DAKSHINA KANNADA
Mangaluru: ಹಾಲು ಉತ್ಪಾದಕರ ಮಹಿಳಾ ಸಂಘದ ಕಛೇರಿಯಲ್ಲಿ ಕಂಪ್ಯೂಟರ್ ಕಳವು..!
ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಹಾಲು ಉತ್ಪಾದಕರ ಮಹಿಳಾ ಸಂಘದಿಂದ ಕಂಪ್ಯೂಟರ್ ಕಳವು ಆಗಿದ್ದು, ಪ್ರಕರಣ ದಾಖಲಾಗಿದೆ.
ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಹಾಲು ಉತ್ಪಾದಕರ ಮಹಿಳಾ ಸಂಘದಿಂದ ಕಂಪ್ಯೂಟರ್ ಕಳವು ಆಗಿದ್ದು, ಪ್ರಕರಣ ದಾಖಲಾಗಿದೆ.
ಹಾಲು ಉತ್ಪಾದಕರ ಸಂಘದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ತುಂಡರಿಸಿ ಒಳಭಾಗಕ್ಕೆ ಬಂದ ಕಳ್ಳರು ಕ್ಯಾಷ್ ಡ್ರಾವರ್ ನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಬಳಿಕ ಡ್ರಾವರ್ ಮೇಲಿದ್ದ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ.
ಮುಂಭಾಗದ ಬಾಗಿಲಿನ ಬದಿಯಲ್ಲಿ ಕಬ್ಬಿಣದ ಸೆಟರ್ ಹಾಕಿರುವ ಸಣ್ಣ ಕಿಟಿಕಿಯ ಒಳ ಭಾಗದ ಚಿಲಕ ತೆಗೆದು ಪರಾರಿಯಾಗಿದ್ದಾರೆ.
ಇದು ಎರಡನೇ ಬಾರಿ ಹಾಲಿನ ಸೊಸೈಟಿಯಲ್ಲಿ ಕಳ್ಳತನ ನಡೆದಿದೆ, ಕಳೆದ ವರ್ಷ ಸುಮಾರು ನಾಲ್ಕು ಸಾವಿರದಷ್ಟು ಹಣವನ್ನು ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿತ್ತು ಎಂದು ಸೊಸೈಟಿ ಕಾರ್ಯದರ್ಶಿ ವನಿತಾ ಮಾಹಿತಿ ನೀಡಿದ್ದಾರೆ.
ಸಮೀಪದ ಅಂಗನವಾಡಿಯ ಬೀಗ ಮುರಿದು ಒಳಹೊಕ್ಕ ಕಳ್ಳರು ಏನು ಸಿಗದೆ ವಾಪಾಸಾಗಿದ್ದಾರೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
DAKSHINA KANNADA
Moodabidri: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್..!
ಮೂಡುಬಿದಿರೆ: ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದಿದೆ.
ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) ಬಂಧಿತ ಆರೋಪಿಗಳು.
ಮೂವರು ಆರೋಪಿಗಳು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದ ಖಚಿತ ಮಾಹಿತಿಯನ್ನು ಮೇರೆಗೆ ಸ್ಥಳಕ್ಕೆ ಧಾವಿಸಿದ್ದಾರೆ.
ಬಳಿಕ ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 62,000 ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
DAKSHINA KANNADA
Mangaluru: ಸೋಮೇಶ್ವರ ಉಚ್ಚಿಲದಲ್ಲಿ ಬಲೆಗೆ ಬಿದ್ದ ದೈತ್ಯ ಪಿಲಿ ತೊರಕೆ..!
ಮಂಗಳೂರು: ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಲಭಿಸಿದೆ.
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ನಿನ್ನೆ ಸಂಜೆ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ.
ಈ ವರ್ಷದ ತಮ್ಮ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ ಅಲೆಗಳು ಬರುತ್ತವೆ.
ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆಯೂ ಇದೆ.
ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ.
ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ.
ಮಾರಾಟ ಮಾಡುವುದಾದರೆ ಈ ಮೀನಿಗೆ ಕೆ.ಜಿ.ಗೆ 200 ರೂಪಾಯಿ ಬೆಲೆ ಇದೆ.
ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೆ ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.
DAKSHINA KANNADA
ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ
ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.
ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
- DAKSHINA KANNADA7 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- FILM6 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA6 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM6 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!