Saturday, July 2, 2022

ಅಪ್ರಾಪ್ತೆಗೆ ಮೊಬೈಲ್ ಗಿಫ್ಟ್ ಕೊಟ್ಟು ಸ್ನೇಹ ಬೆಳೆಸಿ ನಿರಂತರ ಅತ್ಯಾಚಾರ : ಜೋಕಟ್ಟೆಯ ಅಬ್ದುಲ್ ರಫೂರ್ ಬಂಧನ..!

ಮಂಗಳೂರು: ಅಪ್ರಾಪ್ತೆಗೆ ಮೊಬೈಲ್ ಗಿಫ್ಟ್ ನೀಡಿ ಬಳಿಕ ಸಲುಗೆ ಬೆಳೆಸಿ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಮಾಡುತ್ತಿದ್ದ ಪ್ರಕರಣ ಮಂಗಳೂರಿನಲ್ಲಿ  ಬೆಳಕಿಗೆ ಬಂದಿದೆ.

ಆರೋಪಿ ಜೋಕಟ್ಟೆಯ ಅಬ್ದುಲ್ ರಫೂರ್ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅಬ್ದುಲ್ ಅಪ್ರಾಪ್ತೆಗೆ ಒಂದೂವರೆ ವರ್ಷದ ಹಿಂದೆ ಮೊಬೈಲ್ ಫೋನ್ ತೆಗೆದುಕೊಟ್ಟಿದ್ದ. ಬಳಿಕ ಆಕೆಯ ಜೊತೆ ಫೋನ್​ನಲ್ಲಿ ಸಲಿಗೆಯಿಂದ ಮಾತಾಡುವುದು ಮತ್ತು ಚಾಟ್ ಮಾಡುತ್ತಿದ್ದ. ಬಳಿಕ ಈತ ಬಾಲಕಿಯ ಮನೆಗೆ ರಾತ್ರಿ ಬರಲು ಆರಂಭಿಸಿದ್ದಾನೆ.

ಪ್ರತಿದಿನ ರಾತ್ರಿ 1 ಗಂಟೆಗೆ ಆಕೆಯ ಮನೆಯ ಕಾಂಪೌಂಡ್ ಗೋಡೆಯನ್ನು ಹಾರಿ ಬರುತ್ತಿದ್ದ ಈತ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದ.

ಬಳಿಕ ಒಳ ಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.

ಬಾಲಕಿಗೆ ನಿನ್ನೆ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರಲ್ಲಿಗೆ ಕರೆದೊಯ್ದಾಗ ಗರ್ಭಿಣಿ ಎಂದು ತಿಳಿದುಬಂದಿದೆ.

ಬಳಿಕ ಬಾಲಕಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಫೊಕ್ಸೋ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಅಗ್ನಿಪಥ್‌ ರಾಜಕೀಯ ಪ್ರೇರಿತ ಬಿಜೆಪಿ ಅಸ್ತ್ರ-ಮಾಜಿ ಶಾಸಕ ಲೋಬೋ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆ ವಿರುದ್ದ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಇಂದು...

ಇಲಾಖೆಯಿಂದ ನಿವೃತ್ತರಾದವರಿಗೆ ದ.ಕ ಎಸ್‌ಪಿಯಿಂದ ಬೀಳ್ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ನಿವೃತ್ತಿ ಹೊಂದಿದ ಇಬ್ಬರಿಗೆ ಮಂಗಳೂರಿನ ತನ್ನ ಕಚೇರಿಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ ಶುಭಕೋರಿದರು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಸಿ....

ಇಂದು ಮಧ್ಯಾಹ್ನ ಸುಳ್ಯದಲ್ಲಿ ಮತ್ತೆ ಕಂಪಿಸಿದ ವಸುಂಧರೆ

ಸುಳ್ಯ: ದಕ್ಷಿಣ ಕನ್ನಡದ ಸುಳ್ಯ ಮತ್ತು ಮಡಿಕೇರಿ ಭಾಗದಲ್ಲಿ ಶನಿವಾರ ಮಧ್ಯಾಹ್ನ 1.21 ಕ್ಕೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.ಜೂ. 25 ರಂದು ಕರಿಕೆ‌‌ ಸಮೀಪ, ಜೂ. 28 ರಂದು ಎರಡು ಬಾರಿ,...