Connect with us

    LATEST NEWS

    ಸಂಸದ ಹೆಚ್ ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆ ತಡೆಗೆ ರಾಜ್ಯ ಸರ್ಕಾರ ಸೂಚನೆ

    Published

    on

    ಮಂಗಳೂರು/ಬಳ್ಳಾರಿ : ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಸಂಸದ ಕುಮಾರಸ್ವಾಮಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದರು. ಆದರೆ, ಕೇಂದ್ರದ ಈ ತೀರ್ಮಾನವನ್ನು ತಡೆ ಹಿಡಿಯಲು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀರ್ಮಾನಿಸಿದ್ದಾರೆ. ಬಳ್ಳಾರಿಯ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್‌ನ 401.57 ಹೆಕ್ಟರ್ ಅರಣ್ಯದಲ್ಲಿ ಈ ಗಣಿಕಾರಿಕೆಗೆ ಕೆಐಒಸಿಎಲ್‌ಗೆ ಕೇಂದ್ರ ಸಚಿವರು ಅನುಮತಿ ನೀಡಿದ್ದರು.

    ಗಣಿಕಾರಿಕೆ ತಡೆಗೆ ಅರಣ್ಯ ಸಚಿವರ ಸೂಚನೆ

    ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದ್ರೆ, ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ಈ ಹಿಂದೆ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿಕಾರಿಕೆಯ ಸಮಯದಲ್ಲಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದೆ.

    ಗಣಿಗಾರಿಯ ಸಮಯದಲ್ಲಿ ಹಲವು ಲೋಪಗಳು ಈ ಸಂಸ್ಥೆಯಿಂದ ಆಗಿದೆ. ಈ ಕಾರಣದಿಂದ ಕೇಂದ್ರ ಉನ್ನತಾಧಿಕಾರ ಸಮಿತಿ ನಿಗದಿತ ಕಾಲಮಿತಿಯೊಳಗೆ ಅರಣ್ಯ ಅಭಿವೃದ್ದಿ ಸೇರಿದಂತೆ ಇನ್ನಿತರ ಕ್ರಮಕ್ಕೆ ಕೆಐಒಸಿಎಲ್‌ಗೆ ಸೂಚಿಸಿತ್ತು. ಆದ್ರೆ, ಅದನ್ನು ಜಾರಿ ಮಾಡುವಲ್ಲಿ ಕೆಐಒಸಿಎಲ್‌ ವಿಫಲವಾಗಿದೆ.

    ಕೇಂದ್ರ ಉನ್ನತಾಧಿಕಾರ ಸಮಿತಿ ನೀಡಿದ ಸೂಚನೆಯ ಜಾರಿ ಹಾಗೂ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರೆಗೂ ದೇವದಾರಿ ಬೆಟ್ಟ ಪ್ರದೇಶದಲ್ಲಿ ಕೆಐಒಸಿಎಲ್‌ಗೆ ಗಣಿಗಾರಿಕೆಗೆ ಅರಣ್ಯ ಭೂಮಿ ಹಸ್ತಾಂತರ ಮಾಡಬಾರದು ಮತ್ತು ಯಾವುದೇ ಅರಣ್ಯ ತಿರುವಳಿಗೆ ಗುತ್ತಿಗೆಗೆ ಅಧಿಕಾರಿಗಳು ಸಹಿ ಹಾಕಬಾರದು ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ದೇಶಿಸಿದ್ದಾರೆ.

    ನಮ್ಮ ಅನುಮತಿಯಿಲ್ಲದೆ ಗಣಿಗಾರಿಕೆ ಮಾಡಲು ಬರಲ್ಲ : ಖಂಡ್ರೆ

    ಈ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಮಾತನಾಡಿ, ದೇವದಾರಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಗಾಗಿ 2018 ನಲ್ಲಿ ಕೆಐಓಸಿಎಲ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಅರಣ್ಯಕ್ಕೆ ಮತ್ತು ಜಲಮೂಲಗಳಿಗೆ ಹಾನಿ ಆಗುತ್ತದೆ ಎಂದು ಕೇಂದ್ರ ಸರ್ಕಾರ ಅನುಮತಿ ನೀಡಲು ನಿರಾಕರಿಸಿತು. ಆದರೆ, 2023 ಏಪ್ರಿಲ್​ನಲ್ಲಿ ಕೆಲ ಷರತ್ತುಗಳ ಮೇರೆಗೆ ಮೊದಲ ಹಂತಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.

    ಇದನ್ನೂ ಓದಿ : ತಾಯಿ-ಮಗಳ ಡಬಲ್ ಮ*ರ್ಡರ್..! ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಶಾಕ್..!

