Connect with us

    bangalore

    Manglore: ಡಾ.ಸದಾನಂದ ಪೂಜಾರಿಗೆ ಡಾ.ಬಿ.ಸಿ.ರಾಯ್ ಪ್ರಶಸ್ತಿ

    Published

    on

    ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ  ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾ.ಸದಾನಂದ ಪೂಜಾರಿಯವರಿಗೆ  ಜು.1ರಂದು ರಾಜ್ಯ ಸರ್ಕಾರ ಡಾ.ಬಿ.ಸಿ.ರಾಯ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 

    ಮಂಗಳೂರು:  ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ  ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾ.ಸದಾನಂದ ಪೂಜಾರಿಯವರಿಗೆ  ಜು.1ರಂದು ರಾಜ್ಯ ಸರ್ಕಾರ ಡಾ.ಬಿ.ಸಿ.ರಾಯ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

    ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ ವೈದ್ಯರಿಗೆ ನೀಡುವ ಪ್ರತಿಷ್ಟಿತ ಡಾ.ಬಿ.ಸಿ.ರಾಯ್ ರಾಜ್ಯ ಮಟ್ಟದ ಪ್ರಶಸ್ತಿಯನ್ನು  ಡಾ.ಸದಾನಂದ ಪೂಜಾರಿಯವರಿಗೆ ನೀಡಿ ಗೌರವಿಸಲಾಗಿದೆ.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಶದ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ, ಆಯುಕ್ತ ರಂದಿಪ್, ಕೆ.ಜಿ.ಎಮ್.ಒ ಅಧ್ಯಕ್ಷ ವಿವೇಕ್ ದೊರೈ ಇವರ ಸಮ್ಮುಖದಲ್ಲಿ ಸದಾನಂದ ಪೂಜಾರಿಯವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

     

    bangalore

    ಕೇರಳ ಹುಡುಗ, ಅಸ್ಸಾಂ ಹುಡುಗಿ ಪ್ರೇಮ್ ಕಹಾನಿ; ಪ್ರೇಯಸಿಯ ಕೊಂ*ದು ಪ್ರೇಮಿ ಪರಾರಿ

    Published

    on

    ಮಂಗಳೂರು/ಬೆಂಗಳೂರು: ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಅಪಾರ್ಟ್ಮೆಂಟ್‌ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊ*ಲೆ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ಇಂದಿರಾನಗರ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

    ಕೊ*ಲೆಯಾದ ಯುವತಿ ಅಸ್ಸಾಂ ರಾಜ್ಯದ ಮಾಯಾ. ಆರೋಪಿಯನ್ನು ಕೇರಳದ ಆರವ್ ಅನಾಯ್ ಎಂದು ಗುರುತಿಸಲಾಗಿದೆ.

    ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯೊoದರಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಉಂಟಾದ ಪರಿಚಯದಿಂದ ಸ್ನೇಹ ಬೆಳೆದು ಪ್ರೀತಿಯಾಗಿತ್ತು. ನಂತರ, ಇಬ್ಬರೂ ಮನೆಯನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರಿಂದ ನಗರದ ವಿವಿಧೆಡೆ ಸುತ್ತಾಡುತ್ತಿದ್ದರು. ನಾಲ್ಕೈದು ದಿನಗಳ ಹಿಂದೆ ಇಂದಿರಾನಗರದ ದಿ ರಾಯಲ್ ಲಿವಿಂಗ್ ಎಂಬ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು.

    ಈ ವೇಳೆ, ಏನೋ ಕ್ಷುಲ್ಲಕ ಕಾರಣಕ್ಕೆ ಮೂರು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಆಗ ಉಂಟಾದ ಜಗಳದ ವೇಳೆ ಪ್ರೇಮಿ ಆರವ್ ತನ್ನ ಪ್ರೇಯಸಿ ಮಾಯಾಗೆ ಚಾ*ಕುವಿನಿಂದ ಇರಿದು ಕೊ*ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕೊ*ಲೆ ನಡೆದು ಮೂರು ದಿನಗಳ ನಂತರ ಮನೆಯಿಂದ ದು*ರ್ವಾಸನೆ ಬಂದ ನಂತರ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಚಾ*ಕುವಿನಿಂದ ಇರಿದು ಕೊ*ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    Continue Reading

    bangalore

    ಬಿಗ್ ಬಾಸ್ ನಿಂದ ಧರ್ಮ ಎಲಿಮಿನೆಟ್ ಆಗಿದ್ದು ಯಾಕೆ ಗೊತ್ತಾ ?

