Connect with us

    LATEST NEWS

    ಉಡುಪಿ : ಅಪರಿಚಿತರಿಂದ ಅಧಿಕ ಲಾಭಾಂಶದ ಆಮಿಷ : ಬ್ಯಾಂಕ್‌ ಮ್ಯಾನೇಜರ್‌ಗೆ ವಂಚನೆ

    Published

    on

    ಉಡುಪಿ: ಬ್ಯಾಂಕ್‌ ಮ್ಯಾನೇಜರ್‌ವೊಬ್ಬರಿಗೆ ಅಧಿಕ ಲಾಭಾಂ ಶದ ಆಮಿಷವೊಡ್ಡಿದ ಆನ್‌ಲೈನ್‌ ವಂಚಕರು ಅವರ ಖಾತೆಯಿಂದಲೇ 14 ಲಕ್ಷ ರೂ.ಗಳನ್ನು ಹಂತ-ಹಂತವಾಗಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ ಉಡುಪಿಯಲ್ಲಿ ನಡೆದಿದೆ.


    ದೊಂಡೇರಂಗಡಿಯಲ್ಲಿರುವ ಬ್ಯಾಂಕೊಂದರ ಮ್ಯಾನೇಜರ್‌ ಪವನ್‌ ಕುಮಾರ್‌ ವಂಚನೆಗೆ ಒಳಗಾದವರು.

    ಯಾರೋ ಅಪರಿಚಿತರು ಪವನ್‌ ಕುಮಾರ್‌ ಅವರನ್ನು C22 Investment Alliance Trading ಎಂಬ ವಾಟ್ಸಾಪ್‌ ಗ್ರೂಪ್‌ಗೆ ಸೇರ್ಪಡೆ ಮಾಡಿದ್ದರು.

    ಅನಂತರ ಅವರ ಮೊಬೈಲ್‌ನಿಂದ ಷೇರು ಮಾರುಕಟ್ಟೆಯ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪವನ್‌ ಕುಮಾರ್‌ ಅವರನ್ನು ನಂಬಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂಬ ಆಸೆ ತೋರಿಸಿದ್ದಾರೆ. ಬಳಿಕ Causeway App ಮೂಲಕ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ.

    ಇದನ್ನು ನಂಬಿದ ಅವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗ ಳಿಗೆ ಅ.7ರಿಂದ 19ರವರೆಗೆ ಹಂತ ಹಂತವಾಗಿ 14,00,000 ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೆ ವಂಚನೆ ಎಸಗಿದ್ದಾರೆ.

    ಉಡುಪಿಯ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    FILM

    ನಟಿ ಸೋನಾಲ್‌ಗೆ ಜೀವನದಲ್ಲಿ ಈ ಒಂದು ವಿಚಾರ ಇಷ್ಟ ಇಲ್ಲವಂತೆ

    Published

    on

    ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಎಂದರೆ ಕಾಟೇರ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ. ಈ ವರ್ಷದ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮೊದಲ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋಶೂಟ್‌ ಕೂಡ ಮಾಡಿಸಿದ್ದ, ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಕೆಲವು ವಿಶೇಷ ಸಂದರ್ಶನಗಳನ್ನು ಸಹ ನೀಡಿದ್ದಾರೆ.

    ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಟಿ ಸೋನಲ್ ಮೊಂಥೆರೋ ತಮಗೆ ಜೀವನದಲ್ಲಿ ಇಷ್ಟವೇ ಇಲ್ಲದ ಒಂದು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಸಂದರ್ಶನಲ್ಲಿ ಮಾತನಾಡಿದ ಅವರು, ತರುಣ್ ಸುಧೀರ್ ಹಾಗೂ ಸೋನಲ್ ಇಬ್ಬರಲ್ಲಿ ಯಾರು ಬೆಳಗ್ಗೆ ಬೇಗ ಏಳುವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಈ ಪ್ರಶ್ನೆಗೆ ಮೊದಲು ಉತ್ತರಿಸಿದ ತರುಣ್ ಸುಧೀರ್ ‘ಪಾಪ ಅವರು ಬೆಳಗಿನ ಜಾವ ಐದು ಗಂಟೆಗೆ ಎದ್ದು, ನಮ್ಮ ಅಪಾರ್ಟ್‌ಮೆಂಟ್‌ ಮುಂದೆ ನೀರು ಹಾಕಿ ರಂಗೋಲಿ ಇಟ್ಟು, ಪೇಪರ್‌ ಒಳಗೆ ಇಟ್ಟು, ಹಾಲೆಲ್ಲ ಬಿಸಿ ಮಾಡಿ, ಈ ಎಲ್ಲಾ ಕೆಲಸ ಮುಗಿಸಿ ದೇವರಿಗೆ ದೀಪ ಹಚ್ಚುವಾಗ ಕೈ ಸುಡುತ್ತಲ್ಲ ಅವಾಗ ಅವರಿಗೆ ಎಚ್ಚರ ಆಗುತ್ತದೆ.

    ‘ಆಗ ಎದ್ದು ನೋಡುವಾಗ ಗಂಟೆ ಒಂಬತ್ತು ಆಗಿರುತ್ತದೆ. ನಾನು ಆಗ ಆಫೀಸ್‌ಗೆ ರೆಡಿ ಆಗುತ್ತಿರುತ್ತೇನೆ. ನೀವು ಈಗ ಎದ್ರಾ ಕೇಳ್ತಾರೆ. ನಾನು ಎದ್ದು ನನ್ನ ಕ್ರಿಕೆಟ್‌ ಮುಗಿಸಿ, ತಿಂಡಿ ಎಲ್ಲಾ ತಿಂದು ಎಲ್ಲಾ ಕೆಲಸ ಮುಗಿಸಿರುತ್ತೇನೆ. ಅವಾಗ ಇವರು ಎದ್ದೇಳುತ್ತಾರೆ’ ಎಂದು ಸೋನಲ್ ಬೆಳಗ್ಗೆ ಬೇಗ ಎದ್ದೇಳಲ್ಲ ಎನ್ನುವುದನ್ನು ಪರೋಕ್ಷವಾಗಿ ತಮಾಷೆಯಾಗಿ ಹೇಳಿದ್ದಾರೆ.

    ತರುಣ್ ಹೇಳಿದ ಮಾತು ಕೇಳಿ ಜೋರಾಗಿ ನಕ್ಕ ಸೋನಲ್ ಅಸಲಿ ವಿಚಾರವನ್ನು ಮಾತನಾಡಿದ್ದಾರೆ. ‘ ಜೀವನದಲ್ಲಿ ಅದೊಂದು ಆಗಲ್ಲ ನನಗೆ. ಬೆಳಗ್ಗೆ ಬೇಗ ಎದ್ದೇಳುವುದು ಒಂದು ನನಗೆ ಆಗಲ್ಲ. ಬೇಕಿದ್ದರೆ ರಾತ್ರಿ ಮೂರು ಗಂಟೆ ತನಕ ಎದ್ದಿರುತ್ತೇನೆ. ಆದರೆ ಬೆಳಗ್ಗೆ ನನ್ನ ಕಣ್ಣೇ ತೆರೆಯಲು ಆಗುವುದಿಲ್ಲ. ಶೂಟಿಂಗ್‌ ಇದ್ದರೆ ಎದ್ದೇ ಏಳುತ್ತೇನೆ. ಇನ್ನು ತರುಣ್‌ ಅವರು ಕಾಫಿ-ಟೀ ಕುಡಿಯುವುದಿಲ್ಲ ಹೀಗಾಗಿ ನಾನು ಬೆಳಗ್ಗೆ ಬೇಗ ಏಳಲ್ಲ’ ಎಂದು ಹೇಳಿದ್ದಾರೆ.

    ಇನ್ನು ಕೆಲವೇ ದಿನಗಳ ಹಿಂದೆ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ನವದಂಪತಿ ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಬೆಂಗಳೂರಿಗೆ ವಾಪಸ್ ಆಗಿರುವ ಈ ಜೋಡಿ ಮತ್ತೆ ತಮ್ಮ ತಮ್ಮ ಸಂದರ್ಶನಗಳು ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.

    Continue Reading

    LATEST NEWS

    ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರಾರಂಭವಾಗಲಿದೆ ವಾಟರ್‌ ಮೆಟ್ರೋ

    Published

    on

    ಮಂಗಳೂರು: ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್‌ ಮೆಟ್ರೋ ಯೋಜನೆಯನ್ನು ಏಪ್ರಿಲ್‌ 25ರಂದು ಉದ್ಘಾಟಿಸಿದ್ದರು. ಅದರಂತೆ ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲೂ ವಾಟರ್‌ ಮೆಟ್ರೋ ಸೇವೆ ಸಿಗುವ ಸಾಧ್ಯತೆಯಿದೆ. ಕರ್ನಾಟಕ ಮಾರಿಟೈಮ್ ಬೋರ್ಡ್ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು ತಯಾರಿಸಲು ನಿರ್ಧರಿಸಿದ್ದು ಟೆಂಡರ್‌ ಆಹ್ವಾನಿಸಿದೆ. ಈ ಸಾರಿಗೆ ಜಾಲ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್‌ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸಲಿದೆ.

    ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್‌ ದೂರದವರೆಗೆ ಬೋಟ್‌ ಸಂಚರಿಸಲಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಕೊಚ್ಚಿಯ ನಂತರ ಮಂಗಳೂರು ವಾಟರ್‌ ಮೆಟ್ರೋ ಯೋಜನೆ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಿದೆ. ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಸಂಪರ್ಕಿತ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ರಚಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಿಂದ ಜೀವನೋಪಾಯದ ಅವಕಾಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    2024-2025ರ ಬಜೆಟ್ ಮಂಡನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ವಾಟರ್ ಮೆಟ್ರೋ ಸೇವೆಯನ್ನು ಆರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಘೋಷಿಸಿದ್ದರು.

    ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್‌ ಮೆಟ್ರೋ ಯೋಜನೆಯನ್ನು ಏಪ್ರಿಲ್‌ 25ರಂದು ಉದ್ಘಾಟಿಸಿದ್ದರು. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳಲ್ಲಿ ಈ ಮೆಟ್ರೋ ಸಂಚಾರ ಮಾಡುತ್ತಿದ್ದು, 8 ಎಲೆಕ್ಟ್ರಿಕ್ ಬೋಟ್‌ಗಳು, 38 ಟರ್ಮಿನಲ್‌ಗಳ ಮೂಲಕ ವಾಟರ್‌ ಮೆಟ್ರೋ ಸೇವೆ ನೀಡುತ್ತಿದೆ.

    Continue Reading

    LATEST NEWS

    ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮುಗಿಸಿ ತೆರಳುತ್ತಿದ್ದಾಗ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು !!

    Published

    on

    ಮಂಗಳೂರು/ಗದಗ : ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಸಾವನಪ್ಪಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾದ ಘಟನೆ ಭೈರನಹಟ್ಟಿ ಗ್ರಾಮದ ಬಳಿ ಇಂದು (ನ.06) ಬೆಳಿಗ್ಗೆ ನಡೆದಿದೆ.

    ಮೃತರನ್ನು ಬಾಗಲಕೋಟೆಯ ಸಿದ್ದರಾಮ ಹಾಗೂ ಹೇಮಾ ಎಂದು ಗುರುತಿಸಲಾಗಿದೆ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾಗೆ ಗಾಯಗಳಾಗಿದ್ದು, ಅವರನ್ನು ನರಗುಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಬುಧವಾರ ಬೆಳಿಗ್ಗೆ ಅಪಘಾತ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಲಾರಿ, ಬಾಗಲಕೋಟೆಗೆ ಹೊರಟ್ಟಿದ್ದ ಕಾರು ಇದಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending