Connect with us

LATEST NEWS

ಅಕ್ರಮ ಗೋ ಹತ್ಯೆಗೆ ಆಸ್ತಿ ಮುಟ್ಟುಗೋಲು ಹಾಕಲು ಶಾಸಕ ಭರತ್‌ ಶೆಟ್ಟಿ ಖಡಕ್‌ ಸೂಚನೆ

Published

on

ಮಂಗಳೂರು: ರಾಜ್ಯ ಸರಕಾರ ಜಾರಿಗೊಳಿಸಿದ ನೂತನ ಗೋ ಹತ್ಯೆ ಕಾಯಿದೆ ಪ್ರಕಾರ ಗೋ ಕಳ್ಳತನ ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಸಾಗಾಟ ಗಂಭೀರ ಪ್ರಕರಣವಾಗಿದ್ದು, ಎಫ್ ಐಆರ್ ದಾಖಲಾದ ಕೂಡಲೇ ಅಂತವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಕಟ್ಟುನಿಟ್ಟಾಗಿ ಕಾಯಿದೆ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಇಲಾಖೆಗೆ ವೈ ಖಡಕ್ ಸೂಚನೆ ನೀಡಿದ್ದಾರೆ.


ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಹತ್ಯೆ, ಕಳ್ಳತನ ಕೂಡಲೇ ನಿಲ್ಲಿಸಬೇಕು.

ಅಪರಾಧ ಪ್ರಕರಣ ನಿಯಂತ್ರಣಕ್ಕೆ ತರಲು ಈ ಕಠಿಣ ಅಸ್ತ್ರಗಳ ಬಳಕೆ ಅನಿವಾರ್ಯವಾಗಿದೆ.

ಹೈನುಗಾರಿಕೆ ನಡೆಸಿ ಜೀವನ ನಡೆಸುವವರ ಹಟ್ಟಿಯಿಂದ ದನ ಕದಿಯುವುದನ್ನು, ಬೀಡಾಡಿ ದನಗಳ ಕಳವು ಮಾಡಿ ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗದು.

ಈ ನಿಟ್ಟಿನಲ್ಲಿ ಆಸ್ತಿ ಮುಟ್ಟುಗೋಲು, ದಂಡಾಸ್ತ್ರ ಪ್ರಯೋಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.

LATEST NEWS

ಶಾಸ್ತ್ರೋಕ್ತವಾಗಿ ಮದುವೆ ಆಗದೇ ಇದ್ದರೆ ಮದುವೆಯೇ ಊರ್ಜಿತವಲ್ಲ : ಸುಪ್ರೀಂ ಕೋರ್ಟ್‌

Published

on

ನವದೆಹಲಿ: ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್‌ ಬಣ್ಣಿಸಿದೆ. ಜೊತೆಗೆ ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೊರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಇಲ್ಲ. ಯಾವುದೇ ಶಾಸ್ಕೋಕ್ತವಾದ ಆಚರಣೆ ಇಲ್ಲದೇ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.  ಪೈಲಟ್ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಅಗಾಸ್ಟಿನ್ ಜಾರ್ಜ್‌ ಅವರನ್ನೊಳಗೊಂಡ ಪೀಠ ಈ ರೀತಿಯಾಗಿ ಹೇಳಿದೆ.

ಮದುವೆಗೆ ಮಾನ್ಯತೆ ನೀಡಲು ಶಾಸ್ತ್ರೋಕ್ತ ಕಾರ್ಯಕ್ರಮಗಳು ನಡೆದಿರಬೇಕು. ಸಮಸ್ಯೆ ಅಥವಾ ವಿವಾದ ಉಂಟಾದಾಗ ಪರಿಹರಿಸಲು ಸಮಾರಂಭದ ಪುರಾವೆಗಳು ನೆರವಿಗೆ ಬರಲಿವೆ. ಅಂತಹ ಆಚರಣೆ ಇಲ್ಲದೆ ನಡೆದ ಮದುವೆಗೆ ಕಾಯಿದೆಯ ಸೆಕ್ಷನ್ 7ರ ಪ್ರಕಾರ ಮಾನ್ಯತೆ ಸಿಗುವುದಿಲ್ಲ. ಕೇವಲ ಇಲಾಖೆಯ ಪ್ರಮಾಣ ಪತ್ರದಿಂದ ವೈವಾಹಿಕ ಸ್ಥಿತಿ ದೃಢೀಕರಿಸಲಾಗದು. ಹಿಂದೂ ವಿವಾಹದ ವಿಧಿ ವಿಧಾನಗಳಂತೆ ಮದುವೆ ನಡೆಯದಿದ್ದರೆ ಅದನ್ನು ಹಿಂದೂ ವಿವಾಹವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ವಿವರಿಸಿದೆ.

ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆ ಎನ್ನುವುದು ಬಹಳ ಪವಿತ್ರ. ಇದು ಇಬ್ಬರು ವ್ಯಕ್ತಿಗಳ ನಡುವಿನ ಜೀವನ ಪರ್ಯಂತ, ಘನತೆಯ ಸಮಾನ ಸಹಮತದ ಮತ್ತು ಆರೋಗ್ಯಕರ ಸಮ್ಮಿಲನ ಎಂದು ಕೋರ್ಟ್‌ ಹೇಳಿದೆ.

ನೋಂದಣಿ ಅಂತಿಮವಲ್ಲ

ಯಾವುದೇ ಶಾಸ್ತ್ರೋಕ್ತ ಆಚರಣೆ ಇಲ್ಲದೇ ಕೇವಲ ಸಂಸ್ಥೆಯೊಂದು ನೋಂದಣಿಯ ದಾಖಲೆ ಪತ್ರ ವಿತರಿಸಿದರೆ ಅದು  ಹಿಂದೂ ವಿವಾಹ ಕಾಯ್ದೆ ಅನ್ವಯ ವಿವಾಹವನ್ನು ಮಾನ್ಯಗೊಳಿಸುವುದಿಲ್ಲ. ಹಿಂದೂ ವಿವಾಹ ವಿಧಿ ವಿಧಾನದಂತೆ ಮದುವೆ ನಡೆಯದೆ ಇರುವಾಗ ಸೆಕ್ಷನ್ 8ರ ಅಡಿಯಲ್ಲಿ ನೋಂದಣಿ ಅಧಿಕಾರಿ ವಿವಾಹವನ್ನು ನೋಂದಾಯಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7ರ ಪ್ರಕಾರ ವೈವಾಹಿಕ ಸಮಾರಂಭದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರವೇ ದೃಢೀಕರಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಅಗತ್ಯವಾದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸದ ವಿವಾಹಗಳನ್ನು ನೋಂದಣಿ ಮಾಡುತ್ತಿರುವ ಪ್ರವೃತ್ತಿ ಬಗ್ಗೆ ಇಬ್ಬರೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಏನಿದು ಪ್ರಕರಣ?

ಪೈಲಟ್ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಮದುವೆ ನೋಂದಣಿ ಮಾಡಿಸಿದ್ದರೂ ಹಿಂದೂ ವಿವಾಹ ಕಾಯ್ದೆಯ ಅನುಸಾರ ಸಪ್ತಪದಿ ನೆರವೇರಿರಲಿಲ್ಲ ಎಂಬುದು ನ್ಯಾಯಾಲಯಕ್ಕೆ ಗಮನಕ್ಕೆ ಬಂದಿತ್ತು. ಈ ಹಿನ್ನಲೆಯಲ್ಲಿ ನೋಂದಣಿಯನ್ನು ಅಮಾನ್ಯ ಮಾಡಿ ಮದುವೆಯನ್ನು ರದ್ದುಗೊಳಿಸಿ ಪತ್ನಿ ದಾಖಲಿಸಿದ್ದ ವರದಕ್ಷಿಣೆ ಮತ್ತು ವಿಚ್ಛೇದನ ಪ್ರಕರಣವನ್ನೂ ಕೂಡಾ ನ್ಯಾಯಾಲಯ ರದ್ದುಗೊಳಿಸಿದೆ.

ಭಾರತೀಯ ಸಮಾಜದಲ್ಲಿ  ಮದುವೆಗೆ ಹೆಚ್ಚಿನ ಮೌಲ್ಯ ಇದೆ. ದಂಪತಿಯ ಪೋಷಕರು ಕಾಗದದ ನೋಂದಣಿಗಳನ್ನು ಪ್ರೋತ್ಸಾಹಿಸಬಾರದು. ವಿವಾಹದ ಬಗ್ಗೆ ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂ ವಿವಾಹದ ಶಾಸ್ತ್ರೋಕ್ತ ಆಚರಣೆಗಳನ್ನು ಕ್ಷುಲ್ಲಕವೆಂದು ಪರಿಗಣಿಸುವ ಬದಲು “ಶ್ರದ್ಧೆಯಿಂದ ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿ ಪಾಲಿಸಬೇಕು” ಎಂದು ನ್ಯಾಯಪೀಠ ಹೇಳಿದೆ.

Continue Reading

DAKSHINA KANNADA

ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Published

on

ಮಂಗಳೂರು : ಬಿಗ್‌ಬಾಸ್ ಮುಖೇನ ರಾಜ್ಯದಲ್ಲಿ ಹೆಸರು ಪಡೆದಿರುವ ಕರಾವಳಿಯಲ್ಲಿ ಸ್ಟಾರ್ ರೂಪೇಶ್ ಶೆಟ್ಟಿ. ತುಳುನಾಡಿನ ಹುಲಿವೇಷ ಕುಣಿತವನ್ನು ಬಿಗ್‌ಬಾಸ್ ನಲ್ಲಿ ಪರಿಚಯಿಸಿದ್ದು ಅಲ್ಲದೆ ವೇಷದಾರಿಗಳ ಜೊತೆ ಹೆಜ್ಜೆ ಕೂಡಾ ಹಾಕಿದ್ದಾರೆ.  ಅಲ್ಲದೇ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಕೂಡ ಹೌದು. ತುಳು ಸಿನಿಮಾದಲ್ಲಿ ಮಿಂಚಿದ್ದ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತ್ತು. ಇದೀಗ ತಮಿಳು ಚಿತ್ರರಂಗಕ್ಕೂ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ರೂಪೇಶ್ ಶೆಟ್ಟಿ, “ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಇದರ ಶೂಟಿಂಗ್ ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹೀಗೆ ಇರಲಿ. ದೇವರಿಗೆ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ದಿನಾಂಕವನ್ನು ರೂಪೇಶ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್​ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.

Continue Reading

DAKSHINA KANNADA

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಶುಭಾರಂಭ

Published

on

ಮಂಗಳೂರು : ಸಹಕಾರಿ ಕ್ಷೇತ್ರದ ಅಗ್ರಗಣ್ಯ ಸಹಕಾರಿ ಸಂಘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಮಂಗಳೂರು ಪಡೀಲ್‍ನ ಆತ್ಮಶಕ್ತಿ ಸೌಧದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಹೋಲಿಕ್ರಾಸ್ ಚರ್ಚ್ ನ ಬಳಿಯಿರುವ ಶರೂನ್ ಸ್ಟ್ರಕ್ಟರ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು.

ಸಾಮಾಜಿಕ ಕಳಕಳಿ ಶ್ಲಾಘನೀಯ : ಯು.ಟಿ.ಖಾದರ್

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ,  ಶ್ರೀಮಂತ ವರ್ಗದವರಿಗೆ ನಗರಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತದೆ. ಆದರೆ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಆದ್ಯತೆ ನೀಡಿದ್ದು, ಇದೀಗ ಎಲ್ಯಾರ್ ಪದವಿನಂತಹ ಹಿಂದುಳಿದ ಪ್ರದೇಶದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಸಹಕಾರಿ ಕ್ಷೇತ್ರದ ನಿಜವಾದ ಧ್ಯೇಯ ಉದ್ಧೇಶವನ್ನು ಈ ಸಂಘ ಮಾಡಿ ತೋರಿಸಿದೆ. ಮೂರು ಗ್ರಾಮಗಳ ಸಮ್ಮಿಲನದ ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಿಲ್ಲ. ಇಂತಹ ಪ್ರದೇಶದಲ್ಲಿ ಜನರಿಗೆ ಸಹಕಾರಿ ಸೇವೆಯನ್ನು ನೀಡುವ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು, ಈ ಪ್ರದೇಶದ ಜನರ ಆರ್ಥಿಕ ಕಾರ್ಯಕ್ಕೆ ಬೆಂಬಲ ನೀಡುವ ಮೂಲಕ ಉತ್ತಮ ಗ್ರಾಹಕ ಸೇವೆಯೊಂದಿಗೆ ಪ್ರದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿ ಎಂದರು.’

ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆ : ಚಿತ್ತರಂಜನ್ ಬೋಳಾರ್

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ ಮಾತನಾಡಿ, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಎರಡನೇ ಶಾಖೆ ಆರಂಭಗೊಂಡಿದ್ದು, ಉಳ್ಳಾಲದ ಮಾಡೂರಿನಲ್ಲಿ ಅಂದಿನಿಂದ ಇಂದಿನವರೆಗೆ ಯು.ಟಿ.ಖಾದರ್ ಅವರು ಸಂಘದ ಶಾಖೆಯನ್ನು ಉದ್ಘಾಟಿಸಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಸಂಘ ಯಶಸ್ವಿಯಾಗಿ ಇಷ್ಟು ಶಾಖೆಗಳು ಆರಂಭಗೊಳ್ಳಲು ಮತ್ತು ಹತ್ತನೇ ವರ್ಷದಲ್ಲಿ ಸ್ವಂತ ಪ್ರಧಾನ ಕಚೇರಿ ನಿರ್ಮಾಣಕ್ಕೆ ಮುಖ್ಯ ಕಾರಣ ಸಂಘದ ಗ್ರಾಹಕರು, ಸದಸ್ಯರು ಮತ್ತು ಸಂಘದ ಆಡಳಿತ ಮಂಡಳಿಯೊಂದಿಗೆ ಸಿಬಂದಿ ವರ್ಗ ಕಾರಣವಾಗಿದ್ದಾರೆ ಎಂದರು.

ಭದ್ರತಾಕೋಶ ಉದ್ಘಾಟನೆ : 

ಎಲ್ಯಾರ್ ಪದವು ಹೊಲಿ ಕ್ರಾಸ್ ಚರ್ಚ್‌ನ ಧರ್ಮಗುರು ಎಫ್.ಆರ್.ಜಾನ್ ಡಿ’ಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುತ್ತಾರು ಶ್ರೀ ಪಂಜದಾಯ ಬಂಟ ದೈವಗಳ ಆದಿ ಕೊರಗತನಿಯ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಮಾಗಣ್ತಡಿ ಭದ್ರತಾಕೋಶ ಉದ್ಘಾಟಿಸಿದರು.

ಕೊಣಾಜೆ ಬೆಳ್ಮ ಸಿಎಸ್‍ಐ ಬೆತಾನೀಯ ಚರ್ಚ್‌ನ ಧರ್ಮಗುರು ರೆ| ವಿನಯಲಾಲ್ ಬಂಗೇರ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕೊಣಾಜೆ ಗ್ರಾ. ಪಂ. ಅಧ್ಯಕ್ಷೆ ಗೀತಾ ದಾಮೋದರ ಗಣಕೀಕೃತ ಬ್ಯಾಂಕಿಂಗ್‍ಗೆ ಚಾಲನೆ ನೀಡಿದರು. ಅಂಬ್ಲಮೊಗರು ಗ್ರಾ. ಪಂ. ಎಸ್.ಮಹಮ್ಮದ್ ಇಕ್ಬಾಲ್ ಇ ಮುದ್ರಾಂಕ ಸೇವೆಗೆ ಚಾಲನೆ ನೀಡಿದರು.

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಶ್ರೀ ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಚಂದ್ರಹಾಸ್ ನಾಯ್ಕ ಉಳಿತಾಯ ಖಾತೆಗೆ ಚಾಲನೆ ನೀಡಿದರು.

ಇದನ್ನೂ ಓದಿ : ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಎಲ್ಯಾರ್ ಪದವು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಎಡ್‍ಲೈನ್ ಐಮನ್, ಕಟ್ಟಡದ ಮಾಲಕ ರೆನೋಲ್ಡ್ ಜಿ ಅಮ್ಮಣ್ಣ .ಪಜೀರ್ ಗೋಶಾಲೆಯ ಟ್ರಸ್ಟಿ ಶಿವಪ್ರಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕರಾದ ಪಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಚಂದ್ರಹಾಸ ಮರೋಳಿ, ಗೋಪಾಲ್ ಎಂ. ಸಲಹೆಗಾರರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಸಿಬ್ಬಂದಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

”ಕೊರೊನಾ ಸಂದರ್ಭದಲ್ಲಿ 10 ಕೋಟಿ ಇದ್ದ ಚಿನ್ನಾಭರಣ ಸಾಲ ಒಮ್ಮೆಲೇ 90 ಕೋಟಿ ರೂ.ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಸಂಘ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದೆ. ನೂತನ ಶಾಖೆಯಿಂದ ಬೇರೆ ಬ್ಯಾಂಕ್‍ಗಳಿಗೆ ಡಿಪಾಸಿಟ್ ಮಾಡಲು ಆರ್ ಟಇ ಜಿ ಎಸ್ ಸೌಲಭ್ಯ, ಇ ಮುದ್ರಾಂಕ, ಆರೋಗ್ಯ ವಿಮೆ, ಸಾಲ ವಿಮಾ ಭದ್ರತೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸವಲತ್ತುಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.”

ಸಹಕಾರ ರತ್ನ ಚಿತ್ತರಂಜನ್ ಬೋಳಾರ, ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಮಂಗಳೂರು

Continue Reading

LATEST NEWS

Trending