Connect with us

    FILM

    ಯಶ್ ಜೊತೆ ಲಂಡನ್‌ಗೆ ಹಾರಿದ ನಯನತಾರಾ-ಕಿಯಾರ..!

    Published

    on

    ಮುಂಬೈ/ಮಂಗಳೂರು:  ಪ್ಯಾನ್ ಇಂಡಿಯಾ ಸ್ಟಾರ್ ಯಶ್ ರವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನೆಮಾ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆಜಿಎಫ್ ಸಿನೆಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ಯಶ್ ಇದೀಗ ಟಾಕ್ಸಿಕ್ ಸಿನೆಮಾ ಮೂಲಕ ನೆಕ್ಸ್ಟ್‌ ಲೆವೆಲ್‌ನಲ್ಲಿ ಸಿನೆಮಾ ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ಕೆಜಿಎಫ್-1, 2 ಸೂಪರ್‌ ಹಿಟ್‌ ಬಳಿಕ ಯಶ್ ಚಿತ್ರರಂಗದಲ್ಲೇ ತನ್ನ ಸ್ಟ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆಗಳೂ ಕೂಡಾ ಹೆಚ್ಚಾಗಿದೆ ಎನ್ನಬಹುದು.

    150 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್..!

    ಇದೀಗ ಯಶ್ ಜೊತೆ ನಯನತಾರಾ-ಕಿಯಾರ ಅಡ್ವಾನಿ ಕೂಡಾ ಲಂಡನ್ ಗೆ ಹಾರಿದ್ದಾರಂತೆ. ಹೌದು, ಸಿನೆಮಾ ಶೂಟಿಂಗ್ ಗಾಗಿ ಯಶ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಜೊತೆ ಲಂಡನ್‌ಗೆ ತೆರಳಿದ್ದಾರೆ. ಇನ್ನು ಸಿನೆಮಾ ಬರೋಬ್ಬರಿ 200 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದ್ದು ಅದರಲ್ಲಿ 150 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗಿದೆ.

    Read More..;  ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್‌ ಫಿಕ್ಸ್..!!

    ಯಶ್‌ ಪರಫೆಕ್ಟ್ ಮ್ಯಾನ್ ಎಂಬುದು ಅವರ ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಟಾಕ್ಸಿಕ್ ಚಿತ್ರ ತಂಡದಲ್ಲೂ ಅದು ಮುಂದುವರಿಯಲಿದೆ. ಎಷ್ಟು ಹಂತದ ಚಿತ್ರೀಕರಣ ಆಗಿದೆ ಎಂಬುವುದರ ಬಗ್ಗೆ ಚಿತ್ರ ತಂಡ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಇದು ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ. ಚಿತ್ರೀಕರಣದ ನಿಖರ ಸಮಯವನ್ನು ಗೌಪ್ಯವಾಗಿ ಇಡಲಾಗಿದೆ. ಇಂಟರ್‌ನ್ಯಾಷನಲ್ ಡಾನ್ ಪಾತ್ರದಲ್ಲಿ ಯಶ್ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಅನೇಕ ಸಾಹಸಮಯ ದೃಶ್ಯಗಳು ಇರಲಿದ್ದು. ಸಿನಿಮಾ ಅಂದುಕೊಂಡಂತೆ ಶೂಟಿಂಗ್ ಮುಗಿಸಿ ಮುಂದಿನ ವರ್ಷ 2025 ರಂದು ಏ. 10ಕ್ಕೆ ಬಿಡುಗಡೆಗೊಳ್ಳಲಿದೆ. ಇನ್ನೂ ಚಿತ್ರದಲ್ಲಿ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅನೇಕ ಕಲಾವಿದರ ದಂಡೇ ಇರಲಿದೆ. ಅವರೊಂದಿಗೆ ಇತರ ಕೆಲವು ನಟರು ಸಹ ಸೇರಿಕೊಳ್ಳಲಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾವು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    FILM

    ಯಶ್ ಹೊಸ ಲುಕ್ ಹಿಂದಿನ ಅಸಲಿ ಕಥೆ ಹೇಳಿದ ಹೇರ್​ಸ್ಟೈಲಿಸ್ಟ್

    Published

    on

    ಯಶ್ ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಯಶ್ ಅವರು ಹೊಸ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ತಲೆ ಕೂದಲನ್ನು ಶಾರ್ಟ್ ಮಾಡಿಸಿದ್ದರು. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಯಶ್ ಹೇರ್​ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದರ ಹಿಂದಿನ ರಹಸ್ಯ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

    ‘ನಾವು ಇನ್ನೂ ಹೋಟೆಲ್ ತಲುಪಿರಲಿಲ್ಲ. ಆಗಲೇ ಫೋಟೋಗಳು ಹರಿದಾಡಲು ಆರಂಭಿಸಿದ್ದವು. ಕೆಲವೇ ನಿಮಿಷಗಳಲ್ಲಿ ಇಂಟರ್​ನೆಟ್​ನಲ್ಲಿ ಫೋಟೋ ವೈರಲ್ ಆಯಿತು. ಪ್ರತಿಕ್ರಿಯೆ ಅಗಾಧವಾಗಿತ್ತು. ಈ ಲುಕ್ ಸಾಕಷ್ಟು ಪರಿಣಾಮ ಬೀರಿತ್ತು’ ಎಂದು ಅಲೆಕ್ಸ್ ವಿಜಯಕಾಂತ್ ಹೇಳಿಕೊಂಡಿದ್ದಾರೆ.

    ‘ಸ್ಕ್ರಿಪ್ಟ್​ನಿಂದ ಸ್ಫೂರ್ತಿ ಪಡೆದು ಈ ಹೇರ್​ಸ್ಟೈಲ್​ ಮಾಡಿದ್ದೇನೆ. ನಾನು ಮೊದಲು ಸ್ಕ್ರಿಪ್ಟ್ ಕೇಳಿದೆ. ಈ ಕಥೆಗೆ ಸಣ್ಣ ತಲೆಗೂದಲು ಹೊಂದುತ್ತದೆ ಎಂದುಕೊಂಡೆ. ಸಿನಿಮಾದ ಪಾತ್ರ ಏನನ್ನು ಬೇಡುತ್ತದೆಯೋ ಅದೇ ರೀತಿಯಲ್ಲಿ ಹೇರ್​ಸ್ಟೈಲ್ ಮಾಡಿರುವೆ’ ಎಂದು ಮಾಹಿತಿ ನೀಡಿದ್ದಾರೆ ಅವರು.

    ಹೇರ್​ಸ್ಟೈಲ್​ನ ನೋಡಿ ಯಶ್ ಅವರು ಯಾವ ರೀತಿಯ ರಿಯಾಕ್ಷನ್ ನೀಡಿದರು ಎನ್ನುವ ಬಗ್ಗೆಯೂ ವಿಜಯಕಾಂತ್ ಅವರು ಮಾತನಾಡಿದ್ದಾರೆ. ‘ಅವರು ನನ್ನನ್ನು ಹಗ್ ಮಾಡಿದರು. ಅಲೆಕ್ಸ್ ನೀವು ಸಾಧಿಸಿದಿರಿ ಎಂದರು’ ಎಂಬುದು ವಿಜಯಕಾಂತ್ ಮಾತು.

    ಯಶ್​ಗೆ ಹೇರ್​ಸ್ಟೈಲ್ ಮಾಡುತ್ತಿರುವ ಫೋಟೋನ ಅಲೆಕ್ಸ್ ವಿಜಯಕಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅವರು ‘ಕೆಜಿಎಫ್’ ಚಿತ್ರಗಳಿಗಾಗಿ ಉದ್ದ ಕೂದಲು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಇದೇ ರೀತಿಯ ಹೇರ್​ಸ್ಟೈಲ್​ನ ಕಾಯ್ದುಕೊಂಡು ಬಂದಿದ್ದರು. ಈಗ ಅದಕ್ಕೆ ಕತ್ತರಿ ಹಾಕಿದ್ದಾರೆ.

    ಯಶ್ ಹೇರ್​ಸ್ಟೈಲ್ ಮೊದಲು ರಿವೀಲ್ ಆಗಿದ್ದು ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ. ಇದಾದ ಬಳಿಕ ಅನೇಕರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಅನೇಕರು ಈ ಹೇರ್​ಸ್ಟೈಲ್​ನ ಫಾಲೋ ಮಾಡಿದ್ದಾರೆ.

    Continue Reading

    FILM

    WATCH : ಲೈಟ್ಸ್…ಕ್ಯಾಮೆರಾ…ಆ್ಯಕ್ಷನ್…ಥಿಯೇಟರ್ ನಲ್ಲಿ ತರುಣ್ ಸುಧೀರ್ – ಸೋನಲ್ ಪ್ರೀ – ವೆಡ್ಡಿಂಗ್ ಶೂಟ್

    Published

    on

    ಮಂಗಳೂರು : ತರುಣ್ ಸುಧೀರ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರತಿಭಾನ್ವಿತ ನಿರ್ದೇಶಕ. ಇತ್ತೀಚೆಗೆ ಅವರ ಹೆಸರು ಖ್ಯಾತ ನಟಿಯೊಂದಿಗೆ ತಳುಕು ಹಾಕಿಕೊಂಡಿದ್ದು, ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ. ತುಳುನಾಡ ಪ್ರತಿಭೆ ಸೋನಲ್ ಮೊಂತೆರೋ.


    ಸೋನಾಲ್ ಮೊಂತೆರೋ ಎಕ್ಕಸಕ, ಜೈ ತುಳುನಾಡು, ಪಿಲಿಬೈಲ್ ಯಮುನಕ್ಕ ಎಂಬ ತುಳು ಸಿನಿಮಾಗಳ ಮೂಲಕ ತುಳು ಸಿನಿ ಪ್ರಿಯರಿಗೆ ಇಷ್ಟವಾಗಿದ್ದರು. ಅದಾದ ಬಳಿಕ ಕನ್ನಡ ಚಿತ್ರರಂಗದತ್ತ ಹೊರಟ ಸೋನಲ್ ಗೆ ಯೋಗರಾಜ್ ಭಟ್ ರ ‘ಪಂಚತಂತ್ರ’ ಚಿತ್ರ ಹೆಸರು ತಂದು ಕೊಟ್ಟಿತು. ರಾಬರ್ಟ್ ಸಿನಿಮಾ ಮೂಲಕ ಮತ್ತಷ್ಟು ಖ್ಯಾತರಾದ ಸೋನಲ್ ಶಂಭೋ ಶಿವ ಶಂಕರ, ಗರಡಿ, ಶುಗರ್ ಫ್ಯಾಕ್ಟರಿ ಸಿನಿಮಾ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ, ಬುದ್ಧಿವಂತ 2, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರಗಳಲ್ಲಿ ಬಿಝಿ ಆಗಿರೋ ನಟಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಲು ಅಣಿಯಾಗಿದ್ದಾರೆ.

    ಹೌದು, ರಾಬರ್ಟ್ ಚಿತ್ರ ಸೋನಲ್ ಗೆ ಬಹಳಷ್ಟು ಹೆಸರು ತಂದು ಕೊಟ್ಟಿತ್ತು. ಈ ಚಿತ್ರ ನಿರ್ದೇಶಿಸಿರೋರು ಬೇರೆ ಯಾರೂ ಅಲ್ಲ ತರುಣ್ ಸುಧೀರ್. ಇದೀಗ ಇವರಿಬ್ಬರು ಜೊತೆಯಾಗಿ ಸಪ್ತಪದಿ ತುಳಿಯಲಿದ್ದಾರೆ. ಈ ಗಾಸಿಪ್ ಗೆ ಕೊನೆಗೂ ಅಂತ್ಯ ಹಾಡಿರೋ ಈ ಜೋಡಿ ಪ್ರೀ – ವೆಡ್ಡಿಂಗ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ : ಲೆನ್ಸ್ ಹಾಕಿ ದೃಷ್ಟಿ ಕಳೆದುಕೊಂಡ ಕನ್ನಡ ನಟಿ..!!

    ಇಬ್ಬರೂ ಸಿನಿಮಾ ರಂಗಕ್ಕೆ ಸಂಬಂಧಿಸಿದವರಾಗಿರುವುದರಿಂದ ವಿಶೇಷವಾಗಿಯೇ ಈ ಪ್ರೀ – ವೆಡ್ಡಿಂಗ್ ಶೂಟ್ ಮಾಡಲಾಗಿದೆ. ಲೈಟ್ಸ್, ಕ್ಯಾಮೆರಾ, ನಟನೆ ಎಲ್ಲವೂ ಈ ಸೊಗಸಾದ ವೀಡಿಯೋದಲ್ಲಿದೆ. ವ್ಹಾವ್! ಎಂದೆನಿಸೋ ಈ ವೀಡಿಯೋದಲ್ಲಿ ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 10-11ರಂದು ಇವರ ವಿವಾಹ ನೆರವೇರಲಿದೆ.

    Continue Reading

    FILM

    ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ತೌಬಾ..ತೌಬಾ..’! ಸೀರೆಯುಟ್ಟು ಭರ್ಜರಿ ಸ್ಟೆಪ್ ಹಾಕಿದ ಮಹಿಳೆ..!!

    Published

    on

    ಮುಂಬೈ/ಮಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಹಿಂದಿ ಸಿನೆಮಾ ಹಾಡೊಂದು ಭಾರೀ ಸದ್ದು ಮಾಡುತ್ತಿದೆ. ವಿಕ್ಕಿ ಕೌಶಲ್ ನಟನೆಯ ‘ಬ್ಯಾಡ್ ನ್ಯೂಸ್’ ಸಿನೆಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಿಲ್ಲ. ನಿರೀಕ್ಷೆಯಷ್ಟು ಗಳಿಕೆ ಆಗದಿದ್ದರೂ ಸಿನೆಮಾ ಒಟ್ಟು 29.55 ಕೋಟಿ ರೂ. ಆಗಿದೆ. ಅಂದರೆ ಸುಮಾರು 30 ಕೋಟಿ ರೂ. ಗಳಷ್ಟು ಸಿನೆಮಾ ಗಳಿಕೆಯನ್ನು ಮಾಡಿದೆ. ಆದರೆ ಸಿನೆಮಾಗಿಂತಲೂ ಹಿಟ್ ಆಗಿರೋದು ಈ ಸಿನೆಮಾದಲ್ಲಿದ್ದ ‘ತೌಬಾ..ತೌಬಾ..’ ಹಾಡು. ಹೌದು, ಸಾಂಗ್‌ ರಿಲೀಸ್ ಆದಗಿಂದಲೂ ಎಲ್ಲಾ ಕಡೆ ಈ ಸಾಂಗ್ ಸದ್ದು ಮಾಡ್ತಾ ಇದೆ.

    ನಟ ವಿಕ್ಕಿ ಕೌಶಲ್ ಈ ಸಾಂಗ್‌ಗೆ ಸೂಪರ್ ಸ್ಟೆಪ್ ಹಾಕಿದ್ದಾರೆ. ಹಾಡಿನ ವೀಡಿಯೊ ಬಿಡುಗಡೆಯಾದ ಕ್ಷಣದಿಂದ ರೀಲ್ಸ್ ಹಾಗೂ ಇನ್ನಿತರ ಕಾರಣಕ್ಕೆ ಜನಪ್ರಿಯವಾಗುತ್ತಿದೆ. ಪಂಜಾಬಿ ಸ್ಟ್ರೈಲ್​ನಲ್ಲಿರುವ ಇದರ ಡ್ಯಾನ್ಸ್ ಆನ್‍ಲೈನ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ . ಹಾಗಾಗಿ ರೀಲ್ಸ್‌ ಪ್ರಿಯರು ಈ ಡ್ಯಾನ್ಸ್ ಅನ್ನು ಮರುಸೃಷ್ಟಿಸಿ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಸ್ಲಂನಲ್ಲಿ ವಾಸಿಸುವ ಮಹಿಳೆಯೊಬ್ಬರು ಮಕ್ಕಳೊಂದಿಗೆ ತೌಬಾ ತೌಬಾ ಸ್ಟೆಪ್ಸ್‌ ಹಾಕಿದ್ದಾರೆ. ಇನ್ನು ಈ ವಿಡಿಯೊಗೆ ವಿಕ್ಕಿ ಕೌಶಲ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಲೆನ್ಸ್ ಹಾಕಿ ದೃಷ್ಟಿ ಕಳೆದುಕೊಂಡ ಕನ್ನಡ ನಟಿ..!!

    ಪಂಜಾಬಿ ಪಾಪ್ ಗಾಯಕ ಕರಣ್ ಔಝ್ಲಾ ಅವರು ಸಂಯೋಜಿಸಿದ್ದಾರೆ, ಬರೆದಿದ್ದಾರೆ ಮತ್ತು ಹಾಡಿದ್ದಾರೆ. ಇದನ್ನು ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಆಮಿ ವಿರ್ಕ್ ಮತ್ತು ನೇಹಾ ಧೂಪಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    Continue Reading

    LATEST NEWS

    Trending