Connect with us

    DAKSHINA KANNADA

    ಮಂಗಳೂರು – ಅಬಕಾರಿ ಕಾರ್ಯಾಚರಣೆ; ಮದ್ಯ ಸಮೇತ ಗಾಂಜಾ ವಶ

    Published

    on

    ಮಂಗಳೂರು: ಅಕ್ರಮ ಗಾಂಜಾ ಸಾಗಾಟ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವ ಸಂಬಂಧ ಅಬಕಾರಿ ಇಲಾಖೆ, ಕಾರ್ಯಾಚರಣೆ ನಡೆಸಿ ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 5.051 ಗ್ರಾಂ ಗಾಂಜಾ ಹಾಗೂ ಒಟ್ಟು 9.460 ಗ್ರಾಂ ಎಂಡಿಎಂ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ.


    ಬೈಕಂಪಾಡಿಯ ಕೆ.ಎಸ್‌.ಬಿ.ಸಿ.ಎಲ್‌ನಲ್ಲಿ ಅ.18ರಂದು ಡಿಪೋ-2ಕ್ಕೆ ಹಾಸನದಿಂದ ಒಟ್ಟು 1,100 ಪೆಟ್ಟಿಗೆ (10,680 ಲೀ.) ಬಿಯರ್‌ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ ಸರಬರಾಜಾಗಿದ್ದು, ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಬಿಯರ್‌ ಸರಬರಾಜು ಮಾಡಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿ ವಾಹನ ಮತ್ತು ಬಿಯರ್‌ ಅನ್ನು ಜಫ್ತಿಪಡಿಸಿ ಕೇಸು ದಾಖಲಿಸಲಾಗಿದೆ.

    ಅ.14ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಅಂಗಡಿಯೊಂದರಲ್ಲಿ ಹೋಮ್‌ ಮೇಡ್‌ ವೈನ್‌ ಅನ್ನು ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 111.750 ಲೀ. ವೈನ್‌ ಜಪ್ತಿ ಮಾಡಿ ಅಬಕಾರಿ ಇಲಾಖೆಯ ಅಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅ. 20ರಂದು ಬೈಕಂಪಾಡಿಯಿಂದ ಬಜಪೆಗೆ ಹೋಗುವ ರಸ್ತೆಯ ಕರ್ಕೇರ ಮೂಲ ಸ್ಥಾನದ ಬಳಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 3.690 ಲೀ. ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್‌ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುಳ್ಯ – ರಿಕ್ಷಾ ಬೈಕ್ ಡಿಕ್ಕಿ: ಬಾಲಕಿಗೆ ಗಾಯ

    Published

    on

    ಸುಳ್ಯ: ರಿಕ್ಷಾ ಮತ್ತು ಬೈಕ್‌ ಪರಸ್ಪರ ಡಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿಯ ಕಾಲಿಗೆ ಗಾಯವಾಗಿದ ಘಟನೆ  ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ನಡೆದಿದೆ.

    ಘಟನೆಯ ಹಿನ್ನಲೆ ಸಿಟ್ಟಿಗೆದ್ದ ಬಾಲಕಿಯ ತಂದೆ ಆಟೋ ಚಾಲಕನಿಗೆ ಥಳಿಸಿದ ಘಟನೆ ಮಂಗಳವಾರ ( ಅ.22) ಸಂಜೆ ನಡೆದಿದೆ.

    ಪೆರಾಜೆಯ ಬೈಕ್‌ ಸವಾರ ಸುಳ್ಯದ ಖಾಸಗಿ ಶಾಲೆಯಿಂದ ತಮ್ಮ ಮಗಳನ್ನು ಕರೆ ತರುವ ವೇಳೆ ಜ್ಯೋತಿ ವೃತ್ತದ ಜಂಕ್ಷನ್‌ ಪಕ್ಕದಿಂದ ಬಂದ ಆಟೋ ರಿಕ್ಷಾ ಬೈಕಿಗೆ ತಾಗಿದ್ದು, ರಿಕ್ಷಾ ತಾಗಿ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದೆ.

    ಈ ವೇಳೆ ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಕೈಕೈಮಿಲಾಯಿಸಿಕೊಂಡರು. ಹೊಡೆದಾಟದಲ್ಲಿ ಆಟೋ ಚಾಲಕನಿಗೆ ಮುಖಕ್ಕೆ ಗಾಯವಾಗಿ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೈಕ್‌ ಚಾಲಕನ ವಿರುದ್ಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Continue Reading

    DAKSHINA KANNADA

    ಸುರತ್ಕಲ್: ಸಮುದ್ರದಲ್ಲಿ ಆಡಲು ಹೋಗಿ ಸಮುದ್ರಪಾಲಾದ ಯವಕ

    Published

    on

    ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ಸುರತ್ಕಲ್ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.

    ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    DAKSHINA KANNADA

    ಅಮೆರಿಕದಲ್ಲಿ ಆರ್‌ಎಸ್‌ಎಸ್‌ಗೆ ಉತ್ತಮ ಸ್ಪಂದನೆ : ವಿಪುಲ್‌ ರೈ

    Published

    on

    ಪುತ್ತೂರು: ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘ(ಎಚ್‌ಎಸ್‌ಎಸ್‌)ದ ಹೆಸರಿನಲ್ಲಿ ಪ್ರತಿ ರವಿವಾರ ಸಂಘದ ಶಾಖೆ ನಡೆಸುತ್ತಿದ್ದಾರೆ. ಅಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಘಟಣ ಸದಸ್ಯನಾಗಿರುವ ವಿಪುಲ್‌ ಎಸ್‌. ರೈ ಕಡಮಜಲು ತಿಳಿಸಿದ್ದಾರೆ.


    “ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಹಿಂದುತ್ವದ ವಿಚಾರದಲ್ಲಿ ಕನ್ನಡ ಸಂಘ, ತುಳು ಸಂಘಟನೆ, ಯಕ್ಷಗಾನಕ್ಕೆ ಸಹಕಾರ, ದಕ್ಷಿಣ ಕನ್ನಡ ಒಕ್ಕೂಟ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ಯೋತಕವಾಗಿ ಹಿಂದೂ ಸ್ವಯಂ ಸೇವಕ ಸಂಘದಲ್ಲಿ ಸಂಘಟನ ಸದಸ್ಯನಾಗಿ ದುಡಿಯುತ್ತಿದ್ದೇನೆ” ಎಂದರು.

    “ಮುಂದಿನ ಪೀಳಿಗೆಗೆ ಅಮೆರಿಕದಲ್ಲಿ ನೆಲೆಸಿರುವ ಮಕ್ಕಳಿಗಾಗಿ ಕನ್ನಡ ಶಾಲೆ, ಭಾರತದ ಸಂಸ್ಕೃತಿ ಮತ್ತು ಧರ್ಮದ ವಿಚಾರಧಾರೆಗಳನ್ನು ಕಲಿಸುವ ಚಿನ್ಮಯ ಮಿಷನ್‌ನ ಬಾಲವಿಹಾರ ಶಾಲೆಗಳನ್ನು ಮುನ್ನಡೆಸಲಾಗುತ್ತದೆ,  ಕ್ಯಾಲಿಫೋರ್ನಿಯ ರಾಜ್ಯದ ಲಾಸ್‌ಏಂಜಲೀಸ್‌ ಜಿಲ್ಲೆಯಲ್ಲಿ 8 ಶಾಖೆಗಳಿವೆ. ಪ್ರತಿಯೊಂದು ಶಾಖೆಗೂ ಸುಮಾರು 50ರಿಂದ 60 ಮಂದಿ ಪೋಷಕರು ಹಾಗೂ ಅವರ ಜತೆ ಮಕ್ಕಳು ಬರುತ್ತಾರೆ” ಎಂದು ಅಭಿಪ್ರಾಯಪಟ್ಟರು.
    ಮೂರು ವಾರಗಳ ಹಿಂದೆ ನ್ಯಾಂಟಕ್ಲಾರಿಟಾ ಎಂಬಲ್ಲಿ ಹೊಸ ಶಾಖೆ ಆರಂಭಗೊಂಡಿದೆ. ಕಡಮಜಲು ಸುಭಾಷ್‌ ರೈ, ಶಶಿಕುಮಾರ್‌ ರೈ ಬಾಲೊಟ್ಟು, ದಯಾನಂದ ಶೆಟ್ಟಿ ಉಜಿರುಮಾರು, ಶಿವಕುಮಾರ್‌ ಕಲ್ಲಿಮಾರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Continue Reading

    LATEST NEWS

    Trending