Connect with us

    LATEST NEWS

    “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ನಿಯೋಗದಿಂದ ಮುಮ್ತಾಜ್ ಅಲಿ ನಿವಾಸಕ್ಕೆ ಭೇಟಿ

    Published

    on

    ಮಂಗಳೂರು: ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಇದರ ನಿಯೋಗ ಚೊಕ್ಕಬೆಟ್ಟುನಲ್ಲಿರುವ ಮುಮ್ತಾಜ್ ಅಲಿ ಅವರ ಕುಟುಂಬದ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮುಮ್ತಾಜ್ ಅಲಿಯವರನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಸಮಗ್ರ ತನಿಖೆಗಾಗಿ ಕುಟುಂಬ ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದರು.

    ನಿಯೋಗದ ಸದಸ್ಯರು ಪ್ರಕರಣದಲ್ಲಿ ಈವರೆಗಿನ ಬೆಳವಣಿಗೆಗಳ ಕುರಿತು ಮುಮ್ತಾಜ್ ಅಲಿ ಹಿರಿಯ ಸಹೋದರ, ಮಾಜಿ ಶಾಸಕ ಮೊಯ್ದಿನ್ ಬಾವಾ ಅವರಿಂದ ಮಾಹಿತಿ ಪಡೆಯಿತು‌. ಈ ಪ್ರಕರಣದಲ್ಲಿ ಆಳವಾದ ತನಿಖೆಯ ಮೂಲಕ ಇದರಲ್ಲಿ ಭಾಗಿಗಳಾಗಿರುವ ಕಾಣದ ಕೈಗಳನ್ನು ಬಯಲಿಗೆಳೆಯಲು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲು ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ನಿಯೋಗ ಕುಟುಂಬಕ್ಕೆ ಭರವಸೆ ನೀಡಿತು. ಈ ಪ್ರಕರಣದ ಆರೋಪಿಗಳು ಇನ್ನಷ್ಟು ಇಂತಹದ್ದೇ ಬ್ಲಾಕ್ ಮೇಲ್ ಕೃತ್ಯಗಳಲ್ಲಿ ಭಾಗಿಗಳಾಗಿರುವ ಮಾತುಗಳು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲು, ಈ ಪ್ರಕರಣದ ತನಿಖೆಗೆ ನುರಿತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ಮುಖಂಡರು ಹೇಳಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಈ ವರ್ಷ ಹಾಲಿನ ದರ ಏರಿಕೆಗೆ ತಾತ್ಕಾಲಿಕ ಸ್ಥಗಿತ

    Published

    on

    ಬೆಂಗಳೂರು: ಹಾಲಿನ ದರ ಏರಿಕೆ ಮಾಡುವುದಾಗಿ ಕೆಎಂಎಫ್ ಹಲವು ಬಾರಿ ಸರ್ಕಾರದೊಂದಿಗೆ ಮಾತು ಕತೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಸರ್ಕಾರ ಹಾಗೂ ಕೆಎಂಎಫ್ ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

    ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು.

    ಆ ಬೆನ್ನಲ್ಲೆ ಕೆಎಂಎಫ್ ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಿದೆ.

    ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ ಗ್ರಾಹಕರಲ್ಲಿ ಮನೆ ಮಾಡಿತ್ತು. ಅಲ್ಲದೇ ಈಗಾಗಲೇ . ಲೀಟರ್ ಗೆ 48 ರೂ ತಲುಪಿದ್ದು, ಮತ್ತೆ ಹೆಚ್ಚಾದರೆ ಹೇಗೆ ಅನ್ನೋ ಆತಂಕ ಕೂಡ ಗ್ರಾಹಕರಲ್ಲಿ ಮೂಡಿತ್ತು.

    Continue Reading

    LATEST NEWS

    ‘ಕ್ರೈಂ ಗಣೇಶ್‌’ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಗಣೇಶ್‌ ಇನ್ನಿಲ್ಲ

    Published

    on

    ಮಂಗಳೂರು/ಬೆಂಗಳೂರು : ಕ್ರೈಂ ಗಣೇಶ್‌ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಗಣೇಶ್‌ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದಾಗಿ ನಗರದ ಮಹಾವೀರ್ ಜೈನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ 20 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಸದ್ಯ ಟಿವಿ 5 ಚಾನಲ್ ನಲ್ಲಿ ಔಟ್ ಪುಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.

    ಇದನ್ನೂ ಓದಿ : WATCH VIDEO : ಅಬ್ಬಬ್ಬಾ! ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ! ದೈತ್ಯ ಹಾವು ಏನ್ಮಾಡಿತು ಗೊತ್ತಾ!?

    ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯವರಾಗಿದ್ದ ಗಣೇಶ್‌ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.  ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ ಕ್ರೈಂ ವರದಿಗಾರಿಕೆಯಲ್ಲಿ ಹೆಸರುವಾಸಿಯಾಗಿದ್ದರು.

    Continue Reading

    LATEST NEWS

    25 ಕೋಟಿ ರೂಪಾಯಿ ಲಾಟರಿ ಗೆದ್ದ ಕನ್ನಡಿಗ: ಕೇರಳದಲ್ಲಿ ಸಿಕ್ಕಿತು ಬಂಪರ್

    Published

    on

    25 ಕೋಟಿ ರೂಪಾಯಿ ಲಾಟರಿ.. ನಿಮ್ಮ ಜೀವನದಲ್ಲಿ ಈ ರೀತಿಯ ಸುದ್ದಿ ಕೇಳಿದರೆ ಆಗ ನಿಮಗೆ ಹೇಗೆ ಆಗಬೇಡ ಹೇಳಿ? ಹೌದು, ಇಂತಹದೊಂದು ಘಟನೆ ಪ್ರತಿವರ್ಷ ಕೂಡ ಬಂದೇ ಬರುತ್ತದೆ. ಅದರಲ್ಲೂ ಈ ಸುದ್ದಿ ಕೇಳಿ ಬರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಲ್ಲ, ಈ ಸುದ್ದಿ ಕೇಳಿ ಬರುವುದು ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ.

    ಅಂದಹಾಗೆ ಈ ಬಾರಿ ಕೂಡ ಕೇರಳದ ಲಾಟರಿ ಲಕ್ಷ್ಮೀ ಬಡ ವ್ಯಕ್ತಿಯ ಮನೆಗೆ ಒಲಿದು ಬಂದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ಇದೀಗ ಕನ್ನಡಿಗನಿಗೆ ಒಲಿದಿದೆ!

    ಹೌದು, ಕೋಟಿ ಕೋಟಿ ರೂಪಾಯಿ ದುಡಿಯಬೇಕು. ಕೋಟ್ಯಧಿಪತಿ ಆಗಿ, ಮನೆ ತುಂಬಾ ದುಡ್ಡು ತುಂಬಿಸಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೆ ಕೂಡ ಇದ್ದೇ ಇರುತ್ತದೆ. ಆದರೆ ಈ ಆಸೆ ಈಡೇರುವುದು ಅದೃಷ್ಟ ಇದ್ದವರಿಗೆ ಮಾತ್ರ. ಅದರಲ್ಲೂ ದುಡಿಯುತ್ತಾ ಕೂತರೆ ನಾವು ಕೋಟಿ ರೂಪಾಯಿ ಗಳಿಸುವುದು ಕಷ್ಟ ಎಂಬುದು ಬಹುತೇಕರ ವಾದ. ಆದರೆ ಸರಿಯಾದ ರೀತಿ ದುಡಿದು ಉಳಿತಾಯ ಮಾಡಿದರೆ ಕೋಟಿ ಕೋಟಿ ಉಳಿಸಬಹುದು ಎಂಬುದು ಇನ್ನೂ ಕೆಲ ಆರ್ಥಿಕ ತಜ್ಞರ ವಾದ. ಇಷ್ಟೆಲ್ಲದರ ನಡುವೆ ದಿಢೀರ್ ಲಾಟರಿಯಲ್ಲಿ ಕೋಟಿ, ಕೋಟಿ ರೂಪಾಯಿ ಹಣ ದುಡ್ಡು ಬಂದುಬಿಟ್ಟರೆ ಏನು ಮಾಡೋದು? ಇಂತಹದ್ದೇ ಪರಿಸ್ಥಿತಿ ಇದೀಗ ಕನ್ನಡಿಗನಿಗೂ ಬಂದಿದೆ!

    ಕನ್ನಡಿಗನಿಗೆ ಒಲಿದು ಬಂದ ಲಾಟರಿ!

    ಅಂದಹಾಗೆ ಓಣಂ ಹಬ್ಬದ ಹಿನ್ನೆಲೆ ಕೇರಳ ರಾಜ್ಯದಲ್ಲಿ ನಡೆಸುವ ಬಂಪರ್ ಲಾಟರಿ ಈಗ ನಮ್ಮ ಕನ್ನಡ ನಾಡಿನ ವ್ಯಕ್ತಿಗೆ ಒಲಿದು ಬಂದಿದೆ. 2024ನೇ ಸಾಲಿನ ಓಣಂ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿ ಆಗಿತ್ತು. ಹಾಗೇ 2ನೇ ಬಹುಮಾನದ ಮೂಲಕ 20 ಜನರಿಗೆ 1 ಕೋಟಿ ರೂಪಾಯಿ ಬಹುಮಾನದ ಹಣ ನೀಡುತ್ತಾರೆ. ಈ ಪೈಕಿ ಇದೀಗ ನಮ್ಮ ಕನ್ನಡ ನಾಡಿನ ಮೂಲದ ವ್ಯಕ್ತಿಗೆ ಮೊದಲನೇ ಬಹುಮಾನ 25 ಕೋಟಿ ರೂಪಾಯಿ ಒಲಿದು ಬಂದಿದೆ. ಅಲ್ತಾಫ್ ಎಂಬುವವರಿಗೆ ಈ ಲಾಟರಿ ಒಲಿದು ಬಂದಿದೆ.

    15 ವರ್ಷಗಳಿಂದ ಲಾಟರಿ ಆಡುತ್ತಿದ್ದರು!

    ಅಂದಹಾಗೆ ಕೇರಳದಲ್ಲಿ ಓಣಂ ಲಾಟರಿಯ ಟಿಕೆಟ್‌ ಬೆಲೆ ಈ ಬಾರಿ 500 ರೂಪಾಯಿಗೆ ಫಿಕ್ಸ್ ಮಾಡಲಾಗಿತ್ತು. ಈ ಮೂಲಕ ಮೊದಲನೇ ಬಹುಮಾನ ಎಂದು 25 ಕೋಟಿ ರೂಪಾಯಿಯ ಬಹುಮಾನ ಮೊತ್ತ ಫಿಕ್ಸ್ ಆಗಿತ್ತು. ಇದೀಗ ಕರ್ನಾಟಕ ಮೂಲದ ವ್ಯಕ್ತಿಗೆ ಈ ಬಹುಮಾನ ಒಲಿದು ಬಂದಿದ್ದು, ಕಳೆದ 15 ವರ್ಷಗಳಿಂದಲು ಲಾಟರಿ ಆಡುತ್ತಿದ್ದ ಕರ್ನಾಟಕ ಮೂಲದ ಅಲ್ತಾಫ್ ಎಂಬುವವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಲಾಟರಿ ಒಲಿದಿದೆ. ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇದೀಗ ಓಣಂ ಲಾಟರಿ ಗೆದ್ದ ನಂಬರ್ ಯಾವುದು ಎಂಬ ವಿಚಾರವನ್ನ ಘೋಷಣೆ ಮಾಡಿದ್ದಾರೆ.

    Continue Reading

    LATEST NEWS

    Trending