Connect with us

  LATEST NEWS

  ಭೂ ಕುಸಿತದಿಂದ ತಬ್ಬಲಿಯಾದ ಬಾಲಕಿ..! ಡಾಕ್ಟರೇಟ್ ಮಾಡಿ ತಾಯಿ ಆಸೆ ಈಡೇರಿಕೆ..!

  Published

  on

  ಮಂಗಳೂರು ( ಮಡಿಕೇರಿ ) : ಭೂಕುಸಿತದಿಂದ ಹೆತ್ತವರು ಹಾಗೂ ಒಡಹುಟ್ಟಿದವರನ್ನು ಕಳೆದುಕೊಂಡು ಏಕಾಂಗಿಯಾಗಿದ್ದ 16 ಬಾಲಕಿ, ಇಂದು ತನ್ನ ದೃಢ ನಿರ್ಧಾರ ಮತ್ತು ಹೋರಾಟದ ಮೂಲಕ ಉನ್ನತ ಶಿಕ್ಷಣ ಪಡೆದು ಉಪನ್ಯಾಸಕಿ ಆಗಿದ್ದೂ ಅಲ್ಲದೆ ಮಂಗಳೂರು ವಿವಿಯ ಡಾಕ್ಟರೇಟ್ ಪದವಿ ಕೂಡಾ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಪಲ್ಲವಿ ಭಟ್‌ ಈಗ ಜೈನ್ ವಿವಿಯ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


  ಅದು ಹದಿನೆಂಟು ವರ್ಷಗಳ ಹಿಂದೆ (2006)ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ನಡೆದಿದ್ದ ಘೋರ ದುರ್ಘಟನೆ. ಮನೆಯವರೆಲ್ಲರೂ ನಿದ್ರೆಗೆ ಜಾರಿದ್ದ ಸಮಯದಲ್ಲಿ ಸಂಭವಿಸಿದ ಭೂ ಕುಸಿತದಿಂದ ಆರು ಜನ ಚಿರ ನಿದ್ರೆಗೆ ಜಾರಿದ್ದ ಘಟನೆ ಅದು. ಅದರಲ್ಲಿ ರಾಧಾ ಭಟ್‌,ಮತ್ತು ಅವರ ಇಬ್ಬರು ಮಕ್ಕಳಾದ 14 ವರ್ಷದ ಜ್ಯೋತಿ, 12 ವರ್ಷದ ಅಭಿಶೇಖ್‌ ಒಂದೇ ಮನೆಯವರು ಅಸುನೀಗಿದ್ದರು. ಆಗ 16 ವರ್ಷ ಪ್ರಾಯದ ಪಲ್ಲವಿ ಎಂಬ ಬಾಲಕಿ ಮಾತ್ರ ಬದುಕಿ ಉಳಿದಿದ್ದರು. ಆಸ್ಪತ್ರೆಯಲ್ಲಿದ್ದ ಪಲ್ಲವಿಗೆ ತನ್ನ ಮನೆಯವರು ಯಾರೂ ಇಲ್ಲಾ ಎಂಬ ಸತ್ಯ ಗೊತ್ತಾಗಿದ್ದು ಒಂದು ತಿಂಗಳ ಬಳಿಕ ಅಂದ್ರೆ ಆ ಕ್ಷಣ ಹೇಗಿದ್ದಿರಬೇಡ ?

  ಆತ್ಮಹತ್ಯೆಯ ಯೋಚನೆಯಿದ್ರೂ ತಾಯಿಯ ಆಸೆ ಪೂರೈಸಿದ ಛಲಗಾತಿ..!

  ‘ಈ ದುರಂತವು ನನ್ನ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತು. ಪದೇ ಪದೇ ಆತ್ಮಹತ್ಯೆಯ ಆಲೋಚನೆಗಳು ಬಂದಿದ್ದವು. ಆದರೆ ತನ್ನ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು ಮತ್ತು ಇಂಗ್ಲಿಷ್ ಮಾತನಾಡ ಬೇಕು ಎಂಬುದು ನನ್ನ ತಾಯಿ ರಾಧಾ ಭಟ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಇದು ನನಗೆ ಜೀವನದಲ್ಲಿ ಮೇಲೆ ಬರಲು ಪ್ರೇರೇಪಿಸಿತು’ ಇದು ಪಲ್ಲವಿ ಅವರು ಎಲ್ಲರನ್ನೂ ಕಳೆದುಕೊಂಡರೂ ಬದುಕಿನಲ್ಲಿ ಬದಲಾವಣೆ ಹೇಗೆ ಸಾಧ್ಯವಾಯ್ತು ಅಂತ ತಿಳಿಸಿದ ಕಾರಣ.

