ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿದ ರೂಪೇಶ್ ತಮ್ಮ ಈ ಅಭೂತ ಪೂರ್ವ ಗೆಲುವನ್ನು ತುಳುನಾಡಿನ ದೈವ ಕೊರಗಜ್ಜನಿಗೆ ಸಮರ್ಪಿಸಿದ್ದಾರೆ.
ಮಂಗಳೂರು : ಬಿಗ್ ಬಾಸ್ ಸೀಸನ್ 9 ರ ವಿನ್ನರ್ (Bigg Boss Kannada 9) ಆಗಿ ತುಳುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ.
ರೂಪೇಶ್ ಆಟಕ್ಕೆ ಕರಾವಳಿ ಮಾತ್ರವಲ್ಲ ಇಡೀಯ ಕರುನಾಡ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಬಿಗ್ ಬಾಸ್ ಟ್ರೋಫಿಯೊಂದಿಗೆ ರೂಪೇಶ್ ತಾಯ್ನಾಡು ಮಂಗಳೂರಿಗೆ ಆಗಮಿಸಿದ್ದು ಮಂಗಳೂರಿನ ಜನ , ರೂಪೇಶ್ ಅಭಿಮಾನಿಗಳು ಆದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿದ ರೂಪೇಶ್ ತಮ್ಮ ಈ ಅಭೂತ ಪೂರ್ವ ಗೆಲುವನ್ನು ತುಳುನಾಡಿನ ದೈವ ಕೊರಗಜ್ಜನಿಗೆ ಸಮರ್ಪಿಸಿದ್ದಾರೆ.
ಜೊತೆಗೆ ಕೊರಗಜ್ಜನ ಸನ್ನಿಧಾನಕ್ಕೂ ರೂಪೇಶ್ ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದಿದ್ದಾರೆ.” ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಪಕ್ಷ ಟಾಪ್ 5 ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ.
ಆದರೆ ಬಿಗ್ ಬಾಸ್‌ನಲ್ಲಿ ನನ್ನನ್ನು ಅವರೇ ಗೆಲ್ಲಿಸಿದ್ದಾರೆ ಎಂದು ರೂಪೇಶ್ ಶೆಟ್ಟಿ ಅಜ್ಜನ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳಿದ್ದಾರೆ.
ತಾವು ಗೆದ್ದಿರುವ ಹಣದಲ್ಲಿ ಕೊರಗಜ್ಜ ದೈವಕೋಲ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ.
ಸದ್ಯದಲ್ಲೇ ದೈವಾರಾಧನೆ ಕಾರ್ಯರೂಪಕ್ಕೆ ಬರಲಿದೆ.
ಬಿಗ್ ಬಾಸ್‌ನ ಗೆಲುವಿನ ಸಕ್ಸಸ್ ನಂತರ ರೂಪೇಶ್ ಶೆಟ್ಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ತುಳು, ಕನ್ನಡ, ತೆಲುಗು ಸಿನಿಮಾಗಳಲ್ಲೂ ರೂಪೇಶ್ ಕಾಣಿಸಿಕೊಳ್ಳಲಿದ್ದಾರೆ.