LATEST NEWS
ಬೆಂಗಳೂರು : ದೇಶದ ಆಂತರಿಕ ಭದ್ರತೆಗೆ ಸಂಚಕಾರ : 960 ಸಿಮ್ ಸಹಿತ ಇಬ್ಬರು ಖತರ್ನಾಕ್ಗಳ ಬಂಧನ
ಬೆಂಗಳೂರು : ರಾಜ್ಯದಲ್ಲಿ ಎಟಿಎಸ್ ಭರ್ಜರಿ ಬೇಟೆಯಾಡಿದೆ. ರಾಷ್ಟ್ರೀಯ ಭದ್ರತೆಗೆ ತೊಡಕು ಹಾಗೂ ಅನಧಿಕೃತವಾಗಿ ಟೆಲಿಪೋನ್ ಎಕ್ಸ್ಚೇಂಜ್ ಮಾಡಿ ಭಾರತೀಯ ದೂರ ಸಂಪರ್ಕ ಇಲಾಖೆಗೆ ವಂಚನೆ ಮಾಡುತ್ತಿದ್ದ ಜಾಲ ಬೇಧಿಸಿರುವ ನಗರ ಭಯೋತ್ಪಾದಕ ನಿಗ್ರಹ ದಳ ಎಟಿಎಸ್ ಈ ಸಂಬಂಧ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಕೇರಳದ ಇಬ್ರಾಹಿಂ ಪುಲ್ಲಟ್ಟಿ ಹಾಗೂ ತಮಿಳುನಾಡಿನ ಗೌತಮ್ ಬಂಧಿತ ಆರೋಪಿಗಳು. ಬಂಧಿತರಿಂದ ಏಕಕಾಲಕ್ಕೆ 960 ಸಿಮ್ ಕಾರ್ಡ್ ಅಳವಡಿಸುವಂತಹ 30 ಸಿಮ್ ಬಾಕ್ಸ್ ಇರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಜಾಲಹಳ್ಳಿ ಮೂಲದ ಹಾಗೂ ತಮಿಳುನಾಡಿನ ಓರ್ವ ಆರೋಪಿ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಇಬ್ರಾಹಿಂ ಕೆಲ ವರ್ಷಗಳಿಂದ ದುಬೈನಲ್ಲಿ ಚಾಲಕನಾಗಿದ್ದ. ಅರಬ್ ದೇಶಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದ.
ಭಾರತಕ್ಕೆ ಕರೆ ಮಾಡಬೇಕಾದರೆ ಹೆಚ್ಚಿನ ದರ ವಿಧಿಸುತ್ತಿರುವುದನ್ನು ಅರಿತ ಆರೋಪಿ ಸ್ಥಳೀಯ ನಿವಾಸಿ ರಿಯಾಜ್ ಎಂಬಾತನ ನೆರವಿನಿಂದ ಅಂತಾರಾಷ್ಟ್ರೀಯ ಇನ್ಕಮಿಂಗ್ ಕಾಲ್ಗಳನ್ನು (ಐಎಸ್ಡಿ) ಸ್ಥಳೀಯ ಕರೆಗಳಾಗಿ ಬೆಂಗಳೂರಿನಲ್ಲಿ ಕುಳಿತು ಪರಿವರ್ತಿಸುತ್ತಿದ್ದ.
960 ಸಿಮ್ ಕಾರ್ಡ್ ಸಂಗ್ರಹಿಸಿದ್ದು ಹೇಗೆ ?ನಗರದಲ್ಲಿ ವಾಸವಾಗಿದ್ದ ಇಬ್ರಾಹಿಂ, ಪರಿಚಿತನಾಗಿದ್ದ ತಮಿಳುನಾಡು ಮೂಲದ ಗೌತಮ್ಗೆ ತಿಂಗಳಿಗೆ 70 ಸಾವಿರ ರೂಪಾಯಿ ವೇತನ ನೀಡಿ ದಂಧೆಗೆ ಇರಿಸಿಕೊಂಡಿದ್ದ.
ನಾಪತ್ತೆಯಾಗಿರುವ ಇಬ್ಬರು ಆರೋಪಿಗಳು ವಂಚನೆಗೆ ಸಾಥ್ ನೀಡಿದ್ದರು. ಸಿಮ್ ನೀಡುವ ಸೋಗಿನಲ್ಲಿ ಅಮಾಯಕರಿಂದ ಗುರುತಿನ ಚೀಟಿ ಪಡೆದು ಅವರಿಂದ ಫಿಂಗರ್ ಪ್ರಿಂಟ್ ಸಹ ಪಡೆದು ಅವರ ಹೆಸರಿನಲ್ಲಿ ಸಿಮ್ ಖರೀದಿಸುತ್ತಿದ್ದರು.
ಬೆಂಗಳೂರು ಸೇರಿದಂತೆ ತಮಿಳುನಾಡು ಹಾಗೂ ಕೇರಳದಲ್ಲಿ ತಮ್ಮ ಸಹಚರರ ಮೂಲಕ ಗುರುತಿನ ಚೀಟಿಗಳ ಸಂಗ್ರಹಿಸುತ್ತಿದ್ದರು. ಪ್ರಮುಖವಾಗಿ ಸಿಮ್ ಪಡೆಯಲು ಬರುವ ಗ್ರಾಮೀಣ ಭಾಗದ ಜನರ ಐಡಿ ಕಾರ್ಡ್ನ ಮತ್ತೊಂದು ಪ್ರತಿ ಪಡೆದು ಬೇರೆ ಸಿಮ್ ಕಾರ್ಡ್ಗಳನ್ನು ಪಡೆಯುತ್ತಿದ್ದರು.
ದುಬೈನಲ್ಲಿ ನಿಮಿಷಕ್ಕೆ 10 ರೂಪಾಯಿ ಇದ್ದರೆ ಇಲ್ಲಿ 1-2 ರೂಪಾಯಿಯಲ್ಲಿ ಮಾತನಾಡಬಹುದು. ಅದೇ ದುಬೈನಿಂದ ಭಾರತಕ್ಕೆ ಕರೆ ಮಾಡುವ ಗ್ರಾಹಕರನ್ನು ಸಂಪರ್ಕಿಸಿ ಟೆಲಿಪೋನ್ ಎಕ್ಸ್ಚೇಂಜ್ ಮೂಲಕ ಮಾಡಿಸುತ್ತಿದ್ದರು.
ಗ್ರಾಹಕರಿಂದ ಕಮೀಷನ್ ಪಡೆಯುತ್ತಿದ್ದರು. ವಿದೇಶಿ ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಭಾರತೀಯ ದೂರ ಸಂಪರ್ಕ ಇಲಾಖೆಗೂ ವಂಚಿಸಿದ್ದಾರೆ. ದೇಶದ ಆಂತರಿಕ ಭದ್ರತೆ ಧಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ.
ಇದುವರೆಗೂ ಎಷ್ಟು ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಹವಾಲಾ ದಂಧೆ ನಡೆಸುತ್ತಿದ್ದ ಗ್ಯಾಂಗ್ದುಬೈನ ತಮ್ಮ ನೆಟ್ವರ್ಕ್ನಿಂದ ಆರೋಪಿಗಳು ಇಲ್ಲಿ ಹವಾಲಾ ಮೂಲಕ ಹಣ ಪಡೆಯುತ್ತಿದ್ದರು. ಈ ಕೇಸ್ನಲ್ಲಿ ಸದ್ಯ ಐವರು ಭಾಗಿಯಾಗಿದ್ದಾರೆ.
ತಿಂಗಳಿಗೆ 10 ರಿಂದ 15 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಹವಾಲಾ ಮೂಲಕ ಇದುವರೆಗೂ ಎಷ್ಟು ಹಣ ವರ್ಗಾವಣೆ ಮಾಡಲಾಗಿದೆ. ಎಷ್ಟು ಜನರೊಂದಿಗೆ ವ್ಯವಹಾರ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
LATEST NEWS
ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!
