Sunday, December 4, 2022

ಮರದ ಕೊಂಬೆ ಕಡಿಯುವಾಗ ಆಯತಪ್ಪಿ ಬಿದ್ದು ಯುವಕ ಸಾವು

ನೆಲ್ಯಾಡಿ ಸೆಪ್ಟೆಂಬರ್ 2: ಮರದ ಗೆಲ್ಲು ಕಡಿಯಲು ಮರ ಹತ್ತಿದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟಿನಲ್ಲಿ ನಡೆದಿದೆ.


ಕೊಣಾಲು ಗ್ರಾಮದ ಕೋಲ್ಪೆ ದರ್ಖಾಸು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಇಸ್ಮಾಯಿಲ್(25)ಮೃತಪಟ್ಟ ಯುವಕ.ಇಸ್ಮಾಯಿಲ್‌ರವರು ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ಎಂಬಲ್ಲಿ ಮಾವಿನ ಮರವೊಂದರ ಗೆಲ್ಲು ಕಡಿಯಲು ಮರ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಕಾರ್ಕಳದಲ್ಲಿ ನೇಣಿಗೆ ಕೊರಳೊಡ್ಡಿದ ಕಾಲೇಜು ವಿದ್ಯಾರ್ಥಿನಿ

ಕಾರ್ಕಳ: ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ.ತೃತೀಯ ಬಿಎ ವಿದ್ಯಾರ್ಥಿನಿ ಕೀರ್ತನಾ (19) ಮೃತ ದುರ್ದೈವಿ.ಈಕೆ ಇಂದು ಬೆಳಿಗ್ಗೆ ಮನೆಯಲ್ಲಿ...

ಸುಬ್ರಹ್ಮಣ್ಯದಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಹಲ್ಲೆ ನಡೆಸಿ ಲಂಚ ಬೇಡಿಕೆ ಪ್ರಕರಣ-ಪೊಲೀಸ್ ಸಿಬ್ಬಂದಿ ಕಡಬ ಠಾಣೆಗೆ ವರ್ಗಾವಣೆಗೆ ಹಿಂಜಾವೇ ನಕಾರ

ಸುಬ್ರಹ್ಮಣ್ಯ: ‍ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಲಂಚ ನೀಡುವಂತೆ ಪೀಡಿಸಿ ಥಳಿಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ...

ಮಂಗಳೂರಿನಲ್ಲಿ ಅಕ್ರಮ ಚಿನ್ನ ಸಾಗಾಟ: 1ತಿಂಗಳಲ್ಲಿ 4ಕೋಟಿ ಮೌಲ್ಯದ ಚಿನ್ನ ವಶ

ಮಂಗಳೂರು: ನ.1ರಿಂದ 30ರವರೆಗೆ ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಗಳೊಂದರಲ್ಲಿ ಬರೋಬ್ಬರಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ವಿವಿಧ ಚಿನ್ನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ 7,692 ಗ್ರಾಂ...