    Published

    on

    ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ರ ರಿಯಾಲಿಟಿ ಶೋ 119ನೇ ದಿನಕ್ಕೆ ಕಾಲಿಡುತ್ತಿದೆ. ಅದರ ನಡುವೆ ವಾರ ವಾರ ಎಲಿಮಿನೇಟ್ ಪ್ರಕ್ರಿಯೆ ತೀವ್ರ ಕೂತುಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ನಿಂದ ಧರ್ಮ ಕೀರ್ತಿರಾಜ್ ಎಲಿಮೀನೆಟ್ ಆಗಿ ಹೊರಬಂದಿದ್ದಾರೆ.


    ಸದಾ ನಗುಮುಖದಲ್ಲೇ ಕಾಣಿಸಿಕೊಳ್ಳುವ ಧರ್ಮ, ಯಾರ ತಂಟೆಗೂ ಹೊಗುತ್ತಿರಲಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದ್ದರು. ಆದರೆ ಧರ್ಮ ಮತ್ತು ಅನುಷಾ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಅನುಷಾ ಈ ಮೊದಲೇ ಎಲಿಮಿನೇಟ್ ಆಗಿದ್ದರು. ಇದು ಧರ್ಮ ಅವರಿಗೆ ಬೇಸರ ಮೂಡಿಸಿತ್ತು.
    ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಚೈತ್ರಾ ಉಳಿದುಕೊಂಡಿದ್ದರು. ಫೈನಲ್ ಆಗಿ ಧರ್ಮ ಮನೆಯಿಂದ ಹೊರಬಂದರು. ಧರ್ಮ ಬೇಸರದಿಂದಲೇ ಹೊರನಡೆದರು.

    ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

    ಧರ್ಮ ಸದಾ ಕೂಲ್ ಆಗಿಯೇ ಇರುತ್ತಾರೆ. ಅವರು ಯಾವುದೇ ಕಿತ್ತಾಟಕ್ಕೂ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇನ್ನೊಂದು ಕಡೆ, ಧರ್ಮ ಎಲ್ಲಿಯೂ ಕೂಡ ಹೈಲೈಟ್ ಆಗುತ್ತಿರಲಿಲ್ಲ. ಇವರಿಗಿಂತ ನಂತರ ವೈಲ್ಡ್ ಕಾರ್ಡ್ ನಲ್ಲಿ ಬಂದ ಹನುಮಂತ, ರಜತ್ ಹಾಗೂ ಶೋಭಾ ಶೆಟ್ಟಿ ಈಗಗಾಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
    ಧರ್ಮ ಶಾಂತತೆಯ ಸ್ವರೂಪವನ್ನು ಹೊಂದಿರುವ ವ್ಯಕ್ತಿತ್ವ. ಈ ಮೊದಲು ಎಲಿಮಿನೇಟ್ ಆಗಿರುವ ಲಾಯರ್ ಜಗದೀಶ್ ವಿರುದ್ದ ಇಡೀ ಮನೆಯೇ ತಿರುಗಿ ಬಿದ್ದಾಗಲೂ ಧರ್ಮ ಫೈಟ್ ಗೆ ಹೋಗಿರಲಿಲ್ಲ. ಇದು ಅವರ ಮುಗ್ದತೆ ಮತ್ತು ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ.
    ಬಿಗ್ ಬಾಸ್ ಮನೆ ಎಂದರೆ ನೆನಪಾಗುವುದೇ ಜಗಳ, ಕೋಪ ಮತ್ತು ಮಾತುಗಾರಿಕೆ. ಎಲ್ಲೋ ಒಂದು ಕಡೆ ಧರ್ಮ ಅವರಿಗೆ ತಮ್ಮ ತಾಳ್ಮೆಯೇ ಮುಳುವಾಗಿ ಎಲಿಮಿನೇಟ್ ಆಗಲು ಕಾರಣವಾಯಿತು ಎಂದು ಹೇಳಬಹುದು.

     

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending