Connect with us

MANGALORE

ಮಾಣಿ ಸತೀಶ್ ಆಚಾರ್ಯ ರಿಗೆ ವಾಗೀಶ್ವರೀ ಸಂಮಾನ..

Published

on

ಮಂಗಳೂರು : ಖ್ಯಾತ ಯಕ್ಷಗಾನ ಕಲಾವಿದ,ತಾಳಮದ್ದಳೆ ಅರ್ಥಧಾರಿ, ಕಲಾಗುರು,ಸಂಘಟಕ, ಸತೀಶ್ ಆಚಾರ್ಯ ಮಾಣಿ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು.

” ವಾಗೀಶ್ವರಿ ಕಾಲವರ್ಧಕ ಸಂಘ ಶತಮಾನೋತ್ಸವ ಆಚರಿಸುತ್ತಿದೆ ಅಂದರೆ ನಿಜವಾಗಿಯೂ ಅಪೂರ್ವ ಸಾಧನೆ. ಧನ ಸಂಗ್ರಹ ಮಾಡಬಹುದು, ಜನ ಸಂಗ್ರಹ ಕಷ್ಟ. ಆದರೆ ಶ್ರೀ ವಾಗೀಶ್ವರೀ
ಯಕ್ಷಗಾನ ಸಂಘದಲ್ಲಿ ನಿರಂತರ ವಾಗಿ 100 ವರ್ಷ ಗಳ ಅದೆಷ್ಟೋ ಕಲಾವಿದರು ಸೇವೆ ಸಲ್ಲಿಸಿ ಈ ಸಂಘವನ್ನು ಬೆಳೆಸಿದ್ದಕ್ಕೆ ಅವರೆಲ್ಲರೂ ವಂದನೀಯರು” ಎಂದು ತಮ್ಮ ಹೇಮಾ ಡಿಸ್ಟ್ರಿಬ್ಯೂಟರ್ಸ್ ನ ಮಾಲಕ ಅಶೋಕ್ ಕುಮಾರ್ ಹೆಗ್ಡೆ ಅವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಮುಂಡಪ್ಪ ಕೊಮ್ಮುಂಜೆ ಸಂಸ್ಮರಣೆ

ಕೀರ್ತಿಶೇಷ ಕೆ. ಮುಂಡಪ್ಪ ನವರ ಸಂಸ್ಮರಣೆಯನ್ನು ಸಂಘದ ಸದಸ್ಯರು, ಭಾಗವತರಾದ ಅಶೋಕ್ ಬೋಳೂರ್ ರವರು ಮಾಡಿದರು.
ಯಕ್ಷಗಾನದಲ್ಲಿ ಹಾಸ್ಯ ವೇಷಧಾರಿಯಾಗಿ, ಬಣ್ಣದ ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿದ್ದವರು.
ಮುಂದೆ ಯಕ್ಷಗಾನದ ಪರಿಕರಗಳಾದ ಚೆಂಡೆ, ಮದ್ದಳೆ ತಯಾರಿಯ ಕಾರ್ಯಕ್ಕೆ ತೊಡಗಿಸಿಕೊಂಡರು.ಮಂಗಳೂರು ನಗರದ ಪರಿಸರದಲ್ಲಿ ಪರಿಕರಗಳ ತಯಾರಿಯಲ್ಲಿ ಹಲವು ಶಿಷ್ಯರನ್ನು ನೀಡಿದ ಕೀರ್ತಿ ಮುಂಡಪ್ಪಣ್ಣನವರಿಗೆ ಸಲ್ಲುತ್ತದೆ.
ನಮ್ಮ ಸಂಘದ ಜತೆ ನಿಕಟ ಸಂಬಂಧ ಹೊಂದಿದ್ದ ಮುಂಡಪ್ಪಣ್ಣ ನವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.

ಮಾಣಿ ಸತೀಶ್ ಆಚಾರ್ಯ ರ ಅಭಿನಂದನೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ. ಎಸ್. ಭಂಡಾರಿ ಯವರು ನಿರ್ವಹಿಸಿದರು. ” ಬಂಗಾರದ ಕುಸುರಿ ಕೆಲಸಕ್ಕೆ ಮಂಗಳೂರಿಗೆ ಬಂದು ಎಳವೆಯಲ್ಲಿಯೇ ಶೇಣಿ, ತೆಕ್ಕಟ್ಟೆ, ಪ್ರಭಾಕರ ಜೋಶಿ ಯವರ ಅರಥಗಾರಕೆಯನ್ನು ನೋಡಿ ಪ್ರೇರೇಪಣೆ ಗೊಂಡು, ಕೀರ್ತಿಶೇಷ ಎನ್.ಮಾಧವ ಆಚಾರ್ಯ ರ ಶಿಷ್ಯರಾಗಿ ಈಗ ಸಮರ್ಥ ತಾಳಮದ್ದಳೆ ಅರ್ಥಧಾರಿ ಯಾಗಿ, ದೇರಣ್ಣ ಅಮೀನ್ ಅವರಿಂದ ನಾಟ್ಯ ಕಲಿತು ವೇಷಧಾರಿಯಾಗಿ, ನಾಟ್ಯ- ಅರ್ಥಗಾರಿಕೆ ಯನ್ನು ಅದೆಷ್ಟೋ ಮಕ್ಕಳಿಗೆ ಕಲಿಸಿ ಯಕ್ಷಗುರು ಎಂದೆನಿಸಿ, ಹಲವಾರು ಸಂಘಗಳಿಂದ ಹಲವಾರು ಬಿರುದು ಸನ್ಮಾನ ಗಳನ್ನು ಪಡೆದು ಸಮರ್ಥ ಕಲಾವಿದ ಎಂದೆನಿಸಿ, ಮುಂದಿನ ಯಕ್ಷಗಾನ ಪೀಳಿಗೆಗೂ ಕೊಡುಗೆ ಯನ್ನು ನೀಡಿದವರು ಸತೀಶ್ ಆಚಾರ್ಯ ಮಾಣಿ ” ಎಂದರು.ಪುರಂದರ ರವರು ಸಂಮಾನ ಪತ್ರ ವಾಚಿಸಿದರು.