  ಚಿಕ್ಕಪ್ಪ ಸುಂದರ್, ಚಿಕ್ಕಮ್ಮ ರುಕ್ಮಿಣಿ ಅವರ ಬೆಂಬಲ, ಸ್ನೇಹಿತರು ಹಾಗೂ ಹಿತೈಶಿಗಳು ನೀಡಿದ ನೈತಿಕ ಸ್ಥೈರ್ಯ, ಹಾಗೂ ತನ್ನಲ್ಲಿದ್ದ ಪುಸ್ತಕ ಓದುವ ಹವ್ಯಾಸ ಸವಾಲುಗಳನ್ನು ಜಯಿಸಲು ನನಗೆ ನೆರವಾಯ್ತು ಅನ್ನೋದು ಪಲ್ಲವಿ ಅವರ ಮನದಾಳದ ಮಾತು. ಮಡಿಕೇರಿಯ ಮ್ಯಾಥ್ಯೂ, ಶಾಲೆಯ ಶಿಕ್ಷಕರಾದ ಸಿಸ್ಟರ್‌ ಸಿಸಿಲಿ , ನಾರಾಯಣ ಗೌಡ ಇವರೆಲ್ಲರ ಕಾರಣದಿಂದ ಇಂದು ಡಾಕ್ಟರೇಟ್‌ ಪಡೆಯಲು ಸಾಧ್ಯವಾಗಿದೆ ಅಂತಾರೆ ಡಾ.ಪಲ್ಲವಿ.

  ದುರಂತದ ಬಳಿಕ ಜಿಲ್ಲಾಡಳಿತ ನೀಡಿದ್ದ 3 ಲಕ್ಷ ಪರಿಹಾರ ಬಳಿಸಿಕೊಂಡು ಶಿಕ್ಷಣ ಮುಂದುವರೆಸಿದ್ದ ಪಲ್ಲವಿ, ಮಂಗಳೂರು ವಿವಿಯಲ್ಲಿ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬ್ಯಾಂಕ್ ಸಾಲ ಪಡೆದುಕೊಂಡಿದ್ದರು. ಡಾ.ಅನಸೂಯಾ ರೈ ಅವರ ಮಾರ್ಗದರ್ಶನದಲ್ಲಿ ‘ಭಾರತೀಯ ದೃಷ್ಟಿಕೋನದಿಂದ ಬ್ಯಾಂಕಶ್ಯೂರೆನ್ಸ್ – ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಬ್ಯಾಂಕುಗಳ ನಡುವಿನ ತುಲನಾತ್ಮಕ ಅಧ್ಯಯನ” ಎಂಬ ಪ್ರಬಂಧಕ್ಕಾಗಿ ಅವರು ಈಗ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

  DAKSHINA KANNADA

  ಗಾಳಿಗೆ ಹಾರಿದ ಶಾಲೆಯ ಹೆಂಚು..! ರಜಾ ದಿನವಾದ ಕಾರಣ ತಪ್ಪಿದ ಅನಾಹುತ..!

  Published

  on

  ಮಂಗಳೂರು ( ಕಡಬ ) : ಕಡಬ ತಾಲೂಕಿನಲ್ಲಿ ಭಾನುವಾರ ಮದ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಶಾಲೆಯೊಂದರ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ. ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಜಾ ದಿನವಾದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.


  ಭಾನುವಾರ ಜೋರಾದ ಗಾಳಿಯ ಜೊತೆ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮದ್ಯಾಹ್ನದ ವೇಳೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಜೋರಾದ ಗಾಳಿ ಬೀಸಿದೆ. ಇದರ ಪರಿಣಾಮವಾಗಿ ಬಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿದೆ. ಒಂದಷ್ಟು ಹೆಂಚುಗಳು ಶಾಲೆಯ ಹೊರಾಂಗಣದಲ್ಲಿ ಬಿದ್ದಿದ್ದರೆ, ಇನ್ನೂ ಕೆಲವು ಹೆಂಚುಗಳು ಶಾಲೆಯ ಕೊಠಡಿಯ ಒಳಗೆ ಬಿದ್ದಿದೆ. ಶಾಲೆಗೆ ಬಹುತೇಕ ಎಲ್ಲಾ ಕೊಠಡಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್ ಭಾನುವಾರವಾದ ಕಾರಣ ಶಾಲೆಯಲ್ಲಿ ಮಕ್ಕಳು ಇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.


