ಬಂಟ್ವಾಳ : ರವಿವಾರ (ನ.3) ರಾತ್ರಿ ಸಂಭವಿಸಿದ ಭೀಕರ ಅ*ಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂ*ಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಸದ್ಯ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿರುವ ಘಟನೆ ಬಂಟ್ವಾಳದ ಕಡೆಗೋಳಿಯಲ್ಲಿ ನಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಸಿ.ಸಿ.ಬಸ್ ಗಳು ಅನೇಕ ಅಮಾಯಕರ ಬಲಿ ತೆಗೆದುಕೊಂಡಿದೆ. ಇಂದು ಅಪಘಾತಕ್ಕೆ ಕಾರಣವಾದ ಸೆಲಿನ ಬಸ್ ಸಹಿತ ಅನೇಕ ಖಾಸಗಿ ಬಸ್ ಗಳು ಎಲ್ಲೆ ಮೀರಿ ಸಂಚಾರ ಮಾಡುತ್ತಿದ್ದು, ಇವರ ಮೇಲೆ ಹಿಡಿತ ಸಾಧಿಸುವ ಆರ್.ಟಿ.ಒ.ಇಲಾಖೆ ಹಾಗೂ ಟ್ರಾಫಿಕ್ ಪೋಲೀಸರು ಮೌನಮುರಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀ ವೇಗದಿಂದ ಮತ್ತು ಅಜಾಗರೂಕತೆಯಿಂದ ಸಂಚಾರ ಮಾಡುವ ಖಾಸಗಿ ಬಸ್ ಗಳ ಮೇಲೆ ಇಲಾಖೆಗಳು ಹಿಡಿತ ಸಾಧಿಸದಿದ್ದರೆ ಇನ್ನೆಷ್ಟು ಬಲಿಯಾಗಲಿದೆಯೊ ಗೊತ್ತಿಲ್ಲ.
ಕಡೆಗೋಳಿ ನಿವಾಸಿ ಪ್ರವೀಣ್ ಹಾಗೂ ಸಂದೀಪ್ ಮೃತ ದುರ್ದೈವಿಗಳು. ಇವರು ಇಬ್ಬರು ಚಿಕ್ಕ ವಯಸ್ಸಿನಿಂದಲೇ ಆತ್ಮೀಯ ಗೆಳೆಯರು. ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಡಿ*ಕ್ಕಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿ*ಕ್ಕಿಯಾಗಿದೆ. ಪರಿಣಾಮ ಇಬ್ಬರು ಪ್ರಾ*ಣ ಕಳೆದುಕೊಂಡಿದ್ದಾರೆ.
ಖಾಸಗಿ ಬಸ್ ಚಾಲಕನ ಅತಿವೇಗದ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮ ಇಬ್ಬರು ಆತ್ಮೀಯ ಸ್ನೇಹಿತರು ಬ*ಲಿಯಾಗಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.