Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ 146 ಕೊರೊನಾ ಪ್ರಕರಣ 8 ಸಾವು

    Published

    on

    ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸದ್ಯ ಇಳಿಕೆ ಹಾದಿಯಲ್ಲಿದ್ದು, ಇಂದು ಕೇವಲ 146 ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಇನ್ನು ಏರಿಕೆಯಲ್ಲಿದೆ. ಜಿಲ್ಲೆಯಲ್ಲಿ ಇಂದು ಮತ್ತೆ 146 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 8 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 146 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 7353 ಕ್ಕೆ ಏರಿಕೆಯಾಗಿದೆ.

    ಇಂದು ಜಿಲ್ಲೆಯಲ್ಲಿ 533 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2910 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೂಡ ಜಿಲ್ಲೆಯಲ್ಲಿ 8 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಮಂಗಳೂರು -91, ಬಂಟ್ವಾಳ -11, ಸುಳ್ಯ -1, ಬೆಳ್ತಂಗಡಿ – 16, ಪುತ್ತೂರು -7, ಹೊರ ಜಿಲ್ಲೆಯವರು -17 ಪ್ರಕರಣಗಳಿವೆ.

    LATEST NEWS

    ಬೆಂ*ಕಿಗೆ ಆಹುತಿಯಾದ ಹಡಗಿನಿಂದ ಅಪಾಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸ್ಪಷ್ಟನೆ

    Published

    on

    ಮಂಗಳೂರು : ಮಂಗಳೂರು ಕರಾವಳಿಯ ಸಮುದ್ರದಲ್ಲಿ ಬೆಂ*ಕಿಗೆ ಆಹುತಿಯಾದ ವಿದೇಶಿ ಹಡಗಿನಿಂದ ಮಂಗಳೂರು ಕರಾವಳಿಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

    ಜುಲೈ 19 ರಂದು ಗುಜರಾತ್‌ನಿಂದ ಕೊಲೊಂಬೋಕ್ಕೆ ತೆರಳುತ್ತಿದ್ದ ಸರಕು ಸಾಗಟದ ಹಡುಗು ಬೆಂ*ಕಿಗೆ ಆಹುತಿಯಾಗಿತ್ತು. ತಕ್ಷಣ ಕೋಸ್ಟ್‌ಗಾರ್ಡ್ ತಂಡ ನಿರಂತರ ನಲುವತ್ತು ಗಂಟೆ ಪ್ರಯತ್ನ ನಡೆಸಿ ಬೆಂಕಿ ನಂದಿಸುವ ಕೆಲಸವಾಗಿತ್ತು. ಬಳಿಕ ಹಡಗನ್ನು ಮಂಗಳೂರು ಕರಾವಳಿಯ 30 ನಾಟಿಕಲ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ತೈಲ ಸೋರಿಕೆ ಆಗುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ : 5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    ಹಡಗು ಮುಳುಗಡೆಯಾಗುವ ಭೀತಿ ಇದ್ದು ಹಾಗಾದಲ್ಲಿ ಹಡಗಿನಲ್ಲಿರುವ ತೈಲ ಸೋರಿಕೆ ಆಗಬಹುದು ಎಂದು ಸುದ್ದಿಯಾಗಿತ್ತು. ಆದ್ರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಅಂತಹ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಅಂತಹ ಅವ*ಘಡ ನಡೆದಲ್ಲಿ ಅದನ್ನು ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ಕೋಸ್ಟ್‌ಗಾರ್ಡ್‌ ಮತ್ತು ಕರಾವಳಿ ಕಾವಲು ಪಡೆ ಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Continue Reading

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    LATEST NEWS

    Trending