Saturday, August 20, 2022

ವಿಶ್ವಾಸಮತಕ್ಕೆ ಮುನ್ನವೇ ಮಹಾರಾಷ್ಟ್ರ ಸಿಎಂ ರಾಜೀನಾಮೆ ಘೋಷಣೆ

ಮಹಾರಾಷ್ಟ್ರ: ಸುಪ್ರೀಂಕೋರ್ಟ್ ವಿಶ್ವಾಸ ಮತಯಾಚನೆ ಮಾಡಲು ಆದೇಶಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ್ದಾರೆ.

ತಡರಾತ್ರಿ ರಾಜ್ಯಪಾಲರ ನಿವಾಸಕ್ಕೆ ಆಗಮಿಸಿದ ಠಾಕ್ರೆ ಭಗತ್ ಸಿಂಗ್ ಕೋಶಿಯಾ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿ ತಮ್ಮ ನಿರ್ಧಾರವನ್ನು ಘೋಷಿಸಿದರು.
ಇದಕ್ಕೂ ಮುನ್ನಾ ಠಾಕ್ರೆ ಫೇಸ್ ಬುಕ್ ಲೈವ್ ಮೂಲಕ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.


ಈ ಮೂಲಕ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರ 2 ವರ್ಷ 7 ತಿಂಗಳಲ್ಲೇ ಪತನಗೊಂಡಿದಂತಾಗಿದೆ.

ವಿಶ್ವಾಸಮತಯಾಚನೆ ಮಾಡಲು ಸುಪ್ರೀಂಕೋರ್ಟ್​ ಸೂಚನೆ ನೀಡುತ್ತಿದ್ದಂತೆ ಫೇಸ್​ಬುಕ್​ನಲ್ಲಿ ಲೈವ್‌ಗೆ ಬಂದು ಮಾತನಾಡಿದ ಉದ್ಧವ್ ಅನೇಕ ವಿಚಾರಗಳನ್ನು ಹಂಚಿಕೊಂಡರು.

ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ ಎಂದಿರುವ ಠಾಕ್ರೆ, “ಬಾಳಾ ಸಾಹೇಬ್ ಠಾಕ್ರೆ ಅವರ ಕನಸು ನನಸು ಮಾಡಿದ್ದೇನೆ. ಔರಂಗಾಬಾದ್​​ಗೆ ಸಂಭಾಜಿನಗರ ಎಂದು ಮರುನಾಮಕರಣ ಮಾಡಿದ್ದೇನೆ”.

ಜೊತೆಗೆ ಇದೇ ವೇಳೆ ಎನ್​.ಸಿ.ಪಿ ಮುಖ್ಯಸ್ಥ ಶರದ್ ಪವಾರ್​, ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದರು.ಇನ್ನು ರಿಕ್ಷಾವಾಲಾನನ್ನೂ ಸಚಿವನನ್ನಾಗಿ ಮಾಡಿರುವ ಹೆಮ್ಮೆ ನನಗಿದೆ.
ಬರುವ ದಿನಗಳಲ್ಲಿ ಶಿವಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಸದ್ಯ ನಮ್ಮವರೇ ನಮ್ಮನ್ನು ಕೈಬಿಟ್ಟರು” ಎಂದು ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸ್ಥಾನದ ಜೊತೆಗೆ ಉದ್ಧವ್​ ಠಾಕ್ರೆ ವಿಧಾನ ಪರಿಷತ್‌ ಸ್ಥಾನವನ್ನೂ ತ್ಯಜಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಇಂದು ವಿಶ್ವಾಸಮತ ಯಾಚನೆ ಮಾಡಬೇಕಿತ್ತು. ಆದರೆ, ಇದಕ್ಕೂ ಮುನ್ನವೇ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿರುವ ಉದ್ಧವ್ ಠಾಕ್ರೆ, ಆಡಳಿತಾವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿ ಮಿತ್ರಪಕ್ಷಗಳಾದ ಎನ್.​​ಸಿ.ಪಿ ಮತ್ತು ಕಾಂಗ್ರೆಸ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ಬಂದಿದ್ದೇನೆ. ಅದೇ ರೀತಿ ಇದೀಗ ನಿರ್ಗಮಿಸುತ್ತಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ.

ಮತ್ತೊಂದು ಶಿವಸೇನೆ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ. ನಾವೆಲ್ಲರೂ ಶಿವಸೇನೆಯಲ್ಲಿದ್ದೇವೆ. ಮತ್ತೊಮ್ಮೆ ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics