Connect with us

    BIG BOSS

    ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯ ಜೈಲು ಪಾಲಾಗಿದ್ದಾರೆ. ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದ ಚೈತ್ರಾ ಕುಂದಾಪುರ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದರು.

    ಬಿಗ್‌ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಮೂರನೇ ವಾರದಲ್ಲಿ ಮನೆಯಲ್ಲಿದ್ದ 14 ಸ್ಪರ್ಧಿಗಳಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದರು. ಬಿಗ್​ಬಾಸ್​ ಮನೆಯಲ್ಲಿ ಅಪ್ರಾಮಾ ಣಿಕ ಯಾರು ಹಾಗೂ ಕುತಂತ್ರಿ ಯಾರು ಅಂತ ಹೇಳಿ ಎಂದಿದ್ದರು.

    ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಕುಂದಾಪುರ ಬಿಗ್​ಬಾಸ್​ ಜೈಲಿಗೆ ಹೋಗಿದ್ದಾರೆ. ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.

    BIG BOSS

    BBK11: ಪುತ್ತೂರಿಗೆ ಆಗಮಿಸಿದ ಧನರಾಜ್ ಆಚಾರ್ಯ; ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

    Published

    on

    ಪುತ್ತೂರು : ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಹುಟ್ಟೂರು ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸುಮಾರು 16 ವಾರಗಳ ಕಾಲ ಉಳಿದುಕೊಂಡು ಕೊನೆಯ ಹಂತದಲ್ಲಿ ಹೊರಬಂದಿದ್ದರು. ಬಹಳಷ್ಟು ಅಭಿಮಾನಿಗಳನ್ನ ತನ್ನ ಡೈಲಾಗ್ ಗಳ ಮೂಲಕವೇ ಮನರಂಜಿಸುತ್ತಿದ್ದರು.

    ಬಿಗ್ ಬಾಸ್ ಮನೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಡೈಲಾಗ್ ಹೇಳಿ ಎಲ್ಲಾ ಸ್ಪರ್ಧಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ವೀಕ್ಷಕರ ಮನಸ್ಸನ್ನೂ ಗೆದ್ದುಕೊಂಡು 16ನೇ ವಾರದವರೆಗೆ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ‘ಕಿಚ್ಚ’ ಸುದೀಪ್ ಅವರ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದರು.

    ಧನರಾಜ್ ಅವರು ಆಸೆ ಪಟ್ಟಂತೆ ಅವರ ಕುಟುಂಬಸ್ಥರು, ಮುಖ್ಯವಾಗಿ ಅವರ ಮಗಳು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಖುಷಿಯನ್ನು ದುಪ್ಪಟ್ಟು ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರ ಜೊತೆಗೆ ಓಡಾಡಿಕೊಂಡಿದ್ದ ಧನರಾಜ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ನೇರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಅನಂತಾಡಿ ಕೊಡಾಜೆಯ ತನ್ನ ಮನೆಗೆ ತೆರಳಿದ್ದಾರೆ.

    ಇದನ್ನೂ ಓದಿ: ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?

    ಧನರಾಜ್ ಅವರನ್ನ ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಭಿನಂದಿಸಿದರು. ಈ ಸಂದರ್ಭ ಧನ್ ರಾಜ್ ಆಚಾರ್ಯ ಅವರ ತಂದೆ, ಸಹೋದರಿ ಮತ್ತು ಚಿಕ್ಕಪ್ಪ ಮತ್ತು ಅವರ ಆಪ್ತ ಬಳಗದವರು ಜೊತೆಗಿದ್ದರು.

    ಇನ್ನು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಹಲವಾರು ಆಫರ್ ಗಳು ಹೊರಬಂದಿವೆ ಅಂತ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಸಿನಿಮಾ ಸೇರಿದಂತೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಿಂದ ಈಗಾಗ್ಲೇ ಆಫರ್‌ಗಳು ಲಭಿಸಿವೆ ಎಂದರು.

    ಇನ್ನು ಬಿಗ್ ಬಾಸ್ ಅಂತಿಮ ಹಂತದಲ್ಲಿದ್ದು ನಮ್ ದೋಸ್ತ್ ಹನುಮಂತ ಗೆಲ್ಲುತ್ತಾನೆ ಅನ್ನೋ ನಂಬಿಕೆ ಇದೆ ಅಂತ ಪುನರುಚ್ಚರಿಸಿದರು.

    Continue Reading

    BIG BOSS

    ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್‌ ಪ್ರಪೋಸ್

    Published

    on

    ಬಿಗ್‌ ಬಾಸ್‌ ಮನೆಯ ಆಟ ಇನ್ನೇನು 4 ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗಲೇ ಭವ್ಯಾಗೆ ಪತ್ರ ಬರೆದು ತಮ್ಮ ಮನದಾಳದ ಮಾತನ್ನು ತ್ರಿವಿಕ್ರಮ್ ಅವರು ಹೇಳಿಕೊಂಡಿದ್ದಾರೆ. ಸ್ಪರ್ಧಿಗಳ ಎದುರು ಭವ್ಯಾಗೆ ಐ ಲವ್ ಯೂ ಎಂದು ತ್ರಿವಿಕ್ರಮ್ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.‌

    ಬಿಗ್ ಬಾಸ್‌ನಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಈ ಚಟುವಟಿಕೆ ಪ್ರಕಾರ, ಸ್ಪರ್ಧಿಗಳು ಎಲ್ಲಾ ಸ್ಪರ್ಧಿಗಳಿಗೆ ಪತ್ರ ಬರೆದು ತಮಗೆ ಅನಿಸಿದ ಮಾತನ್ನು ತಿಳಿಸಬೇಕಿತ್ತು. ಇದಕ್ಕಾಗಿ ರೆಸಾರ್ಟ್ ಮಾದರಿಯ ಸೆಟ್ ಕೂಡ ಹಾಕಿದ್ದರು ಬಿಗ್ ಬಾಸ್. ಅಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ, ಭವ್ಯಾ ಅವರಿಗೆ ತ್ರಿವಿಕ್ರಮ್ ಪತ್ರ ಬರೆದಿದ್ದಾರೆ. ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು, ಸಾಧನೆಗಳ ಚೀಲವನ್ನು ನೀರು ಕುಡಿದಷ್ಟೇ ಸಲೀಸಾಗಿ ಹೊತ್ತು ಸಾಗುತ್ತಿರುವ ಸ್ಮಾಲ್ ಸಾಧಕಿ ನೀನು. ಕಷ್ಟ ಎಂಬ ಕೆಸರಿನಲ್ಲಿ ಅರಳಿದ ಕಮಲ ನೀನು. ತಂದೆ-ತಾಯಿಗೆ ಗಂಡು ಮಗ ನೀನು. ಗೆಳೆಯರಿಗೆ ರೌಡಿ ಬೇಬಿ ನೀನು. ಕನ್ನಡಿಗರ ಮನ ಗೆದ್ದ ಗೀತಾ ನೀನು. ಜಗತ್ತು ಬೇಕಾದ್ದು ಹೇಳಲಿ, ನನ್ನ ಮತ್ತು ನಿನ್ನ ಗೆಳೆತನ ಕಲುಷಿತವಾಗದಿರಲಿ. ಯಾರು ಏನಾದರೂ ಹೇಳಿಕೊಳ್ಳಲಿ. ಐ ಲವ್ ಯೂ ಪನ್ನಿ ಕುಟ್ಟಿ ಎಂದು ಭವ್ಯಾಗಾಗಿ ತ್ರಿವಿಕ್ರಮ್ ಪತ್ರದಲ್ಲಿ ಹೇಳಿದ್ದಾರೆ.

    ಈ ವೇಳೆ, ಇದೆಲ್ಲ ವೋಟ್ ಪಡೆಯಲು ಮಾಡಿದ ತಂತ್ರ ಎಂದು ಹನುಮಂತಗೆ ಅನ್ನಿಸಿರಬಹುದು. ಇದಕ್ಕಾಗಿ ಅವರು, ಏನ್ ಆಡ್ತಾರಿ ಆಟಾನ ಎಂದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು.

    ಇನ್ನೂ ಈ ಮೊದಲು ಭವ್ಯಾಗೆ ತ್ರಿವಿಕ್ರಮ್ ಅವರು ಪ್ರಪೋಸ್ ಕೂಡ ಮಾಡಿದ್ದರು. ಹೊರ ಹೋದ ಬಳಿಕ ಆ ಬಗ್ಗೆ ಯೋಚಿಸೋಣ ಎಂದು ಭವ್ಯಾ ಅವರು ನೇರವಾಗಿ ಹೇಳಿಕೊಂಡಿದ್ದರು. ಇದು ವೀಕೆಂಡ್‌ ಪಂಚಾಯಿತಿಯಲ್ಲಿ ಸುದೀಪ್‌ ಮುಂದೆ ಚರ್ಚೆ ಕೂಡ ಆಗಿತ್ತು. ಆದರೆ ಇಬ್ಬರೂ ಪ್ರೀತಿಸುತ್ತಿರೋದಾಗಿ ಒಪ್ಪಿಕೊಂಡಿಲ್ಲ. ನಾವಿಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದಷ್ಟೇ ಮಾತನಾಡಿದರು.

    Continue Reading

    BIG BOSS

    ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?

    Published

    on

    ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಅದ್ದೂರಿ ಗ್ರ್ಯಾಂಡ್ ಫಿನಾಲೆ ಇದೇ ವಾರದಲ್ಲಿ ನಡೆಯಲಿದೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್‌ನ ಫಿನಾಲೆ ವಾರದಲ್ಲೇ ಹೊರಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

    ಸದ್ಯ ಅತಿ ದೊಡ್ಡ ಬಿಗ್ ಬಾಸ್ ಮನೆಯಲ್ಲಿ ಕೇವಲ ಆರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಮೊದಲು ಬಿಗ್‌ಬಾಸ್ ಮನೆಯಿಂದ ಆಚೆ ಬರೋರು ಯಾರು ಅಂತ ಚರ್ಚೆ ಶುರುವಾಗಿದೆ.

    ಹನುಮಂತ ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ತಲುಪಿದ್ದರು. ಈ ಬೆನ್ನಲ್ಲೇ ಹನುಮಂತು ಸೇಫ್ ಮಾಡಿರುವ ಕಾರಣದಿಂದ ಮೋಕ್ಷಿತಾ ಕೂಡ ಫಿನಾಲೆಗೆ ತಲುಪಿದ್ದರು. ಅದಾದ ಬಳಿಕ ತ್ರಿವಿಕ್ರಮ್ ಅವರು ಕೂಡ ಫಿನಾಲೆಗೆ ಎಂಟ್ರಿ ಕೊಟ್ಟರು.

    ಆದರೆ ಇನ್ನು ಉಳಿದಿರುವ ಭವ್ಯಾ, ಉಗ್ರಂ ಮಂಜು ಹಾಗೂ ರಜತ್ ನಡುವೆ ಯಾರು ಫಿನಾಲೆ ವಾರದಲ್ಲಿರುವಾಗಲೇ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: ಸ್ಯಾಂಡಲ್‌ವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ಮೊನಾಲಿಸಾ

    ಇದರಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಭವ್ಯಾ. ಧನರಾಜ್ ಹೊರ ಹೋದಾಗಲೂ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದರು. ಧನರಾಜ್ ಬದಲು ಭವ್ಯಾ ಹೊರಹೋಗಬೇಕಿತ್ತು ಎನ್ನುವ ಮಾತುಗಳು ಕೇಳಿಬರುತ್ತಿತ್ತು.

    ಹೀಗಾಗಿ ಫಿನಾಲೆ ವಾರದಲ್ಲಿ ಭವ್ಯಾ ಅವರು ಹೊರ ಬರಬಹುದು ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಇದ್ದುಕೊಂಡು ಇನ್ನೇನೂ ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗೋದು ಯಾರು ಅಂತ ಭಾನುವಾರದ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

    Continue Reading

    LATEST NEWS

    Trending