Tuesday, February 7, 2023

ಈ ‘ನಾಟಿ’ ವೈದ್ಯನ ಕೊಲೆ ಪಕ್ಕಾ ಫಿಲ್ಮಿ ಸ್ಟೈಲ್‌: ಹಿಂದಿದೆ ರೋಚಕ ಕಹಾನಿ..!

ಮೈಸೂರು: ಪೈಲ್ಸ್ ರೋಗಕ್ಕೆ ನಾಟಿ ಮದ್ದು ಮಾಡುತ್ತಿದ್ದ ವೈದ್ಯನನ್ನು ಫಿಲ್ಮಿ ಸ್ಟೈಲ್‌ನಲ್ಲಿ ಕಿಡ್ನಾಪ್‌ ಮಾಡಿ ಒಂದು ವರ್ಷ ಚಿತ್ರಹಿಂಸೆ ನೀಡಿ ದೇಹವನ್ನು ತುಂಡು ತುಂಡು ಮಾಡಿ ನದಿಯೊಂದಕ್ಕೆ

ಬಿಸಾಡಿದ ಪ್ರಕರಣ ಮೂರು ವರ್ಷದ ನಂತರ ಕಳ್ಳತನದ ತನಿಖೆ ನಡೆಸುವ ವೇಳೆ  ಬೆಳಕಿಗೆ ಬಂದಿದೆ. ಕೊಂದ ಆರೋಪಿಗಳ ಮಧ್ಯೆ ಗಲಾಟೆ ನಡೆದ ಕಾರಣ ಈ ಕೃತ್ಯ ಬೆಳಕಿಗೆ ಬಂದಿದೆ.


ಶಾಬಾ ಷರೀಫ್ (60) ಮೃತ ವ್ಯಕ್ತಿ.
ಪೈಲ್ಸ್ (ಮೂಲವ್ಯಾಧಿ) ರೋಗಕ್ಕೆ ನಾಟಿ ಚಿಕಿತ್ಸೆ ನೀಡುತ್ತಿದ್ದ ಷರೀಫ್ ಎಂಬುವವರನ್ನು 2019ರ ಆಗಸ್ಟ್‌ನಲ್ಲಿ ಕೇರಳದಿಂದ ಬಂದ ಯುವಕರಿಬ್ಬರು ‘ನಮ್ಮ ಮನೆಯಲ್ಲಿ ಒಬ್ಬರಿಗೆ ಪೈಲ್ಸ್ ಕಾಯಿಲೆ ಇದೆ ಎಂದು ಕೇಳಿ’ ವೈದ್ಯರನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಾರೆ.

ಕೇರಳ ಗಡಿ ತಲುಪಿದ ನಂತರ ಕಾರಿನಲ್ಲಿ ಅವರನ್ನು ಅಪಹರಿಸಿ ಅಲ್ಲಿಂದ ನೀಲಂಬೂರಿಗೆ ಕರೆದೊಯ್ದು ಬಳಿಕ ಷರೀಫ್​ ಅವರನ್ನು ಶೈಬೀನ್ ಅಶ್ರಫ್ ಎಂಬಾತನ ಮನೆಗೆ ಕರೆತಂದರು.

ಅಲ್ಲಿ ತನಗೆ ‘ಪೈಲ್ಸ್ ಚಿಕಿತ್ಸೆಯ ವಿಧಾನ’ ಹೇಳಿ ಕೊಡುವಂತೆ ಅಶ್ರಫ್‌ ಒತ್ತಡ ಹೇರುತ್ತಾನೆ.

ಆದರೆ ಪೂರ್ವಜರಿಂದ ಕಲಿತ ವಿದ್ಯೆಯನ್ನು ಹೇಳಿಕೊಡುವುದಿಲ್ಲ ಎಂದು ಶಾಬಾ ಷರೀಫ್ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಅಶ್ರಫ್,

ಅವರನ್ನು ತನ್ನ ಮನೆಯ ಎರಡನೇ ಮಹಡಿಯಲ್ಲಿರುವ ಕೊಠಡಿಯೊಂದರಲ್ಲಿ ಸರಪಳಿ ಬಿಗಿದು ಕೂಡಿ ಹಾಕುತ್ತಾನೆ. ಸತತ ಒಂದು ವರ್ಷ ಅವರಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಾರೆ.

ಆರೋಪಿ

ಹಿಂಸೆ ತಾಳಲಾರದೆ ಶಾಬಾ ಷರೀಫ್ 2020ರ ಅಕ್ಟೋಬರ್​ನಲ್ಲಿ ಸಾವನ್ನಪ್ಪುತ್ತಾರೆ. ಏಳು ಮಂದಿ ಸೇರಿ ಶಾಬಾ ಷರೀಫ್ ದೇಹವನ್ನು ಮಚ್ಚಿನಿಂದ ತುಂಡು, ತುಂಡು ಮಾಡಿ ಚೀಲದಲ್ಲಿ ತುಂಬಿಕೊಂಡು ಕೇರಳದ ನದಿಯೊಂದರಲ್ಲಿ ಬಿಸಾಡುತ್ತಾರೆ.

ಈ ಕೃತ್ಯಕ್ಕೆ ಅಶ್ರಫ್ ತನ್ನ ಸಹಚರರಿಗೆ ಕೊಡಬೇಕಾದ ಹಣವನ್ನು ನೀಡಿರಲಿಲ್ಲ. ಹೀಗಾಗಿ, ಕೊಲೆಗೈದ ಆರೋಪಿಗಳು ಏ. 24 ರಂದು ಆಶ್ರಫ್ ಮನೆಗೆ ನುಗ್ಗಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ.

ಈ ಸಂಬಂಧ ಅಶ್ರಫ್ ದೂರು ದಾಖಲಿಸಿದ್ದಾರೆ. ಇದರ ತನಿಖೆಯ ವೇಳೆ ಮೂವರನ್ನು ವಶಕ್ಕೆ ಪಡೆದಿದ್ದರು. ಆಗ ಆರೋಪಿಗಳ ಬಳಿಯಿದ್ದ ಪೆನ್ ಡ್ರೈವ್​ವೊಂದನ್ನು ಪೊಲೀಸರಿಗೆ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾಗ

ಅದರಲ್ಲಿ ಶಾಬಾ ಷರೀಫ್ ಅವರ ಕೊಲೆಗೆ ಸಂಬಂಧಿಸಿದ ವಿಚಾರಗಳಿದ್ದವು. ಅವುಗಳನ್ನು ಕಂಡು ಪೊಲೀಸರು ಗಾಬರಿಯಾಗಿದ್ದರು. ಆಗ ದೂರು ನೀಡಿದವನನ್ನೇ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ – ಭಕ್ತಿಯ ಆರಾಧನೆ ದೇವರಿಗೆ ಪ್ರಿಯ: ಸತೀಶ್ ಶೆಟ್ಟಿ

ಶುದ್ಧ ಮನಸ್ಸಿನಿಂದ ದೇವರಿಗೆ ಶರಣಾದರೆ ಮಾನಸಿಕ ನೆಮ್ಮದಿಯ ಜತೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆಡಂಬರದ ಆರಾಧನೆಗಿಂತ ಭಕ್ತಿಯ ಆರಾಧನೆ ದೇವರಿಗೆ ಪ್ರಿಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್...

ಮೂಡುಬಿದಿರೆಯಲ್ಲಿ ಟಿಪ್ಪರ್ ಚಲಾಯಿಸಿ ವ್ಯಕ್ತಿ ಕೊಲೆ ಮಾಡಿದ ಆರೋಪಿ ಅರೆಸ್ಟ್..!

ಮಂಗಳೂರು : ಧೂಳು ಹಾರುತ್ತೆ ವಾಹ ನಿಧನವಾಗಿ ಚಲಾಯಿಸು ಎಂದು ಬುದ್ಧಿವಾದ ಹೇಳಿದ್ದಕ್ಕೆ ಆ ವ್ಯಕ್ತಿ ಮೇಲೆಯೇ ಟಿಪ್ಪರ್‌ ಚಲಾಯಿಸಿ ಕೊಲೆ ಮಾಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.ಕೋಟೆ ಬಾಗಿಲು ನಿವಾಸಿ, ಟಿಪ್ಪರ್‌...

ಚಾರ್ಮಾಡಿಯಲ್ಲಿ 150 ಅಡಿ ಆಳಕ್ಕೆ ಉರುಳಿ ಬಿದ್ದ ಗೂಡ್ಸ್ ಟೆಂಪೋ :ವಾಹನದಲ್ಲಿದ್ದವರು ಪಾರು..!

ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ಪ್ರಪಾತಕ್ಕೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಇಂದು ನಡೆದಿದೆ.ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್...