ಶ್ರೀ ವಾಗೀಶ್ವರೀ ಕಲಾವರ್ಧಕ ಸಂಘದ 12 ನೆಯ ಸರಣಿಯ ಸನ್ಮಾನಕ್ಕೆ ಉತ್ತರಿಸಿದ ಶ್ರೀ ಸತೀಶ್ ಆಚಾರ್ಯರು “ಇಂದು ನಾನು ಈ ಮಟ್ಟದ ಕಲಾವಿದ ನಾಗಿ ಬೆಳೆಯಲು ವಾಗೀಶ್ವರಿ ಸಂಘವೇ ಕಾರಣ ಮತ್ತು ಈ ಸಂಘದಲ್ಲಿ ನನ್ನ ಗುರು ಮಾಧವ ಆಚಾರ್ಯ ರ ಮಾರ್ಗದರ್ಶನ, ಬಿ. ಟಿ. ಕುಲಾಲ್, ಕದ್ರಿ ನವನೀತ ಶೆಟ್ಟಿ, ಪಿ.ವಿ.ಪರಮೇಶ್ ಮೊದಲಾದ ಹವ್ಯಾಸಿ ಕಲಾವಿದರೊಂದಿಗಿನ ತನ್ನ ಸಾಹಚರ್ಯವನ್ನು ನೆನಪಿಸಿಕೊಂಡರು. ಸುದೀರ್ಘ ಕಾಲ ತಾಳಮದ್ದಳೆ ಮತ್ತು ಯಕ್ಷಗಾನದಲ್ಲಿ ತಾನು ಸೇವೆಯನ್ನು ಸಲ್ಲಿಸಿದ್ದೇನೆ.
ಇಂದಿನ ಸಮ್ಮಾನ ಅವಿಸ್ಮರಣೀಯ ಎಂದರು.

ಮುಖ್ಯ ಅತಿಥಿ ಜಗನ್ನಾಥ ಭಂಡಾರಿ ಯವರು ಶುಭ ಹಾರೈಸಿದರು. ಪ್ರಭಾಕರ್ ಕಾಮತರು ಭಾಗವಹಿಸಿದ್ದರು. ಶ್ರೀ ಪ್ರಭಾಕರ ಕಾಮತರು ಈ ಯಕ್ಷಗಾನಕ ಸಂಘದ ಶತ ಮಾನೋತ್ಸವ ಆಚರಿಸಲು ಈವರೆಗೆ ಪ್ರತಿ ವಾರ ಭಾಗವಹಿಸಿದ ಕಲಾವಿದರ ಮತ್ತು ಪ್ರೇಕ್ಷಕರ ಕೊಡುಗೆ ಅಪಾರ ಎಂದರು .ನಾಗೇಶ ಪ್ರಭು, ಶಿವಪ್ರಸಾದ್ ಪ್ರಭು ,ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು ,ಪ್ರಭಾಕರ ಕಾಮತ್ ಉಪಸ್ಥಿತರಿದ್ದರು.
ಸಿ .ಎಸ್. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ “ಸೀತಾನ್ವೇಷಣೆ” ತಾಳಮದ್ದಳೆ ಜರಗಿತು.

DAKSHINA KANNADA

Sullia : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸರ್ಕಾರಿ ಅಧಿಕಾರಿ

Published

on

ಸುಳ್ಯ : ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಸುಳ್ಯದ ಅರಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿ ಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಢಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಕೆಲವು ವಾಹನ ಸವಾರರು ಸಾರ್ವಜನಿಕರ ಸಹಕಾರದಿಂದ ಅಡ್ಡಗಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Continue Reading

DAKSHINA KANNADA

ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!

Published

on

ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ‌ಮಾಹಿತಿ ನೀಡಿದ್ದಾರೆ.

ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Continue Reading

DAKSHINA KANNADA

ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ

Published

on

ಮಂಗಳೂರು: ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ  ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು
ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ  ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, “ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ” ಎಂದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ , ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.

Continue Reading

LATEST NEWS

Trending