Connect with us

LATEST NEWS

ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆಯಲ್ಲಿ ಪೂಕಳಂ

Published

on

ಮಂಗಳೂರು ಸೆಪ್ಟೆಂಬರ್ 2: ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪಂಪ್ ವೆಲ್ ಪ್ಲೈಓವರ್ ಈಗ ಮತ್ತೆ ಸುದ್ದಿಯಲ್ಲಿದೆ. ಸತತ 10 ವರ್ಷಗಳ ಕಾಮಗಾರಿ ಬಳಿ ನಿರ್ಮಾಣಗೊಂಡ ಪಂಪ್ ವೆಲ್ ಪ್ಲೈಓವರ್ ಸಮೀಪದ ಸರ್ವಿಸ್ ರಸ್ತೆಯ ಅವ್ಯವಸ್ಥೆ ಈಗ ಮತ್ತೆ ಸುದ್ದಿಯಲ್ಲಿದೆ.


ಪ್ಲೈಓವರ್ ಕಾಮಗಾರಿ ಪೂರ್ಣವಾಗುತ್ತಿದ್ದಂತೆ ತರಾತುರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದ್ದು, ಅದು ಈ ಬಾರಿಯ ಮಳೆಗೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳೇ ಕಾಣ ಸಿಗುತ್ತಿದ್ದು, ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತುಂಬೆಲ್ಲಾ ಹೊಂಡಗುಂಡಿಗಳಿದ್ದರೂ ಜಿಲ್ಲಾಡಳಿತ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ಹಿನ್ನಲೆ ಮಹಿಳೆಯೊಬ್ಬರು ವಿಭಿನ್ನ ರೀತಿಯಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ಈ ನಡುವೆ, ಶೈಕ್ಷಣಿಕ ಸಲಹೆಗಾರರಾದ ರಾಧಿಕ ಧೀಮಂತ್‌ ಅವರು ನಿನ್ನೆ ಓಣಂ ಆಚರಿಸುವ ಮೂಲಕ ಪಂಪ್‌ವೆಲ್‌‌‌ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡಿದ್ದಾರೆ. ಪಂಪ್‌ವೆಲ್‌‌ ಫ್ಲೈಓವರ್‌ ಸಂಪೂರ್ಣವಾಗಲು ಹತ್ತು ವರ್ಷಗಳು ಬೇಕಾಯಿತು. ಇದು ಸಂಪೂರ್ಣಗೊಂಡ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಸರ್ವಿಸ್‌ ರಸ್ತೆಗಳು ಗುಂಡಿಗಳಿಂದ ಕೂಡಿದೆ.

LATEST NEWS

ಮತ್ತೆ ಬಂತು ಅಕ್ಷಯ ತೃತೀಯ; ಆಚರಣೆಯ ಮಹತ್ವವೇನು?

Published

on

ಮಂಗಳೂರು : ಭಾರತೀಯ ಹಿಂದೂ ಸಂಪ್ರದಾಯದಲ್ಲಿ ‘ಅಕ್ಷಯ ತೃತೀಯ’ಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 10 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ ಆರಾಧನೆ ಈ ದಿನ ನಡೆಯುತ್ತದೆ.


ಪೌರಾಣಿಕ ಹಿನ್ನೆಲೆ :

ಅಕ್ಷಯ ತೃತೀಯ ಆಚರಣೆಯ ಹಿಂದೆ ಹಲವು ಪೌರಾಣಿಕ ಹಿನ್ನೆಲೆ ಇದೆ. ಭಗವಾನ್ ವಿಷ್ಣುವಿನ ಪರಶುರಾಮ ಅವತಾರ ಈ ದಿನವೇ ಆಗಿದ್ದು ಎಂಬ ನಂಬಿಕೆಯಿದೆ.
ಕೃಷ್ಣ ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ್ದು ಇದೇ ದಿನ ಎಂಬ ನಂಬಿಕೆ ಇದೆ. ಈ ಅಕ್ಷಯ ಪಾತ್ರೆಯಲ್ಲಿ ಆಹಾರ ಖಾಲಿಯಾಗದು ಎಂಬ ಕಥೆಯೂ ಇದೆ. ಹಾಗಾಗಿ ಅಕ್ಷಯ ತೃತೀಯದಂದೂ ದಾನ ಧರ್ಮಕ್ಕೆ, ದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ತಾಯಿ ಅನ್ನಪೂರ್ಣೆಯ ಜನ್ಮದಿನವೂ ಅಕ್ಷಯ ತೃತೀಯಾದಂದೇ ಆಗಿದೆ ಎಂದು ಹೇಳಲಾಗಿದೆ.


ಇನ್ನು ಅಕ್ಷಯ ತೃತೀಯದಂದು ತ್ರೇತಾಯುಗ ಆರಂಭವಾಯಿತು ಎಂದೂ ಹೇಳಲಾಗಿದೆ. ಗಂಗೆಯೂ ಭೂಮಿಗಿಳಿದ ದಿನ ಎಂಬುದಾಗಿಯೂ ಹೇಳಲಾಗಿದೆ. ಭಗೀರಥ ರಾಜನು ಗಂಗಾಮಾತೆಯನ್ನು ಭೂಮಿಗೆ ಇಳಿಸಲು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದ್ದನು. ಹಾಗಾಗಿ ಅಕ್ಷಯ ತೃತೀಯದಂದು ಗಂಗಾ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಮಹತ್ವವೇನು?

ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಉತ್ತಮ ಕೆಲಸಗಳನ್ನು ಮಾಡುವುದರಿಂದು ಜೀವನದಲ್ಲಿ ಏಳಿಗೆ ಕಾಣಬಹುದು ಎಂಬ ನಂಬಿಕೆಯಿದೆ. ಈ ದಿನ ದಾನ ಧರ್ಮ ಮಾಡಿದರೆ ಉತ್ತಮ ಎನ್ನಲಾಗುತ್ತದೆ. ಹಾಗಾಗಿಯೇ ಹಲವರು ದಾನ ಧರ್ಮದಲ್ಲಿ ತೊಡಗಿಕೊಳ್ಳುತ್ತಾರೆ.

ಈ ದಿನ ಹೊಸ ವಸ್ತುಗಳನ್ನು ಖರೀದಿಸುವಲ್ಲಿ ಜನ ಮುಗಿ ಬೀಳುತ್ತಾರೆ. ಅದರಲ್ಲೂ ಚಿನ್ನಕ್ಕೆ ಬಲು ಬೇಡಿಕೆಯಿದೆ. ಆಭರಣ ಮಳಿಗೆಗಳು ತುಂಬಿ ತುಳುಕುತ್ತವೆ. ಈ ದಿನ ಆಭರಣ ಖರೀದಿ ಮಾಡಿದಲ್ಲಿ ‘ಅಕ್ಷಯ’ವಾಗಲಿದೆ ಎಂಬ ನಂಬಿಕೆ ಜನರದು. ಲಕ್ಷ್ಮೀಯನ್ನು ಆರಾಧಿಸಲಾಗುತ್ತದೆ. ಆಕೆ ಒಲಿದರೆ ಸಂಪತ್ತು ವೃದ್ಧಿಯಾಗುತ್ತದೆ. ಹಾಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈ ಬಾರಿಯ ಅಕ್ಷಯ ತೃತೀಯ ಸಮಯ :


ಅಕ್ಷಯ ತೃತೀಯ ಶುಕ್ರವಾರ, ಮೇ 10 ರಂದು ಬೆಳಗ್ಗೆ 4:17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು 2:50 AM ಕ್ಕೆ ಕೊನೆಗೊಳ್ಳುತ್ತದೆ. ಅಕ್ಷಯ ತೃತೀಯದ ಶುಭ ಸಮಯವು ಮೇ 10 ರಂದು ಬೆಳಗ್ಗೆ 5:49 ರಿಂದ ಮಧ್ಯಾಹ್ನ 12:23 ರ ನಡುವೆ ಇರುತ್ತದೆ. ಅಕ್ಷಯ ತೃತೀಯದ ಶುಭ ಸಮಯದಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ.

Continue Reading

DAKSHINA KANNADA

ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

Published

on

ಮಂಗಳೂರು/ಇಟಲಿ: ಇಟಲಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಜ್ಜಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್‌ ಬೆರೆಸಿರುವ ಘಟನೆ ನಡೆದಿದೆ.

feed

ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಲ್ ಬೆರೆಸಿದ್ದಾರೆ. ಮಗು ಅರ್ಧ ಹಾಲು ಕುಡಿದ ಬಳಿಕ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್‌ ಮಿಶ್ರಣ ಹಾಕಿರುವುದು ಬೆಳಕಿಗೆ ಬಂದಿದೆ.  ಇದರಿಂದ ಆಘಾತಕ್ಕೊಳಗಾದ ವೃದ್ಧೆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುಂದೆ ಓದಿ..; ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಕೋಮಾಗೆ ಜಾರಿದ ಮಗು:

ಅದಾಗಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೋಮ ಸ್ಥಿತಿಗೆ ಜಾರಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಆರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

 

Continue Reading

DAKSHINA KANNADA

ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ

Published

on

ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

 

Continue Reading

LATEST NEWS

Trending