ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಭೂ ಕುಸಿತ ಉಂಟಾಗಿದೆ. ಸುಮಾರು 4 ಎಕ್ರೆ ಪ್ರದೇಶದ ಮಣ್ಣು ಕುಸಿತಗೊಂಡಿದೆ.
ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತವುಂಟಾಗಿದೆ. ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶವಾಗಿದ್ದು, ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿದೆ. ಈ ಘಟನೆ ಬಗ್ಗೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೇವಲ ಒಂದು ವಾರದ ಮಳೆಗೆ ಜಿಲ್ಲೆಯ ಹಲವೆಡೆ ಭೂಕುಸಿತದ ವರದಿಯಾಗುತ್ತಿದೆ. ಕಷ್ಟಪಟ್ಟು ದುಡಿದು ಕಟ್ಟಿದ ಮನೆಗಳು ನಿರ್ನಾಮವಾಗುತ್ತಿವೆ. ಆದರೆ ಸರಕಾರ ಮಾತ್ರ ಈ ಸರಣಿ ಭೂಕುಸಿತಕ್ಕೆ ಕಾರಣ ಹುಡುಕುವಲ್ಲಿ ಯಾವುದೇ ಆಸಕ್ತಿ ತೊರಿಸುತ್ತಿಲ್ಲ. ನೇತ್ರಾವತಿ ನದಿ ತಿರುವು ಯೋಜನೆಯ ಫಲವೇ ಈ ಭೂಕುಸಿತಗಳಿಗೆ ಕಾರಣ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.