Connect with us

LATEST NEWS

Mandya: ಲಾಂಗ್ ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ ವಿದ್ಯಾರ್ಥಿ..!

Published

on

ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಎಂದು ಆತನ ವಿರುದ್ಧ  ಪೋಷಕರಿಗೆ ದೂರು ನೀಡಿದ ಶಿಕ್ಷಕರೋರ್ವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ

ಮಂಡ್ಯ: ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಎಂದು ಆತನ ವಿರುದ್ಧ  ಪೋಷಕರಿಗೆ ದೂರು ನೀಡಿದ ಶಿಕ್ಷಕರೋರ್ವರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ.

ಹಾಗಾಗಿ ಅದೇ ಕಾಲೆಜಿನ ಉಪನ್ಯಾಸಕರೊಬ್ಬರು ಮಗನಿಗೆ ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದರು.

ಇದರಿಂದ ಕೋಪಗೊಂಡ ವಿದ್ಯಾರ್ಥಿ ಲಾಂಗ್ ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಹಾಕುತ್ತಿರುವ ವೀಡಿಯೋ ಇದೀಗ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ವಿದ್ಯಾರ್ಥಿಯಿಂದ ಬೈಕ್ ಹಾಗೂ ಲಾಂಗ್‍ನ್ನು ವಶಪಡಿಸಿಕೊಂಡಿದ್ದಾರೆ.

ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಮತ್ತೊಮ್ಮೆ ಈ ರೀತಿ ಮಾಡದಂತೆ ತಿಳುವಳಿಕೆ ಹೇಳಿ ಕಳಿಸಿದ್ದಾರೆ.

bengaluru

ಕಾಂತಾರ ಚಿತ್ರಕ್ಕೆ 1 ವರ್ಷ-ನಾಳೆ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್

Published

on

ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ. ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.

 

ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ.

ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.

ಸಣ್ಣ ಬಜೆಟ್ ನಲ್ಲಿ ಕಾಂತಾರ ಸಿನೆಮಾ ನಿರ್ಮಾಣವಾಗಿದ್ದು ಚಿತ್ರ ಗಳಿಸಿದ್ದು ಮಾತ್ರ ಬರೋಬ್ಬರಿ 400 ಕೋಟಿಗಿಂತಲೂ ಅಧಿಕ ಮೊತ್ತ.

ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿ ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಹಚ್ಚೊತ್ತಿದ್ರು.

ನಿರೀಕ್ಷೆಗೂ ಮೀರಿ ನೇಮು-ಫೇಮು ಎಲ್ಲವೂ ಸಿಕ್ಕಿತು.


ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಈ ಹಿನ್ನಲೆ ನಾಳೆ ಸೆ. 30 ರಂದು ಬೆಳಿಗ್ಗೆ ಕಾಂತಾರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡ ‘ವರಾಹ ರೂಪಂ’ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಲಿದೆ.

ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.

Continue Reading

DAKSHINA KANNADA

ಕಡಲ ಮಧ್ಯೆ ಸಿಲುಕಿದ ಮೀನುಗಾರಿಕಾ ಬೋಟ್‌- ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್‌

Published

on

ಮಂಗಳೂರು: ಮಂಗಳೂರು ನಗರದ ಹಳೆ ಬಂದರು ಧಕ್ಕೆಯಿಂದ ಮೀನುಗಾರಿಕೆಗೆ ಹೋಗಿದ್ದ ಬೋಟೊಂದು 39 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿದಾಗ ಅದರಲ್ಲಿದ್ದ ಮೀನುಗಾರರನ್ನು ಭಾರತೀಯ ಕೋಸ್ಟ್‌ ಗಾರ್ಡ್ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿತ್ತು.

ಈ ಬಗ್ಗೆ ಬೋಟ್‌ನಿಂದ ಮುಂಬೈನ ತಟ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು.

ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ತಕ್ಷಣ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು.

ಅದರಂತೆ ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲಕರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ ಕೋಸ್ಟ್‌ ಗಾರ್ಡ್‌ನ ಎರಡು ಇಂಟರ್‌ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ನವಮಂಗಳೂರು ಬಂದರು ತೀರಕ್ಕೆ ಎಳೆದು ತಂದು ರಕ್ಷಿಸಿವೆ ಎಂದು ಕೋಸ್ಟ್‌ಗಾರ್ಡ್ ತಿಳಿಸಿದೆ.

Continue Reading

LATEST NEWS

Lucknow: ಪುತ್ರಿ ಮದುವೆ ಮಾಡಲು ಎಂದು ಲಾಕರ್ ನಲ್ಲಿಟ್ಟ 18 ಲಕ್ಷ ರೂ. ಗೆದ್ದಲು ಪಾಲು..!

Published

on

ಲಕ್ನೋ: ಮಗಳ ಮದುವೆಗೆಂದು ತಾಯಿಯೊಬ್ಬರು ರೂಪಾಯಿ-ರೂಪಾಯಿ ಹಣವನ್ನು ಜೋಪಾನವಾಗಿ ಬ್ಯಾಂಕ್‌ನ ಲಾಕರ್‌ನಲ್ಲಿ ಕೂಡಿ ಇಟ್ಟ ಸುಮಾರು 18 ಲಕ್ಷ ರೂ. ಹಣವು ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವರದಿಯಾಗಿದೆ.

ಮೊರಾದಾಬಾದ್‌ ನಿವಾಸಿ ಅಲ್ಕಾ ಪಠಾಕ್‌ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಶಿಯಾನಾದ ಬ್ಯಾಂಕ್‌ ಆಫ್ ಬರೋಡಾ ಶಾಖೆಯಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು.

ಇತ್ತೀಚಿಗೆ ಬ್ಯಾಂಕ್‌ ಸಿಬಂದಿ ಲಾಕರ್‌ ಅಗ್ರಿಮೆಂಟ್‌ ರಿನೀವಲ್‌ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ.

ಈ ವೇಳೆ ಲಾಕರ್‌ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಕಂಡು ಬಂದಿದೆ.

ಈ ಬಗ್ಗೆ ಬ್ಯಾಂಕ್‌ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿದ್ದಾರೆ.

ತನಗಾದ  ನಷ್ಟಕ್ಕೆ ಬ್ಯಾಂಕ್‌ನವರೇ ಪರಿಹಾರ ನೀಡಬೇಕೆಂದು ಮಹಿಳೆ ಪಟ್ಟು ಹಿಡಿದಿರುವುದು ವರದಿಯಾಗಿದೆ.

Continue Reading

LATEST NEWS

Trending