Connect with us

    LATEST NEWS

    ‘ಮಂಗಳೂರು ದಸರಾ’ ಪೂರ್ವಸಿದ್ಧತೆಯಾಗಿ ಸ್ವಚ್ಛತಾ ಅಭಿಯಾನ

    Published

    on

    ಮಂಗಳೂರು: ಇದೇ ಅ.7ರಿಂದ ‘ಮಂಗಳೂರು ದಸರಾ’ ಆರಂಭವಾಗಲಿದೆ. ಈಗಾಗಲೇ ನಗರದಲ್ಲಿ ದಸರಾ ಸಂಭ್ರಮದ ಕಳೆ ಕಟ್ಟಿದ್ದು, ಸಿದ್ಧತೆಗಳು ನಡೆಯತೊಡಗಿವೆ. ಮೈಸೂರು ದಸರಾದ ಬಳಿಕ ದೇಶ ವಿದೇಶಗಳಲ್ಲೇ ಜನಪ್ರಿಯವಾಗಿರುವ ಮಂಗಳೂರು ದಸರಾದ ವೈಭವ ಕಳೆದ ವರ್ಷ ಕೊರೊನಾದಿಂದ ಮಸುಕಾಗಿತ್ತು.

    ಆದರೆ ಈ ಬಾರಿ ದಸರಾ ನಡೆಸಲು ಜಿಲ್ಲಾಡಳಿತ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವ ಸಿದ್ಧತಾ ಕೆಲಸಗಳು ಆರಂಭಗೊಂಡಿವೆ. ಗಾಂಧಿ ಜಯಂತಿಯ ದಿನದಂದು ಈ ಸ್ವಚ್ಛತಾ ಆಂದೋಲನ ಆರಂಭವಾಗಿದೆ.


    ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಮಂಗಳೂರು ದಸರಾ 2021ರ ಪೂರ್ವಭಾವಿಯಾಗಿ ಹಿನ್ನೆಲೆಯಲ್ಲಿ ಶ್ರೀ ಕುದ್ರೋಳಿ ಗೋಕರ್ಣನಾಥ ಸೇವಾ ದಳದ ವತಿಯಿಂದ ರಸ್ತೆ ಬದಿ ಸ್ವಚ್ಛತಾ ಕಾರ್ಯ ಇಂದು ಬೆಳಿಗ್ಗೆ ಲೇಡಿಹಿಲ್‌ ವೃತ್ತದಿಂದ ಚಿತ್ರಾ ಟಾಕೀಸ್ ವರೆಗೆ ನಡೆಯಿತು.

    ‘ನಮ್ಮ ದಸರಾ ನಮ್ಮ ಸುರಕ್ಷೆ’ ಎನ್ನುವ ಧ್ಯೇಯವಾಕ್ಯದಡಿ ಈ ಬಾರಿ ದಸರಾ ನಡೆಯಲಿದ್ದು, ಸ್ವಚ್ಛತೆ ಕೆಲಸ ನಡೆಯುತ್ತಿದೆ ಎಂದು ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿ ಖಜಾಂಚಿ ಆರ್‌ ಪದ್ಮರಾಜ್‌ ಹೇಳಿದ್ದಾರೆ.

    FILM

    ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    Published

    on

    ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಟ ದರ್ಶನ್ ಅವರಿಗೆ ಸೇರಿದ್ದೆನ್ನಲಾದ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮ್ಯಾನೇಜರ್ ಮಾನಸಿಕ ಖಿನ್ನತೆಗೆ ಒಳಗಾಗಿ ಡೆ*ತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ.


    ಶ್ರೀಧರ್ ಮೃತ ಮ್ಯಾನೇಜರ್. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮ್ಯಾನೇಜರ್ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದರು. ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್‌ನಲ್ಲಿ ಶ್ರೀಧರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆತ, ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಶ್ರೀಧರ್ ಮೃ*ತದೇಹವನ್ನು ನೋಡಿದ್ದ ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ.

    ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಮ್ಯಾನೇಜರ್ ಶ್ರೀಧರ್ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಮೃ*ತಪಟ್ಟಿರುವುದು ಕಂಡು ಬಂದಿದೆ. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು, ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಶ*ವವಾಗಿ ಪತ್ತೆಯಾಗಿದ್ದಾರೆ.
    ಡೆತ್ ನೋಟ್ ಪತ್ತೆಯಾಗಿದ್ದು, ಈ ಘಟನೆಯ ಬೆನ್ನಲ್ಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ : WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    ಡೆತ್ ನೋಟ್ ನಲ್ಲಿ ಏನಿದೆ?

    ದರ್ಶನ್ ಫಾರ್ಮ್‌ಹೌಸ್ ಮ್ಯಾನೇಜರ್ ಸಾವಿಗೂ ಮುನ್ನ ಬರೆದಿಟ್ಟಿರುವ ಡೆ*ತ್‌ನೋಟ್ ಪತ್ತೆಯಾಗಿದೆ. ಡೆತ್ ನೋಟ್ ಅನ್ನು ಸ್ವತಃ ತಾನೇ ಬರೆದಿಟ್ಟಿರುವ ಮ್ಯಾನೇಜರ್ ಶ್ರೀಧರ್ ಡೆ*ತ್ ನೋಟ್ ನಲ್ಲಿ ಹೆಬ್ಬೆಟ್ಟು ಕೂಡಾ ಒತ್ತಿದ್ದಾರೆ.

    ಅದರಲ್ಲಿ ಯಾವುದೋ ಕಾರಣದಿಂದ ನನ್ನ ಪರ್ಸನಲ್ ಒಂಟಿತನ ಕಾಡುತ್ತಿದೆ. ಬದುಕುವ ಆಸೆಯಿಲ್ಲ, ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾ*ವಿನ ಕಾರಣ ಹಾಗೂ ಹಿನ್ನೆಲೆಯನ್ನು ಇಟ್ಟುಕೊಂಡು ಸ್ನೇಹಿತರು, ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಕೊಡಬೇಡಿ. ನಾನು ಯಾರಿಗೆ ಫೋನ್ ಮಾಡಿದ್ದೆ, ಅದು ಇದು ಎಂದು ಯಾರಿಗೂ ಪೊಲೀಸರು ತೊಂದರೆ ಕೊಡಬೇಡಿ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಸಹೋದರಿಯರು ಸೇರಿ ಎಲ್ಲರಿಗೂ ಹೇಳುತ್ತಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.

    Continue Reading

    LATEST NEWS

    WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

    Published

    on

    ಮಂಗಳೂರು/ ಮಹಾರಾಷ್ಟ್ರ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವನ್ನೂ ಪ್ರದರ್ಶನಕ್ಕಾಗಿ, ಶೋಕಿಗಾಗಿ ಹಂಚಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ರೀಲ್ಸ್ ಮಾಡೋದು ಕಾಮನ್ ಆಗೋಗಿದೆ. ವೀವ್ಸ್ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಈ ರೀಲ್ಸ್ ಹುಚ್ಚು ಪ್ರಾಣಕ್ಕೆ ಕುತ್ತಾಗಿರೋ ಉದಾಹರಣೆಗಳಿಗೇನೂ ಕಮ್ಮಿಯಿಲ್ಲ ಬಿಡಿ. ಇದೀಗ ಯುವತಿಯೊಬ್ಬಳು ಕಾರು ಚಲಾಯಿಸುವ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಘಟನೆ ನಡೆದಿದೆ.


    ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದ ಸುಲಿಭಂಜನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್ ​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ್ದಾಳೆ. ಪರಿಣಾಮ ಕಾರು ಕಂದಕಕ್ಕೆ ಬಿದ್ದಿದೆ. ಪರಿಣಾಮ ಗಂಭೀ*ರವಾಗಿ ಗಾಯಗೊಂಡ ಯುವತಿ ಇಹಲೋಕ ತ್ಯಜಿಸಿದ್ದಾಳೆ.

    ಶ್ವೇತಾ ಸುರ್ವಾಸೆ(23) ಮೃತ ಯುವತಿ. ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾ*ವನ್ನಪ್ಪಿದ್ದಾಳೆ. ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.

    ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ. ಶ್ವೇತಾಗೆ ಕಾರು ಓಡಿಸುವಾಗ ರೀಲ್ಸ್ ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಹೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು. ಈ ವೇಳೆ ಶ್ವೇತಾ ಎಕ್ಸಲೇಟರ್ ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

    ಇದನ್ನೂ ಓದಿ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

    ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಎಕ್ಸಲರೇಟರ್ ಒತ್ತಿದ್ದರಿಂದ ಈ ಅವಘ*ಡ ಸಂಭವಿಸಿದೆ.

    ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ, ಯುವತಿ ಜೀವಾಂತ್ಯವಾಗಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ವೈರಲ್ ಆಗಿದೆ.

    Continue Reading

    LATEST NEWS

    ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

    Published

    on

    ಮಂಗಳೂರು/ಹಾಸನ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಬಳಿಕ ಪತಿ ನೇ*ಣಿಗೆ ಶರಣಾಗಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ಪತಿ ಹರೀಶ್ (50,) ಪತ್ನಿ ಜಾಜಿ (45) ಮೃ*ತಪಟ್ಟವರು.
    ದಂಪತಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸೋಮವಾರ (ಜೂ.17) ರಾತ್ರಿಯೂ ಮನೆಯಲ್ಲಿ ದಂಪತಿ ನಡುವೆ ಕಲಹವಾಗಿದೆ.

    ಈ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಹರೀಶ್​​ ಪತ್ನಿ ಜಾಜಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹ*ತ್ಯೆ ಮಾಡಿದ್ದಾನೆ. ಬಳಿಕ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ : ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್..!

    ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending