Connect with us

    LATEST NEWS

    `ಲಿವ್ ಇನ್ ರಿಲೇಶನ್ ಶಿಪ್’ ; ಹೈಕೋರ್ಟ್ ಮಹತ್ವದ ತೀರ್ಪು!

    Published

    on

    ಮಂಗಳೂರು/ನವದೆಹಲಿ : ಪತಿಯನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸಲು ಮಹಿಳೆ ನಿರ್ಧರಿಸಿದ್ದು, ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಪೊಲೀಸ್ ರಕ್ಷಣೆ ನೀಡುವುದನ್ನು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದ ಘಟನೆ ನಡೆದಿದೆ.

    ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಲಿವ್-ಇನ್ ಸಂಬಂಧಕ್ಕಿಂತ ವಿರುದ್ಧವಾಗಿದೆ, ಸಾಮಾಜಿಕ ರಚನೆಗೆ ಧಕ್ಕೆ ತರುವ ಅಕ್ರಮ ಸಂಬಂಧಗಳಿಗೆ ಕಾನೂನು ರಕ್ಷಣೆ ನೀಡುವುದು ಸರಿಯಲ್ಲ ಎಂದಿದೆ.

    ಈ ಪ್ರಕರಣದಲ್ಲಿ ‘ವಿವಾಹಿತ ಮಹಿಳೆ ಬೇರೊಬ್ಬರ ಮತ್ತೊಬ್ಬನ ಜೊತೆ ಹೊಂದಿದ ಸಂಬಂಧವನ್ನು ‘ಅಕ್ರಮ’ ಎಂದು ಪರಿಗಣಿಸಲಾಗುವುದು, ಸಮಾಜ ಮತ್ತು ಕಾನೂನಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ’  ಎಂದು ಹೈಕೋರ್ಟ್ ಸ್ಪಷ್ಟೀಕರಿಸಿದೆ.

    ಮಹಿಳೆಯು ಕೋರ್ಟ್‌ಗೆ ನಿಡಿದ ಅರ್ಜಿಯಲ್ಲಿ, ‘ತಾನು 37 ವರ್ಷ ಪ್ರಾಯದವಳಾಗಿದ್ದು, ಪತಿಯ ದುರ್ನಡತೆಯಿಂದ ಕಂಗೆಟ್ಟು ಸ್ವಯಂಪ್ರೇರಣೆಯಿಂದ ಬೇರೊಬ್ಬ ವ್ಯಕ್ತಿಯೊಂದಿಗೆ ಶಾಂತಿಯುತ ಜೀವನ ನಡೆಸುತ್ತಿದ್ದೇನೆ’ ಎಂದು ಹೇಳಿದ್ದಳು. ಲಿವ್-ಇನ್ ಸಂಬಂಧಗಳನ್ನು ಕೋರ್ಟ್ ವಿರೋಧಿಸುವುದಿಲ್ಲ, ಆದರೆ ವಿವಾಹಿತ ವ್ಯಕ್ತಿ ಬೇರೊಬ್ಬರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ. ಸಮಾಜ ಮತ್ತು ಕಾನೂನಿನ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಇಂತಹ ಸಂಬಂಧಗಳಿಗೆ ಕಾನೂನು ರಕ್ಷಣೆ ನೀಡಲಾಗುವುದಿಲ್ಲ.

    ಮಹಿಳೆಯ ಶಾಂತಿಯುತ ಜೀವನಕ್ಕೆ ಪತಿ ಅಪಾಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ದೂರಿದ್ದರೂ, ಇಬ್ಬರ ವಿರುದ್ಧವೂ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಅಥವಾ ಈ ವಿಷಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಅರ್ಜಿದಾರ ಮಹಿಳೆ ಅಪರಿಚಿತನೊಂದಿಗೆ ಅಕ್ರಮ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾಳೆ ಎಂದು ಸರ್ಕಾರದ ಪರವಾಗಿ ಹೇಳಲಾಗಿದೆ. ಅವನು ಮದುವೆಯಾಗಿದ್ದಾನೆ. ಅವರು ಇನ್ನೂ ವಿಚ್ಛೇದನ ಪಡೆದಿಲ್ಲ. ಆಕೆಯ ಪತಿ ಇನ್ನೂ ಜೀವಂತವಾಗಿದ್ದಾರೆ.

    ‘ಮದುವೆಯ ಪವಿತ್ರತೆಯು ಈಗಾಗಲೇ ವಿಚ್ಛೇದನವನ್ನು ಒಳಗೊಂಡಿದೆ. ಅರ್ಜಿದಾರರಿಗೆ ತನ್ನ ಪತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಅನ್ವಯಿಸುವ ಕಾನೂನಿನ ಪ್ರಕಾರ ಅವಳು ಮೊದಲು ತನ್ನ ಸಂಗಾತಿಯಿಂದ ಬೇರ್ಪಡಲು ಮುಂದುವರಿಯಬೇಕು. ಪತಿ ಬದುಕಿರುವಾಗ ಪತ್ನಿ ಮತ್ತೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಲು ಅವಕಾಶ ನೀಡುವಂತಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    LATEST NEWS

