Connect with us

FILM

ಹ್ಯಾಪಿ ಬರ್ತ್ ಡೇ ಹಸ್ಬೆಂಡ್ -ಮೇಘನಾ ಸರ್ಜಾ ಭಾವುಕ ಪೋಸ್ಟ್

Published

on

ನಟ ಚಿರಂಜೀವಿ ಸರ್ಜಾ ಹುಟ್ಟು ಹಬ್ಬಕ್ಕೆ ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಹುಟ್ಟು ಹಬ್ಬಕ್ಕೆ ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಹೌದು ಭಾವುಕ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.


‘ಕೆಲವನ್ನಷ್ಟೇ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ.ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹ್ಯಾಪಿ ಬರ್ತಡೇ ಹಸ್ಬೆಂಡ್’ ಎಂದು ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.

10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ರಾಜ್‌ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ ಮೇ 2 2018 ರಂದು ವಿವಾಹವಾಗಿದ್ದು, ಮದುವೆಯಾದ ಎರಡೇ ವರ್ಷದಲ್ಲಿ 7 ಜೂನ್‌ 2020ರಂದು ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗ್ತಾರೆ.

ರಾಜಮಾರ್ತಾಂಡ ಸಿನಿಮಾದ ಶೂಟಿಂಗ್‌ ಮುಗಿದ ಬಳಿಕ ಚಿರು ಅವರ ಅಕಾಲಿಕ ಸಾವು ಘಟಿಸಿತ್ತು.

ನಂತರದಲ್ಲಿ ರಾಜಮಾರ್ತಾಂಡ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಅವರ ಸಹೋದರ, ನಟ ಧ್ರುವ ಸರ್ಜಾ ವಹಿಸಿಕೊಂಡಿದ್ದರು.

bangalore

ಸ್ನೇಹಿತ್ ಔಟ್- ನಮ್ರತಾ- ಸ್ನೇಹಿತ್ ಲವ್ ಸ್ಟೋರಿಗೆ ಬ್ರೇಕ್..!

Published

on

ಬಿಗ್ ಬಾಸ್: ಬಿಗ್ ಬಾಸ್ ಮನೆ ಆಟ ಇದೀಗ 60 ದಿನಗಳ ಪೂರೈಸಿದೆ. ಪ್ರತಿ ವಾರವು ಸ್ಪರ್ಧೆಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲಿಮಿನೆಟ್ ಆಗುತ್ತಿದ್ದಾರೆ. ಈ ವಾರವು ಸ್ನೇಹಿತ್ ಔಟ್ ಆಗಿದ್ದಾರೆ.

ಹಿಂದಿನ ವಾರದಲ್ಲಿ ಸ್ನೇಹಿತ್ ನಮ್ರತಾ ಜೊತೆ ಲವ್ವಿ-ಡವ್ವಿ ವಿಷಯಗಳನ್ನು ಮಾತನಾಡುತ್ತಿದ್ದರು. ನಮ್ರತಾ ಜೊತೆ ಬೆಸ್ಟ್ ಫ್ರೇಂಡ್ ಆಗಿದ್ದ ಸ್ನೇಹಿತ್ ಟಾಸ್ಕ್ ಗಳಲ್ಲಿ ಗೆಲ್ಲುತ್ತಿದ್ದರೂ, ಕೊನೆ ಕೊನೆಗೆ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ಕ್ಯಾಪ್ಟನ್ಸಿ ಆಗಿದ್ದಾಗ ಎರಡು ತಂಡಗಳ ಜೊತೆ ಪಕ್ಷಪಾತ ಮಾಡುತ್ತಿದ್ದರು. ಒಂದು ಟೀಮ್ ಗೆ ಮಾತ್ರ ಸಪೋರ್ಟ್ ಮಾಡುತ್ತಿದ್ದರು.

ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಎಂಬ ತಂಡಗಳ ನಡುವೆ ಜಗಳಗಳು ಹೆಚ್ಚಾಗಿತ್ತು. ಇದೇ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಕಣ್ಣಿಗೆ ಪೆಟ್ಟಾಗಿದ್ದು, ಇದಕ್ಕೆ ಪರೋಕ್ಷವಾಗಿ ಸ್ನೇಹಿತೇ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿತ್ತು. ಆದರೆ ಏನೂ ಮಾತನಾಡಲೂ ಮುಂದೆ ಹೋಗಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಿತ್ ನ ನಡೆತೆಯಿಂದ ಇದೀಗ ಅವರ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ.

ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ. ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ.

ಅಂತೂ ಬಿಗ್ ಬಾಸ್ ನಿಂದ ಸ್ನೇಹಿತ್ ಔಟ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ಲವ್ ಸ್ಟೋರಿ ಬ್ರೇಕ್ ಆಗುತ್ತಾ ಅಲ್ಲ ಬಿಗ್ ಮನೆಯಿಂದ ಹೊರ ಹೋದ ಬಳಿಕ ಮುಂದುವರಿಯುತ್ತಾ ಅನ್ನೋದು ಕಾದು ನೋಡಬೇಕಷ್ಟೇ.

Continue Reading

bangalore

ಬಿಗ್ ಬಾಸ್ ಮನೆಯಲ್ಲಿ ನಮ್ರತಾ-ಸ್ನೇಹಿತ್ ಲವ್ವಿ-ಡವ್ವಿ

Published

on

Bigboss: ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್- ಸಂಗೀತಾ ಇಬ್ಬರ ಒಂದು ಜೋಡಿ ಆದರೆ ಇತ್ತ ಸ್ನೇಹಿತ್ ಮತ್ತು ನಮ್ರತಾ ಇವರಿಬ್ಬರ ಪ್ರೇಮ ಕತೆ ಶುರುವಾಗಿದೆ.

ಕ್ಯಾಪ್ಟೆನ್ಸಿ ವಿಚಾರದಲ್ಲಿ ನಮ್ರತಾ ಹಾಗೂ ಸ್ನೇಹಿತ್ ಮುನಿಸಿಕೊಂಡಿದ್ದು, ಇದೀಗ ಮತ್ತೇ ಅವರ ಫ್ರೆಂಡ್‌ಶಿಪ್‌ ಶುರುವಾಗಿದೆ. ‘ ನಾನು ನಿಮ್ಮ ಪ್ರೀತಿನ ಒಪ್ಪಿಕೊಂಡ್ರೆ ಏನು ಮಾಡ್ತೀರಾ ಎಂದು ಸ್ನೇಹಿತ್ ಗೆ ನಮ್ರತಾ ಹೇಳಿದ್ದಾರೆ. ಅವರ ಮಾತಿಗೆ ಸ್ನೇಹಿತ್ ನಾಚಿ ನೀರಾಗಿದ್ದಾರೆ. ಇದೀಗ ಇವರಿಬ್ಬರ ಲವ್ವಿ-ಡವ್ವಿಯಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ. ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾಗ ಟಾಸ್ಕ್‌ನಿಂದ ನಮ್ರತಾ ಅವರನ್ನು ಹೊರಗೆ ಹಾಕಿದ್ದರು. ಬಳಿಕ ನಮ್ರತಾ ಅವರ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದರು.


ಕಳೆದ 60 ದಿನಗಳಿಂದ ನಡೆಯುತ್ತಿರೋ ಸೀನ್ ಅಂದರೆ ನಮ್ರತಾ ಹಿಂದೆ ಹೋಗೋದನ್ನ ಸ್ನೇಹಿತ್ ಬಿಟ್ಟಿಲ್ಲ. ನಮ್ರತಾಗೆ ಆಗಾಗ ಪ್ರೇಮ ನಿವೇದನೆ ಮಾಡುತ್ತಲೇ ಬಂದಿದ್ದಾರೆ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಇದೀಗ ಇದೆನ್ನೆಲ್ಲಾ ಗಮನಿಸಿ ನಮ್ರತಾ, ಸರಿ ನಾನು ನಿಮ್ಮ ಪ್ರೀತಿಯನ್ನ ಒಪ್ಪಿಕೊಂಡರೆ ಮುಂದೇನು? ಫ್ಯೂಚರ್ ಪ್ಲ್ಯಾನ್ ಏನು ಎಂದು ಕೇಳಿದ್ದಾರೆ. ಹೇಳಿ ಈಗ ನಾನು ಪ್ರೀತಿ ಮಾಡ್ತೀನಿ ಅಂದ್ರೆ ಏನು ಮಾಡ್ತೀರಿ ಎಂದು ನೇರವಾಗಿ ಪ್ರಶ್ನೆ ಎಸೆದರು.

ಆದರೆ, ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂಬುದೇ ಸ್ನೇಹಿತ್‌ಗೆ ತಿಳಿಯಲಿಲ್ಲ. ಅವರು ನಕ್ಕು ಸುಮ್ಮನಾದರು. ಹೇಳಿ ಈಗ ನಾನು ಪ್ರೀತಿಸುತ್ತೇನೆ ಎಂದರೆ ಏನು ಮಾಡ್ತೀರಾ. ಇಷ್ಟು ದಿನ ಸುಮ್ಮನೆ ಕಾಳು ಹಾಕಿದ್ರಾ ಎಂದು ಮರು ಪ್ರಶ್ನೆ ಹಾಕಿದರು. ಬಿಗ್ ಬಾಸ್‌ನಿಂದ ಹೊರಗೆ ಹೋದ ಬಳಿಕ ಮನೆಯವರ ಜೊತೆ ಮಾತನಾಡೋಣ.

ಒಂದು ವರ್ಷ ಮದುವೆ ಆಗೋದು ಬೇಡ. ನಿಮ್ಮಿಷ್ಟದ ಜಾಗಕ್ಕೆ ಹೊಗೋಣ. ಸ್ವಿಜರ್‌ಲೆಂಡ್‌ಗೆ ಮೊದಲು ಹೋಗೋಣ ಎಂದರು ಸ್ನೇಹಿತ್. ಅವರ ಮಾತನ್ನು ಕೇಳಿ ನಮ್ರತಾ ನಕ್ಕರು. ನಮ್ರತಾ ನಗುತ್ತಲೇ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರಾ? ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಆದರೆ ನಮ್ರತಾ ನಗುವಿಗೆ ಸ್ನೇಹಿತ್ ಮಾತ್ರ ನಾಚಿ ನೀರಾಗಿದ್ದಾರೆ. ಅಂತೂ ಇಂತೂ ಕೋಪ ಮಾತನಾಡುತ್ತಿದ್ದಲ್ಲಾ ಅಂತ ಸಮಾಧಾನದಲ್ಲಿದ್ದಾರೆ ಸ್ನೇಹಿತ್.

Continue Reading

FILM

ಬದುಕಿನ ಕೊನೆಯವರೆಗೂ ನೋವು, ತಾತ್ಸಾರ, ಅಪವಾದಗಳೇ ಹೆಚ್ಚು-ಸ್ವರ್ಗದಲ್ಲಾದರೂ ನೆಮ್ಮದಿ ಸಿಗಲಿ ಅಮ್ಮಾ…

Published

on

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಕಲಿತದ್ದು ಕೇವಲ ಎರಡನೇ ತರಗತಿವರೆಗು ಮಾತ್ರ. 9ನೇ ವಯಸ್ಸಿಗೆ ತಂದೆ ಹಾಗೂ ತಾಯಿಯನ್ನು ಕಳೆದುಕೊಳ್ಳುತ್ತಾರೆ..

ಅವರನ್ನು ಕ್ರೈಸ್ತ ಕುಟುಂಬವೊಂದು ಆರೈಕೆ ಮಾಡಿದ್ದರು.
ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು.
ತುಳು ಚಿತ್ರರಂಗದಲ್ಲಿ ಅಂದಿಗೆ ತುಳು ಸಿನಿಮಾಗಳು ಆರಂಭ ಆದವು. ಹೊಟ್ಟೆ ಹಸಿವನ್ನು ನೀಗಿಸಲು ಚಂದದ ಹೆಣ್ಣು ಮಗಳೋರ್ವಳು ಸಿನಿಮಾದಲ್ಲಿ ಅವಕಾಶ ಕೊಡುವಂತೆ ಅಂಗಲಾಚುತ್ತಾಳೆ. ಅವಳೇ ಮುದ್ದು ಮುದ್ದು ಲೀಲಾ ಕಿರಣ್ ಅಲಿಯಾಸ್ ಇಂದಿನ ಲೆಜೆಂಡೆರಿ ಆಕ್ಟ್ರೆಸ್ ಲೀಲಾವತಿ ಅಮ್ಮ. ಇದರ ಪರಿಣಾಮವಾಗಿ ‘ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಣ್ಣದ ಬದುಕಿ ಕಟ್ಟಿಕೊಂಡು ಅವಕಾಶ ಪಡೆದು ಜೀವನ ಸಾಗಿಸಬಹುದು ಎಂಬ ಕನಸಿನೊಂದಿಗೆ ಬೆಂಗಳೂರಿಗೆ  ಹೋದ ಲೀಲಮ್ಮ ಅಲ್ಲಿ ಬರಬಾರದ ಕಷ್ಟಗಳನ್ನು ಅನುಭವಿಸಿದ್ರು.

ಆಗ ಆಸರೆಯಾಗಿದ್ದೇ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮ ಕಂಪೆನಿ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು ಲೀಲಾವತಿ ಅಮ್ಮ. ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರದ್ದು ಸೂಪರ್ ಡೂಪರ್ ಕಾಂಬಿನೇಷನ್. ಇವರಿಬ್ಬರ ಅದ್ಭುತ ಅಭಿನಯವನ್ನು ಕಂಡು ರಾಜ್ – ಲೀಲಾವತಿ ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭಿಸಿದರು.

ಆದ್ರೆ ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು. ಡಾ. ರಾಜ್ ಅವರಿಗೆ ಮಾತ್ರ ಲೀಲಾವತಿ ಅಂದರೆ ಬಹಳ ಪ್ರೀತಿ..ಅವರೇ ಲೀಲಾವತಿಯವರಿಗರ  ಬರೆದ ಪತ್ರಗಳು ವೈರಲ್ ಆಗಿದ್ದವು.ಇದೀಗ ಲೀಲಾವತಿ ಅಮ್ಮ ನಮ್ಮನೆಲ್ಲಾ ಬಿಟ್ಟು ಬಾರದ ಊರಿಗೆ ತೆರಳಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಬದುಕಿದ್ದಾಗ ಅಷ್ಟೇನೂ ಸುಖ  ಕಾಣದ ಲೀಲಾವತಿ ಅಮ್ಮನವರಿಗೆ ಸ್ವರ್ಗದಲ್ಲಾದರೂ ಸುಖ ನೆಮ್ಮದಿ ಸಿಗಲಿ.

Continue Reading

LATEST NEWS

Trending