Connect with us

ಶಾಶ್ವತವಾಗಿ ಶಟರ್ ಎಳೆದ ಅಟ್ಲಾಸ್: ಬೀದಿಗೆ ಬಿತ್ತು ಸಾವಿರಾರು ಕೆಲಸಗಾರರ ಸಂಸಾರ…

Published

on

ಜೂನ್ 3ರ ‘ವಿಶ್ವ ಬೈಸಿಕಲ್ ದಿನ’ದಂದೇ ಇತಿಹಾಸದ ಪುಟ ಸೇರಿದ ಅಟ್ಲಾಸ್ ಸೈಕಲ್ ಕಂಪೆನಿ..

ನವದೆಹಲಿ: ಭಾರತದಲ್ಲಿ ಬೈಸಿಕಲ್‌ಗಳಿಗೆ ಸಮಾನಾರ್ಥಕವಾದ ಹೆಸರು ಅಟ್ಲಾಸ್ ಸೈಕಲ್ಸ್……

ಅಟ್ಲಾಸ್ ಸೈಕಲ್‌ ಅಂದ ಕೂಡಲೇ ಎಷ್ಟೋ ಜನರಿಗೆ ಬಾಲ್ಯದ ನೆನಪುಗಳು ಕಣ್ಣ ಮುಂದೆ ಬರುತ್ತದೆ.

ಇದು ಸಾಮಾನ್ಯ ಬೈಸಿಕಲ್ ಆಗಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ದೇಶದ ಮೂಲೆ ಮೂಲೆಯನ್ನು ತಲುಪಿದ್ದ ಸೈಕಲ್ ಈ ಅಟ್ಲಾಸ್ ಇನ್ನು ನೆನಪು ಮಾತ್ರ…..

ಹೌದು… ಎಳೆಯರಿಂದ ಹಿಡಿದು ಹಿರಿಯರವರೆಗೂ ಸೈಕಲಿನ ಹುಚ್ಚು ಹಚ್ಚಿದ್ದ.. ‘ಅಟ್ಲಾಸ್’ ಸೈಕಲ್ ಜೂನ್ 03 ರಂದು…..

ಅದೂ ಕಾಕತಾಳಿಯವೇನೋ ಎಂಬಂತೆ ‘ವಿಶ್ವ ಬೈಸಿಕಲ್ ದಿನ’ದಂದೇ ಶಟರ್ ಎಳೆದು ಬೀಗ ಹಾಕಿದೆ.

ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಸೋನೆಪತ್‌ನಲ್ಲಿರುವ ಸಾಧಾರಣ ಟಿನ್ ಶೆಡ್ ಒಂದರಲ್ಲಿ 1951 ರಲ್ಲಿ ಪ್ರಾರಂಭವಾದ ಈ ಕಂಪನಿ ಇದೀಗ ಇತಿಹಾಸದ ಪುಟ ಸೇರಿದೆ.

ಕಂಪನಿಯು ತನ್ನ ಕೊನೆಯ ಕೈಗಾರಿಕಾ ಪ್ರದೇಶವನ್ನು ನವದೆಹಲಿಯ ಹೊರವಲದಲ್ಲಿದ್ದ ಸಾಹಿಬಾಬಾದ್‌ನಲ್ಲಿ ಜೂನ್ 3ರಂದು ಬಂದ್ ಮಾಡುವ ಮೂಲಕ ಅಟ್ಲಾಸ್ ಕಂಪನಿ ಶಾಶ್ವತವಾಗಿ ಮುಚ್ಚಿದಂತಾಗಿದೆ.

ಕೊರೊನಾದಿಂದಾದ ಲಾಕ್ ಡೌನ್ ಹಾಗೂ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಅಟ್ಲಾಸ್ ಕಂಪೆನಿಗೆ ಬೀಗ ಜಡಿದಿದ್ದು, ಇದರಿಂದ ಸಾವಿರಾರು ಕೆಲಸಗಾರರು ಅಕ್ಷರಶಃ ಬೀದಿಗೆ ಬಿದ್ದಂತಾಗಿದ್ದಾರೆ.

ಸ್ವೀಡನ್‌ನ ಸ್ಟಾಕ್‌ ಹೋಮ್‌ನಲ್ಲಿರುವ ನೋಬೆಲ್ ವಸ್ತುಸಂಗ್ರಹಾಲಯದ ಗೋಡೆಗಳನ್ನು ಅಲಂಕರಿಸುವ ನೂರಾರು ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಬೈಸಿಕಲ್ ಕೂಡ ಒಂದು.

“ಅದು ಸಾಮಾನ್ಯ ಬೈಸಿಕಲ್ ಅಲ್ಲ” ಎಂದು ಮ್ಯೂಸಿಯಂನ ಕ್ಯುರೇಟರ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತೀಯ ಮೂಲದ ಪತ್ರಕರ್ತರಿಗೆ ತಿಳಿಸಿದ್ದರು.

2019 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಬದ ವೇಳೆ ಈ ಪತ್ರಕರ್ತರಿಗೆ ಆ ಸೈಕಲ್ ಬಗ್ಗೆ ಹೇಳಲಾಗಿತ್ತು.

ಏಕೆಂದರೆ ಅಟ್ಲಾಸ್ ತಯಾರಿಸಿದ ಬೈಸಿಕಲ್ ಭಾರತದ ಇನ್ನೊಬ್ಬ ಹೆಮ್ಮೆಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೆ ಸೇರಿತ್ತು.

1998ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಪಶ್ಚಿಮ ಬಂಗಾಳದಲ್ಲಿ ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಅದರ ಮೇಲೆ ಸವಾರಿ ನಡೆಸಿದ್ದರು.

ಇಂತಹ ಸೈಕಲ್ ಬ್ರಾಂಡ್‌ನ ತಯಾರಕರು ಭಾರತದಲ್ಲಿ ಸೈಕ್ಲಿಂಗ್ ಕ್ರಾಂತಿಯ ಪ್ರವರ್ತಕರು ಮತ್ತು ಬಹುತೇಕ ಎಲ್ಲ ಮಕ್ಕಳ ಮೊದಲ ಸೈಕಲ್ ಆಗಿರುತ್ತಿದ್ದ ಅಟ್ಲಾಸ್ ಸೈಕಲ್ಸ್ ಹರಿಯಾಣ ಲಿಮಿಟೆಡ್ ಈಗ ಶಾಶ್ವತವಾಗಿ ಬಾಗಿಲು ಮುಚ್ಚಿದೆ.

ಲಾಕ್ ಡೌನ್ ಮತ್ತು ನಷ್ಟದ ಕಾರಣದಿಂದ ಕಂಪೆನಿಯನ್ನು ಈ ಸಮಯದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಅದರ ಸಿಇಓ ಎನ್.ಪಿ ಸಿಂಗ್ ರಾಣಾ ತಿಳಿಸಿದ್ದಾರೆ.

ಇದೇ ವೇಳೆ, ಉತ್ಪಾದನೆ ನಿಲ್ಲಿಸುವುದು ತಾತ್ಕಾಲಿಕ ಅಷ್ಟೇ. ಕಂಪೆನಿಗೆ ಸೇರಿದ ಹೆಚ್ಚುವರಿ ಆಸ್ತಿಯನ್ನು ಮಾರಿ 50 ಕೋಟಿ ರೂಪಾಯಿ ಸರಿದೂಗಿಸಿಕೊಂಡು ಉತ್ಪಾದನೆ ಆರಂಭಿಸುತ್ತೇವೆ ಎಂದಿದ್ದಾರೆ.

1951 ರಲ್ಲಿ ಜಾಂಕಿ ದಾಸ್ ಕಪೂರ್ ಅವರ ಪ್ರಯತ್ನದಿಂದ ಪ್ರಾರಂಬಗೊಂಡ ಅಟ್ಲಾಸ್ ಶೀಘ್ರವಾಗಿ ತನ್ನನ್ನು ತಾನು ಪ್ರಮುಖ ಬ್ರಾಂಡ್ ಆಗಿ ಸ್ಥಾಪಿಸಿಕೊಂಡಿತ್ತು.

ಟಿನ್ ಶೆಡ್‌ನಿಂದ ಪ್ರಾರಂಬವಾಗಿ 12 ತಿಂಗಳಲ್ಲಿ 25 ಎಕರೆ ಕಾರ್ಖಾನೆ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು.

ಕಾರ್ಯಾಚರಣೆಯ ಮೊದಲ ವರ್ಷದಲ್ಲಿ, 12,000 ಸೈಕಲ್ ಗಳು ಉತ್ಪಾದನೆಗೊಂಡಿದ್ದು ಮುಂದೆಂದೂ ಹಿಂತಿರುಗಿ ನೋಡಿರಲಿಲ್ಲ.

ಅಟ್ಲಾಸ್ ತನ್ನ ಮೊದಲಕನ್ಸೈನ್ಮೆಂಟ್ ಅನ್ನು 1958 ರಲ್ಲಿ ವಿದೇಶಕ್ಕೆ ಕಳುಹಿಸಿತು. ಅಂದಿನಿಂದ ಇದು ಹಲವಾರು ದೇಶಗಳಿಗೆ ಸೈಕಲ್ ಗಳನ್ನು  ರಫ್ತು ಮಾಡಿದೆ.

