BIG BOSS
Watch Video: ಬಿಗ್ ಬಾಸ್ನಲ್ಲಿ ಪಾತ್ರೆ ತೊಳೆದ ಪರಿಣಾಮ; ಲಾಯರ್ ಜಗದೀಶ್ಗೆ ಮನೆಯಲ್ಲಿ ಎಂಥಾ ಸ್ಥಿತಿ ನೋಡಿ..!
Published
3 weeks agoon
By
NEWS DESK2‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸ್ದದು ಮಾಡಿದ್ದು ಲಾಯರ್ ಜಗದೀಶ್. ಮೂರು ವಾರ ಕಳೆಯುವುದರ ಒಳಗೆ ಅವರು ದೊಡ್ಮನೆಯಿಂದ ಔಟ್ ಆದರು. ಹೊರ ಹೋದ ಬಳಿಕ ಅವರಿಗೆ ಸೃಷ್ಟಿ ಆಗಿರೋ ಅಭಿಮಾನಿ ಬಳಗ ಎಂಥದ್ದು ಎಂಬುದು ಗೊತ್ತಾಗಿದೆ. ಈಗ ಅವರು ಮನೆಯಲ್ಲೂ ಪಾತ್ರೆ ತೊಳೆಯೋ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.
‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಜಗಳಕ್ಕೆ ಮಾತ್ರ ನಿಲ್ಲುತ್ತಿರಲಿಲ್ಲ. ಅವರು ಅಗತ್ಯ ಬಂದಾಗ ಪಾತ್ರೆ ತೊಳೆಯುತ್ತಿದ್ದರು. ಇದು ಅವರ ನೆಚ್ಚಿನ ಕಾಯಕಗಳಲ್ಲಿ ಒಂದಾಗಿತ್ತು. ಈ ಕಾರಣದಿಂದಲೇ ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗಲೆಲ್ಲ ಅಡುಗೆ ಮನೆಯ ವಾಶ್ ಬೇಸ್ನಲ್ಲಿ ನಿಲ್ಲುತ್ತಿದ್ದರು. ಇದು ಅವರ ಪತ್ನಿಯ ಗಮನಕ್ಕೆ ಬಂದಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಅವರು ಫನ್ ಆಗಿ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೀರ್ತಿ ಅವರು ಜಗದೀಶ್ ಮನೆ ಒಳಗೆ ಬರುತ್ತಾರೆ. ಅಲ್ಲಿ ಜಗದೀಶ್ ಅವರು ಪಾತ್ರೆ ತೊಳೆಯುತ್ತಾ ನಿಂತಿರುತ್ತಾರೆ. ‘ಏನ್ ಸರ್ ಸಂದರ್ಶನ ಕೊಡ್ತೀನಿ ಅಂಥ ಹೇಳಿ ಪಾತ್ರೆ ತೊಳೆಯುತ್ತಿದ್ದೀರಲ್ಲ’ ಎಂದು ಪ್ರಶ್ನೆ ಮಾಡಿದರು ಕೀರ್ತಿ. ಇದಕ್ಕೆ ಜಗದೀಶ್ ಉತ್ತರ ಕೊಟ್ಟರು.
‘ಏನ್ ಮಾಡೋದು. ನಮ್ಮ ಮನೆ, ನಮ್ ಪಾತ್ರೆ ತೊಳೆಯೋದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನೆ ಮಾಡಿದರು ಜಗದೀಶ್. ಇದಕ್ಕೆ ಜಗದೀಶ್ ಪತ್ನಿ ಉತ್ತರ ನೀಡುತ್ತಾರೆ. ‘ಬಿಗ್ ಬಾಸ್ ಮನೆಯಲ್ಲಿ ರಾತ್ರಿ-ಹಗಲು ಎನ್ನದೇ ತೊಳೆಯುತ್ತಿದ್ದರು. ಹೀಗಾಗಿ ತೊಳೆಸುತ್ತಾ ಇದ್ದೇನೆ’ ಎನ್ನುತ್ತಾರೆ ಜಗದೀಶ್ ಪತ್ನಿ.
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಹಲವರು ಹಲವು ರೀತಿಯ ಕಮೆಂಟ್ ಮಾಡಿದ್ದಾರೆ. ಅನೇಕರ ಗಮನ ಮನೆಯ ಮೇಲೆ ಹೋಗಿದೆ. ಮನೆ ಅಷ್ಟು ಕಲರ್ಫುಲ್ ಆಗಿಲ್ಲ. ಹೀಗಾಗಿ, ಕೆಲವರು ಜಗದೀಶ್ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. ‘ನೀವೇನಾ ನಿಮ್ಮ ಮನೆಯ ನಾಯಿಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡುವವರು’ ಎಂದು ಪ್ರಶ್ನೆ ಮಾಡಿದ್ದಾರೆ.
Watch Video:
BIG BOSS
ಪಾರು ಖ್ಯಾತಿಯ ಮೋಕ್ಷಿತಾಗೆ ತುಕಾಲಿ ಸಂತು ತರದ ಗಂಡ ಬೇಕಂತೆ..!
Published
19 hours agoon
13/11/2024By
NEWS DESK2ಕಿರುತೆರೆ ಕಲಾವಿದ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು ಮೊದಲ ಕೆಲವು ವಾರಗಳಲ್ಲಿ ಸಖತ್ ಆಯಕ್ವೀವ್ ಆಗಿದ್ದ ಮಾನಸ ಸದ್ಯ ಶೋನಿಂದ ಹೊರಬಿದ್ದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಮಾನಸ, ಬಿಗ್ ಬಾಸ್‌ಗೆ ಹೋಗುವ ಮುನ್ನ ಸಿದ್ಧತೆ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರಿಗೆ ತುಕಾಲಿ ಸಂತೋಷ್ ರೀತಿಯ ಗಂಡ ಬೇಕಂತೆ ಎನ್ನುವ ವಿಚಾರವನ್ನು ಮಾನಸ ಹೇಳಿದ್ದಾರೆ. ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾನಸ, ಬಿಗ್ ಬಾಸ್ ಶೋ ಆರಂಭಕ್ಕೆ ಎರಡು ದಿನ ಇರುವಾಗ ನನಗೆ ಕಾಲ್ ಬಂದಿದ್ದು. ಅದರ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಒಂದು ರಿಪೋರ್ಟ್ ಕೊಡಬೇಕು. ಹೀಗಾಗಿ ಅದನ್ನು ಸಿದ್ಧ ಮಾಡುವುದರಲ್ಲೇ ಒಂದು ದಿನ ಹೋಯ್ತು ಎಂದರು.
ಮತ್ತೆ ಅಗ್ರಿಮೆಂಟ್, ಪ್ರೋಟೋಕಾಲ್, ವಿಡಿಯೋ ಕಾಲ್ ಇವೆಲ್ಲಾ ಮಾತನಾಡುವಷ್ಟರಲ್ಲಿ ಎರಡನೇ ದಿನ ಕೂಡ ಹೋಯ್ತು. ಮೂರನೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲೇ ಇದ್ದೇನೆ. ಹೀಗಾಗಿ ಮನೆಯಲ್ಲಿದ್ದ ಬಟ್ಟೆಗಳನ್ನೇ ಹೋಗುವಾಗ ತುಂಬಿಕೊಂಡು ಹೋಗಿದ್ದೆ. ಮುಂದಿನ ವಾರದಿಂದ ಸಂತು ಬಟ್ಟೆ ಕಳುಹಿಸಲು ಶುರು ಮಾಡಿದರು. ಮೊದಲ ದಿನ ಹೋಗುವಾಗ ನನಗೆ ಅಂತಾ ನಾನು ಏನೂ ತೆಗೆದುಕೊಳ್ಳಲಿಲ್ಲ ಎಂದರು.
ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು. ಸಂತು ಬಟ್ಟೆ ಚಪ್ಪಲಿ ಕಳುಹಿಸಿದಾಗ ನಾನೇ ಅಲ್ಲಿ ಬೈಯುತ್ತಿದೆ. ಬರುವ ಸಂಬಳವನ್ನೆಲ್ಲಾ ಇದಕ್ಕೆ ಖುರ್ಚು ಮಾಡುತ್ತಿದ್ದಾರೇನೋ, ಹೊರಗಡೆ ಹೋದ ಮೇಲೆ ಎಲ್ಲಾ ದುಡ್ಡು ಖಾಲಿ ಎನ್ನುತ್ತಾರೇನೋ ಎನ್ನುವ ಭಯ ಇತ್ತು. ಅಷ್ಟೊಂದು ಬಟ್ಟೆ ಕಳುಹಿಸಿದ್ದರು. ಇರುವ ಬಟ್ಟೆಗಳೇ ಸಾಕು ಅನಿಸುತ್ತಿತ್ತು. ಅದಕ್ಕೆ ಹೊರಗಡೆ ಬಂದ ಮೇಲೆ ಎಷ್ಟು ದುಡ್ಡು ಖರ್ಚು ಮಾಡಿದೆ ಅಂತಾ ಫಸ್ಟ್ ಕೇಳಿದೆ ಎಂದು ಹೇಳಿದರು.
ಸಂತು ಬಟ್ಟೆ ಕಳುಹಿಸುತ್ತರುವುದನ್ನು ನೋಡಿ ಖುಷಿ ಕೂಡ ಆಗಿತ್ತು. ಬಟ್ಟೆ ಮಾತ್ರ ಅಲ್ಲ..ಸ್ಟಿಕರ್‌ಯಿಂದ ಹಿಡಿದು ಕ್ಲಿಪ್ ತನಕನೂ ಸಂತೂನೇ ಕಳುಹಿಸುತ್ತಿದ್ದರು. ಬೇರೆ ಯರೂ ಕಳುಹಿಸುವವರು ಇರಲಿಲ್ಲ ನನಗೆ. ಸಂತು ಈ ರೀತಿ ಕಳುಹಿಸುವುದನ್ನು ನೋಡಿ ಮೋಕ್ಷಿತಾ ಹಾಗೂ ಗೌತಮಿ ತುಂಬಾ ಆಶ್ಚರ್ಯ ಪಡುತ್ತಿದ್ದರು. ನನಗಿಂತ ಅವರಿಬ್ಬರೇ ಕ್ಯಾಮರಾ ಮುಂದೆ ಹೋಗಿ ಥ್ಯಾಂಕ್ಯೂ ಸಂತೋಷ್ ಅವರೇ ಎನ್ನುತ್ತಿದ್ದರು.
ಮೋಕ್ಷಿತಾ ಅಕ್ಕ ಯಾವಾಗಲೂ ಹೇಳುತ್ತಿದ್ದರು, ಸಿಗೋದು ಸಿಗುತ್ತಾರೆ ಸಂತು ತರ ಗಂಡ ಸಿಕ್ಕಿದರೆ ಸಾಕು ಅಂತಾ ಎಷ್ಟೋ ಸಲ ಹೇಳಿದ್ದಾರೆ. ಹೊರಗಡೆ ಇದ್ದಾಗ ಸಂತು ಅಷ್ಟೊಂದು ಕೊಡಿಸುತ್ತಿರಲಿಲ್ಲ. ಆದರೆ ಒಳಗಡೆ ಹೋದ ಮೇಲೆ ಬಹುಶಃ ಇನ್ನೊಂದಿಷ್ಟು ದಿನ ಇದ್ದು ಬರಲಿ ಅಂತಾ ಖುಷಿಯಿಂದ ಕಳುಹಿಸುತ್ತರೆನೋ…ಅದೇನೆ ಇರಲಿ ತುಂಬಾ ಚೆನ್ನಾಗಿ ಬಟ್ಟೆಗಳನ್ನು ಕಳುಹಿಸುತ್ತಿದ್ದರು ಎಂದು ಮಾನಸ ತಮ್ಮ ಪತಿ ತುಕಾಲಿ ಸಂತು ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
BBK 11: ಬಿಗ್‌ಬಾಸ್ ಮನೆಯಲ್ಲಿ ಆರನೇ ವಾರ ಯಾವುದೇ ಎಲಿಮಿನೇಷನ್ ಆಗಿಲ್ಲ. ಆದರೆ ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್ ಅಥವಾ ಡಬಲ್ ಎಲಿಮಿನೇಷನ್ ಇದ್ದರೂ ಅಚ್ಚರಿಪಡಬೇಕಿಲ್ಲ.
ಎಲಿಮಿನೇಷನ್ ಹಂತದಿಂದ ಕೊನೆ ಕ್ಷಣದಲ್ಲಿ ಪಾರಾಗಿ ಬಂದ ಭವ್ಯ ಗೌಡ ಅವರಿಗೆ ಬಿಗ್ ಬಾಸ್ ಎಚ್ಚರಿಕೆ ಜತೆಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಿದ್ದಾರೆ. ಅದನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಆಟದ ರೋಚಕತೆಯನ್ನು ಬದಲಾಯಿಸಲು ಬಿಗ್ ಬಾಸ್ ಸ್ಪರ್ಧಿಗಳನ್ನು ಜೋಡಿಗಳಾಗಿ ವಿಂಗಡಿಸಿದ್ದು ಹನುಮಂತು – ಗೌತಮಿ, ಧರ್ಮ – ಐಶ್ವರ್ಯಾ, ಚೈತ್ರಾ – ಶಿಶಿರ್, ಮಂಜು – ಭವ್ಯ, ಅನುಷಾ – ಸುರೇಶ್, ಮೋಕ್ಷಿತ – ಧನರಾಜ್ ಅವರನ್ನು ಜೋಡಿಗಳಾಗಿ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಈ ವೇಳೆ ಬಿಗ್ ಬಾಸ್ ಈ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳದ ಸದಸ್ಯ ಯಾರೆಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಬಹುತೇಕರು ಹನುಮಂತು ಎಂದು ಹೇಳಿದ್ದಾರೆ.
‘ನನ್ನ ಹೆಸರು ಬರೆದು ಬಿಡೋದ, ನಾನೇನು ಕೇಳಲ್ಲ ಅಂಥ. ಈ ಮನೆಯಲ್ಲಿ ಹೂಸು ಬಿಡೋದು ತಪ್ಪಾ’ ಎಂದು ಹನುಮಂತು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸೋಮವಾರ ರಾತ್ರಿ (ನ.11ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
BIG BOSS
ಭವ್ಯಗೌಡನನ್ನು ಆಲಂಗಿಸಿ ಜೊತೆಯಾದ ಮೋಕ್ಷಿತಾ ಪೈ ; ವಿರೋಧಿಗಳಿಬ್ಬರು ಯಾಕೆ ಜೊತೆಯಾದ್ರು ಗೊತ್ತಾ ??
Published
3 days agoon
11/11/2024BBK 11 : ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಯಾವುದೂ ಸರಿ ಇರಲಿಲ್ಲ. ಹೆಸರಿಗೆ ಮಾತ್ರ ಎದುರಿನಿಂದ ನಗುತ್ತಿದ್ದ ಅವರಿಬ್ಬರು, ಹಿಂದಿನಿಂದ ಒಬ್ಬರಿಗೊಬ್ಬರು ಬೈದು ಕೊಳ್ಳುತ್ತಿದ್ದರು. ಆದರೆ, ಭವ್ಯಾ ನೋವಿನಲ್ಲಿ ಇರುವಾಗ ಮೋಕ್ಷಿತಾ ಹೆಗಲುಕೊಟ್ಟಿದ್ದಾರೆ. ಭವ್ಯಾನ ಬಿಗಿದಪ್ಪಿ ಸಮಾಧಾನ ಮಾಡಿದ್ದಾರೆ. ನಿನ್ನೆಯ (ನವೆಂಬರ್ 11) ಎಪಿಸೋಡ್ನಲ್ಲಿ ಇದು ಹೈಲೈಟ್ ಆಗಿದೆ.
ಭವ್ಯಾ ಗೌಡ ಅವರಿಗೆ ಕಳೆದ ವಾರ ಸಾಕಷ್ಟು ಹಿನ್ನಡೆಗಳು ಆದವು. ಕ್ಯಾಪ್ಟನ್ಸಿ ರೇಸ್ನಿಂದ ಅವರು ಔಟ್ ಆದರು. ಇದಕ್ಕೆ ಮಂಜು ಅವರು ಮಾಡಿದ ಕುತಂತ್ರವೇ ಕಾರಣ. ಇದಕ್ಕೆ ಅವರು ಸಾಕಷ್ಟು ಬೇಸರಗೊಂಡರು. ಆ ಬಳಿಕ ಕಿಚ್ಚನ ಚಪ್ಪಾಳೆ ಕೂಡ ಮಿಸ್ ಆಯಿತು. ಇದಕ್ಕೆ ಭವ್ಯಾ ಗೌಡ ಅವರು ಸಾಕಷ್ಟು ನೊಂದುಕೊಂಡರು.
ಭವ್ಯಾ ಅವರು ಉತ್ತಮವಾಗಿ ಆಡಿದ್ದರು ನಿಜ. ಆದರೆ, ಪ್ರಶ್ನೆ ಕೇಳುವ ಜಾಗದಲ್ಲಿ ಮೌನವಾಗಿದ್ದರು. ಇದಕ್ಕೆ ಸುದೀಪ್ ಅಸಮಾಧಾನ ಹೊರಹಾಕಿದರು. ‘ಒಂದೇ ಒಂದು ತಪ್ಪಿನಿಂದ ನಿಮಗೆ ಕಿಚ್ಚನ ಚಪ್ಪಾಳೆ ಮಿಸ್ ಆಗಿದೆ’ ಎಂದು ಹೇಳುತ್ತಿದ್ದಂತೆ ಭವ್ಯಾ ಅವರು ಕಣ್ಣೀರು ಹಾಕಿದರು. ಎಪಿಸೋಡ್ ಮುಗಿದ ಬಳಿಕವೂ ಅವರು ಅಳುತ್ತಲೇ ಇದ್ದರು.
‘ಮನೆಯ ಹೊರಗೂ ಹೀಗೆ ಆಗುತ್ತಿತ್ತು. ಕಾರು ತೆಗೆದುಕೊಳ್ಳಬೇಕು ಎಂದಾಗ ಮನೆಯಲ್ಲಿ ಏನೋ ಸಮಸ್ಯೆ ಆಯಿತು. ಈ ಕಾರಣಕ್ಕೆ ಕಾರು ತೆಗೆದುಕೊಳ್ಳೋಕೆ ಆಗಿರಲಿಲ್ಲ. ಇಲ್ಲಿಯೂ ಹಾಗೆಯೇ ಆಗುತ್ತಿದೆ’ ಎಂದು ಅಳಲು ಆರಂಭಿಸಿದರು. ಆಗ ಅಲ್ಲಿಯೇ ಇದ್ದ ಮೋಕ್ಷಿತಾ ಅವರು ಭವ್ಯಾ ಅವರನ್ನು ಹಗ್ ಮಾಡಿ ಸಮಾಧಾನ ಮಾಡಿದ್ದಾರೆ. ಈ ಬಗ್ಗೆ ಮೆಚ್ಚುಗೆ ಸಿಕ್ಕಿದೆ.
ಭವ್ಯಾ ಹಾಗೂ ಮೋಕ್ಷಿತಾ ಈ ಮೊದಲು ಮಾತಿನ ಫೈಟ್ ಮಾಡಿಕೊಂಡಿದ್ದು ಇದೆ. ಹಿಂದಿನಿಂದ ಮಾತನಾಡಿಕೊಂಡಿದ್ದೂ ಇದೆ. ಆದರೆ, ಇನ್ಮೇಲೆ ಇವರ ಮಧ್ಯೆ ಗೆಳೆತನ ಬೆಳೆಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
LATEST NEWS
ಕಪ್ಪು ಮಗು ಹುಟ್ಟಿದ್ದಕ್ಕೆ ಹೆಂಡತಿ ಮೇಲೆ ಅನುಮಾನ; ಡೈವೋರ್ಸ್ ಕೇಳಿದ ಗಂಡ!
ಬೆಂಗಳೂರಿನ ‘ಮೆಟ್ರೋ ಪ್ರಯಾಣಿಕ’ರಿಗೆ ಸಿಹಿಸುದ್ದಿ: ಎಲ್ಲಾ ನಿಲ್ದಾಣಗಳಲ್ಲಿ ‘ಡಿಜಿಟಲ್ ಲಗೇಜ್ ಲಾಕರ್’ ಸೌಲಭ್ಯ
ಅಯ್ಯಪ್ಪನ ಭಕ್ತರಿಗೆ KSRTC ಗುಡ್ನ್ಯೂಸ್; ಶಬರಿಮಲೆಗೆ ಹೋಗಲು ವಿಶೇಷ ವ್ಯವಸ್ಥೆ..!
ಪಾರು ಖ್ಯಾತಿಯ ಮೋಕ್ಷಿತಾಗೆ ತುಕಾಲಿ ಸಂತು ತರದ ಗಂಡ ಬೇಕಂತೆ..!
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್ಪೋರ್ಟ್ ಪಡೆದ ಮಗ .. !
ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು
Trending
- LATEST NEWS17 hours ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- DAKSHINA KANNADA21 hours ago
ಅ*ಪ್ರಾಪ್ತ ವಯಸ್ಕನ ಮೇಲೆ ಅ*ಸ್ವಾಭವಿಕ ಲೈಂ*ಗಿಕ ಕ್ರಿಯೆ ಆರೋಪ; ಶಿಕ್ಷಕ ದೋಷಮುಕ್ತ
- LATEST NEWS19 hours ago
ಅಯ್ಯಪ್ಪನ ಭಕ್ತರಿಗೆ KSRTC ಗುಡ್ನ್ಯೂಸ್; ಶಬರಿಮಲೆಗೆ ಹೋಗಲು ವಿಶೇಷ ವ್ಯವಸ್ಥೆ..!
- LATEST NEWS7 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್