ಆಂಧ್ರಪ್ರದೇಶ : ಆಲದ ಮರದ ಪೊಟರೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದು ಹೇಗೆ ಪತ್ತೆಯಾಯ್ತು? ಮಾಯಾಜಾಲನಾ? ಎಂಬ ಪ್ರನೆ ಮೂಡೋದು ಸಹಜ. ಆದ್ರೆ, ಇಲ್ಲಿ ಸಿಕ್ಕಿರೋದು ಮೇಲಿಂದ ಉದುರಿದ ದುಡ್ಡಲ್ಲ. ಬದಲಿಗೆ ಕಳವುಗೈದ ದುಡ್ಡು.
ಹೌದು, ಎಟಿಎಂಗೆ ಹಣ ತುಂಬಿಸಲು ಹೋದ ವಾಹನದಿಂದ ಹಣವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ. ಬಳಿಕ ಆಲದ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.
ಏನಿದು ಘಟನೆ ?
ಸಿಎಂಎಸ್ ಭದ್ರತಾ ಸಂಸ್ಥೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 68 ಲಕ್ಷ ರೂಪಾಯಿಯೊಂದಿಗೆ ಒಂಗೋಲ್ ನಿಂದ ತೆರಳಿದ್ದರು. ಚಿಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡಾವರಂ, ಗುಂಡ್ಲಪಲ್ಲಿ, ಮಡ್ಡಿಪಾಡು ಪ್ರದೇಶಗಳಲ್ಲಿರುವ ವಿವಿಧ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಬೇಕಾಗಿತ್ತು.
ಆದರೆ, ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್ನ ಕರ್ನೂಲ್ ರಸ್ತೆಯಲ್ಲಿರುವ ಭಾರತೀಯ ಪೆಟ್ರೋಲ್ ಬಂಕ್ನಲ್ಲಿ ವಾಹನ ನಿಲ್ಲಿಸಿದ್ದಾರೆ. ಮಧ್ಯಾಹ್ನ ಆಗಿದ್ದರಿಂದ ತಾವು ತಂದಿದ್ದ ತಿಂಡಿ ತಿನ್ನಲು ಬಂಕ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿದ್ದ ವಾಚ್ ಮನ್ ಬಂದು ವಾಹನದ ಬೀಗ ಮುರಿದು 64 ಲಕ್ಷ ರೂ.ಮೌಲ್ಯದ 500 ರೂ.ನೋಟುಗಳ ಬಂಡಲ್ಗಳನ್ನು ಕಳ್ಳತನ ಮಾಡಿದ್ದ.
ಅಷ್ಟರಲ್ಲಿ ಊಟ ಮುಗಿಸಿ ಹಿಂದಿರುಗಿದ ಸಿಬ್ಬಂದಿಗೆ ವಾಹನದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಒಳಗೆ ನೋಡಿದಾಗ 100 ರೂಪಾಯಿ ನೋಟುಗಳ ಬಂಡಲ್ ಗಳು ಮಾತ್ರ ಪತ್ತೆಯಾಗಿವೆ. 500 ರೂಪಾಯಿ ನೋಟುಗಳ ಬಂಡಲ್ಗಳು ಕಾಣಿಸಲಿಲ್ಲ.
ಅವರು ತಂದಿದ್ದ 68 ಲಕ್ಷ ರೂಪಾಯಿಯಲ್ಲಿ 64 ಲಕ್ಷ ರೂ. ಕಳ್ಳತನವಾಗಿರುವುದು ಗೊತ್ತಾಗಿದೆ.
