Connect with us

    NATIONAL

    ವಿಶ್ವದ ಶ್ರೀಮಂತ ಭಿಕ್ಷುಕ ಇವರೇ ನೋಡಿ ! ಭರತ್ ಜೈನ್ ಒಟ್ಟು ಆಸ್ತಿ ಎಷ್ಟು ಗೊತ್ತಾ ???

    Published

    on

    ಮಂಗಳೂರು/ಮುಂಬೈ: ಭಿಕ್ಷಾಟನೆಯು ಬಡತನದ ಸಂಕೇತ ಎಂದು ಪರಿಗಣಿಸಲಾಗಿತ್ತು. ಅದರೆ ಅದು ಈಗ ವ್ಯಾಪರವಾಗಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಿಕ್ಷುಕ ಎಂದೆನಿಸಿಕೊಂಡಿರುವ ಭರತ್ ಜೈನ್ ಬಗ್ಗೆ ನಿಮಗೆಷ್ಟು ಗೊತ್ತು ?
    ಭಿಕ್ಷುಕನಾದವನು ದಿನದ ಹೊತ್ತಿನ ಊಟಕ್ಕೂ ಕಷ್ಟ ಪಡುವವನು. ಬಂದ ನೂರೋ,ಇನ್ನೂರೋ ಅವನ ನಿತ್ಯದ ಖರ್ಚಿಗೂ ಸಾಕಾಗದು. ಭಿಕ್ಷುಕ ಎಂದರೆ ಅವನು ಅವಿದ್ಯಾವಂತ, ಆದುದರಿಂದ ಬಡತನ ಅವನನ್ನು ಆವರಿಸುತ್ತದೆ. ವಿದ್ಯೆಯೂ ಇಲ್ಲದೆ, ಯಾವ ಕೆಲಸವೂ ಇಲ್ಲದೆ, ಏನೂ ದಾರಿ ತೋಚದ ಸಂದರ್ಭದಲ್ಲಿ ಹತಾಶೆಗೊಳಗಾಗಿ ಭಿಕ್ಷಾಟನೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.


    ಆದರೆ, ಭಿಕ್ಷಾಟನೆಯೂ ಲಾಭದಾಯಕವಾಗಿರುತ್ತದೆ ಎಂದರೆ ಅದು ನಂಬಲಾಗದ ಸತ್ಯ. ಭರತ್ ಜೈನ್ ಎಂಬಾತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನೆನಿಸಿಕೊಂಡಿದ್ದಾನೆ. ಮುಂಬೈನಲ್ಲಿರುವ ಜೈನ್‌ಗೆ 54 ವರ್ಷ ವಯಸ್ಸಾಗಿದ್ದು, 40 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾ, ದಿನಕ್ಕೆ 2 ಸಾವಿರದಿಂದ 2,500 ಸಾವಿರ ರೂ.ವರೆಗೂ ಗಳಿಸುತ್ತಾನೆ ಎಂದು ವರದಿಯಾಗಿದೆ. ಯಾವುದೇ ರೀತಿಯ ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ

    ಮುಂಬೈನ ಪರೇಲ್​ನಲ್ಲಿ 2 ಬಿಎಚ್​ಕೆ ಫ್ಲ್ಯಾಟ್​ ಹೊಂದಿದ್ದು, ಅದರ ಬೆಲೆ 1.2 ಕೋಟಿ ರೂ. ಭರತ್‌ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದಾನೆ. ಕಾನ್ವೆಂಟ್​ ಶಾಲೆಯಲ್ಲೇ ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕುಟುಂಬ ಸದಸ್ಯರು 30 ಸಾವಿರ ಬಾಡಿಗೆ ಕೊಡುತ್ತಾ ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ.
    ಜೈನ್​ಗೆ ಭಿಕ್ಷಾಟನೆ ಎಂಬುದು ಕುಲ ಕಸುಬಂತಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಿಡಲು ಇಷ್ಟವಿಲ್ಲವೆಂಬುವುದಾಗಿ ಅವನೇ ಹೇಳುತ್ತಾನೆ.


    ಜೈನ್ ಮಾತ್ರವಲ್ಲ ಭಾರತದಲ್ಲಿ 1.5 ಕೋಟಿ ರೂ. ಆಸ್ತಿ ಹೊಂದಿರುವ ಸಂಭಾಜಿ ಕಾಳೆ, 1 ಕೋಟಿ ರೂ. ಆಸ್ತಿ ಹೊಂದಿರುವ ಲಕ್ಷ್ಮೀದಾಸ್ ಭಿಕ್ಷಾಟನೆ ಮಾಡಿಯೇ ಗಳಿಕೆಮಾಡಿದವರು ಎಂಬ ವರದಿಯೂ ದಾಖಲಾಗಿದೆ.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    Published

    on

    ಮಂಗಳೂರು/ಮಧ್ಯಪ್ರದೇಶ: ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಒದಗಿ ಬಂದಿದೆ.


    ರಜತ್ ಪಟಿದಾರ್ ಆರ್ ಸಿಬಿ ತಂಡದಲ್ಲಿ ಪ್ರಮುಖ ಆಟಗಾರ ಹಾಗೂ ಈ ಬಾರಿ ತಂಡ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ರಜತ್ ಪಾಟಿದಾರ್ ಗೆ ರಾಜ್ಯ ತಂಡದ ನಾಯಕತ್ವ ನೀಡಲಾಗಿದೆ.
    ನವೆಂಬರ್ 23 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ 15 ಸದಸ್ಯರ ಮಧ್ಯಪ್ರದೇಶ ತಂಡವನ್ನು ಘೋಷಿಸಲಾಗಿದೆ.

    ಇದನ್ನು ಓದಿ: ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ

    ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಒಂದು ವೇಳೆ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವು ಫೈನಲ್ ಗೆ ತಲುಪಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ರೇಸ್ ನಲ್ಲಿ ರಜತ್ ಪಾಟಿದಾರ್ ಕೂಡ ತೀವ್ರ ಪೈಪೋಟಿ ಕೊಡಲಿದ್ದಾರೆ.


    ಆರ್ ಸಿಬಿ ಪರ 24 ಇನ್ನಿಂಗ್ಸ್ ಆಡಿರುವ ರಜತ್ ಪಾಟಿದಾರ್ 1 ಶತಕ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಈಗಗಾಲೇ ಆರ್ ಸಿ ಬಿ ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ತಂಡದಿಂದ ಹೊರಬಿದಿದ್ದಾರೆ. ಇದರಿಂದ ನಾಯಕತ್ವ ಯಾರ ಪಾಲಾಗಲಿದೆ ಎಂಬುವುದು ತ್ರೀವ್ರ ಕುತೂಹಲ ಮೂಡಿಸಿದೆ.

    Continue Reading

    LATEST NEWS

    ಆಸ್ಪತ್ರೆಗೆ ತೆರಳುವ ರಸ್ತೆ ಮಧ್ಯೆ ಮಗುವಿಗೆ ಜನ್ಮವಿತ್ತ 14ರ ಹುಡುಗಿ !!

    Published

    on

    ಮಂಗಳೂರು/ಮಧ್ಯಪ್ರದೇಶ: 14ರ ಬಾಲೆ ಮಗುವಿನ ಜನ್ಮ ನೀಡಿದ ಘಟನೆ ಮಧ್ಯಪ್ರದೇಶ ಮೊರೆನಾದಲ್ಲಿ ನಡೆದಿದೆ. ಶಾಲೆ, ಕಾಲೇಜು, ವೃತ್ತಿಪರ ಕೋರ್ಸ್, ಬಳಿಕ ಉದ್ಯೋಗ, ಉದ್ಯಮ ಹೀಗೆ ಬಾನೆತ್ತರದ ಕನಸುಗಳು ಮೊಳಕೆಯೊಡೆಯುವ ಸಮಯವೇ ಈಕೆ ತಾಯಿಯಾಗಿದ್ದಾಳೆ. ತನ್ನ ಹೊಟ್ಟೆಯಲ್ಲಿ ಕಳೆದ 9 ತಿಂಗಳಿನಿಂದ ಮಗುವೊಂದು ಬೆಳೆಯುತ್ತಿದೆ ಎಂಬ ಪರಿವೇ ಇರಲಿಲ್ಲ. ‘ಹೊಟ್ಟೆ ನೋವಾಗುತ್ತಿದೆ ಅಮ್ಮಾ. ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕೂಗಾಡುತ್ತಿದ್ದಾಗ ತಾಯಿಯು ಮಗಳನ್ನು ಕರೆದುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟದ ರಸ್ತೆ ಮಧ್ಯೆ ಬಾಲಕಿ ಅಪ್ರಾಪ್ತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.

    ಮೊರೆನಾ ನಿವಾಸಿ 14 ವರ್ಷದ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿರುವುದಾಗಿ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಗಾಬರಿಗೊಂಡ ತಾಯಿ ನೇರವಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ತಪಾಸಣೆ ನಡೆಸುವಾಗ ಅಪ್ರಾಪ್ತ ಬಾಲಕಿ ಗರ್ಭಿಣಿ ಎಂಬ ಸತ್ಯ ತಿಳಿದಿದೆ. ಈ ಹಿನ್ನಲೆ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ‘ನಮಗ್ಯಾಕೆ ತಲೆನೋವು’ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರೆ. ಆದರೆ, ಖಾಸಗಿ ಆಸ್ಪತ್ರೆ ಸಿಬ್ಬಂಧಿಗಳು ಈಕೆ ಅಪ್ರಾಪ್ತೆ, ಪೊಲೀಸ್, ಕೇಸು ಇವೆಲ್ಲಾ ಆಸ್ಪತ್ರೆ ಬ್ರ್ಯಾಂಡ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ನೀವು ಜಿಲ್ಲಾಸ್ಪತ್ರೆಗೆ ತೆರಳಿ’ ಎಂದು ಕಳುಹಿಸಿದ್ದಾರೆ.

    ಖಾಸಗಿ ಆಸ್ಪತ್ರೆಯಿಂದ ಮತ್ತೆ ಜಿಲ್ಲಾಸ್ಪತ್ರೆಗೆ ಸಾಗುವ ದಾರಿಯಲ್ಲಿ ಬಾಲಕಿಗೆ ಹೆರಿಗೆ ನೋವಿನಿಂದ ವಾಹನದಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಇತ್ತ ಕುಟುಂಬಸ್ಥರು ಕಂಗಾಲಾಗಿದ್ದು, 14ರ ಬಾಲೆಗೆ ಏನಾಗಿದೆ ಅನ್ನೋದು ತಿಳಿಯದಾಗಿದೆ. ಸ್ಥಳೀಯರು ನೆರವಿನಿಂದ ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ. ಇತ್ತ ಪೊಲೀಸರು ಬಂದು, ವೈದ್ಯರು ಹಾಗೂ ಬಾಲಕಿ ತಾಯಿಯ ಹೇಳಿಕೆ ಪಡೆದಿದ್ದಾರೆ. ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವಳಿಂದ ಹೇಳಿಕೆ ಪಡೆದಿಲ್ಲ. ಪ್ರಕರಣ ದಾಖಲಿಸಿರುವ ಪೊಲೀಸರು ಅಪ್ರಾಪ್ತ ಬಾಲಕಿ ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇತ್ತ ಪೋಷಕರಿಗೆ ದಿಕ್ಕೇ ತೋಚುತ್ತಿಲ್ಲ.

    Continue Reading

    LATEST NEWS

    ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ವಿಚ್ಚೇದನ !!

    Published

    on

    ಮಂಗಳೂರು/ಕೋಲ್ಕತ್ತಾ: 29 ವರ್ಷಗಳ ದಾಂಪತ್ಯ ಜೀವನಕ್ಕೆ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅಂತ್ಯವಾಡಿದ್ದಾರೆ. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಮತ್ತೊಂದು ವಿಚ್ಚೇದನ ಸುದ್ದಿ ಹೊರಬಿದ್ದಿದೆ.

    ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ಗಿಟಾರ್ ವಾದಕಿ ಮೋಹಿನಿ ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ನಿಂದ ದೂರವಾಗಿರುವುದಾಗಿ ಘೋಷಣೆ ಮಾಡಿದ್ದಾರೆ.

    ಈ ಬಗ್ಗೆ ಮೋಹಿನಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಪರಸ್ಪರ ಒಪ್ಪಿಗೆಯಿಂದಲೇ ನಾವು ಬೇರೆ ಆಗುತ್ತಿದ್ದೇವೆ. ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ. ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಹುಡುಕಲು ಬಯಸುತ್ತೇವೆ. ನಾವು ಬೇರೆ ಆಗಿದ್ದರೂ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಜತೆಯಾಗಿ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

     

    ಇದನ್ನೂ ಓದಿ : ಮುರಿದ 29 ವರ್ಷಗಳ ದಾಂಪತ್ಯ ಜೀವನ; ವಿಚ್ಛೇದನದ ಬಗ್ಗೆ ಎ.ಆರ್.ರೆಹಮಾನ್ ಏನಂದ್ರು?

     

    ಕೋಲ್ಕತ್ತಾ ಮೂಲದ ಮೋಹಿನಿ ಬೇಸ್‌ ಗಿಟಾರ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾರ ವಿಂಡ್ ಆಫ್ ಚೇಂಜ್‌ನಲ್ಲಿ  ಜನಪ್ರಿಯರಾಗಿದ್ದಾರೆ. ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಬಿಡುಗಡೆ ಮಾಡಿದ್ದಾರೆ.

    ಎ.ಆರ್‌.ರೆಹಮಾನ್‌ ದಾಂಪತ್ಯ ಜೀವನದ ಅಂತ್ಯದ ಬಳಿಕ ಮೋಹಿನಿ ತಮ್ಮ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ.

    Continue Reading

    LATEST NEWS

    Trending