ಇದು 1978 ರಲ್ಲಿ ಭಾರತದ ಮೊದಲ ರೇಸಿಂಗ್ ಸೈಕಲ್ ಅನ್ನು ಪರಿಚಯಿಸಿತು ಮತ್ತು 1982 ರಲ್ಲಿ ದೆಹಲಿ ಏಷ್ಯನ್ ಕ್ರೀಡಾಕೂಟಕ್ಕೆ ಸೈಕಲ್‌ಗಳ ಅಧಿಕೃತ ಪೂರೈಕೆದಾರನಾಗಿತ್ತು.

2004 ರಲ್ಲಿ ಕಂಪನಿಗೆ ಕಷ್ಟದ ದಿನಗಳು ಆರಂಭವಾಗಿದ್ದವು…..

ಕಂಪನಿಯು ಬಾಲಿವುಡ್ ನಟ ಸುನಿಲ್ ಶೆಟ್ಟಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತನ್ನ ಬ್ರಾಂಡ್ ರಾಯಭಾರಿಗಳಾಗಿ ಮಾಡಿದ್ದು ತೀವ್ರ ಸಂಘರ್ಷಕ್ಕೆ ನಾಂದಿ ಹಾಡಿತು.

ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಕೂಡ ಈ ಸೈಕಲ್ ಬ್ರಾಂಡ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

ಆದರೆ ಬೇಡಿಕೆಯ ಕುಸಿತದಿಂದ  2014 ರಲ್ಲಿ ಮಧ್ಯಪ್ರದೇಶದ ಮಲನ್‌ಪುರದಲ್ಲಿ ತನ್ನ ಘಟಕವನ್ನು ಮುಚ್ಚಲು ಕಾರಣವಾಗಿತ್ತು.

2018 ರಲ್ಲಿ ಅದು ತನ್ನ ಸೋನೆಪತ್ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಇದೀಗ ಸಾಹಿಬಾಬಾದ್ ಕಾರ್ಖಾನೆಯನ್ನು ಮುಚ್ಚುವುದರೊಂದಿಗೆ ಅತ್ಯುತ್ತಮ ಬ್ರಾಂಡ್ ಒಂದು ಈಗ ನೆನಪು ಮಾತ್ರವಾಗಿ ಉಳಿದಿದೆ.

Click to comment

Leave a Reply

Your email address will not be published. Required fields are marked *

LATEST NEWS

ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

Published

on

ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.

ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.

ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್‌ಟೈಮ್‌ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.

ಈ ಸೀರಿಯಲ್‌ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್​ ತಂಡ ಸಂತಸ ಹಂಚಿಕೊಂಡಿದೆ.

Continue Reading

LATEST NEWS

ಕೊಡಗು: ಮದುವೆ ಊಟ ಸೇವಿಸಿ ಅಸ್ವಸ್ಥ.. ಆಸ್ಪತ್ರೆ ಸೇರಿದ 150ಕ್ಕೂ ಹೆಚ್ಚು ಜನರು

Published

on

ಕೊಡಗು: ಮದುವೆಯಲ್ಲಿ ಊಟ ಮಾಡಿದ ನೂರಾರು ಜನತೆ ಅಸ್ವಸ್ಥಗೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರಿಣಾಮ ಸುಮಾರು 150 ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿದ್ದಾರೆ.

ನಿನ್ನೆ ಮಧ್ಯಾಹ್ನ ಕೊಪ್ಪ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಜನರು ಸೇವಿಸಿದ್ದಾರೆ. ಊಟ ಸೇವಿಸಿದ ಬಳಿಕ ಸಂಜೆಯ ವೇಳೆಗೆ ಹಲವರಲ್ಲಿ ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಜನರು ಕೊಡಗಿನ ಕುಶಾಲನಗರ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿರಿಯಾಪಟ್ಟಣ ಆಸ್ಪತ್ರೆಯಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗು ಆರೋಗ್ಯಾಧಿಕಾರಿ ಕುಶಾಲನಗರ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮದುವೆ ಊಟದಿಂದಾಗಿ ಕುಶಾಲನಗರದ ಆಸ್ಪತ್ರೆ ಕ್ಲೀನಿಕ್ ಗಳು ಫುಲ್ ಆಗಿವೆ. ಅತ್ತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೂ ಹೊಗಿದ್ದಾರೆ. ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಭೇಟಿ‌ ನೀಡಿ ಜನರ ಆರೋಗ್ಯ ವಿಚಾರಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ

Published

on

ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.

Continue Reading

LATEST NEWS

Trending