ಕೂಡಲೇ ಪೊಲೀಸರಿಗೆ ದೂರು ನೀಡಿದ ನಂತರ ಹೆಚ್ಚುವರಿ ಎಸ್ಪಿ (ಅಪರಾಧ) ಎಸ್.ವಿ.ಶ್ರೀಧರ್ ರಾವ್ ಮತ್ತು ತಾಲೂಕು ಸಿಐ ಭಕ್ತವತ್ಸಲ ರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಮುಸುಕುಧಾರಿಯೊಬ್ಬ ಬೈಕ್ನಲ್ಲಿ ಬಂದು ವಾಹನದಲ್ಲಿದ್ದ ನಗದು ದೋಚಿರುವುದು ಕಂಡುಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಂಧನ :
ಬಂಧಿತ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಆತ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೋಟುಗಳ ಬಂಡಲ್ಗಳ ಜೊತೆಗೆ, ಅವನು ತನ್ನ ಸ್ವಗ್ರಾಮವಾದ ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪವಿರುವ ಆಲದ ಮರದ ಕಾಂಡದಲ್ಲಿ ಹಣವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
LATEST NEWS
ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು : ಬಿಸಿಲಿನ ಬೇಗೆಯ ತಣಿಸಲು ಮಳೆರಾಯ ಆಗಮಿಸಿದ್ದಾನೆ. ರಾಜ್ಯದ ಹಲವೆಡೆ ಮಳೆಯಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ಗಾಳಿ, ಮಳೆ ಮುನ್ಸೂಚನೆ :
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿರುವ ಬಗ್ಗೆ ಹವಾಮಾನ ಇಲಾಖೆ ಶುಭ ಸುದ್ದಿ ಕೊಟ್ಟಿದೆ. ರಾಯಚೂರು, ವಿಜಯನಗರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.
ಹವಾಮಾನ ಇಲಾಖೆಯ ಪ್ರಕಾರ ಗಂಟೆಗೆ 30ರಿಂದ 40 ಕಿಲೋ ಮೀಟರ್ ಗಾಳಿ ಬೀಸಲಿದ್ದು ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ತಂಪೆರೆದ ಮಳೆರಾಯ :
ಗುರುವಾರ ಧಾರವಾಡದಲ್ಲಿ ಆಲಿಕಲ್ ಸಮೇತ ಮಳೆ ಸುರಿದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಅಲ್ಲಲ್ಲಿ ಮರಗಳು ಉರುಳಿವೆ. ಮಾತ್ರವಲ್ಲದೆ ವಿಜಯನಗರದ ಹೊಸಪೇಟೆಯಲ್ಲೂ ಭಾರೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲೂ ಭಾರೀ ಗಾಳಿ ಮಳೆಯಾಗಿದೆ.
ಇದನ್ನೂ ಓದಿ : ಮುಂದಿನ ಮೂರು ದಿನ ಈ ಭಾಗಗಳಲ್ಲಿ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ
ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ವಿಜಯನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ವಿಜಯಪುರದಲ್ಲಿ ಗಾಳಿ, ಸಿಡಿಲು-ಗುಡುಗು ಸಹಿತ ಉತ್ತಮ ಮಳೆಯಾಗಿದೆ.
LATEST NEWS
ಉಡುಪಿ : ಅಂಬಾಗಿಲಿನಲ್ಲಿ ಬೈಕ್ – ಟಿಪ್ಪರ್ ನಡುವೆ ಭೀಕರ ಅಪಘಾ*ತ; ಬೈಕ್ ಸವಾರ ಸಾ*ವು
ಉಡುಪಿ : ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ಉಡುಪಿಯ ಅಂಬಾಗಿಲಿನಲ್ಲಿ ನಡೆದಿದೆ. ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಈ ದುರಂ*ತ ಸಂಭವಿಸಿದೆ.
ಬ್ರಹ್ಮಾವರ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಮೃ*ತ ದುರ್ದೈವಿ. ಪ್ರಭಾಕರ ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯರಸ್ತೆಗೆ ಬರುತ್ತಿದ್ದರು ಎನ್ನಲಾಗಿದೆ. ಅಪಘಾ*ತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಗುದ್ದಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಭೀಕರ ಅಪಘಾ*ತ; ಲಾರಿಯಡಿ ಸಿಲುಕಿ ಬೈಕ್ ಸವಾರ ಸಾ*ವು
ಸಹಸವಾರ ಗಂಭೀ*ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.