Connect with us

    DAKSHINA KANNADA

    ಕಾಲೇಜು ವಿದ್ಯಾರ್ಥಿನಿಗೆ ಚೂರಿ ಇರಿತ ಆರೋಪ ಪ್ರಕರಣ; ವಿದ್ಯಾರ್ಥಿಗಳ ನಿವಾಸಕ್ಕೆ ಶಾಸಕರು ಭೇಟಿ

    Published

    on

    ಪುತ್ತೂರು: ಕೊಂಬೆಟ್ಟು ಸರಕಾರಿ ಕಾಲೇಜಿನ ಅನ್ಯ ಕೋಮಿನ ವಿದ್ಯಾರ್ಥಿನಿಯೋರ್ವಳು ಸಹಪಾಠಿ ವಿರುದ್ಧ ಚೂರಿ ಇರಿತದ ಆರೋಪ ಹೊರಿಸಿದ್ದು ಈ ಕುರಿತಾಗಿ ಪುತ್ತೂರಿನಲ್ಲಿ ಸಂಚಲನ ಮೂಡಿತ್ತು. ವಿದ್ಯಾರ್ಥಿಗಳು ಯಾವುದೇ ಅಪರಾಧಗಳನ್ನು ಮಾಡಿಲ್ಲ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿತ್ತು. ಇನ್ನು ಈ ಪ್ರಕರಣದ ಸತ್ಯಾಂಶವನ್ನು ತಿಳಿಯಲು ಪೊಲೀಸರು ತೀವ್ರ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದೀಗ ಇಬ್ಬರು ವಿದ್ಯಾರ್ಥಿಗಳ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಯವರು ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

    ವಿದ್ಯಾರ್ಥಿಗಳ ಹಾಗೂ ಅವರ ಮನೆಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಯತೀಶ್ ಎನ್ ಬಳಿ ಮಾತನಾಡಿದ ಶಾಸಕರು ಕಾಲೇಜಿನಲ್ಲಿ ಏನು ಘಟನೆ ನಡೆದಿದೆಯೋ ಅದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕು. ಇದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ. ಇನ್ನು ಈ ಘಟನೆಯ ಬಗ್ಗೆ ಜನರಿಗೆ ಯಾವುದೇ ಸಂಶಯ ಇರಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

    ಪುತ್ತೂರಿನಲ್ಲಿ ಪುತ್ತಿಲ ಆಡಿಯೋ ಬಾಂಬ್ ಸ್ಫೋಟ..!

    ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕಬಕ ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಕಾಂಗ್ರೆಸ್ ಮುಖಂಡ ರೋಶನ್ ರೈ ಬನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    DAKSHINA KANNADA

    ಅಡವಿಯಲ್ಲಿ ಮಾನವನನ್ನು ಹೋಲುವ ದೈತ್ಯ ಪ್ರಾಣಿ ಪತ್ತೆ..!?

    Published

    on

    ಮಂಗಳೂರು (ನ್ಯೂಯಾರ್ಕ್‌ ಪೋಸ್ಟ್‌ ವರದಿ ) : ಉತ್ತರ ಅಮೆರಿಕಾದ ಜಾನಪದ ಹಿನ್ನಲೆಯುಳ್ಳ ಮನುಷ್ಯನನ್ನು ಹೋಲುವ ದೊಡ್ಡ ಪಾದದ ಜೀವಿಯನ್ನು ಕಾಡಿನಲ್ಲಿ ನೋಡಿರುವುದಾಗಿ ಬಹಳಷ್ಟು ಜನ ಹೇಳಿಕೊಂಡಿದ್ದರು. ಆದ್ರೆ ಇದುವರೆಗೂ ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ವ್ಯಕ್ತಿಯೊಬ್ಬರು ತಾನು ಓಕ್ಲಾಹಾಮಾದ ಲಾಟನ್‌ನಲ್ಲಿರುವ ಪ್ಯಾರಲಲ್ ಅಡವಿಯಲ್ಲಿ ಈ ಪ್ರಾಣಿಯನ್ನು ನೋಡಿದ್ದಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಇದು ನನ್ನ ಜೀವನದ ಭಯಾನಕ ಕ್ಷಣ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


    ನ್ಯೂಯಾರ್ಕ್‌ ಪೋಸ್ಟ್‌ ಈ ಕುರಿತಾದ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ  ದೊಡ್ಡ ಪಾದದ ಪ್ರಾಣಿ ಕಂಡು ಬಂದ ಬಗ್ಗೆ ಬರೆಯಲಾಗಿದೆ. ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ದೈತ್ಯಾಕಾರದ ಮಾನವನನ್ನು ಹೋಲುವ ಪ್ರಾಣಿಯೊಂದು ಮರದ ಬುಡದಲ್ಲಿ ಕುಳಿತು ಅಲ್ಲಿನ ಹೂವನ್ನು ಕೀಳುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂಬತ್ತು ಸೆಕೆಂಡ್ ಮಾತ್ರ ಈ ದೃಶ್ಯ ಕಂಡು ಬಂದಿದೆ. ಇಷ್ಟೇ ಅಲ್ಲದೆ ನ್ಯೂಯಾರ್ಕ್‌ ಪೋಸ್ಟ್ ಈ ಹಿಂದೆ ಇಂತಹ ಪ್ರಾಣಿ ಕಂಡು ಬಂದ ಕ್ಷಣ ಹಾಗೂ ಅದರ 16 ಇಂಚಿನ ಪಾದದ ಹೆಜ್ಜೆ ಗುರುತಿನ ಚಿತ್ರವನ್ನು ಪೋಸ್ಟ್ ಮಾಡಿದೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ನಿಜವಾಗಿಯೂ ಇಂತಹ ಒಂದು ಜೀವಿ ಇದೆಯಾ ಎಂಬ ಗೊಂದಲ ಸೃಷ್ಟಿಸಿದೆ. ಅನೇಖರು ಅಮೆರಿಕಾದ ಪೌರಾಣಿಕ ಹಿನ್ನಲೆ ಉಳ್ಳ ಜನಪದಲ್ಲಿ ಸೇರಿಕೊಂಡಿರುವ ಈ ಜೀವಿ ಈಗಲೂ ಇದೆ ಎಂದು ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಅಸ್ಪಷ್ಟ ವಿಡಿಯೋ ಆಗಿದ್ದು ಇದು ನಂಬಿಕೆಗೆ ಅರ್ಹವಾಗಿಲ್ಲ ಎಂದಿದ್ದಾರೆ. ಹಾಗೇ ಇನ್ನೂ ಕೆಲವರು ನಾವೂ ಇದನ್ನು ನೋಡಿದ್ದು, ದೃಶ್ಯ ಸೆರೆ ಹಿಡಿದಿಲ್ಲ ಎಂದಿದ್ದಾರೆ.


    ಮನುಷ್ಯಂತೆ ದೇಹ ರಚನೆ ಹೊಂದಿರುವ ದೈತ್ಯಾಕಾರದ ಮೈಮೇಲೆ ರೋಮಗಳನ್ನು ಹೊಂದಿರುವ ಜೀವಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಇದೆ ಎಂದು ಅಮೆರಿಕಾದ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಜೀವಿಯ ಬಗ್ಗೆ ಅನೇಕ ಕಥೆಗಳಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿದೆ ಎಂದು ಹೇಳಾಗಿದೆ. ಆದ್ರೆ ಈಗ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ವಿಡಿಯೋ ವೀಕ್ಷಿಸಲು ಕ್ಲಿಕ್‌ ಮಾಡಿ :

    Continue Reading

    DAKSHINA KANNADA

    ಕಡಬ : ಕಾರು – ಬೈಕ್ ನಡುವೆ ಅಪಘಾ*ತ; ಸವಾರ ಸಾ*ವು

    Published

    on

    ಕಡಬ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃ*ತಪಟ್ಟಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಹಳೆ ಸ್ಟೇಷನ್ ನಿವಾಸಿ, ಕಡಬ ಸಿ.ಎ. ಬ್ಯಾಂಕ್ ಮಾಜಿ ಉದ್ಯೋಗಿ ಹಸೈನಾರ್(57) ಮೃ*ತ ಬೈಕ್ ಸವಾರ.

    ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಸಾಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀ*ರ ಗಾ*ಯಗೊಂಡ ಹಸೈನಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ : 200 ಅಡಿ ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್; 30 ಕ್ಕೂ ಅಧಿಕ ಮಂದಿ ಸಾವು

    ಅಪಘಾ*ತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ವೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

     

     

    Continue Reading

    BANTWAL

    ಅಕ್ರಮ ಮರಳು ಅಡ್ಡೆಗೆ ದಾಳಿ; 20 ಬೋಟ್ ವಶಕ್ಕೆ

    Published

    on

    ಬಂಟ್ವಾಳ: ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ದ.ಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ದ.ಕ ಜಿಲ್ಲಾಧಿಕಾಗಳ ಆದೇಶದಂತೆ 20 ಬೋಟ್‌ಗಳನ್ನು ವಶಪಡಿಸಿಕೊಂಡಿದ್ದರು. ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಪಲಾಯನಗೈದಿದ್ದಾರೆಂದು ವರದಿಯಾಗಿದೆ.


    ದೋಣಿಗಳನ್ನು 4ರಂತೆ ಜೋಡಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬೋಟ್‌ನಲ್ಲಿ ಯಾವುದೇ ರೀತಿಯ ಮರಳು ಪತ್ತೆಯಾಗಿಲ್ಲ. ಮರಳುಗಾರಿಕೆಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸಂಬಂಧಟ್ಟದ್ದು ಎಂಬುವುದರ ಕುರಿತು ಅಧಿಕಾರಿಗಳ ತನಿಖೆಯ ಬಳಿಕ ತಿಳಿದುಬರಬೇಕಷ್ಟೇ.
    ಸಾಕಷ್ಟು ಸಮಯದಿಮದ ಕೇಳಿ ಬರುತ್ತಿದ್ದ ಆರೋಪ:
    ದೋಣಿಗಳ ಸಹಾಯದಿಂದ ನದಿಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಅರೋಪ ಸಾಕಷ್ಟು ಸಮಯದಿಂದ ಕೇಳಿ ಬರುತ್ತಿದ್ದವು. ಈ ಹಿನನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ದಾಳಿ ನಡೆಸಿ ಆಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶವನ್ನು ನೀಡಿದ್ದರು.
    ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಹಿರಿಯ ಭೂ ವಿಜ್ಞಾನಿ ಗಿರಿಶ್ ಮೋಹನ್, ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ಧನ್ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

    Continue Reading

    LATEST NEWS

    Trending