Wednesday, May 18, 2022

ಉತ್ತರಪ್ರದೇಶದ ಯೋಜನೆಗೆ ಕಂಗನಾ ರಣಾವತ್‌ ಪ್ರಚಾರ ರಾಯಭಾರಿ

ಲಕ್ನೋ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ.


ಮಾಹಿತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ನವನೀತ್ ಸೆಹಗಲ್ ಈ ಕುರಿತು ಟ್ವೀಟ್ ಮಾಡಿದ್ದು ‘ ಖ್ಯಾತ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶ ಸಿಎಂ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದರು.

ಅವರಿಗೆ ಒಂದು ಜಿಲ್ಲೆ – ಒಂದು ಉತ್ಪನ್ನ ಯೋಜನೆಯ ಉತ್ಪನ್ನವನ್ನು ಸಿಎಂ ನೀಡಿದ್ದಾರೆ. ಕಂಗನಾ ಅವರು ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ’ ಎಂದಿದ್ದಾರೆ.
ರಾಜ್ಯದ 75 ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ವಿಶೇಷ ಉತ್ಪನ್ನಕ್ಕೆ ಸರ್ಕಾರದ ಬೆಂಬಲ ನೀಡಿ, ಉತ್ಪಾದನೆಯನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

ಬಂಟ್ವಾಳ: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಅಳಿಕೆ ಎಂಬಲ್ಲಿ ಇಂದು ನಡೆದಿದೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಮೃತಳನ್ನು ವಿಠಲ್ ಜೇಸೀಸ್ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ...

ಕಾಂಗ್ರೆಸ್‌ ಪಕ್ಷಕ್ಕೆ ‘ಕೈ’ ಕೊಟ್ಟ ಹಾರ್ದಿಕ್‌ ಪಟೇಲ್‌: ಟ್ವಿಟ್ಟರ್‌ನಲ್ಲಿ ಘೋಷಣೆ

ಅಹಮದಾಬಾದ್‌: ಕಾಂಗ್ರೆಸ್‌ ಯುವ ಮುಖಂಡ ಹಾಗೂ ಗುಜರಾತ್‌ನ ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಪಕ್ಷಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರನ್ನು ಭೇಟಿಯಾಗಿಮಾತುಕತೆ ನಡೆಸಿದ...

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗೆ ಜಾಮೀನು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೇರರಿವಾಳನ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ. ಆರ್....