Connect with us

    FILM

    ಯಶ್ ಜೊತೆ ಲಂಡನ್‌ಗೆ ಹಾರಿದ ನಯನತಾರಾ-ಕಿಯಾರ..!

    Published

    on

    ಮುಂಬೈ/ಮಂಗಳೂರು:  ಪ್ಯಾನ್ ಇಂಡಿಯಾ ಸ್ಟಾರ್ ಯಶ್ ರವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನೆಮಾ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆಜಿಎಫ್ ಸಿನೆಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ಯಶ್ ಇದೀಗ ಟಾಕ್ಸಿಕ್ ಸಿನೆಮಾ ಮೂಲಕ ನೆಕ್ಸ್ಟ್‌ ಲೆವೆಲ್‌ನಲ್ಲಿ ಸಿನೆಮಾ ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ಕೆಜಿಎಫ್-1, 2 ಸೂಪರ್‌ ಹಿಟ್‌ ಬಳಿಕ ಯಶ್ ಚಿತ್ರರಂಗದಲ್ಲೇ ತನ್ನ ಸ್ಟ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆಗಳೂ ಕೂಡಾ ಹೆಚ್ಚಾಗಿದೆ ಎನ್ನಬಹುದು.

    150 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್..!

    ಇದೀಗ ಯಶ್ ಜೊತೆ ನಯನತಾರಾ-ಕಿಯಾರ ಅಡ್ವಾನಿ ಕೂಡಾ ಲಂಡನ್ ಗೆ ಹಾರಿದ್ದಾರಂತೆ. ಹೌದು, ಸಿನೆಮಾ ಶೂಟಿಂಗ್ ಗಾಗಿ ಯಶ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಜೊತೆ ಲಂಡನ್‌ಗೆ ತೆರಳಿದ್ದಾರೆ. ಇನ್ನು ಸಿನೆಮಾ ಬರೋಬ್ಬರಿ 200 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದ್ದು ಅದರಲ್ಲಿ 150 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗಿದೆ.

    Read More..;  ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್‌ ಫಿಕ್ಸ್..!!

    ಯಶ್‌ ಪರಫೆಕ್ಟ್ ಮ್ಯಾನ್ ಎಂಬುದು ಅವರ ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಟಾಕ್ಸಿಕ್ ಚಿತ್ರ ತಂಡದಲ್ಲೂ ಅದು ಮುಂದುವರಿಯಲಿದೆ. ಎಷ್ಟು ಹಂತದ ಚಿತ್ರೀಕರಣ ಆಗಿದೆ ಎಂಬುವುದರ ಬಗ್ಗೆ ಚಿತ್ರ ತಂಡ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಇದು ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ. ಚಿತ್ರೀಕರಣದ ನಿಖರ ಸಮಯವನ್ನು ಗೌಪ್ಯವಾಗಿ ಇಡಲಾಗಿದೆ. ಇಂಟರ್‌ನ್ಯಾಷನಲ್ ಡಾನ್ ಪಾತ್ರದಲ್ಲಿ ಯಶ್ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಅನೇಕ ಸಾಹಸಮಯ ದೃಶ್ಯಗಳು ಇರಲಿದ್ದು. ಸಿನಿಮಾ ಅಂದುಕೊಂಡಂತೆ ಶೂಟಿಂಗ್ ಮುಗಿಸಿ ಮುಂದಿನ ವರ್ಷ 2025 ರಂದು ಏ. 10ಕ್ಕೆ ಬಿಡುಗಡೆಗೊಳ್ಳಲಿದೆ. ಇನ್ನೂ ಚಿತ್ರದಲ್ಲಿ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅನೇಕ ಕಲಾವಿದರ ದಂಡೇ ಇರಲಿದೆ. ಅವರೊಂದಿಗೆ ಇತರ ಕೆಲವು ನಟರು ಸಹ ಸೇರಿಕೊಳ್ಳಲಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾವು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    FILM

    WATCH : ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್; ವೀಡಿಯೋ ವೈರಲ್ ಆಗುತ್ತಿದ್ದಂತೆ ಏನಂದ್ರು ನಟ?

    Published

    on

    ಮಂಗಳೂರು : ಸಿನಿಮಾ ನಟರು ಅಂದಾಕ್ಷಣ ಅಭಿಮಾನಿಗಳು ಮುಗಿಬೀಳೋದು ಸಹಜ. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು, ಸೆಲ್ಫಿ ಗಿಟ್ಟಿಸಿಕೋಬೇಕು ಅನ್ನೋ ಹೆಬ್ಬಯಕೆ ಸಹಜ. ಆದ್ರೆ, ಈ ರೀತಿ ಹೋದ ಅಭಿಮಾನಿಯೊಬ್ಬನನ್ನು ತಳ್ಳಿರೋ ಘಟನೆ ನಡೆದಿದೆ. ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ.


    ವೈರಲ್ ಆಗಿರೋ ವೀಡಿಯೋ ನಟ ನಾಗಾರ್ಜುನ ಅವರದು. ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಯೊಬ್ಬರು ಓಡೋಡಿ ಬಂದಿದ್ದಾರೆ. ಆದರೆ ಅವರನ್ನು ನಾಗಾರ್ಜುನ ಬಾಡಿಗಾರ್ಡ್​ ತಳ್ಳಿ ಬೀಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

    ‘ನಿಮ್ಮ ಮಾನವೀಯತೆ ಎಲ್ಲಿ ಹೋಯಿತು ನಾಗಾರ್ಜುನ ಅವರೇ?’ ಎಂಬ ಕ್ಯಾಪ್ಷನ್​ನೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

    ಇನ್ನು ವೀಡಿಯೋ ವೈರಲ್​ ಆಗುತ್ತಿದ್ದಂತೆ ಸ್ವತಃ ನಾಗಾರ್ಜುನ ಅವರು ಕ್ಷಮೆ ಕೇಳಿದ್ದಾರೆ. ‘ಇದು ಈಗ ತಾನೇ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    ಅಂದಹಾಗೆ ಈ ಘಟನೆ ನಡೆದಾಗ ನಾಗಾರ್ಜುನ ಜೊತೆ ಕಾಲಿವುಡ್​ ನಟ ಧನುಷ್​ ಕೂಡ ಇದ್ದರು. ಸಿನಿಮಾ ನಟರನ್ನು ಕಂಡಾಗ ಸಿನಿಪ್ರಿಯರು ಹತ್ತಿರ ಬರೋದು ಸಹಜ. ಈ ವೇಳೆ ಬಾಡಿಗಾರ್ಡ್ ಗಳು ನಟರ ಬಳಿ ಬರಲು ಬಿಡುವುದಿಲ್ಲ. ಇಲ್ಲೂ ಹಾಗೇ ಆಗಿದೆ.

    Continue Reading

    FILM

    ಟೀಸರ್ ಮೂಲಕ ಭಾರಿ ಸದ್ದು ಮಾಡುತ್ತಿದೆ ‘ಸಾಂಕೇತ್’

    Published

    on

    ಮಂಗಳೂರು : ಸದ್ಯ ಪೋಸ್ಟರ್, ಟೀಸರ್ ಮೂಲಕ ಭಾರಿ ಹೈಪ್ ಕ್ರಿಯೆಟ್ ಮಾಡಿರುವ ಸಿನಿಮಾ ‘ಸಾಂಕೇತ್’. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದು ಟೀಸರ್ ಮೂಲಕ ಖಚಿತವಾಗಿದೆ. ಟೀಸರ್ ಚಿತ್ರದ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

    ಚಿತ್ರ ತಂಡ :

    ಚಿತ್ರದ ನಿರ್ದೇಶನವನ್ನು ಜ್ಯೋತ್ಸ್ನಾ ಕೆ. ರಾಜ್ ಮಾಡಿದ್ದು, ಜೊತೆಗೆ ಸೌಂಡ್ ಡಿಸೈನಿಂಗ್, ಎಡಿಟಿಂಗ್ ಹೊಣೆಯನ್ನೂ ಹೊತ್ತಿದ್ದಾರೆ. ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ರಾಜ್ ಕಾರ್ತಿಕ್ ಮಾಡಿದ್ದಾರೆ.

    ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸನತ್ ಕುಮಾರ್ ಕೆಲಸ ಮಾಡಿದ್ದಾರೆ. ಪ್ರಕಾಶ್ ರಾವ್ ಸಾಹಿತ್ಯ ಚಿತ್ರಕ್ಕಿದೆ. ಪ್ರೊಡಕ್ಸನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.

    ಪಾತ್ರವರ್ಗ :

    ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಚಿತ್ರದ ಟ್ರೇಲರ್ ಇದೇ ಜೂನ್ 29 ರಂದು ಬಿಡುಗಡೆಯಾಗಲಿದೆ.

    Continue Reading

    FILM

    ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    Published

    on

    ಬೆಂಗಳೂರು: ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಜೈಲು ಸೇರಿದೆ. ತನಿಖೆಯನ್ನು ಪೂರ್ಣಗೊಳಿಸಲಿರುವ ಅಧಿಕಾರಿಗಳು ಸದ್ಯದಲ್ಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ.

    ಚಾರ್ಜ್​ಶೀಟ್ ಸಲ್ಲಿಕೆ ಆದಮೇಲೆ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಈ ವಿಚಾರ ಚಿತ್ರರಂಗಕ್ಕೂ ಕೂಡ ಆಘಾತಕಾರಿ ಎಂದು ಹೇಳಲಾಗುತ್ತಿದೆ. ಮುಂದೆ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡೋರು ಇನ್ಮೇಲೆ ಇದನ್ನು ಗಮನಿಸಲೇಬೇಕು.

    ಚಾರ್ಜ್ ಶೀಟ್ ಬಳಿಕ ಪಾಸ್ ಪೋರ್ಟ್ ರದ್ದಾಗಲಿದೆ. ಕೊ*ಲೆ ಆರೋಪಿ ಪ್ರಭಾವಿ ಆಗಿರುವ ಕಾರಣ ಪಾಸ್ ಪೋರ್ಟ್ ರದ್ಧತಿಗೆ ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಕೊ*ಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ದು ಮಾಡಲು ಪತ್ರ ಬರೆಯುತ್ತಾರೆ ಎನ್ನಲಾಗಿದೆ.

    ಆತ ಎಷ್ಟೇ ಪ್ರಭಾವಿ, ಗಣ್ಯನಾಗಿದ್ದರೂ ಪೊಲೀಸರಿಗೆ ಹಾಗೂ ಕಾನೂನಿಗೆ ಆತ ಆರೋಪಿಯಷ್ಟೇ. ಒಂದು ವೇಳೆ ದರ್ಶನ್ ಜೈಲಿನಿಂದ ರಿಲೀಸ್ ಆದ ಬಳಿಕ ಯಾರಾದರೂ ಸಿನಿಮಾ ಮಾಡಬೇಕು ಅಂದರೆ ದೇಶದಲ್ಲಿಯೇ ಮಾಡಬೇಕಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡುವಂತಿಲ್ಲ.

    ಸದ್ಯ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಇದೆ. ಪೂರ್ತಿ ಆಗದಿದ್ರೂ ಒಂದು ಹಾಡನ್ನಾದರೂ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಚಿತ್ರರಂಗದಲ್ಲಿದೆ. ಮುಂದಿನ ದಿನಗಳಲ್ಲಿ ವಿದೇಶಿ ಚಿತ್ರೀಕರಣ ಮಾಡಿದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ ಇದೆ. ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸೂ ಭಗ್ನ ಆಗಲಿದೆ.

    Continue Reading

    LATEST NEWS

    Trending