Thursday, October 22, 2020

ನಾಮಕರಣ ಹೆಸರಿನಲ್ಲಿ ಮತ್ತೆ ಮಂಗಳೂರಿನಲ್ಲಿ ಹಗ್ಗ-ಜಗ್ಗಾಟ

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..! ಮಂಗಳೂರು : ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ...

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..! ಮಂಗಳೂರು : ಉಳ್ಳಾಲದಲ್ಲಿ ಮಿತಿಮೀರಿದ ವೇಗದ ಬೈಕ್ ಚಾಲನೆಗೆ ಓರ್ವ ಸತ್ತು- ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ...

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..! ಉಡುಪಿ : ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ...

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..!

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..! ಬಂಟ್ವಾಳ :  ಚಿತ್ರ ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ...

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..! ಉಡುಪಿ: ಹೊರ ರಾಜ್ಯದ ಮೀನುಗಾರರು ರಾಜ್ಯದ ಕರಾವಳಿ ಪ್ರವೇಶಿಸಿ ಸ್ಥಳೀಯ ಮೀನುಗಾರರಿಗೆ ಕಿರುಕುಳ ಕೊಡುವ...

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನಾಮಕರಣದ ವಿಚಾರದಲ್ಲಿ ಚರ್ಚೆ ಆರಂಭಗೊಂಡಿದೆ. ಈ ಬಾರಿಯ ನಾಮಕರಣದ ವಿಷಯ ಲೇಡಿಹಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ವೃತ್ತಕ್ಕೆ ಯಾರ ಹೆಸರು ಇಡುವುದು ಎನ್ನುವುದಾಗಿದೆ. ಲೇಡಿಹಿಲ್ ನಲ್ಲಿ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಚರ್ಚ್, ವಿದ್ಯಾಸಂಸ್ಥೆಗಳು ಇರುವ ಕಾರಣ ಈ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆ ತನ್ನ ಸಾಮಾನ್ಯ ಸಭೆಯಲ್ಲಿ ಲೇಡಿಹಿಲ್ ನಿಂದ ನ್ಯೂಚಿತ್ರಾ ಸಿನಿಮಾ ಥಿಯೇಟರ್ ವರೆಗಿನ ರಸ್ತೆಗೆ ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ ಎಂದು ನಾಮಕರಣ ಮಾಡಲು ನಿರ್ಣಯ ತೆಗೆದುಕೊಂಡಿದೆ. ಆದರೆ ಮಹಾನಗರ ಪಾಲಿಕೆಯ ಈ ನಿರ್ಣಯಕ್ಕೆ ಇದೀಗ ಕ್ರಿಶ್ಚಿಯನ್ ಸಮುದಾಯ ವಿರೋಧ ವ್ಯಕ್ತಪಡಿಸಲು ಆರಂಭಿಸಿದೆ. ಲೇಡಿಹಿಲ್ ಜಂಕ್ಷನ್ ಗೆ ಚಾರಿತ್ರಿಕೆ ಮಹತ್ವವಿದ್ದು, ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಮದರ್ ನಜರಲ್ ಮಾರಿ ದೇಸ್ ಆಂಜ್ 1885 ರಲ್ಲಿ ಮಂಗಳೂರಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರು ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆ ತೆರೆಯುವಂತೆ ಅವರಲ್ಲಿ ವಿನಂತಿಸಿದ್ದರು. ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲಾಗಿತ್ತು. ಅಲ್ಲದೆ ಇದೊಂದು ಗುಡ್ಡ ಪ್ರದೇಶವೂ ಆಗಿರುವುದರಿಂದ ಅಂದಿನ ಜನ ಹೆಣ್ಣು ಮಕ್ಕಳಿಗೆ ಗೌರವಕ್ಕಾಗಿ ಆ ಪ್ರದೇಶಕ್ಕೆ ಲೇಡಿಹಿಲ್ ಎಂದು ಹೆಸರಿಟ್ಟಿದ್ದರು. ಈ ಕಾರಣಕ್ಕಾಗಿ ಲೇಡಿಹಿಲ್ ನಲ್ಲಿ ನಿರ್ಮಾಣಗೊಳ್ಳಲಿರುವ ವೃತ್ತಕ್ಕೆ ಲೇಡಿಹಿಲ್ ವೃತ್ತ ಎಂದೇ ಹೆಸರಿಡಬೇಕು ಎಂದು ಕ್ರಿಶ್ಚಿಯನ್ ಸಮುದಾಯ ಇದೀಗ ಪಟ್ಟು ಹಿಡಿಯಲಾರಂಭಿಸಿದೆ.

ಈ ನಡುವೆ ಲೇಡಿಹಿಲ್ ಮೂಲಕವೇ ಗೋಕರ್ಣನಾಥ್ ಕ್ಷೇತ್ರಕ್ಕೆ ದಾರಿಯಿರುವ ಕಾರಣ ಈ ರಸ್ತೆಗೆ ಗೋಕರ್ಣನಾಥೇಶ್ವರ ರಸ್ತೆ ಎಂದು ಹೆಸರಿಡುವ ನಿರ್ಣಯಕ್ಕೆ ಬಿಲ್ಲವ ಸಮುದಾಯ ಬೆಂಬಲ ವ್ಯಕ್ತಪಡಿಸಿದೆ. ಮಂಗಳೂರು ದಸರಾ ಎಂದೇ ಖ್ಯಾತವೆತ್ತಿರುವ ಗೋಕರ್ಣನಾಥ ಕ್ಷೇತ್ರ ಅತ್ಯಂತ ಪ್ರಸಿದ್ಧ ಪ್ರವಾಸಿ ಕ್ಷೇತ್ರವೆಂದೂ ಗುರುತಿಸಿಕೊಂಡಿದೆ.

ಈ ಕಾರಣಕ್ಕಾಗಿ ನೂತನ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕೆಂದು ಬಿಲ್ಲವ ಸಮುದಾಯವೂ ಇದೀಗ ಒತ್ತಾಯಿಸಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಎರಡೂ ಕಡೆಯಿಂದ ವೃತ್ತದ ನಾಮಕರಣಕ್ಕಾಗಿ ಹಗ್ಗಜಗ್ಗಾಟ ಆರಂಭಗೊಂಡಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.