ಮೆಲ್ಬೋರ್ನ್: ಲಘು ವಿಮಾನವೊಂದು ಸಮುದ್ರದಲ್ಲಿ ಪತನಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ನಾಲ್ಕು ಆಸನಗಳ ವಿಮಾನವು ಬ್ರಿಸ್ಬೇನ್‌ನ ಈಶಾನ್ಯದಲ್ಲಿರುವ ರೆಡ್‌ಕ್ಲಿಫ್ ಏರ್‌ಫೀಲ್ಡ್‌ನಿಂದ ಬೆಳಿಗ್ಗೆ 9 ಗಂಟೆಗೆ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಏಕೆ ಪತನಗೊಂಡಿತು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
69 ವರ್ಷದ ಪುರುಷ ಪೈಲಟ್ ಸೇರಿದಂತೆ ನಾಲ್ಕು ಮೃತದೇಹಗಳನ್ನು ರಾತ್ರಿ 12 ಗಂಟೆಗೆ ವಿಮಾನದಿಂದ ಹೊರತೆಗೆಯಲಾಯಿತು.
ರಾಕ್‌ವೆಲ್ ಇಂಟರ್‌ನ್ಯಾಶನಲ್ ವಿಮಾನವು ಮೊರೆಟನ್ ಕೊಲ್ಲಿಯಲ್ಲಿ ತಲೆಕೆಳಗಾಗಿ ತೇಲುತ್ತಿರುವುದನ್ನು ಚಿತ್ರಗಳು ತೋರಿಸಿವೆ.