Wednesday, October 5, 2022

ಪ್ರವೀಣ್ ಹತ್ಯೆ ಪ್ರಕರಣ: ಬಂಧಿತರು ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪುತ್ತೂರು ನ್ಯಾಯಾಲಯ ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಪ್ರವೀಣ್‌ ಕೊಲೆಗೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪೊಲೀಸರು ಮೂರು ದಿನದ ಮಟ್ಟಿಗೆ ಕಸ್ಟಡಿಗೆ ನೀಡಿದ್ದರು.

ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ 5 ದಿನ ವಶಕ್ಕೆ ಪಡೆದಿದ್ದಾರೆ.
ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯರೇ ಆದ ಶಫೀಕ್ ಮತ್ತು ಝಾಕೀರ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿತ್ತು.

ಇವರು ಕೊಲೆಗೆ ಪರೋಕ್ಷವಾಗಿ ಸಹಕರಿಸಿದ್ದರು ಎಂಬ ಆರೋಪ ಇವರ ಮೇಲಿದೆ. ಪ್ರಮುಖ ಆರೋಪಿಗಳಾಗಿ ತಲಾಶ್‌ ನಡೆಯುತ್ತಿದೆ.

 

LEAVE A REPLY

Please enter your comment!
Please enter your name here

Hot Topics

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...