Connect with us

LATEST NEWS

ಮನಪಾ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರಿಂದ ಬಾವಿಗಿಳಿದು ಪ್ರತಿಭಟನೆ

Published

on

ಮಂಗಳೂರು: ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಚರ್ಚೆಯು ವಾಗ್ವಾದಕ್ಕೆ ಕಾರಣವಾಗಿ,

ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.


ಸಭೆಯ ಆರಂಭದಲ್ಲಿಯೇ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ ಮೇಯರ್ ಪ್ರೇಮಾನಂದ ಶೆಟ್ಟಿ ವಿಷಯ ಪ್ರಸ್ತಾಪಿಸಿ ಮಾತನಾಡಿದರು.
ವಸತಿ ಕಟ್ಟಡಗಳ ಫ್ಲ್ಯಾಟ್‌ಗಳವರು ತಮ್ಮ ಸ್ಥಳದಲ್ಲಿಯೇ ತ್ಯಾಜ್ಯ
ಸಂಸ್ಕರಿಸುವ ನಿಟ್ಟಿನಲ್ಲಿ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಹಂತ ಹಂತವಾಗಿ ದಂಡ ಹಾಕುವುದಾಗಿ ಸೂಚಿಸಲಾಗಿತ್ತು. ಕೆಲವು ಅಪಾರ್ಟ್‌ ಮೆಂಟ್‌ಗಳಲ್ಲಿ ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗಿದೆ. ಕೆಲವು ಅಪಾರ್ಟ್‌ಮೆಂಟ್‌ಗಳ ಪ್ರತಿನಿಧಿಗಳಲ್ಲಿ
ಯಾವ ರೀತಿ ಮಾಡಬೇಕೆಂಬ ಗೊಂದಲ ಇನ್ನೂ ಇದ್ದು, ಸಂಸ್ಕರಣೆ ಕುರಿತಾದ ತಂತ್ರಜ್ಞಾನದ ಮಾಹಿತಿ ನೀಡುವ ಕಾರ್ಯಾಗಾರ ಮಾಡಲು ನಿರ್ಧರಿಸಲಾಗಿದೆ.
ಅಲ್ಲಿಯವರೆಗೆ ದಂಡನಾ ಶುಲ್ಕಕ್ಕೆ ತಾತ್ಕಾಲಿಕ ತಡೆಗೆ ನಿರ್ಧರಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸದಸ್ಯ ವಿನಯರಾಜ್, ಹಸಿಕಸವನ್ನು
ಗೊಬ್ಬರವಾಗಿಸುವ ರಾಮಕೃಷ್ಣ ಮಠದಿಂದ ಡಿಪಿಆರ್ ನೀಡುವುದಾಗಿ ಹೇಳಿದ್ದರು. ಅದು ಯಾವ ಹಂತದಲ್ಲಿದೆ ತಿಳಿದಿಲ್ಲ. ಹಸಿ ಕಸ ಸೂಕ್ತ ಪ್ರಮಾಣದಲ್ಲಿ ದೊರೆತಾಗ ಮಾತ್ರ ಇದು ಕಾರ್ಯಗತವಾಗಲು ಸಾಧ್ಯ. ಜನರು ಈಗಾಗಲೇ ತ್ಯಾಜ್ಯ ವಿಲೇವಾರಿಗಾಗಿ ತೆರಿಗೆ ಕಟ್ಟುತ್ತಿದ್ದಾರೆ. ಒಟ್ಟಿನಲ್ಲಿ ಮನಪಾ ಆಡಳಿತ ಗೊಂದಲದಲ್ಲಿದೆ ಎಂದು ಆರೋಪಿಸಿದರು.
ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಆಂಟನಿ ಸಂಸ್ಥೆಯ 12 ವಾಹನಗಳು ಗ್ಯಾರೇಜ್‌ನಲ್ಲಿದೆ. ಇದರಿಂದ ವಾರ್ಡ್‌ಗಳಲ್ಲಿ ಪ್ರತೀ ದಿನ ಕಸ ಸಂಗ್ರಹ ಆಗುತ್ತಿಲ್ಲ. ಪಾಲಿಕೆ ಸದಸ್ಯ ನವೀನ್ ಡಿಸೋಜಾಸ ಶಶಿಧರ ಹೆಗ್ಡೆ ಅವರು ಮಾತನಾಡಿ ತ್ಯಾಜ್ಯ ವಿಲೇವಾರಿ ಗೊಂದಲ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಆಂಟನಿ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದ್ದು, ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಈ ಹಿಂದೆ ಹೇಳಿದ್ದರು ಎಂದಾಗ, ನಿಮ್ಮ ಆಡಳಿತ ವೈಪಲ್ಯವನ್ನು ಪ್ರತಿಪಕ್ಷದ ಮೇಲೆ ಹಾಕಬೇಡಿ ಎಂದು ವಿನಯ ರಾಜ್ ಪ್ರತಿಕ್ರಿಯಿಸಿದರು.
ನಿಮ್ಮ ಆಡಳಿತ ಹೇಗಿತ್ತು ಎಂಬುದು ಗೊತ್ತಿದೆ. ಹಾಗಾಗಿಯೇ 36 ಸದಸ್ಯರಿಂದ ನಿಮ್ಮ
ಸಂಖ್ಯೆ 14ಕ್ಕೆ ಇಳಿಕೆಯಾಗಿದ್ದು ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿಕೆ ವಿಪಕ್ಷ ಸದಸ್ಯರನ್ನು ಕೆರಳಿಸಿತು. ಸದನದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ.

ವಿಪಕ್ಷವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳುತ್ತಾ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಪ್ರತಿಭಟಿಸಿದರು.
ಮೇಯರ್ ಮಾತನಾಡಿ, ಪ್ರತಿಪಕ್ಷದ ಸದಸ್ಯರು ಪೂರ್ವ ಯೋಜಿತವಾಗಿ ಸದನಕ್ಕೆ ಬಂದಂತೆ ಕಾಣುತ್ತಿದೆ. ಘನತ್ಯಾಜ್ಯ ನಿರ್ವಹಣೆ ಸದ್ಯ ಸುಧಾರಣೆಯಾಗಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ಮನಪಾ ದೊಡ್ಡ ಹೆಜ್ಜೆ ಇರಿಸಿದೆ.

ಸಾರ್ವಜನಿಕರು ಕೂಡ ಸಹಕಾರ ನೀಡುತ್ತಿದ್ದಾರೆ. ಬ್ಲ್ಯಾಕ್‌ಸ್ಪಾಟ್ ಗುರುತಿಸಿ, ಸಿ.ಸಿ. ಕ್ಯಾಮಾರಾ ಅಳವಡಿಸುವ ಕೆಲಸ ನಡೆಯುತ್ತಿದೆ. ಆದರೂ, ಕೆಲವು ಕಡೆಗಳಲ್ಲಿ ಪ್ರತೀ ದಿನ ಕನ ವಿಲೇವಾರಿ ನಡೆಯುತ್ತಿಲ್ಲ ಎಂಬ ಆರೋಪ ಬಂದರೆ, ಮುಂದಿನ ದಿನಗಳಲ್ಲಿ ವಾರ್ಡ್ ಮಟ್ಟದಲ್ಲಿ ಪ್ರತ್ಯೇಕ ಸಭೆ
ಕರೆಯುವುದಾಗಿ ಹೇಳಿದರು.
ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಭೆಯಲ್ಲಿ
ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಸೋಭಾ ರಾಜೇಶ್, ಲೀಲಾವತಿ ಉಪಸ್ಥಿತರಿದ್ದರು

Click to comment

Leave a Reply

Your email address will not be published. Required fields are marked *

FILM

ಟಿ ಆರ್ ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಸಿಕ್ಕಿದೆ ಮೊದಲ ಸ್ಥಾನ?

Published

on

ಬೆಂಗಳೂರು : ‘ಕಿರುತೆರೆ’ ಜನರ ನೆಚ್ಚಿನ ಮನರಂಜನಾ ತಾಣ. ಇಲ್ಲಿ ಸಾವಿರಾರು ಧಾರಾವಾಹಿಗಳು, ರಿಯಾಲಿಟಿ ಶೋ ಗಳದೇ ದರ್ಬಾರು. ಮನೆಮಂದಿಯೆಲ್ಲಾ ಕಿರುತೆರೆಯನ್ನು ನೆಚ್ಚಿಕೊಂಡಿದ್ದಾರೆ. ದೈನಂದಿನ ದಿನಚರಿಯಲ್ಲಿ ಧಾರಾವಾಹಿಗಳೂ ಸೇರಿಕೊಂಡಿವೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾಯುತ್ತಿರುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಧಾರಾವಾಹಿ ಪ್ರಿಯರು. ಮಧ್ಯಾಹ್ನ, ರಾತ್ರಿ ಪ್ರಸಾರವಾಗುವ ಧಾರಾವಾಹಿಗಳನ್ನು ಬಿಡದೆ ನೋಡುವ ವರ್ಗವಿದೆ. ಆಯಾ ಧಾರಾವಾಹಿಗೆ ಆಯಾ ವೀಕ್ಷಕ ವರ್ಗವಿದೆ. ಹೀಗಿರುವ ಯಾವ ಧಾರಾವಾಹಿ ಎಷ್ಟು ಟಿ ಆರ್ ಪಿ ಹೊಂದಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಟಾಪ್ 5 ಧಾರಾವಾಹಿಗಳು :

ಪುಟ್ಟಕ್ಕನ ಮಕ್ಕಳು


ಮೂವರು ಹೆಣ್ಣುಮಕ್ಕಳ ತಾಯಿಯಾಗಿ ಕಷ್ಟ ಕಾರ್ಪಣ್ಯಗಳಿಂದ ಬೆಂದಿರುವ ಮಹಿಳೆಯ ಪ್ರಧಾನ ಕಥೆ ಒಳಗೊಂಡಿರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಪಾತ್ರವಾಗಿದೆ.

ಲಕ್ಷ್ಮೀ ನಿವಾಸ

ಇತ್ತೀಚೆಗೆ ಆರಂಭಗೊಂಡ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನವಿರಾದ ಪ್ರೇಮಕಥೆ, ಸಂಸಾರದ ತಲ್ಲಣಗಳಿವೆ.

ಸೀತಾ ರಾಮ


ನವಿರಾದ ಪ್ರೇಮಕಥೆ ಇರುವ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಜನಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಸಿಹಿ ಎಲ್ಲರಿಗೂ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕುತೂಹಲ ಪೂರ್ಣವಾಗಿ ಸಾಗುತ್ತಿದೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

ಶ್ರಾವಣಿ ಸುಬ್ರಮಣ್ಯ


ಇತ್ತೀಚೆಗೆ ಆರಂಭಗೊಂಡ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಕಥೆ ಧಾರಾವಾಹಿಯಲ್ಲಿದೆ. ಮಗಳನ್ನು ದ್ವೇಷಿಸುವ ತಂದೆ, ತಂದೆಯನ್ನು ಪ್ರೀತಿಸುವ ಮಗಳು, ಒಂದಷ್ಟು ಸಸ್ಪೆನ್ಸ್ ಧಾರಾವಾಹಿಯ ಜೀವಾಳ.

ರಾಮಾಚಾರಿ :


ವಿಭಿನ್ನ ಕತೆಯನ್ನೊಳಗೊಂಡ ರಾಮಾಚಾರಿ ಆರಂಭದಿಂದಲೂ ಜನಮನ ಗೆದ್ದಿತ್ತು. ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿ ಬೇರೆಯೇ ಆದ ಆಯಾಮಕ್ಕೆ ಹೊರಳಿದೆ. ರಾಮಾಚಾರಿಗೊಬ್ಬ ತಮ್ಮನೂ ಎಂಟ್ರಿ ಕೊಟ್ಟಾಗಿದೆ. ಅಣ್ಣ-ತಮ್ಮ ಹಾಗೂ ಚಾರು ಒಂದಾಗಿ ಶತ್ರುಗಳ ವಿರುದ್ಧ ಗೆಲ್ಲುವ ಹೋರಾಟಕ್ಕೆ ಇಳಿದಿದ್ದಾರೆ.

Continue Reading

LATEST NEWS

ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

Published

on

ಕಿನ್ನಿಗೋಳಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ(ಎ.3) ಮದ್ಯಾಹ್ನ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ  ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.

kanthabare

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

ಸುಮಾರು 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ. ಧಾರ್ಮಿಕ ಮಹತ್ವದ ಧರೆಗುರುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.

Continue Reading

FILM

ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

Published

on

ಮುಂಬೈ : ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಈ ನಡುವೆ ಶಾರುಖ್ ಖಾನ್ ಕುರಿತಾಗಿ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದಿದ್ದಾರೆ ಕಮಲ್.

ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending