ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಅಧಿಧನ್ ಹೋಟೆಲ್ ಎದುರು ಭಾಗದ ಜಂಕ್ಷನ್ ಬಳಿ ಸೋಮರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೈಕ್ ಗೆ ಸ್ಕೂಟರ್ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೈಕ್ ಸವಾರರನ್ನು ಕಾರ್ಕಳ ಮೂಲದವರು ಎಂದು ಗುರುತಿಸಲಾಗಿದೆ.
ಕಾರ್ಕಳದಿಂದ ಮಂಗಳೂರು ಹೋಗುತ್ತಿದ್ದ ಬೈಕ್ ಗೆ ಮುಲ್ಕಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಬಪ್ಪನಾಡು ಒಳ ರಸ್ತೆಯಿಂದ ಕೆನರಾ ಬ್ಯಾಂಕ್ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಭಾರಿ ಶಬ್ದ ಉಂಟಾಗಿದ್ದು ಸಿನಿಮೀಯ ಮಾದರಿಯಲ್ಲಿ ಬೈಕ್ ನಲ್ಲಿದ್ದ ಸವಾರ ಹಾಗೂ ಸಹಸವಾರ ಹೆದ್ದಾರಿಯಲ್ಲಿ ಬಿದ್ದ ದೃಶ್ಯ ಭಯಾನಕವಾಗಿದ್ದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.