Connect with us

DAKSHINA KANNADA

ಸುಳ್ಳುಹೇಳೋದು  ಕಣ್ಣೀರು ಹಾಕೋದು ಕುಮಾರಸ್ವಾಮಿ ಹಳೆ ಛಾಳಿ : ಕ್ಯಾ. ಗಣೇಶ್ ಕಾರ್ಣಿಕ್.!

Published

on

ಸುಳ್ಳು ಹೇಳೋದು  ಕಣ್ಣೀರು ಹಾಕೋದು ಕುಮಾರಸ್ವಾಮಿ ಹಳೆ ಛಾಳಿ : ಕ್ಯಾ. ಗಣೇಶ್ ಕಾರ್ಣಿಕ್.!

Kumaraswamy tears, shedding tears..! C. Ganesh Karnik.!

ಮಂಗಳೂರು: ವಿವಾದಿತ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆ ರಾಮಮಂದಿರಕ್ಕೆ  ದೇಣೀಗೆ ನೀಡುವುದಿಲ್ಲ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ  ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ ಕಾರ್ಣಿಕ್ ತಿರುಗೇಟು ನೀಡಿದ್ಧಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  “ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾನೂನು ಪಧವೀಧರರು.

ವಿರೊಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದವರು. ಇಂತಹ ನಾಯಕರು ಈ ರೀತಿಯ ಹೇಳಿಕೆಯನ್ನು ನೀಡಿದ್ದು  ನಿಜಕ್ಕೂ ದುರಾದೃಷ್ಟಕರ.

ಇನ್ನು ಸುಳ್ಳು ಹೇಳೋದು, ಕಣ್ಣೀರು ಹಾಕೋದು ಕುಮಾರಸ್ವಾಮಿಯ ಹಳೆ ಛಾಳಿ. ಈ ರೀತಿಯಾದ ಹೇಳಿಕೆ ನೀಡಿ ವರ್ಗ ಸಂಘರ್ಷಕ್ಕೆ ಆಹ್ವಾನ ನೀಡುವುದರ ಜೊತೆಗೆ ಮೊಸರಿನಲ್ಲಿ ಕಲ್ಲು  ಹುಡುಕುವ ಕೆಲಸವನ್ನು ಮಾಡ್ತಾ ಇದ್ದಾರೆ.

ಜೊತೆಗೆ ಕಾರ್ಯಕರ್ತರ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಪ್ರಶ್ನಿಸಿದ್ದು ತಪ್ಪು. ಹೀಗಾಗಿ ನಾಡಿನ ಜನತೆಯ ಭಾವನೆಯನ್ನು ಕೆರಳಿಸಿದಂತಹ ಸಿದ್ದರಾಮಯ್ಯ ಹಾಗೂ ಹೆಚ್.ಡಿ ಕುಮಾರಸ್ವಾಮಿಯವರು ಕ್ಷಮೆಯನ್ನು ಯಾಚಿಸಲಿ ಅಂತ ಒತ್ತಾಯ ಮಾಡಿದ್ರು.

Click to comment

Leave a Reply

Your email address will not be published. Required fields are marked *

DAKSHINA KANNADA

15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

Published

on

ಮಂಗಳೂರು ( ಜಾರ್ಖಂಡ್‌ ): ಆತ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಒಬ್ಬ ಸಾಮಾನ್ಯ ನೌಕರ. ಆದ್ರೆ ಆತನ ಮನೆಗೆ ಇಡಿ ದಾಳಿ ಮಾಡಿ ಬರೋಬ್ಬರಿ 30 ಕೋಟಿ ಹಣವನ್ನು ಜಪ್ತಿ ಮಾಡಿದೆ. ಇದು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, ಹತ್ತು ಸಾವಿರ ಲಂಚ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಇಡಿ  ಸಾಮಾನ್ಯ ನೌಕರನ ಮನಗೆ ದಾಳಿ ಮಾಡಿತ್ತು. ಅಲ್ಲಿ ಅಡಗಿಸಿಟ್ಟಿದ್ದ ಹಣ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಣ ಎಣಿಸಲು ಮೆಷಿನ್ ಹಾಗೂ ಹೆಚ್ಚುವರಿ ನೌಕರರನ್ನು ಮನೆಗೆ ಕರೆಸಿಕೊಂಡಿದ್ದಾರೆ.

ನೌಕರನ ಮನೆಗೆ ಲಂಚದ ಹಣ…!

ಜಾರ್ಖಂಡ್‌ ನ ಸಚಿವ ಅಲಂಗೀರ್ ಆಲಂ ಅವರ ಖಾಸಗಿ ಕಾರ್ಯದರ್ಶಿ ಮನೆ ಮೇಲೆ ರಾಂಚಿಯ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಲಂಗೀರ್ ಆಲಂ ಅವರ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಲಂಚದ ಹಣ ನೌಕರನ ಮನೆಗೆ ಹೋಗುತ್ತದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಚಿವರ ಆಪ್ತ ಕಾರ್ಯದರ್ಶಿಯ ಅಡಿಯಲ್ಲಿ ಮಾಸಿಕ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನೌಕರನ ಮನೆಗೆ ದಾಳಿ ಮಾಡಿದಾಗ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.

ವಿಡಿಯೋ ನೋಡಿ :

ಹತ್ತು ಸಾವಿರ ಲಂಚದ ಹಿಂದೆ ಬಿದ್ದಿದ್ದ ಇಡಿ..!

ಕಳೆದ ವರ್ಷ ಹತ್ತು ಸಾವಿರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಇಂಜೀನಿಯರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಂಜೀನಿಯರ್ ಅವರ ಹೇಳಿಕೆಯನ್ನು ದಾಖಲಿಸಿದಾಗ ಲಂಚದ ಹಣ ಸಚಿವರಿಗೆ ತಲುಪಿಸಲಾಗುತ್ತದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ದಿ ಸಚಿವ ಅಲಂಗೀರ್ ಆಲಂ ಹಾಗೂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹೆಸರು ಮುನ್ನಲೆಗೆ ಬಂದಿತ್ತು . ಹೀಗಾಗಿ ಸಂಜೀವ್‌ ಲಾಲ್ ಅವರ ಬಳಿ ನೌಕರನಾಗಿದ್ದ ವ್ಯಕ್ತಿಯ ಮನೆಗೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

ಜಾರ್ಖಂಡ್ ಕಾಂಗ್ರೆಸ್ ಸರ್ಕಾರದ ಸಚಿವ…!

ಅಲಂಗೀರ್ ಆಲಂ ಜಾರ್ಖಂಡ್‌ನ ಪಾಕುರ್ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಈ ಹಿಂದೆ 2006 ರಿಂದ 2009 ರ ವರೆಗೆ ಅವರು ಸ್ಪೀಕರ್ ಕೂಡಾ ಆಗಿದ್ದರು. 2023ರ ಡಿಸೆಂಬರ್‌ ತಿಂಗಳಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಉದ್ಯಮಿ ಧೀರಜ್ ಸಾಹು ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ 350 ಕೋಟಿಯಷ್ಟು ಹಣ ಪತ್ತೆಯಾಗಿತ್ತು. ಈ ವೇಳೆ ಧೀರಜ್ ಸಾಹು ಅದು ಮದ್ಯದ ವ್ಯವಹಾರದ ಹಣವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.

Continue Reading

DAKSHINA KANNADA

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

Published

on

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಭಾನುವಾರ(ಎ.5) ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 )ಮೃತಪಟ್ಟ ಬಾಲಕಿಯರು.

nethravathi river

ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ  ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಮನೆ ಮಂದಿ ಇರುವಾಗಲೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಏಕಾ ಏಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Continue Reading

DAKSHINA KANNADA

‘ಅಡ್ಡಣ ಪೆಟ್ಟು’ ದೈವಾರಾಧನೆಯ ವಿಶೇಷ ಆಚರಣೆ…! ಇದು ಸೌಹಾರ್ದತೆ ಬಯಸೋ ದೈವ..!

Published

on

ಮಂಗಳೂರು : ತುಳುನಾಡಿನ ದೈವಾರಾಧನೆಯಲ್ಲಿ ಒಂದಕ್ಕಿಂತ ಒಂದು ವಿಶೇಷವಾದ ಆಚರಣೆ ಹಾಗೂ ನಂಬಿಕೆಗಳು ಇದೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಒಂದಷ್ಟು ಬದಲಾವಣೆಯೊಂದಿಗೆ ನಡೆಯುತ್ತದೆ ಕೂಡಾ. ಕೇರಳದ ಗಡಿಗೆ ಹೊಂದಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆಯೋ ದೈವಾರಾಧನೆ ಕೂಡಾ ಅದೇ ರೀತಿಯಾದ ವಿಶೇಷ ಆಚರಣೆಯೊಂದಕ್ಕೆ ಹೆಸರಾಗಿದೆ. ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೆಯ ಬಳಿಕ ನಡೆಯುವ ದೈವದ ನೇಮದಲ್ಲಿ ‘ಅಡ್ಡಣ ಪೆಟ್ಟು’ ಅನ್ನೋ ಸಂಪ್ರದಾಯವಿದೆ. ಗ್ರಾಮದ ಜಾತ್ರೆಯ ಪ್ರಮುಖ ಆಕರ್ಷಣೆ ಕೂಡಾ ಇದೇ ಆಗಿದ್ದು, ಇದನ್ನು ನೋಡಲೆಂದೆ ಸಾವಿರಾರು ಜನ ಬರ್ತಾರೆ.


