Sunday, June 4, 2023

UAEಯ ನೂತನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಆಯ್ಕೆ

ಅಬುಧಾಬಿ: ಯುಎಇ ದೇಶದ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದಿಂದ ತೆರವಾದ ಸ್ಥಾನಕ್ಕೆ ಪ್ರಸ್ತುತ ಅಬುಧಾಬಿಯ ರಾಜಕುಮಾರರಾಗಿದ್ದ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಮಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ದೇಶದ ಸುಪ್ರೀಂ ಕೌನ್ಸಿಲ್ ಇಂದು ಘೋಷಿಸಿದೆ.


ಶುಕ್ರವಾರ ನಿಧನರಾದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್(73) ಅವರ ಸ್ಥಾನವನ್ನು ತುಂಬಲಿರುವ 61 ವರ್ಷದ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ದೇಶದ ಮೂರನೇ ಅಧ್ಯಕ್ಷರಾಗಲಿದ್ದಾರೆ.
ನವೆಂಬರ್ 2004ರಿಂದ ಅಬುಧಾಬಿಯ ರಾಜಕುಮಾರನಾಗಿರುವ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರು ಇದೇ ವೇಳೆ ಅಬುಧಾಬಿಯ 17ನೇ ದೊರೆಯಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಹಿಂದೆ ಅಧ್ಯಕ್ಷ ಶೇಖ್ ಖಲೀಫಾ ದೊರೆಯಾಗಿದ್ದರು.
ಶೇಖ್ ಮುಹಮ್ಮದ್ ಅವರು ಯುಎಇ ಸೇನಾ ಪಡೆಗಳ ಉಪ ಮುಖ್ಯ ಕಮಾಂಡರ್ ಆಗಿ ಜನವರಿ 2005ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಸಂಯುಕ್ತ ಅರಬ್ ಸಂಸ್ಥಾನದ ಸೇನಾ ಪಡೆಗಳ ತಂತ್ರಗಾರಿಕೆ, ತರಬೇತಿ ಮತ್ತು ಸಂಘಟನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ ಮೃತಪಟ್ಟ ಹಿನ್ನೆಲೆಯಲ್ಲಿ  40 ದಿನಗಳ ಶೋಕಾಚರಣೆಯನ್ನು ಸಂಯುಕ್ತ ಅರಬ್ ಸಂಸ್ಥಾನ ಮಾಡಲಿದೆ.

ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಇಂದಿನಿಂದ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದೆ.

LEAVE A REPLY

Please enter your comment!
Please enter your name here

Hot Topics