Connect with us

    International news

    ಎಲೆಕ್ಟೋರಲ್ ಬಾಂಡ್ ನೀಡಲು ಮಾರ್ಚ್ 12 ಗಡುವು ನೀಡಿದ ಸುಪ್ರೀಂ ಕೋರ್ಟ್… ! SBI ಗೆ ತೀವ್ರ ಮುಖಭಂಗ ..!

    Published

    on

    ಮಾರ್ಚ್‌ 12ರ ಒಳಗಾಗಿ ಎಲೆಕ್ಟೋರಲ್ ಬಾಂಡ್‌ಗಳ ವಿವರಗಳನ್ನು ಕೊಡಲೇಬೇಕೆಂದು ಸುಪ್ರೀಮ್ ಕೋರ್ಟ್ ಎಸ್‌ಬಿಐ ಗೆ ನಿರ್ದೇಶನ ಕೊಟ್ಟಿದೆ. ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಸಲ್ಲಿಕೆಯಾಗಿದ್ದು, ಇದರ ವಿವರವನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆದ್ರೆ ಎಸ್‌ಬಿಐ ದಾಖಲೆ ಒದಗಿಸಲು ಜೂನ್ ಅಂತ್ಯದವರೆಗೂ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

    തിരഞ്ഞെടുപ്പ് ബോണ്ട് വിവരങ്ങള്‍ ഉടന്‍ പുറത്തുവിടണമെന്ന് സുപ്രീം കോടതി; എസ്.ബി.ഐക്ക് രൂക്ഷവിമര്‍ശനം, SBI, Supreme Court, Electoral Bonds case

    ಎಸ್‌ಬಿಐ ಪರ ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಆದ್ರೆ ಸುಪ್ರೀಂ ಕೋರ್ಟ್‌ ಹೆಚ್ಚಿನ ಸಮಯಾವಕಾಶ ನೀಡಲು ಸಾದ್ಯವಿಲ್ಲ ಎಂದು ಹೇಳಿದ್ದು, ಮಾರ್ಚ್‌ 12 ಒಳಗೆ ಎಲ್ಲಾ ಮಾಹಿತಿ ಸಲ್ಲಿಸಬೇಕು ಹಾಗೂ ಮಾರ್ಚ್‌ 15 ರ ಒಳಗೆ ಚುನಾವಣಾ ಆಯೋಗ ಅದನ್ನು ಪ್ರಕಟಪಡಿಸಬೇಕು ಎಂದು ಆದೇಶ ನೀಡಿದೆ.

    ಹೀಗಾಗಿ ಎಲೆಕ್ಟೋರಲ್ ಬಾಂಡ್‌ ನೀಡಲು ಹಿಂದೇಟು ಹಾಕಿರುವ ಎಸ್‌ಬಿಐಗೆ ಭಾರಿ ಮುಖಭಂಗವಾಗಿದ್ದು, ಮಾತ್ರವಲ್ಲದೆ ಚುನಾವಣಾ ಬಾಂಡ್ ಮೂಲಕ ಅತೀ ಹೆಚ್ಚು ಹಣ ಪಡೆದಿರುವ ರಾಜಕೀಯ ಪಕ್ಷದ ಬಂಡವಾಳ ಕೂಡಾ ಬಯಲಾಗಲಿದೆ. ಬಾಂಡ್ ಮೂಲಕ ಹಣ ನೀಡಿದವರು ಯಾರು ಎಷ್ಟು ಹಣವನ್ನು ನೀಡಿದ್ದಾರೆ ಈ ಎಲ್ಲಾ ದಾಖಲೆಗಳನ್ನು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ.

    International news

    ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!

    Published

    on

    ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.


    ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.

    ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
    ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.ಕ್ಯಾಲಿಫೋರ್ನಿಯಾದಲ್ಲಿ

    ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
    ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೋಗಳಿದ್ದಾರೆ.
    ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.

    Continue Reading

    International news

    80ರ ಪ್ರಾಯದಲ್ಲೂ ಅಜ್ಜಿಯ ಟ್ರೆಂಡಿಂಗ್ ಡ್ರೆಸ್ ಗೆ ಎಲ್ಲರೂ ಬೋಲ್ಡ್ !

    Published

    on

    ಮಂಗಳೂರು : ವಯಸ್ಸು ಎಂಬುದು ಕೇವಲ ಅಂಕೆಗಳು ಅಷ್ಟೇ. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ, ಅದು ನೆಪ ಅಷ್ಟೇ. 80ರ ವಯಸ್ಸಿನಲ್ಲೂ ಫ್ಯಾಶನ್ ಲೋಕವನ್ನೆ ನಿದ್ದೆಗೆಡಿಸಿರುವ ಈ ಅಜ್ಜಿಯ ಸ್ಟೋರಿ ತುಂಬಾ ಕುತೂಹಲದಾಯಕವಾಗಿದೆ.


    ‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂದು ಕೆಲಸವ’ ಎಂಬ ಹಾಡಿನ ಸಾಲಿನಂತೆ ಈ ಅಜ್ಜಿಗೆ ತನ್ನ ಮೊಮ್ಮಗಳೇ ಸ್ಪೂರ್ತಿ. ಕೆಲವೊಬ್ಬರು ಅಜ್ಜಿಯಂದಿರು, ಮೊಮ್ಮಕ್ಕಳು ಏನೇ ಹೇಳಿದರು ಅದನ್ನು ಮಾಡುತ್ತಾರೆ. ಹಾಗೆನೇ ಈ ಅಜ್ಜಿ ಕೂಡ ತನ್ನ ಮೊಮ್ಮಗಳ ಆಸೆ ಈಡೇರಿಸಲು ಹೋಗಿ ಇಂದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


    ಜಾಂಬಿಯಾ ದೇಶದ 80ರ ಹರೆಯದ ಈ ವೃದ್ದೆಯ ಹೆಸರು ಮಾರ್ಗರೇಟಾ ಚೋಲಾ. ಕಟ್ಟಿಗೆ ಚೇರಲ್ಲಿ ಕೂತು, ಕಣ್ಣಿಗೆ ಸ್ಟೈಲಿಶ್ ಗ್ಲಾಸ್ ಹಾಕಿಕೊಂಡು, ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ, ಒಂದು ಕ್ಷಣ ರೋಮಾಂಚನಕಾರಿಯಾಗಬೇಕು. ಹಾಗಂತ ಇವರು ಯಾವುದೋ ರಾಯಲ್ ಫ್ಯಾಮೀಲಿಗೆ ಸೇರಿದವರಲ್ಲ. ಮಾರ್ಗರೇಟ್ ಚೋಲಾ 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿ, 30ನೇ ವಯಸ್ಸಿಗೆ ಮದುವೆಯಾಗಿ ಬಡತನ, ಕಷ್ಟ ಎಲ್ಲವನ್ನೂ ಕಂಡವರು.

    ಇದನ್ನೂ ಓದಿ: ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ

    ಆದರೆ ಮೊಮ್ಮಗಳಾದ ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್. ಈಕೆಗೆ, ತನ್ನ ಅಜ್ಜಿಯನ್ನು ಹೊಸ ಹೊಸ ಅವತಾರದಲ್ಲಿ ನೋಡಲು ಇಷ್ಟವಂತೆ. ಈಗಾಗೀ ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಡುತ್ತಾರೆ. ಈ ಅಜ್ಜಿಯ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಸಂದರ್ಶನ ಮಾಡಲು ಬರುತ್ತಿವೆ. ತನ್ನ ಫ್ಯಾಶನ್ ಬಗ್ಗೆ ಮಾರ್ಗರೇಟ್ ಹೆಳೋದು ಹೀಗೆ, ನಾನು ಈ ರೀತಿಯ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಇಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾ ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಮಾರ್ಗರೇಟ್ ರವರ ಈ ಫ್ಯಾಶನ್ ಫೋಟೋಗಳಿಗೆ, ಕ್ಲೀನ್ ಬೊಲ್ಡ್ ಆಗಿರುವ ಅವರ ಅಭಿಮಾನಿಗಳು ಅಜ್ಜಿಯನ್ನು ಕೊಂಡಾಡುತ್ತಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 1 ಲಕ್ಷ 13 ಸಾವಿರದಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
    ನಿಮ್ಮ ವಯಸ್ಸು, ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರು ಮತ್ತು ಗುರಿ ಎರಡು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಮಾರ್ಗರೇಟ್ ಚೋಲಾ ನಿದರ್ಶನ.

    Continue Reading

    International news

    ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು ಈ ದೇಶಗಳಲ್ಲಿ ಗಾಡಿ ಓಡಿಸಬಹುದು!

    Published

    on

    ಮಂಗಳೂರು : ಭಾರತದಲ್ಲಿ ಹಾಗೂ ವಿಶ್ವದ ಯಾವುದೇ ದೇಶವಾದರೂ ಗಾಡಿ ಓಡಿಸಬೇಕೆಂದರೆ ಡ್ರೈವಿಂಗ್ ಲೈಸನ್ಸ್ ಹೊಂದಿರುವುದು ಕಡ್ಡಾಯ. ಆದರೆ, ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಸಾಕು 7 ದೇಶಗಳಲ್ಲಿ ವಾಹನ ಚಲಾಯಿಸಬಹುದು.


    ವಿಶ್ವದ 7 ರಾಷ್ಟ್ರಗಳಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಕೂಡ ಅಲ್ಲಿ ಯಾವುದೇ ಭಯವಿಲ್ಲದೆ, ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ, ಕೆಲವೊಂದು ಕಾನೂನುಗಳು ಹಾಗೂ ನೀತಿ ನಿಯಮಗಳು ಅನ್ವಯಿಸುತ್ತವೆ.
    1. ಜರ್ಮನಿ
    ಜರ್ಮನ್ ನಲ್ಲಿ ಕೂಡ ಭಾರತದ ಡ್ರೈವಿಂಗ್ ಲೈಸನ್ಸ್ ಇದ್ದರೆ, ಅಲ್ಲಿ ಒಂದು ವರ್ಷಗಳ ಕಾಲ ವಾಹನ ಓಡಿಸಲು ಅವಕಾಶ ಇದೆ.
    2. ನ್ಯೂಜಿಲೆಂಡ್
    ನ್ಯೂಜಿಲೆಂಡ್ ನಲ್ಲೂ ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಾಹನ ಚಲಾಯಿಸಬಹುದು. ನಾವು ನ್ಯೂಜಿಲೆಂಡ್ ಗೆ ಭೇಟಿ ನೀಡಿದ ಮೊದಲ ದಿನದಿಂದ ಒಂದು ವರ್ಷದವರೆಗೆ ನ್ಯೂಜಿಲೆಂಡ್ ನ ಯಾವುದೇ ಸಿಟಿಯಲ್ಲಿಯೂ ಕೂಡ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ವಾಹನ ಚಲಾಯಿಸಬಹುದು.

    ಇದನ್ನೂ ಓದಿ: ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
    3. ಸ್ವಿಟ್ಜರ್ ಲೆಂಡ್
    ಸ್ವಿಟ್ಜರ್ ಲೆಂಡ್ ನ್ನು ಪ್ರವಾಸಿಗರ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿಗೆ ಪ್ರವಾಸಕ್ಕೆ ಹೋಗಬೇಕೆಂಬುದು ಎಷ್ಟೋ ಭಾರತೀಯರ ಕನಸು. ಈ ದೇಶಕ್ಕೆ ಹೋದಾಗ ಸುಮಾರು ಒಂದು ವರ್ಷಗಳ ಕಾಲ ನೀವು ಭಾರತದ ಡ್ರೈವಿಂಗ್ ಲೈಸನ್ಸ್ ಬಳಸಿ ಅಲ್ಲಿ ಕಾರು ಮತ್ತು ಬೈಕ್ ಗಳನ್ನು ಬಾಡಿಗೆಗೆ ಪಡೆದು ಓಡಿಸಬಹುದು.
    4. ಆಸ್ಟ್ರೇಲಿಯಾ
    ಈ ದೇಶದಲ್ಲೂ ಕೂಡ ಭಾರತದ ಡ್ರೈವಿಂಗ್ ಲೈಸನ್ಸ್ ಹೊಂದಿರುವವರು ವಾಹನ ಚಲಾಯಿಸಬಹುದು. ಆಸ್ಟ್ರೇಲಿಯಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಮಾತ್ರ ಪರವಾನಿಗೆ ಇದೆ. ಆದರೆ, ನೀವು ಇಲ್ಲಿನ ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ವಾಹನ ಚಲಾಯಿಸಬಹುದು.
    5. ಕೆನಡಾ
    ಭಾರತದ ಡ್ರೈವಿಂಗ್ ಲೈಸನ್ಸ್ ಮೂಲಕ ಕೆನಡಾದ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸಬಹುದು. ಈ ದೇಶದಲ್ಲಿ ಕೇವಲ 60 ದಿನಗಳವರೆಗೆ ಮಾತ್ರ ಭಾರತೀಯರು ತಮ್ಮದೇ ಡ್ರೈವಿಂಗ್ ಲೈಸೆನ್ಸ್ ಮೂಲಕ ವಾಹನ ಚಲಾಯಿಸಬಹುದು.
    6. ಇಂಗ್ಲೇಂಡ್
    ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಈ ದೇಶದಲ್ಲಿ ಒಂದು ವರ್ಷದವರೆಗೆ ನಿರಾತಂಕವಾಗಿ ವಾಹನ ಚಲಾಯಿಸಬಹುದು.
    7. ಯುಎಸ್ಎ
    ಅಮೆರಿಕಾದಲ್ಲಿ ನೀವೇನಾದರೂ ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ, ಅಮೆರಿಕಾದ ಐಷಾರಾಮಿ ರೋಡ್ ಗಳಲ್ಲಿ ಆರಾಮವಾಗಿ ವಾಹನ ಚಲಾಯಿಸಬಹುದು. ಆದರೆ, ನೀವು ಅಮೆರಿಕಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಭಾರತದ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ವಾಹನ ಚಲಾಯಿಸಬಹುದು. ನಂತರ ವಾಹನ ಓಡಿಸಬೇಕೆಂದರೆ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನ್ನು ಹೊಂದಿರಲೇಬೇಕು.

    Continue Reading

    LATEST NEWS

    Trending