ನಾಲ್ಕು ಮನೆತನಗಳ ನಡುವೆ ಹೊಡೆದಾಟ…!

‘ಅಡ್ಡಣ ಪೆಟ್ಟು’ ಇದು ಮಂಡೆಕೋಲು ಗ್ರಾಮದ ಜಾತ್ರೆ ಮುಗಿದ ಬಳಿಕ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದಲ್ಲಿ ಕಾಣುವ ದೃಶ್ಯ. ನಾಲ್ಕು ಗೌಡ ಮನೆತನದವರು ಬೆತ್ತದ ಗುರಾಣಿ ಹಿಡಿದು ಕೋಲಿನಿಂದ ಹೊಡೆದಾಡುವುದೇ ಈ ‘ಅಡ್ಡಣ ಪೆಟ್ಟು’ ಅನ್ನೋ ವಿಶಿಷ್ಠ ಆಚರಣೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ, ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಈ ರೀತಿ ಹೊಡೆದಾಟ ನಡೆಸ್ತಾರೆ. ಈ ವೇಳೆ ಉಳ್ಳಾಕುಲು ದೈವ ಮದ್ಯಪ್ರವೇಶ ಮಾಡಿ ಜಗಳ ಬಿಡಿಸುತ್ತದೆ. ಇದು ನೋಡಲು ಕೂಡಾ ಸಾಕಷ್ಟು ಕುತೂಹಲವಾಗಿದ್ದು, ಇದರ ಜೊತೆ ದೈವದ ಸಂದೇಶ ಕೂಡಾ ಇದೆ.


‘ಅಡ್ಡಣ ಪೆಟ್ಟು’ವಿನ ಹಿಂದೆ ಇದೆ ದೈವದ ಸಂದೇಶ..!

ಮಂಡೆಕೋಲು ನೇಮದಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ಬೇರೆ ಬೇರೆ ಐಹಿತ್ಯವಿದೆ. ಅಡ್ಡಣಪೆಟ್ಟು ನಡೆದರೆ ಊರಲ್ಲಿ ಮುಂದೆ ಗಲಾಟೆ, ಹೊಡೆದಾಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆಯೂ ಊರಿನ ಭಕ್ತ ಜನರಲ್ಲಿದೆ. ನಾಲ್ಕೂರಿನ ಜಗಳವನ್ನು ದೈವ ಬಿಡಿಸುವುದು, ಗಲಾಟೆ ಮಾಡದೆ ಸೌಹಾರ್ದದಿಂದ ಬಾಳಿ ಎನ್ನುವ ಸಂದೇಶವೂ ಈ ಆಚರಣೆಯಲ್ಲಿದೆ. ಪುರಾತನ ಕಾಲದಲ್ಲಿ ಯಾವುದೋ ಗಲಾಟೆ ನಡೆದ ಸಂದರ್ಭ ಉಳ್ಳಾಕುಲು ದೈವ ಬಂದು ಗಲಾಟೆ ಬಿಡಿಸಿ ಪರಸ್ಪರ ಸಂದಾನ ನಡೆಸಿತ್ತು ಎಂಬ ಪ್ರತೀತಿಯೂ ಇದೆ. ಇದೇ ಕಾರಣದಿಂದ ಪ್ರತಿ ವರ್ಷ ಉಳ್ಳಾಕುಲು ನೇಮದ ಸಂದರ್ಭ “ಅಡ್ಡಣ ಪೆಟ್ಟು” ಒಂದು ಸಂಪ್ರದಾಯವಾಗಿ ನಡೆದು ಬರುತ್ತಿದೆ.

‘ಅಡ್ಡಣ ಪೆಟ್ಟು’ವಿನ ಆಚರಣೆ ಹೇಗೆ ?

ನೇಮೋತ್ಸವ ದಿನದಂದು ಉಳ್ಳಾಕುಲು ದೈವದ ಭಂಡಾರ ತೆಗೆದ ಬಳಿಕ ದೈವ ಸಹಿತ ನಾಲ್ಕೂರಿನ ಪ್ರತಿನಿಧಿಗಳು, ದೈವರ ಪರಿಚಾರಕರು ದೇವಸ್ಥಾನದ ಸಮೀಪದ ಗದ್ದೆಯಲ್ಲಿರುವ ಕಟ್ಟೆಗೆ ತೆರಳುತ್ತಾರೆ. ಕೇನಾಜೆ- ಮಾವಜಿ, ಮುರೂರು-ಬೊಳುಗಲ್ಲು ಮನೆತನಕ್ಕೆ ಸೇರಿದ ನಾಲ್ವರು ಪ್ರತಿನಿಧಿಗಳು ಸಮವಸ್ತ್ರ ಧರಿಸಿ ದಂಡ ಮತ್ತು ಗುರಾಣಿ (ಅಡ್ಡಣ) ಹಿಡಿದು ದೈವದ ಜತೆಯಲ್ಲಿ ತೆರಳುತ್ತಾರೆ. ಕಟ್ಟೆಯ ಬಳಿ ತೆರಳಿದ ಬಳಿಕ ಕೆಲವೊಂದು ಸಂಪ್ರದಾಯ ಆಚರಣೆಗಳು ನಡೆದು ಅಡ್ಡಣ ಹಿಡಿದ ಯುವಕರು ಅಡ್ಡಣವನ್ನು ನೆಲದಲ್ಲಿ ಎದುರು ಬದುರಾಗಿ ಇಡುತ್ತಾರೆ. ಲಾಠಿ ಮಾದರಿಯ ಹೊಡೆಯುವ ದಂಡವನ್ನು ಕೈಯಲ್ಲಿ ಹಿಡಿದಿರುತ್ತಾರೆ. ಇತ್ತ ಅಡ್ಡಣ ಹೊಡೆತದಲ್ಲಿ ಭಾಗವಹಿಸುವ ನಾಲ್ವರು ಯುವಕರಿಗೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವಕ್ಕೆ ಅಣಿಯನ್ನು ಕೂರಿಸಲಾಗುತ್ತದೆ. ಅಣಿ ಇಟ್ಟ ಬಳಿಕ ತುಳು ನುಡಿಗಟ್ಟೊಂದನ್ನು ಹೇಳಲಾಗುತ್ತದೆ. ಈ ನುಡಿಗಟ್ಟು ಮುಗಿಯುತ್ತಿದ್ದಂತೆ ದೈವದ ಪರಿಚಾರಕರೊಬ್ಬರು ಅಡ್ಡಣ ಹೊಡೆತಕ್ಕೆ ಅಣಿಯಾಗಿ ನಿಂತಿರುವ ಯುವಕರತ್ತ ಕಲಶದ ನೀರಿನಿಂದ ಪ್ರೋಕ್ಷಣೆ ಮಾಡುತ್ತಾರೆ. ಕಲಶ ಪ್ರೋಕ್ಷಣೆ ಆಗುತ್ತಿದ್ದಂತೆ ಎದುರು ಬದುರಾಗಿ ನಿಂತಿರುವ ಯುವಕರು ನೆಲದಲ್ಲಿಟ್ಟ ಅಡ್ಡಣವನ್ನು ಕೈಗೆ ಎತ್ತಿಕೊಂಡು ಅದನ್ನು ಗುರಾಣಿಯಂತೆ ಹಿಡಿದು ಎದುರುಬದುರಾಗಿ ಹೊಡೆದಾಟ ಆರಂಭಿಸುತ್ತಾರೆ. ಪ್ರತಿಯೊಬ್ಬರೂ ಎದುರು ಪ್ರತಿನಿಧಿಯ ಕೈಯಲ್ಲಿ ಹಿಡಿದಿರುವ ಅಡ್ಡಣಕ್ಕೆ ಹೊಡೆಯಬೇಕೆಂಬ ನಿಯಮವೂ ಇದೆ. ಹೊಡೆದಾಟ ಜೋರಾಗುತ್ತಿದ್ದಂತೆ ಬೆನ್ನು ಹಾಕಿ ನಿಂತಿರುವ ಉಳ್ಳಾಕುಲು ದೈವ ಬಂದು ಹೊಡೆದಾಟವನ್ನು ಬಿಡಿಸುತ್ತದೆ.

Continue Reading

LATEST NEWS

Trending