ಮಂಗಳೂರು : ಸೌದಿ ಅರೇಬಿಯಾದ ಜೀಝಾನ್ ನಲ್ಲಿ ಮರಣ ಹೊಂದಿದ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಪಂಡಿತ್ ಹೌಸ್ ನಿವಾಸಿ ರೋನಾಲ್ಡ್ ಡಿ.ಸೋಜಾರವರ ಮನೆಗೆ ಎಸ್.ಡಿ.ಪಿ.ಐ ನಗರ ಸಮಿತಿ ಯಿಂದ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ನೀಡಲಾಯಿತು.
ಮ್ರತ ರೊನಾಲ್ಡ್ ರವರ ಪಾರ್ಥಿವ ಶರೀರ ಊರಿಗೆ ತರಲು ಕಂಪೆನಿಯ ಮುಖ್ಯಸ್ಯ ರೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಸೋಶಿಯಲ್ ಫೋರಂ (ISF) ಅಸೀರ್ ರೀಝನಲ್ ಕೇಂದ್ರೀಯ ಸಮಿತಿ ಸದಸ್ಯರಾದ ಅದ ಸಲೀಂ GK ಗುರುವಾಯನಕೆರೆ ಹಾಗೂ ತಂಡವು ಆದಷ್ಟು ಬೇಗನೆ ರವಾನೆ ಮಾಡುವ ಪ್ರಯತ್ನ ನಡೆಯುತಿದೆ.
ಎಸ್.ಡಿ.ಪಿ.ಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ AR ಅವರ ನೇತೃತ್ವದ ತಂಡದಿಂದ ಈ ಬಗ್ಗೆ ಸವಿವರವಾದ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಯಿತು.
ಈ ತಂಡದಲ್ಲಿ ಎಸ್.ಡಿ.ಪಿ ಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ AR, ಉಪಾಧ್ಯಕ್ಷ ರವೂಫ್ ಹಳೇಕೋಟೆ, ಕಾರ್ಯದರ್ಶಿ ಇಮ್ತಿಯಾಜ್ ಪಿಲಾರ್, ಉಳ್ಳಾಲ ನಗರ ಸಭೆ ಕೌನ್ಸಿಲರ್ ಝರೀನಾ ರವೂಫ್, ಎಸ್.ಡಿ.ಪಿ ಐ ನಾಯಕರಾದ ಇಮ್ತಿಯಾಜ್ ಕೋಟೆಪುರ,ಝಾಕೀರ್ ಉಳ್ಳಾಲ, ಸಾದಿಕ್ ಉಳ್ಳಾಲ ಹಾಗೂ ಉಳ್ಳಾಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ ಪಾಲ್ಗೊಂಡಿದ್ದರು.