    ಉಡುಪಿ ಹಿಟ್ ಆ್ಯಂಡ್ ರನ್ ಕೇಸ್; ಆರೋಪಿಗೆ ಬೇಲ್

    Published

    on

    ಉಡುಪಿ : ಹಿಟ್ ಆ್ಯಂಡ್ ರನ್ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು, ಠಾಣೆ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ನವೆಂಬರ್ 11ರಂದು ಮುಂಜಾನೆ 5 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ಪ್ರಜ್ವಲ್ ಶೆಟ್ಟಿ ಹಿಟ್ ಆ್ಯಂಡ್ ರನ್ ನಡೆಸಿ ಪರಾರಿಯಾಗಿದ್ದ. ಅಪಘಾತದಲ್ಲಿ ಮೊಹಮ್ಮದ್ ಹುಸೈನ್ (39) ಎಂಬುವರು ಮೃ*ತಪಟ್ಟಿದ್ದರು.

    ಪ್ರಜ್ವಲ್ ಶೆಟ್ಟಿ ತನ್ನ ಥಾರ್ ಜೀಪಿನಿಂದ ಮೊಹಮ್ಮದ್ ಹುಸೈನ್ ಅವರ ಬೈಕ್ಗೆ ಗುದ್ದಿ ಪರಾರಿಯಾಗಿದ್ದ.ಅಪಘಾ*ತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿದ್ದರು.

    ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ಶೆಟ್ಟಿ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ, ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಠಾಣೆಯ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಕರೆದಾಗ ವಿಚಾರಣೆಗೆ ಹಾಜರಾಗಲು ಶಿರ್ವ ಪೊಲೀಸರ ಸೂಚನೆ ನೀಡಿದ್ದಾರೆ.

    ಮೃ*ತನ ಕುಟುಂಬಸ್ಥರು ಹಿಟ್ ಆಂಡ್ ರನ್ ಎಂದು ದೂರು ನೀಡಿದ್ದಾರೆ. ಆರೋಪ ಸಾಬೀತಾದರೆ ಪ್ರಜ್ವಲ್ ಗೆ ಮೂರು ವರ್ಷ ಶಿಕ್ಷೆಯಾಗುತ್ತದೆ. ಆರೋಪಿಯ ಥಾರ್ ಜೀಪ್ ಪೊಲೀಸರ ವಶದಲ್ಲಿದೆ.

    Continue Reading

    LATEST NEWS

    ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ

    Published

    on

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ ಇಂದು(ನ.17) ನಡೆಯಿತು.

    ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್‌ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಮೈಸೂರಿನಲ್ಲಿ ಫೆ.16 ರಂದು ಮದುವೆ ಕಾರ್ಯಕ್ರಮ ನಡೆಯಲಿದೆ.

    ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದರು. ಭಾವಿ ಪತ್ನಿ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದರು.

    ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿಯೇ ಎನ್ನುವುದು ವಿಶೇಷ.

    ಧನ್ಯತಾ ಮಿಡಲ್ ಕ್ಲಾಸ್ ಹುಡುಗಿ ಕಷ್ಟ ಪಟ್ಟು ಡಾಕ್ಟರ್ ಆಗಿದ್ದಾರೆ. ಅಲ್ಲದೆ ಅವರ ವರ್ಕ್ ಎಥಿಕ್ಸ್ ಯೋಚನೆಗಳು ನನಗೆ ಇಷ್ಟ ಆಯ್ತು ಎಂದು ಡಾಲಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದರು.

    ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಸಂಬಂಧ ಬೆಸೆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

    Continue Reading

    LATEST NEWS

    ಅಜ್ಜಿಗಾಗಿ 12 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮೊಮ್ಮಗ! Mclaren 675 LT

    Published

    on

    ಕೇರಳ: ಮೊಮ್ಮಗ ತನ್ನ ಅಜ್ಜಿಯ ಮಾತನ್ನು ಕೇಳಿ ಮೆಕ್ಲಾರೆನ್ 765LT ( Mclaren 675 LT ) ಖರೀದಿಸಿದನು. ವೀಡಿಯೊದಲ್ಲಿ, ಕುಟುಂಬ ಮತ್ತು ಸ್ನೇಹಿತರು ಐಷಾರಾಮಿ ಸೂಪರ್‌ಕಾರ್ ಅನ್ನು ಖರೀದಿಸಿರುವ ದೃಶ್ಯಗಳು ವೈರಲ್ ಆಗಿವೆ.

    ಅಜ್ಜಿಯೊಬ್ಬರು ತಮ್ಮ ಮೊಮ್ಮಗನ ಮುಂದೆ ಮೆಕ್ಲಾರೆನ್ 765LT ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

    ಮೊಮ್ಮಗ ಅದನ್ನು ನಿಜ ಮಾಡಿದ್ದಾನೆ. ಮೆಕ್ಲಾರೆನ್ 765LT ರೂ. 12 ಕೋಟಿಗೂ ಅಧಿಕ ಮೌಲ್ಯದ ಸೂಪರ್ ಕಾರನ್ನು ಖರೀದಿಸಿ ಅಜ್ಜಿಗೆ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಂತರ್ಜಾಲದಲ್ಲಿ ಲಕ್ಷಾಂತರ ಜನರ ಮನ ಗೆದ್ದಿದೆ.

    Continue Reading

    LATEST NEWS

    Trending