Connect with us

    LATEST NEWS

    ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    Published

    on

    ಮಂಗಳೂರು/ ಬಳ್ಳಾರಿ : ಸೆ.12ರಂದು ನಡೆದಿದ್ದ ಹಣ, ಆಭರಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಕಂಬಿ ಎಣಿಸುತ್ತಿದ್ದಾರೆ.  ಬ್ರೂಸ್‌ಪೇಟೆ ಹೆಡ್ ಕಾನ್‌ಸ್ಟೇಬಲ್ ಮಹಬೂಬ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಆರೀಫ್‌, ಜೊತೆಗೆ ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್ ಬಂಧಿತರು. ಆರೋಪಿಗಳಿಂದ ಒಟ್ಟು 22,41,000 ಮೌಲ್ಯದ ಹಣ, ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ. ಕೃ*ತ್ಯದಲ್ಲಿ ಭಾಗಿಯಾಗಿದ್ದ ಕಾನ್ಸ್ಟೇಬಲ್  ಮೆಹಬೂಬ್‌ ನನ್ನು ಅಮಾನತು ಮಾಡಲಾಗಿದೆ.

    ಏನಿದು ಪ್ರಕರಣ?

    ರಘು ಎಂಬುವವರು ಸೆ. 12ರಂದು ಮುಂಜಾನೆ 22,99,000 ಹಣ ಮತ್ತು 15,90,000 ಮೌಲ್ಯದ 318 ಗ್ರಾಂ ಚಿನ್ನಾಭರಣಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಟ್ಯಾಂಕ್‌ ಬಾಂಡ್‌ ರಸ್ತೆ ಕಡೆಯಿಂದ ರಾಯದುರ್ಗ ಬಸ್ ನಿಲ್ದಾಣದ ಕಡೆಯ ಓಣಿಯಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ರಘು ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡಿದ್ದರು.

    ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಮತ್ತು ಬ್ರೂಸ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಸಿಂಧೂರ್‌ ತನಿಖೆಗಾಗಿ ನಗರ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಬ್ರೂಸ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಎಂ.ಎನ್. ಸಿಂಧೂರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ, ಸೆ. 21ರಂದು ಆರೀಫ್‌ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

    ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್‌ಎಂಬುವವರೊಂದಿಗೆ ಎರಡು ಬೈಕ್‌ಗಳಲ್ಲಿ ಹೋಗಿ ಹಣ ಮತ್ತು ಬಂಗಾರವುಳ್ಳ ಬ್ಯಾಗ್ ಕಸಿದು ಬಂದಿದ್ದಾಗಿ ವಿಚಾರಣೆ ವೇಳೆ ಆರೀಫ್‌ ತಿಳಿಸಿದ್ದ. ದರೋಡೆ ಮಾಡಿದ ಹಣ ಮತ್ತು ಆಭರಣವನ್ನು ಆರೀಫ್ ತನ್ನ ತಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಂಚಿ, 9 ಲಕ್ಷವನ್ನು ತನ್ನ ಆತ್ಮೀಯನಾಗಿದ್ದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹಬೂಬ್‌ಗೆ ಆರೀಫ್‌ಗೆ ನೀಡಿದ್ದ.ಕದ್ದ ಮಾಲು ಸಾಗಿಸಲು ಆರೀಫ್‌ಗೆ ಮೆಹಬೂಬ್‌ ವಾಹನದ ವ್ಯವಸ್ಥೆ ಮಾಡಿದ್ದ ಎಂದು ಗೊತ್ತಾಗಿದೆ. ಮೆಹಬೂಬ್‌ ನಿಂದ 6.90 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಹುಡುಗಿಗಾಗಿ ನಡೀತು ಜಗಳ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ ಯುವಕ

    ಸಿಕ್ಕಿಬಿದ್ದಿದ್ದು ಹೇಗೆ?

    ಘಟನೆ ನಡೆಯುತ್ತಲೇ ಪೊಲೀಸರು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ದುಷ್ಕರ್ಮಿಗಳ ಅಸ್ಪಷ್ಟ ಚಹರೆ ಸಿಕ್ಕಿತ್ತು. ಹೀಗಿರುವಾಗಲೇ ದುಷ್ಕರ್ಮಿಗಳ ವರ್ತನೆಯಲ್ಲಿ ಆಗಿದ್ದ ಬದಲಾವಣೆ ಪ್ರಕರಣಕ್ಕೆ ತಿರುವು ಕೊಟ್ಟಿತ್ತು.

    ಕುಡಿಯುವುದು ಜನರ ಮೇಲೆ ದಬ್ಬಾಳಿಕೆ ನಡೆಸುವುದು ದರೋಡೆಕೋರರು ಹೆಚ್ಚು ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ರವಾನೆಯಾಗಿತ್ತು. ಇದೇ ಅನುಮಾನದ ಮೇಲೆ ಆರೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    LATEST NEWS

    ವೃಶ್ಚಿಕದಲ್ಲಿ ಬುಧ-ಶುಕ್ರ ಯುತಿ; ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ

    Published

    on

    ಮಂಗಳೂರು : ಕೆಲವೊಂದು ಗ್ರಹಗಳ ಸಂಯೋಗವು ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಲ್ಲೂ ಬುಧ – ಶುಕ್ರ ಸಂಯೋಗವು ಕೆಲವೊಂದು ರಾಶಿಗಳಿಗೆ ಅದೃಷ್ಟ ತರುತ್ತದೆ ಎಂದು ಹೇಳಲಾಗಿದೆ.

    ಇದೀಗ ಅಕ್ಟೋಬರ್ 13 ರಂದು ಬೆಳಗ್ಗೆ 5:49 ಕ್ಕೆ, ಶುಕ್ರವು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದೆ. ಅದೇ ಮಾಸ ಅಕ್ಟೋಬರ್ 29 ರಂದು, ರಾತ್ರಿ 10:24 ಕ್ಕೆ ಬುಧ ಕೂಡ ವೃಶ್ಚಿಕ ರಾಶಿಗೆ ಸಂಚರಿಸಲಿದೆ.  ಈ ವೇಳೆ ಬುಧ-ಶುಕ್ರ ಯುತಿ ಉಂಟಾಗುವುದು, ಈ ಬುಧ – ಶುಕ್ರ ಯುತಿ ನವೆಂಬರ್ 7 ರವರೆಗೆ ವೃಶ್ಚಿಕ ರಾಶಿಯಲ್ಲಿಯೇ ಇರುತ್ತದೆ. ಈ ವೇಳೆ ಕೆಲವೊಂದು ರಾಶಿಗಳಿಗೆ ಭಾರಿ ಅದೃಷ್ಟ ಒಲಿಯಲಿದೆ. ಯಾವುವು ಆ ರಾಶಿಗಳು ತಿಳಿಯೋಣ ಬನ್ನಿ.

    ತುಲಾ ರಾಶಿ

    ಬುಧ – ಶುಕ್ರ ಸಂಯೋಗವು ತುಲಾ ರಾಶಿಯವರ ಬದುಕಿನಲ್ಲಿ ಬಹಳ ಉತ್ತಮ ಪರಿಣಾಮ ಬೀರಲಿದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲ ಸಿಗಲಿದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಸಾಗಲಿವೆ.

    ಆರ್ಥಿಕ ಸಮಸ್ಯೆ ಬಗೆಹರಿಯಲಿದ್ದು, ಹಣದ ಉಳಿತಾಯವಾಗಲಿದೆ. ದಿಢೀರ್ ಹಣಕಾಸು ಲಾಭ ಆಗಲಿದೆ. ಸಾಮಾಜಿಕ ಗೌರವ ಪ್ರಾಪ್ತಿಯಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಒಡನಾಟ ಸಾಧಿಸುವಿರಿ. ಅಂದುಕೊಂಡ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಉತ್ತಮ ಆರೋಗ್ಯವಿರಲಿದೆ.

    ಮಕರ ರಾಶಿ

    ಈ ರಾಶಿಯವರಿಗೆ ಬುಧ-ಶುಕ್ರ ಸಂಯೋಗವು ಉತ್ತಮ ಅಭಿವೃದ್ಧಿ ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮೆರೆಯುವಿರಿ. ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಬರಲಿದೆ.

    ಆರ್ಥಿಕ ಅಭಿವೃದ್ಧಿ ಆಗಲಿದೆ. ಕುಂಠಿತಗೊಂಡಿದ್ದ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಹಣಕಾಸು ಉಳಿತಾಯವಾಗಲಿದೆ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಉದ್ದಿಮೆಯಲ್ಲಿ ತೊಡಗಿಕೊಳ್ಳಲು ಸಕಾಲ. ಲಾಭವಿರಲಿದೆ. ಕೌಟುಂಬಿಕ ಜೀವನ ಸಾಮರಸ್ಯದಿಂದ ಕೂಡಿರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

    ಇದನ್ನೂ ಓದಿ : ದೇವಳಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಿ-ಪೇಜಾವರ ಶ್ರೀ

    ವೃಶ್ಚಿಕ ರಾಶಿ

    ಈ ರಾಶಿಯವರಿಗೆ ಸಾಮಾಜಿಕ ಗೌರವ, ಸ್ಥಾನಮಾನ ಪ್ರಾಪ್ತಿ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ವೃತ್ತಿಯಲ್ಲಿ ಗೌರವ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಶುಭಫಲ ಇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ಇರಲಿದೆ.

    ವೈವಾಹಿಕ ಜೀವನದಲ್ಲಿ ಸಂತಸ ಇರಲಿದೆ. ಅವಿವಾಹಿತರು ಉತ್ತಮ ಬಾಳ ಸಂಗಾತಿಯನ್ನು ಪಡೆಯಬಹುದು.

     

     

     

    Continue Reading

    LATEST NEWS

    ಛೀ ಎಂಥ ತಾಯಿ! ತೆರೆದ ಬಾವಿಯಂಚಲ್ಲಿ ಕೂತು ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್

    Published

    on

    ಈಗಂತೂ ಎಲ್ಲಿ ನೋಡಿದ್ರೂ ರೀಲ್ಸ್ ವಿಡಿಯೋಗಳದ್ದೇ ಹವಾ. ಲೈಕ್ಸ್, ಫಾಲೋವರ್ಸ್, ವೀವ್ಸ್ಗಾಗಿ ಜನ ಚಿತ್ರ ವಿಚಿತ್ರ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಪ್ರಾಣಕ್ಕೆ ಅಪಾಯ ತಂದೊಡ್ಡುವ ರೀಲ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದವರು ಹಲವರಿದ್ದಾರೆ. ಹಾಗೆಯೇ ಮಹಿಳೆಯೊಬ್ಬಳು ತೆರೆದ ಬಾವಿಯ ಅಂಚಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಡೇಂಜರಸ್ ರೀಲ್ಸ್ ಮಾಡಿದ್ದಾಳೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಗುವನ್ನು ಅಪಾಯಕ್ಕೆ ತಳ್ಳಿದ ಆ ಮಹಿಳೆಯ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.


    ವೀಡಿಯೋದಲ್ಲಿ ಏನಿದೆ?
    RawAndRealMan ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿರುವುದನ್ನು ಕಾಣಬಹುದು.
    ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರೆ, ಮತ್ತೊಬ್ಬರು ‘ಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇದೆಲ್ಲಾ ಎಂಥಾ ಹುಚ್ಚಾಟ ಎಂದು ಕಿಡಿಕಾರಿದ್ದಾರೆ.

     

    ಇದನ್ನೂ ನೋಡಿ:

    Continue Reading

    LATEST NEWS

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ರೈಲನ್ನು ಸ್ಫೋಟಿಸಲು ಯತ್ನ

    Published

    on

    ಮಧ್ಯಪ್ರದೇಶ/ಮಂಗಳೂರು: ಮಧ್ಯಪ್ರದೇಶದ ಬುರ್ಹಾನ್‍ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿದೆ. ಸೇನೆಯ ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿದೆ.

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಡಿಟೋನೇಟರ್‌ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದಾರೆ. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

    ಹಳಿ ಮೇಲೆ ಸಿಲಿಂಡರ್‌ ಇಟ್ಟು ರೈಲು ಸ್ಫೋಟಕ್ಕೆ ಯತ್ನ..! ತಪ್ಪಿದ ಭಾರೀ ದುರಂತ

    ಉತ್ತರಪ್ರದೇಶದಲ್ಲಿ ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ
    ಇನ್ನೂ, ಉತ್ತರ ಪ್ರದೇಶದ ಕಾನ್ಪುರದ ಪ್ರೇಂಪುರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಭಾನುವಾರ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರೈಲು ನಿಲ್ಲಿಸಲು ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ರೈಲು ಕಾನ್ಪುರದಿಂದ ಪ್ರಯಾಗ್‍ರಾಜ್‍ಗೆ ತೆರಳುತ್ತಿದ್ದಾಗ ಬೆಳಗ್ಗೆ 8:10ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending