 ದುಬಾರಿ ಸೀರೆಗಳು, 750 ಜೋಡಿ ಚಪ್ಪಲಿಗಳು, 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನವಿದೆ ಎಂದು ಹೇಳಲಾಗಿದೆ. 2016ರಲ್ಲಿ ಮತ್ತೊಮ್ಮೆ ಅವರ ಆಸ್ತಿಯನ್ನು ತನಿಖೆಗೆ ಒಳಪಡಿಸಿದಾಗ 1250 ಕೆಜಿ ಬೆಳ್ಳಿ ಹಾಗೂ 21 ಕೆಜಿ ಚಿನ್ನ ಪತ್ತೆಯಾಗಿತ್ತು.

    Continue Reading

    LATEST NEWS

    ಮದುವೆ ವಿರೋಧ ; ಶಾಲಾ ಆವರಣದಲ್ಲೇ ಶಿಕ್ಷಕಿಯ ಬ*ರ್ಬರ ಹ*ತ್ಯೆ

    Published

    on

    ಮಂಗಳೂರು/ತಮಿಳುನಾಡು: ಮದುವೆ ಪ್ರಸ್ತಾಪ ನಿರಾಕರಿಸಿದ ಶಿಕ್ಷಕಿಯನ್ನು ಪ್ರಿಯಕರ ಶಾಲೆಗೆ ನುಗ್ಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಚಾ*ಕುವಿನಿಂದ ಇ*ರಿದು ಕೊ*ಲೆಗೈದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ನಿನ್ನೆ (ನ.20) ಈ ಘಟನೆ ನಡೆದಿದ್ದು, 26 ವರ್ಷದ ಶಿಕ್ಷಕಿ ರಮಣಿ ಹ*ತ್ಯೆಯಾಗಿದ್ದಾರೆ.
    ಕೊ*ಲೆಗೈದ ಮದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ರಮಣಿ ಮತ್ತು ಮದನ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ರಮಣಿ ಮನೆಯಲ್ಲಿ ನಿರಾಕರಿಸಿದ್ದಾರೆ. ಇದರಿಂದ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಉಂಟಾಗಿದ್ದು, ರಮಣಿ ಮನೆಯವರ ವಿರೋಧ ಕಟ್ಟಿಕೊಳ್ಳಲು ಬಯಸದೇ ನೇರವಾಗಿ ನಿರಾಕರಿಸಿದ್ದಾರೆ.

    ಮದನ್ ಏಕಾಏಕಿ ಶಾಲೆಯ ಶಿಕ್ಷಕರ ಸ್ಟಾಫ್ ಕೊಠಡಿಯ ಹೊರಗೆ ರಮಣಿ ಅವರಿಗೆ ಮನ ಬಂದಂತೆ ಚಾ*ಕುವಿನಿಂದ ಇರಿದಿದ್ದಾನೆ. ಕೂಡಲೇ ಶಿಕ್ಷಕಿಯನ್ನು ರಕ್ಷಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತೀ*ವ್ರ ರ*ಕ್ತಸ್ರಾವದಿಂದ ಆಕೆ ದಾರಿ ಮಧ್ಯದಲ್ಲೇ ಮೃ*ತಪಟ್ಟಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಮದನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    Continue Reading

    LATEST NEWS

    Trending