Connect with us

DAKSHINA KANNADA

ಮಂಗಳೂರು : ಮುಲ್ಕಿ ಹೆದ್ದಾರಿಯಲ್ಲಿ ಕಾರು- ಬಸ್ ಡಿಕ್ಕಿ,ಕಾರಿನಲ್ಲಿದ್ದ ಮಹಿಳೆಯರು ಪವಾಡ ಸದೃಶ ಪಾರು..!

Published

on

ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಿ ಎಸ್ ಐ ಬಾಲಿಕಾಶ್ರಮದ ಬಳಿ ಎಕ್ಸ್‌ಪ್ರೆಸ್ ಬಸ್ಸು ಮತ್ತು ಕಾರು ಮಧ್ಯೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಪವಾಡ ಸದೃಶ ಪಾರಾಗಿದ್ದಾರೆ.

ಮಂಗಳೂರು : ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಿ ಎಸ್ ಐ ಬಾಲಿಕಾಶ್ರಮದ ಬಳಿ ಎಕ್ಸ್‌ಪ್ರೆಸ್ ಬಸ್ಸು ಮತ್ತು ಕಾರು ಮಧ್ಯೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಪವಾಡ ಸದೃಶ ಪಾರಾಗಿದ್ದಾರೆ.


ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಮುಲ್ಕಿ ಸಿ ಎಸ್ ಐ ಬಾಲಿಕಾಶ್ರಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ, ತೀರ ಬಲಬದಿ ಚಲಿಸಿ ಡಿವೈಡರ್ ಮೇಲೇರಿ ಪಲ್ಟಿಯಾಗಿ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಮೇಲೆ ಬಿದ್ದಿದೆ.

ಮಂಗಳೂರು ಕಡೆಗೆ ಹೋಗುತ್ತಿದ್ದ ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನ ಚಾಲಕಿ ಸ್ಮಿತಾ ರಾವ್ ಹಾಗೂ ಅವರ ತಾಯಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಧಾವಿಸಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

Mangaluru: ಶಿಬರೂರು ಕೊಡಮಣಿತ್ತಾಯ ದೇಗುಲದ ಶಿಲಾನ್ಯಾಸ ಕಾರ್ಯಕ್ರಮ

Published

on

ಮಂಗಳೂರು: ಕಟೀಲು ಮತ್ತು ಶಿಬರೂರು ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ, ಇಂತಹ ಶಿಬರೂರು ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.

ಅವರು ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ಇಲ್ಲಿನ ಮೇಲಿನ ಸಾನದ ಚಾವಡಿ, ಸುತ್ತುಪೌಳಿಯ ಪುನರ್ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಜಾಂಲ ಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಕಳೆದ 12 ವರ್ಷದ ಹಿಂದೆ ನಡೆದ ಬ್ರಹ್ಮಕಲಶೋತ್ಸವದಲ್ಲಿಯೂ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಇದೀಗ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಭಕ್ತರು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದರು.

ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ಕಟೀಲು ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್, ಧರ್ಮಧರ್ಶಿ ಹರಿಕೃಷ್ಣ ಪುನರೂರು, ಕೊಡೆತ್ತೂರು ವೇದವ್ಯಾಸ ಉಡುಪ, ಗುತ್ತಿನಾರ್ ಲಕ್ಷೀನಾರಾಯಣ ರಾವ್ ಕೈಯೂರುಗುತ್ತು ಉದ್ಯಮಿ ರಘನಾಥ ಸೋಮಯಾಜಿ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಎಸ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಕೆ ಭುವನಾಭಿರಾಮ ಉಡುಪ, ಶಿಬರೂರುಗುತ್ತು ರಾಮಚಂದ್ರ ಶೆಟ್ಟಿ, ರಾಧಕೃಷ್ಣ ಶೆಟ್ಟಿ ಸೂರತ್, ಅಶೋಕ್ ಶೆಟ್ಟಿ ಬಜಾಲ್ ಬೀಡು, ಶಿಬರೂರುಗುತ್ತು ಕಿಶೋರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ,  ಪೊನ್ನಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಖೇಶ್ ಶೆಟ್ಟಿ , ಉಮೇಶ್ ಗುತ್ತಿನಾರ್ ಶಿಬರೂರು ಗುತ್ತು, ಸುಧಾಕರ ಶೇಣವ ದೇಂದೊಟ್ಟು ಗುತ್ತು, ಪಡುಮನೆ ಶಿವಾನಂದ ಶೆಟ್ಟಿ, ತುಕಾಮ ಶೆಟ್ಟಿ‌ಪರ್ಲಬೈಲ್, ಜಿತೇಂದ್ರ ಶೆಟ್ಟಿ ಕೊರ್ಯಾರಗುತ್ತು, ಸದಾಶಿವ ಶೆಟ್ಟಿ ಅಶ್ವತ್ತಡಿ ಉದ್ಯಮಿ ಕಿರಣ್ ಶೆಟ್ಟಿ, ಎಸ್ ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ವಿನಯಕುಮಾರ್ ಸೂರಿಂಜೆ, ಶಿಬರೂರು ಲಕ್ಷೀಜನಾರ್ಥನ ಮಠದ ಅರ್ಚಕ ಲಕ್ಷೀನಾರಾಯಣ ಆಚಾರ್ಯ, ಕ್ಷೇತ್ರದ ಅರ್ಚಕ ಕುಟ್ಟಿ‌ಮೂಲ್ಯ, ಶಂಭು ಮುಕಾಲ್ದಿ ಅತ್ತೂರು, ಜಯರಾಮ‌ ಮುಕಾಲ್ದಿ ಕೊಡೆತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ದೊಡ್ಡಯ್ಯ ಮೂಲ್ಯ ಕಟೀಲು, ಯಾದವ ಕೋಟ್ಯಾನ್ ಪೆರ್ಮುದೆ, ಶ್ಯಾಮಲಾ ಪಿ ಶೆಟ್ಟಿ ಶಿಬರೂರುಗುತ್ತು, ಉಷಾ ಯು ಶೆಟ್ಟಿ ಶಿಬರೂರುಗುತ್ತು, ಉದ್ಯಮಿ ನಿತ್ಯಾನಂದ ಶೆಟ್ಟಿ, ವಕೀಲರಾದ ರವಿ ಕೋಟ್ಯಾನ್, ಸಿ.ಎ ಉದಯಕುಮಾರ್ , ಸುರೇಶ್ ಶೆಟ್ಟಿ ಅಡು, ದೇವದಾಸ್ ಅಳ್ವ ಬೆಳ್ಳಿಬೆಟ್ಟುಗುತ್ತು, ಮುರ ಸದಾಶಿವ ಶೆಟ್ಟಿ, ಕಾಂತಪ್ಪ ಸಾಲಿಯಾನ್, ದಾಮೋಧರ ಶೆಟ್ಟಿ ಶಿಬರೂರುಗುತ್ತು, ಚರಣ್ ಶೆಟ್ಟಿ ಅತ್ತೂರು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಮಾಲಾಡಿ ಅಜಿತ್ ಕುಮಾರ್ ರೈ, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಶೆಟ್ಟಿ ತಿಬಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಪ್ರಜಾ ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್ ಶಿಬರೂರು , ಸುಮನ್ ಶೆಟ್ಟಿ, ಸುಧಾಕರ ಶೆಟ್ಟಿ ಶಿಬರೂರುಗುತ್ತು, ಸುಧಾಕರ ಶಿಬರೂರು, ಸುರೇಶ್ ಶೆಟ್ಟಿ ಪುಚ್ಚಾಡಿ ಸುಬ್ರಮಣ್ಯ‌ಪ್ರಸಾದ್ ಪ್ರಸ್ತಾವನೆಗೈದರು.

