ಮುಲ್ಕಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಮುಖ್ಯ ಜಂಕ್ಷನ್ ಬಳಿಯಲ್ಲಿ ಸ್ಪಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದೆ.
ಕೊಲ್ಲೂರು ಯಾತ್ರೆಯನ್ನು ಮುಗಿಸಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಕಾರು ಪಾವಂಜೆ ಜಂಕ್ಷನ್ ಬಳಿ ಬಂದಾಗ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಹತ್ತಿರದಲ್ಲಿದ್ದ ಎಳೆನೀರು ಮಾರಾಟದ ಅಂಗಡಿಯತ್ತ ನುಗಿದ್ದು ಅಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ.
ರಾಜು ಅವರ ಅಂಗಡಿಯ ಮುಂಗಟ್ಟುವಿನಲ್ಲಿ ಮಾರಾಟಕ್ಕಿಟ್ಟಿದ್ದ ಎಳನೀರು, ತೆಂಗಿನ ಮರ, ಸೋಟಾ ಬಾಟ್ಲಿಗಳು ಚೆಲ್ಲಾಪಿಲ್ಲಿಯಾಗಿದೆ. ಬೈಕ್ ಸವಾರ ಪಕ್ಷಿಕೆರೆಯ ಸರ್ಫಾಜ್ ಬೈಕ್ ನಿಲ್ಲಿಸಿ, ಎಳನೀರು ಕುಡಿಯಲೆಂದು ತೆರಳಿದ್ದರು.
ಕೇರಳ ಮೂಲದ ಕಾರಿನಲ್ಲಿ ಮೂವರು ಮಹಿಳೆಯರು, ಮಗು ಹಾಗೂ ಮೂವರು ಪುರುಷರಿದ್ದು ಒರ್ವ ಮಹಿಳೆಗೆ ತಲೆಗೆ ಗಂಭೀರ ಗಾಯವಾಗಿದೆ ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.