  ಬೀಸಿದ ಗಾಳಿಗೆ ಶಾಲೆಯ ಹೆಂಚಿನ ಜೊತೆಗೆ ಗ್ರಾಮದ ಕೃಷಿಕರ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೂ ಕೂಡಾ ಹಾನಿ ಸಂಭವಿಸಿದೆ.
  ಜುಲೈ 15 ಮತ್ತು 16 ರಂದು ಕೂಡಾ ಜೋರಾದ ಗಾಳಿಯ ಜೊತೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

  Continue Reading

  DAKSHINA KANNADA

  ನಾಳೆ, ನಾಡಿದ್ದು ದ.ಕ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

  Published

  on

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಇಂದು, ನಾಳೆ ಮತ್ತು ನಾಡಿದ್ದು(ಜು.15,16,17) ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ.

  ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

  ಜುಲೈ 17 ರಿಂದ 19 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ದಿನವಿಡೀ ಉತ್ತಮ ಮಳೆ ಬಂದಿದೆ. ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಕಂಡು ಬರುತ್ತಿವೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿ ಬೀರಿ- ಪ್ರವಾಸಿ ಬಂಗ್ಲೆ ಕ್ರಾಸ್‌ ಸರ್ವೀಸ್‌ ರಸ್ತೆಯಲ್ಲಿ ಭಾರೀ ಗಾತ್ರದ ಮೇ ಫ್ಲವರ್‌ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಅಲ್ಲದೆ ಇಂದು ಭಾನುವಾರ ಆಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

  Continue Reading

  DAKSHINA KANNADA

  ಎಂಎಸ್‌ಇಝೆಡ್‌ ನಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ಭಾರಿ ಅ*ಗ್ನಿ ಅವಘಡ

  Published

  on

  ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ಭಾರಿ ಅ*ಗ್ನಿ ಅನಾಹುತ ಸಂಭವಿಸಿದೆ. ಹೊತ್ತಿ ಉರಿದ ಘಟಕದಲ್ಲಿ ಭಾರಿ ಪ್ರಮಾಣದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು ದಟ್ಟ ಹೊಗೆ ಆಕಾಶದೆತ್ತರಕ್ಕೆ ಏರಿದೆ. ಘಟನೆ ಸ್ಥಳೀಯ ಜನರ ಗಮನಕ್ಕೆ ಬಂದ ತಕ್ಷಣ ಸಮೀಪದ ಗ್ರಾಮದ ಜನರು ಆತಂಕಗೊಂಡಿದ್ದಾರೆ.


  ಎಂಎಸ್‌ಇಝೆಡ್‌ ವ್ಯಾಪ್ತಿಯಲ್ಲಿ ಅನೇಕ ಕೆಮಿಕಲ್ ಫ್ಯಾಕ್ಟರಿ, ಪೆಟ್ರೋಲಿಯಂ ಉತ್ಪನ್ನಗಳ ಫ್ಯಾಕ್ಟರಿ ಇರುವುದು ಈ ಆತಂಕಕ್ಕೆ ಕಾರಣವಾಗಿದೆ. ಫ್ಯಾಕ್ಟರಿಯಲ್ಲಿ ಬೆಂ*ಕಿ ಅವಘ*ಡ ಸಂಭವಿಸಿದ ತಕ್ಷಣ ಅಲರ್ಟ್ ಆದ ಅ*ಗ್ನಿಶಾಮಕ ತಂಡ ಬೆಂ*ಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ.

  ಇದನ್ನೂ ಓದಿ :  ಜಗತ್ತಿನ ದೊಡ್ಡಣ್ಣನಲ್ಲಿ ಹ*ತ್ಯೆಯಾದ ಅಧ್ಯಕ್ಷರುಗಳು ಇವರು..!

  ಎಂಎಸ್ಇಝೆಡ್‌, ಎಂಆರ್‌ಪಿಎಲ್ ಹಾಗೂ ಜಿಎಂಪಿಎಲ್‌ನ ಅ*ಗ್ನಿ ಶಾಮಕ ವಾಹನಗಳು ಫ್ಯಾಕ್ಟರಿಯಲ್ಲಿನ ಬೆಂ*ಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಎಸ್‌ಇಝೆಡ್‌ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅ*ಗ್ನಿ ಅವಘಡಗಳು ನಡಿತಾ ಇದ್ರೂ ಇದೊಂದು ಭಾರಿ ಅ*ಗ್ನಿ ಅವಘ*ಡವಾಗಿದೆ. ಆದ್ರೆ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

  Continue Reading

  LATEST NEWS

  Trending