Monday, January 24, 2022

ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 41 ಜನರ ವಿರುದ್ಧ ಮತ್ತೊಂದು ಎಫ್‌ಐಆರ್‌

ಬೆಂಗಳೂರು: ಕಾಂಗ್ರೆಸ್‌ನ ಪಾದಯಾತ್ರೆ ಮೂರನೇ ದಿನ ಕಾಲಿಟ್ಟಿದೆ. ಇದರ ಬೆನ್ನಲ್ಲೇ ಡಿಕೆಶಿ ಸೇರಿ 41 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದೆ.


ಕನಕಪುರ ತಹಶಿಲ್ದಾರ್‌ ದೂರು ಆಧರಿಸಿ ದೂರು ದಾಖಲಾಗಿದೆ. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರಲ್ಲಿ ಸಿದ್ದರಾಮಯ್ಯ ಅವರ ಹೆಸರಿಲ್ಲ. ಕಾರಣ ನಿನ್ನೆ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ.

ಕಾಂಗ್ರೆಸ್‌ನ ಇತರ ನಾಯಕರಾದ ಧ್ರುವನಾರಾಯಣ, ಮೋಟಮ್ಮ, ಡಿಕೆ ಸುರೇಶ್‌ ಸೇರಿ 41 ಜನರ ಮೇಲೆ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಇಂತಹ ಬೆದರಿಕೆಗೆ ಬಗ್ಗಿ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ. ಬಿಜೆಪಿ ಶಾಸಕ, ಸಚಿವರು ಕೊರೋನಾ ನಿಯಮ ತೂರಿ ಹೋರಿ ಬೆದರಿಸುವ ಸ್ಪರ್ಧೇ, ಪ್ರತಿಭಟನೆ ನಡೆಸಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...