ಮಧುಕರ ಅಮೀನ್ ಸ್ವಾಗತಿಸಿ, ಸುರೇಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಸಾಯಿನಾಥ ಶೆಟ್ಟಿ, ಅನಂತ ರಾಮ ಆಚಾರ್ಯ ಮೂಡುಮನೆ ನಿರೂಪಿಸಿದರು.

Continue Reading

DAKSHINA KANNADA

Ullala: ಬಾವಿಗೆ ಹಾರಿ ಟೆಂಪೋ ಚಾಲಕ ಜೀವಾಂತ್ಯ..!

Published

on

ಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ಸೆ.27ರಂದು  ನಡೆದಿದೆ.

ತೊಕ್ಕೊಟ್ಟು, ಕೃಷ್ಣ ನಗರ ಲಚ್ಚಿಲ್ ನಿವಾಸಿ 62 ವರ್ಷದ ನಾಗೇಶ್  (62) ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.

ನಾಗೇಶ್ ಅವರು ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು.

ಟೆಂಪೋವನ್ನು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು.

ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಟೆಂಪೋ ಸೀಟ್ ನಲ್ಲಿ ನಾಗೇಶ್ ಅವರ ಮೊಬೈಲ್, ನಗದು, ಫೋಟೊ, ಚಪ್ಪಲಿ ದೊರಕಿದ್ದು, ಅನುಮಾನಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಯಲ್ಲಿ ನಾಗೇಶ್ ಅವರ ದೇಹವಿರುವುದು ಖಾತ್ರಿ ಪಡಿಸಿ ಮೃತ ದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿತ್ತು.

ಮರಣೋತ್ತರ ಪರೀಕ್ಷೆಯ ಬಳಿಕ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.

ನಾಗೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಅವರು ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Continue Reading

DAKSHINA KANNADA

ಮಂಗಳೂರಿನ ಬೆಡಗಿಗೆ ‘ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್’ ಕಿರೀಟ

Published

on

ಮಂಗಳೂರು: ಮಂಗಳೂರಿನ ಬೆಡಗಿ ಯಶಸ್ಸಿನಿ ದೇವಾಡಿಗ ಅವರು ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್‌ನ್ಯಾಶನಲ್ 2023 ಹದಿಹರೆಯದವರಿಗೆ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾಗಿದೆ.

ವರ್ಷದ ಆರಂಭದಲ್ಲಿ ನಡೆದ ‘ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.

ಥಾಯ್ಲೆಂಡ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಇವರು ದೇವದಾಸ್ ದೇವಾಡಿಗ ಕುಳಾಯಿ ಹಾಗೂ ಮೀನಾಕ್ಷಿ ದೇವಾಡಿಗ ಅವರ ಸುಪುತ್ರಿಯಾಗಿದ್ದು.

ಪ್ರಸ್ತುತ ಸುರತ್ಕಲ್ ನ ಗೋವಿಂದ ದಾಸ್ ಪಿಯು ಕಾಲೇಜಿನಲ್ಲಿ ದ್ವಿತೀಯಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

Continue Reading

LATEST NEWS

Trending