Wednesday, October 5, 2022

‘ಬೆಲೆಯೇರಿಕೆ ರಾಷ್ಟ್ರವಿರೋಧಿ ಕೃತ್ಯ’ ಎಂದ ಬಿಜೆಪಿ ಸಂಸದ

ಬೆಂಗಳೂರು: ದೇಶದಲ್ಲಿ ಇಂಧನ ದರ ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಈ ಬಗ್ಗೆ ರಾಜ್ಯಸಭಾ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಟೀಕಿಸಿದ್ದು, ಇದು ರಾಷ್ಟ್ರವಿರೋಧಿ ಕೃತ್ಯ ಎಂದು ಹೇಳಿದ್ದಾರೆ.


ಈ ಬಗ್ಗೆ ಖಾರವಾಗಿ ಟ್ವೀಟ್‌ ಮಾಡಿರುವ ಅವರು, ‘ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದು ದೇಶದಲ್ಲಿ ದಂಗೆಯಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಬೆಲೆ ಏರಿಕೆಯು ಹಣಕಾಸು ಸಚಿವಾಲಯದ ಬೌದ್ಧಿಕ ದಿವಾಳಿತನ.

ಇದು ರಾಷ್ಟ್ರವಿರೋಧಿಯೂ ಹೌದು. ಬೆಲೆ ಏರಿಕೆ ಮೂಲಕ ಬಜೆಟ್ ಕೊರತೆಯನ್ನು ಸರಿದೂಗಿಸಿಕೊಳ್ಳುವುದು ಅಸಮರ್ಥತೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

Breaking: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ..!

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಇದರಲ್ಲಿದ್ದ ಓರ್ವ ಪೈಲೆಟ್‌ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...