Wednesday, October 5, 2022

ಮಂಗಳೂರಿನ ದೇವಾಲಯದಲ್ಲಿ ದೇವರ ಜೊತೆ ಗಾಂಧಿ ತಾತನಿಗೂ ಮೂರು ಹೊತ್ತಿನ ಪೂಜೆ

ಮಂಗಳೂರು: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 153ನೇ ಜನ್ಮ ದಿನದ ಸಂಭ್ರಮ. ದೇಶದಾದ್ಯಂತ ರಾಷ್ಟ್ರಪಿತನ ಗುಣಗಾನವನ್ನು ಮಾಡಲಾಗುತ್ತಿದೆ. ಕೆಲವರು ಕೇವಲ ಗಾಂಧೀತಾತನನ್ನು ಅಕ್ಟೋಬರ್ 2ರ ಗಾಂಧಿಜಯಂತಿ ಎನ್ನುವ ಒಂದೇ ದಿನಕ್ಕೆ ಸೀಮಿತ ಮಾಡಿದರೆ ಮಂಗಳೂರಿನ ಗರಡಿಯಲ್ಲೊಂದು ಕಡೆ ನಿತ್ಯವೂ ರಾಷ್ಟ್ರಪಿತನಿಗೆ ಪೂಜೆ ಸಲ್ಲಿಕೆಯಾಗುತ್ತದೆ.

 ಪಂಪ್ವೆಲ್‌ ಬಳಿಯ ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ್ಯರ ಗರಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಾಂಧಿತಾತನ ಪುತ್ಥಳಿಗೆ ನಿತ್ಯವೂ ಮೂರು ಹೊತ್ತಿನ ಪೂಜೆ ಸಲ್ಲಿಕೆಯಾಗುತ್ತದೆ. ಇಲ್ಲಿ ಕ್ಷೇತ್ರದಲ್ಲಿ ಹೇಗೆ ತ್ರಿಕಾಲ ಪೂಜೆ ಸಲ್ಲಿಕೆಯಾಗುತ್ತದೆಯೋ ಅದೇ ರೀತಿಯಲ್ಲಿ ಗಾಂಧಿತಾತನಿಗೂ ಪೂಜೆ ಸಲ್ಲಿಕೆಯಾಗುತ್ತದೆ.
ಮಂಗಳೂರಿನ ಈ ಕ್ಷೇತ್ರದಲ್ಲಿ ಮಹಾತ್ಮಾ ಗಾಂಧಿ ವಿಶೇಷ ಸ್ಥಾನಮಾನ ನೀಡಿರುವ ಹಿಂದೆ ಒಂದು ಇತಿಹಾಸವಿದೆ. ಮಂಗಳೂರಿನ ಸ್ವಾತಂತ್ರ ಹೋರಾಟಗಾರ ಹಾಗೂ ಗಾಂಧೀಜಿಯವರ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ನರ್ಸಪ್ಪ ಸಾಲಿಯಾನ್.


ಗಾಂಧಿ ತತ್ವಗಳನ್ನು ಪಸರಿಸುವ ಕಾರ್ಯದಲ್ಲೂ ಇವರು ತೊಡಗಿಕೊಂಡಿದ್ದವರು. ದೇಶದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಮಂಗಳೂರಿಗೂ ಭೇಟಿ ನೀಡಿದ್ದರು. ಮಂಗಳೂರಿನಲ್ಲಿ ಗಾಂಧಿ ಹೋರಾಟಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ಹೋರಾಟದ ಮುಂಚೂಣಿಯಲ್ಲಿ ಗಾಂಧಿವಾದಿ ನರ್ಸಪ್ಪ ಸಾಲಿಯಾನರೂ ಇದ್ದರು.


1948 ನೇ ಇಸವಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವಿನ ಮೂರ್ತಿ ಜೊತೆಗೆ ಮಹಾತ್ಮಾ ಗಾಂಧೀಜಿಯವರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು.

ಅಂದಿನಿಂದ ಇಂದಿನವರೆಗೂ ಗಾಂಧೀಜಿಯವರಿಗೆ ಇಲ್ಲಿ ಪ್ರತಿನಿತ್ಯ ತ್ರಿಕಾರ ಪೂಜೆ ನಡೆಯುತ್ತದೆ.

ಗಾಂಧೀಜಿ ಮೂರ್ತಿ ಮುಂದೆ ಹಾಲು ಹಾಗೂ ಬಾಳೆಹಣ್ಣು ಇಟ್ಟು ಆರತಿ ಎತ್ತಿ ಪೂಜೆ ಸಲ್ಲಿಸಲಾಗುತ್ತದೆ. ಅಂದಿನಿಂದ ಇಲ್ಲಿ ಮಹಾತ್ಮಾ ಗಾಂಧಿಗೆ ಈ ವಿಶೇಷ ಗೌರವ ಸಲ್ಲಿಕೆಯಾಗುತ್ತಿದೆ.
ಈ ಕ್ಷೇತ್ರಕ್ಕೆ ನಿತ್ಯ ನೂರಾರು ಭಕ್ತಾಧಿಗಳು ಬರುತ್ತಾರೆ.

ದೇವಸ್ಥಾನದ ಪ್ರಾಂಗಣದಲ್ಲಿರುವ ಗಾಂಧಿ ಗುಡಿಗೆ ಕೈ ಮುಗಿಯುತ್ತಾರೆ. ಗಾಂಧೀಜಿಯವರನ್ನು ಇಲ್ಲಿ ದೇವ ಸ್ವರೂಪದಲ್ಲಿ ಕಾಣಲಾಗುತ್ತಿದೆ, ಆರಾಧಿಸಲಾಗುತ್ತದೆ ಹಾಗೂ ಗೌರವಿಸಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...