    ಇದು ರಾಜ್ಯ ಸರ್ಕಾರದ ಸ್ವತ್ತು. ನಮ್ಮ ಅನುಮತಿಯಿಲ್ಲದೆ ಗಣಿಗಾರಿಕೆ ಮಾಡಲು ಬರಲ್ಲ ಮತ್ತು ನಮ್ಮ ಇಲಾಖೆಯ ಷರತ್ತು ಪೂರೈಸುವ ವರೆಗೂ ಜಮೀನು‌ ಹಸ್ತಾಂತರಿಸಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಗಣಿಗಾರಿಕೆಗೆ ಅರಣ್ಯ ಭೂಮಿಯನ್ನು ಹಸ್ತಾಂತರ ಮಾಡಿದ ಮೇಲೆ ಏನು ಮಾಡಲು ಬರುವುದಿಲ್ಲ. ಹೀಗಾಗಿ, ತಡೆ ಹಿಡಿದ್ದೇವೆ ಎಂದು ಮಾಹಿತಿ ನೀಡಿದರು.

    ದೇವದಾರಿ ಬೆಟ್ಟ ಪ್ರದೇಶದ ವರ್ಜಿನ್ ಕಾಡಿನಲ್ಲಿ 99 ಸಾವಿರ ಮರಗಳಿವೆ. ಜೀವವೈವಿಧ್ಯಕ್ಕೆ ದಕ್ಕೆ ಆಗಲಿದೆ ಎಂಬ ಪರಿಸರವಾದಿಗಳ ಅಭಿಪ್ರಾಯವಿದೆ ಎಂದರು.

    haveri

    ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವು ..! ಹೊಸ ವಾಹನಕ್ಕೆ ಪೂಜೆ ಮಾಡಿಸಲು ಹೋದ ಕುಟುಂಬ ದುರಂತ ಸಾವು

    Published

    on

    ಹಾವೇರಿ: ಹೊಸದಾಗಿ ಖರೀದಿ ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಲೆಂದು ಹೊರಟಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಘಟನೆ ಜೂ.27ರಂದು ಬೆಳಗಿನ ಜಾವ ಹಾವೇರಿಯಲ್ಲಿ ನಡೆದಿದೆ.

    ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿಯ ಬೆಂಗಳೂರು –ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ. ಶಿವಮೊಗ್ಗ ಮೂಲದ 15 ಜನರು ಟಿಟಿ ವಾಹನದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ದೇವಿ ದರ್ಶನ ಪಡೆದು ಮರಳಿ ಊರಿಗೆ ಬರುತ್ತಿದ್ದ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ.

    ಘಟನೆಯಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 13 ಮಂದಿ ಅಸುನೀಗಿದ್ದಾರೆ. ಪರಶುರಾಮ್ ​​(45), ಭಾಗ್ಯ (40), ನಾಗೇಶ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ, ಚಾಲಕ ಆದರ್ಶ್ (23), ಮಾನಸ (24), ರೂಪಾ (40), ಮಂಜುಳಾ (50) ಮೃತರು ಮೃತಪಟ್ಟವರು. ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

    Read More..; ಕಚೇರಿಗೆ ತೆರಳಲು ಸಿದ್ಧವಾಗುತ್ತಿದ್ದಾಗ ಹೃದಯಾ*ಘಾತ; 24 ವರ್ಷದ ಯುವತಿ ದುರ್ಮ*ರಣ

    ಅಪಘಾತದಲ್ಲಿ ಮೃತಪಟ್ಟ ನಾಗೇಶ್ ಕೃಷಿಕರಾಗಿದ್ದು, ಪತ್ನಿ ವಿಶಾಲಾಕ್ಷಿ ಆಶಾಕಾರ್ಯಕರ್ತೆಯಾಗಿದ್ದರು. ಇವರ ಪುತ್ರ ಆದರ್ಶ್ ಹೊಸದಾಗಿ ಟಿಟಿಯನ್ನು ಖರೀದಿಸಿದ್ದರು. ವಾಹನದ ಪೂಜೆಗಾಗಿ ಕುಟುಂಬದವರು ಕಲಬುರಗಿಯ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ಸೋಮವಾರ ಮದ್ಯಾಹ್ನ 12 ಗಂಟೆ ವೇಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ವಾಹನ ಪೂಜೆ ಮಾಡಿಸಿ, ಬಳಿಕ ಮಹಾರಾಷ್ಟ್ರ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಬೆಳಗಾವಿ ಜಿಲ್ಲೆ ಸವದತ್ತಿಗೆ ಆಗಮಿಸಿ, ಇಲ್ಲಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

    ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    DAKSHINA KANNADA

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ

    Published

    on

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಾದ ಕೃ ತಿಕ್ ಮತ್ತು ಪೃತ್ವಿಕ್ 6 ರಿಂದ 10ನೇ ತರಗತಿಯ ಮಕ್ಕಳಿಗೆ ಯೋಗವನ್ನು ಹೇಳಿಕೊಟ್ಟರು.

    ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

     

    Continue Reading

    LATEST NEWS

    Trending