Sunday, March 26, 2023

ಮಹಿಳೆಯ ಸ್ನಾನದ ವಿಡಿಯೋ ವೈರಲ್‌ ಮಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ: ದೂರು ದಾಖಲು

ಹೊನ್ನಾವರ: ಮಹಿಳೆಯ ಸ್ನಾನದ ವಿಡಿಯೋಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಗಿ ಮಹಿಳೆಯೊಬ್ಬರು ಬಿಜೆಪಿ ನಗರ ಘಟಕದ ಅಧ್ಯಕ್ಷ ಉಮೇಶ್ ಸಾರಂಗ್ ವಿರುದ್ಧ ದೂರು ನೀಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದಿದೆ.

ಆರೋಪಿ ಉಮೇಶ್ ಸಾರಂಗ್ ಆಟೋ ಚಾಲಕನಾಗಿದ್ದು, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೂಡ ಆಗಿದ್ದಾನೆ. ಒಂದೇ ಕೇರಿಯವನಾಗಿದ್ದು, ಒಮ್ಮೆ ಆತನ ಆಟೋ ಹತ್ತಿದಾಗ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಸಲುಗೆಯಿಂದ ಮಾತನಾಡುತ್ತಿದ್ದ.

ಸ್ನೇಹವನ್ನು ದುರುಪಯೋಗ ಪಡಿಸಿಕೊಳ್ಳಲಾರಂಭಿಸಿದ್ದ ಆರೋಪಿ ಬೆತ್ತಲೆ ಸ್ನಾನದ ವಿಡಿಯೋ ಕಳಿಸುವಂತೆ ಪೀಡಿಸುತ್ತಿದ್ದ. ಬೇಡಿಕೆ ತಿರಸ್ಕರಿಸಿದ್ದಕ್ಕೆ ಗಂಡನಿಗೆ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದ.

ಸ್ನಾನದ ವಿಡಿಯೋ ವಾಟ್ಸಪ್ ನಲ್ಲಿ ಕಳುಹಿಸಿದ್ದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಆಸ್ತಿಗಾಗಿ ಹೆತ್ತ ತಾಯಿಯ ಜುಟ್ಟು ಹಿಡಿದು ಮುಖಚಚ್ಚಿದ ಪಾಪಿ ಮಗ

ಬಂಟ್ವಾಳ: ಆಸ್ತಿಯಲ್ಲಿ ಪಾಲುಕೊಡುವಂತೆ ಹೆತ್ತ ತಾಯಿಗೆ ಬೆದರಿಸಿ ಗಾಯಗೊಳಿಸಿ ಮಗ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಘಟನೆ ವಿವರ ಮಾ.24 ರಂದು ಇಡ್ಕಿದು ಗ್ರಾಮದ ನಾರಾಯಣ ಗೌಡ ಎಂಬುವವರ...

ಸುಳ್ಯ : ಮನೆ ಕೊಟ್ಟಿಗೆ ಕಾಮಗಾರಿಯ ವೇಳೆ ಘೋರ ದುರಂತ – ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತ್ಯು..!

ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ ದುರಂತ ನಡೆದು ಮೂವರು ಕಾರ್ಮಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ.ಸುಳ್ಯ : ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ...

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ವಶ

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ಹಣವನ್ನು ಪೊಲೀಸರು ನಿನ್ನೆ ವಶಪಡಿಸಿಕೊಂಡ ಘಟನೆ ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.ಉಡುಪಿ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ...